ವಧುವಿನ ಕುಟುಂಬವು ಈ ಹಿಂದೆ ವರನ ತಂದೆಯನ್ನು ಬೆದರಿಸಿ ಸೊಸೆಯನ್ನು ತಮ್ಮ ಮನೆಗೆ ವಾಪಸ್ ಕಳುಹಿಸಲು ಒತ್ತಾಯಿಸಿತ್ತು ಎಂದು ವರನ ಕುಟುಂಬದವರು ಆರೋಪಿಸಿದ್ದಾರೆ.
ಗುಜರಾತ್ ನ ನರೋಲ್ ಬಳಿ ಅಂತರ್ಜಾತಿ ವಿವಾಹವಾದ ನಂತರ ಮೇಲ್ಜಾತಿಗೆ ಸೇರಿದ ಹುಡುಗಿಯ ಕುಟುಂಬದವರು ತಮ್ಮ ಮಗಳನ್ನು ವಾಪಸ್ಸು ತಮ್ಮ ಮನೆಗೆ ಕಳುಹಿಸುವಂತೆ ನಿರಂತರವಾಗಿ ಒತ್ತಾಯಿಸಿದೆ. ಇದಕ್ಕೆ ನಿರಾಕರಿಸಿದ ದಲಿತ ಕುಟುಂಬದ, ವರನ ತಂದೆ ಭೈಯಾಲಾಲ್ ವಘೇರ (60) ರನ್ನು ಹುಡುಗಿಯ ಕುಟುಂಬದವರು ಕೊಲೆ ಮಾಡಿದ ಘಟನೆ ನಡೆದಿದೆ.
ಭೈಯಾಲಾಲ್ ವಘೇರಾ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತಮ್ಮ ಮಗ ಸನ್ನಿ ಮೇಲ್ಜಾತಿ ಹುಡುಗಿಯನ್ನು ಪ್ರೀತಿಸಿ ಕುಟುಂಬ ನಿರಾಕರಿಸಿದ ನಂತರ ಕುಟುಂಬ ತೊರೆದು ದಲಿತ ಸಮುದಾಯದ ಸನ್ನಿಯನ್ನು ವಿವಾಹವಾಗಿದ್ದರು.
ಅಕ್ಟೋಬರ್ (30) ಭೈಯಾಲಾಲ್ ರನ್ನು ಮಗ ಸನ್ನಿಯು ಉಸ್ಮಾನ್‌ಪುರ ಮೆಟ್ರೋ ನಿಲ್ದಾಣದ ಬಳಿ ಶುಚಿಗೊಳಿಸುವ ಕೆಲಸಕ್ಕೆ ಬಿಟ್ಟಾಗ, ವಧುವಿನ ಕುಟುಂಬವು ಭೈಯಾಲಾಲ್ ಮತ್ತು ಹೆಂಡತಿಯ ಮೇಲೆ ಕೋಲು ಮತ್ತು ರಾಡ್‌ಗಳಿಂದ ಹಲ್ಲೆ ನಡೆಸಿತು. ದಾಳಿಕೋರರು ಜಾತಿ ಆಧಾರಿತ ನಿಂದನೆಗಳನ್ನು ಎಸೆದು ಕ್ರೂರವಾಗಿ ಥಳಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ.
ಮೆಟ್ರೋ ಬಳಿಯಲ್ಲಿದ್ದ ಪ್ರಯಾಣಿಕರು ಹೊಡೆದಾಟವನ್ನು ನಿಲ್ಲಿಸಿದ್ದರು. ಮನೆಗೆ ಮರಳಿದ ನಂತರ ಭೈಯಾಲಾಲ್ ಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ತೆರಳಿದರಾದರೂ ಭೈಯಾಲಾಲ್ ಮೃತಪಟ್ಟರು.
ಮರುದಿನ, ಪೊಲೀಸರು ಐದು ಆರೋಪಿಗಳನ್ನು ಬಂಧಿಸಿದರು – ರಾಜು ಪರ್ಮಾರ್, ಮಹೇಶ್ ಪರ್ಮಾರ್ (ವಧುವಿನ ಚಿಕ್ಕಪ್ಪ), ಲಿಲಿ ಪರ್ಮಾರ್, ಕಲಾವತಿ ಪರ್ಮಾರ್, ಮಹೇಶ್ ಪರ್ಮಾರ್ (ಅಳಿಯ), ಮತ್ತು ಪ್ರೇಮ್ ಪರ್ಮಾರ್. ಎಲ್ಲರ ವಿರುದ್ಧ ಕೊಲೆ ಮತ್ತು ಹಲ್ಲೆಗಾಗಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.


