2010ರಲ್ಲಿ ನಡೆದ ಆರ್‍ಟಿಐ ಕಾರ್ಯಕರ್ತರೊಬ್ಬರ ಕೊಲೆಗೆ ಸಂಬಂಧಿಸಿದಂತೆ ತೀರ್ಪ ನೀಡಿರುವ ಗುಜರಾತಿನ ಸಿಬಿಐ ವಿಶೇಷ ನ್ಯಾಯಾಲಯ ಬಿಜೆಪಿ ಮಾಜಿ ಎಂಪಿ ದಿನು ಸೋಳಂಕಿ ಮತ್ತು ಇತರ ಆರು ಜನರನ್ನು ಅಪರಾಧಿಗಳೆಂದು ಶಿಕ್ಷಿಸಿ ತೀರ್ಪು ನೀಡಿದ್ದು ಜುಲೈ 11ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.
ಗುಜರಾತಿನ ಗಿರ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯನ್ನು ಬಯಲು ಮಾಡಲು ಹೊರಟಿದ್ದ ಆರ್‍ಟಿಐ ಕಾರ್ಯಕರ್ತ ಅಮಿತ್ ಜೆಥ್ವಾ ಅವರನ್ನು 2010ರಲ್ಲಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಗುಜರಾತ್ ಸರ್ಕಾರದ ಅಪರಾಧಿ ತನಿಖಾ ವಿಭಾಗವು ಮಾಜಿ ಸಂಸದ ಸೋಲಂಕಿ ಅವರಿಗೆ ನಿರಪರಾಧಿ ಎಂದು ಕ್ಲೀನ್‍ಚಿಟ್ ನೀಡಿದ ನಂತರ ಗುಜರಾತ್ ಹೈಕೋರ್ಟ್ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.
ಶನಿವಾರ ಸಿಬಿಐ ವಿಶೇಚ ನ್ಯಾಯಲಯದ ನ್ಯಾಯಾಧೀಶ ಕೆ.ಎಂ. ದಾವೆಯವರು, 2009-14ರ ಅವಧಿಯಲ್ಲಿ ಜುನಾಗಡ್ ಕ್ಷೇತ್ರವನ್ನು ಸಂಸತ್‍ನಲ್ಲಿ ಪ್ರತಿನಿಧಿಸಿದ್ದ ದಿನು ಸೋಲಂಕಿ, ಅವರ ಕಸಿನ್ ಶಿವಾ ಸೋಲಂಕಿ ಮತ್ತು ಇತರ ಐವರನ್ನು ಐಪಿಸಿ ಕಲಂ ಅಡಿ ಕೊಲೆ ಮತ್ತು ಕ್ರಿನಿಲ್ ಸಂಚು ಆರೋಗಳಡಿ ದೋಷಿಗಳೆಂದು ತೀರ್ಪ ನೀಡಿದ್ದಾರೆ.

ಆರ್‍ಟಿಐ ಅರ್ಜಿಗಳ ನೆರವಿನಿಂದ ದಿನು ಸೋಲಂಕಿ ಅವರ ಅಕ್ರಮ ಗಣಿಗಾರಿಕೆಯನ್ನು ಬಯಲು ಮಾಡಲು ಯತ್ನಿಸುತ್ತಿದ್ದ ಅಮಿತ್ ಜೆಥ್ವಾ ಅವರನ್ನು ಗುಜರಾತ್ ಹೈಕೋರ್ಟ್ ಎದುರೇ ಜುಲೈ 20, 2010ರಂದು ಹತ್ಯೆ ಮಾಡಲಾಗಿತ್ತು. ಏಷ್ಯಾ ಹಲಿಗಳ ತಾಣವಾಗಿರುವ ಗಿರ್ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗರಿಕೆ ವಿರುದ್ಧ ಜೆಥ್ವಾ ಅವರು ಹೈಕೋರ್ಟಿನಲ್ಲಿ ಸಾರ್ವಜನಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
2016ರ ಮೇನಲ್ಲಿ ದಿನು ಸೋಲಂಕಿ ಮತ್ತು ಇತರ ಆರು ಜನರ ಮೇಲೆ ಕೊಲೆ ಮತ್ತು ಅಪರಾಧಿ ಸಂಚು ಆರೋಪಗಳನ್ನು ಹೊರಿಸಿ ದೂರು ದಾಖಲಿಸಲಾಗಿತ್ತು.
ಶೈಲೇಶ್ ಪಾಂಡ್ಯ, ಬಹದೂರ್‍ಸಿನ್ಹಾ ವಡೇರ್, ಪಾಂಚನ್ ದೇಸಾಯಿ, ಸಂಜಯ್ ಚೌಹಾಣ ಮತ್ತು ಉದಾಜಿ ಠಾಕೋರ್ ಶಿಕ್ಷೆಗೊಳಗಾದ ಇತರ ಆರೋಪಿಗಳು. ಒತ್ತಡ ಮತ್ತು ಬೆದರಿಕೆಯ ಕಾರಣದಿಂದ 105 ಸಾಕ್ಷಿಗಳು ತಿರುಗಿ ಬಿದ್ದಿದ್ದಾರೆಂದು ಜೆಥ್ವಾ ತಂದೆ ಹೈಕೋರ್ಟ್ ಮೊರೆ ಹೋಗಿದ್ದರಿಂದ ಹೈಕೋರ್ಟ್ ಮತ್ತೆ ವಿಚಾರಣಗೆ ಆದೇಶಿಸಿತ್ತು.


