ಗುಜರಾತ್‌ನ ದಾಹೋದ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಹಿಂಬದಿಯಲ್ಲಿ ಆರು ವರ್ಷದ ವಿದ್ಯಾರ್ಥಿನಿಯ ಶವ ಪತ್ತೆಯಾದ ಮೂರು ದಿನಗಳ ನಂತರ, ಪೊಲೀಸರು ಭಾನುವಾರ ಶಾಲೆಯ ಪ್ರಾಂಶುಪಾಲರನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದಾರೆ.
ಶಾಲೆಗೆ ಹೋಗುವ ದಾರಿಯಲ್ಲಿ 1ನೇ ತರಗತಿಯ ವಿದ್ಯಾರ್ಥಿನಿಯನ್ನು ಪ್ರಾಂಶುಪಾಲರು ತನ್ನ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ಎಸಗುವ ಪ್ರಯತ್ನ ನಡೆಸಿದ್ದು, ಬಾಲಕಿ ಅದನ್ನು ವಿರೋಧಿಸಿದಾಗ ಆಕೆಯನ್ನು ಥಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಗುರುವಾರ ಬೆಳಿಗ್ಗೆ ಬಾಲಕಿಯ ಗ್ರಾಮದಿಂದ ಶಾಲೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಮಗುವಿನ ತಾಯಿ ಬಾಲಕಿಯನ್ನು ಪ್ರಾಂಶುಪಾಳರ ಜತೆ ಕಳುಹಿಸಿದರು.
ವಿಚಾರಣೆ ಬಳಿಕ. ಮಗು ಗುರುವಾರ ಶಾಲೆಗೆ ಗೈರುಹಾಜರಾಗಿರುವುದು ಮತ್ತು ಶಾಲಾ ಆವರಣದಿಂದ ಹೊರಡುವ ಅವರ ಸಮಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಎದುರಿಸಿದ ನಂತರ ಪ್ರಾಂಶುಪಾಲರು ತಪ್ಪೊಪ್ಪಿಕೊಂಡರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಂಶುಪಾಲರು ಶಾಲಾ ಅವಧಿಯ ನಂತರ ಶವವನ್ನು ಶಾಲೆಯ ಹಿಂದೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಇಡೀ ದಿನ ಸತ್ತ ಬಾಲಕಿಯ ಶವವನ್ನು ತಮ್ಮ ಕಾರಿನಲ್ಲಿ ಬಚ್ಚಿಟ್ಟಿದ್ದರು.
ಬಾಲಕಿಯ ಸಹಪಾಠಿಗಳು, ಶಿಕ್ಷಕರು ಮತ್ತು ಗ್ರಾಮಸ್ಥರ ಮಾಃಇತಿ ಸಂಗ್ರಹಿಸಿದ 10 ವಿವಿಧ ಅಧಿಕಾರಿಗಳ ತಂಡವು ವಿವರವಾದ ತನಿಖೆ ನಡೆಸಿದೆ. ಬಳಿಕ, ಈ ಪ್ರಗತಿಯು ಹೊರಹೊಮ್ಮಿದೆ ಎಂದು ದಾಹೋದ್ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್‌ಸಿನ್ಹ್ ಝಾಲಾ ಹೇಳಿದ್ದಾರೆ.
“ವಿವರವಾದ ತನಿಖೆಯ ನಂತರ, ಮಗು ಕೊನೆಯದಾಗಿ ಶಾಲೆಯ ಪ್ರಾಂಶುಪಾಲರೊಂದಿಗೆ ಕಾಣಿಸಿಕೊಂಡಿರುವುದು ಖಚಿತವಾಯಿತು. ಆಕೆಯ ತಾಯಿ ಆಕೆಯನ್ನು ಬೆಳಿಗ್ಗೆ 10.20 ರ ಸುಮಾರಿಗೆ ತಮ್ಮ ಹಳ್ಳಿಯಲ್ಲಿ ಪ್ರಾಂಶುಪಾಲರಿಗೆ ಒಪ್ಪಿಸಿದರು. ಅವರು ತಮ್ಮ ವಾಹನದಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಇತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆ ಬಳಿಕ ನಾವು ಅದನ್ನು ಖಚಿತಪಡಿಸಿಕೊಂಡಿದ್ದೇವೆ; ಮಗು ಗುರುವಾರ ಶಾಲೆಗೆ ಹೋಗಲಿಲ್ಲ ಎಂದು ಹೇಳಿದ್ದಾರೆ.
ಆರಂಭದಲ್ಲಿ ಮಗುವನ್ನು ಶಾಲೆಗೆ ಬಿಟ್ಟ ನಂತರ ಮಗು ಎಲ್ಲಿಗೋ ಹೋಗಿದೆ ಎಂದು ಪ್ರಿನ್ಸಿಪಾಲ್ ಹೇಳಿದ್ದರು. ಆದರೆ, ನಂತರ ತಪ್ಪೊಪ್ಪಿಕೊಂಡರು ಎಂದು ಝಾಲಾ ಹೇಳಿದರು.
ಪೊಲೀಸರ ಪ್ರಕಾರ, “ತನಗೆ ತರಗತಿ ಶಿಕ್ಷಕರಿಂದ ಸಂಜೆ ಫೋನ್ ಕರೆ ಬಂದಿತ್ತು, ಮಗು ಕಾಣೆಯಾಗಿದೆ ಎಂದು ಹೇಳುವ ಮೂಲಕ ಪ್ರಾಂಶುಪಾಲರು ತನಿಖಾ ಅಧಿಕಾರಿಗಳನ್ನು ದಾರಿತಪ್ಪಿಸಲು ಪ್ರಯತ್ನಿಸಿದರು. ಅವರು ಪೊಲೀಸರಿಗೆ ಈ ಬಗ್ಗೆ ಮನವರಿಕೆ ಮಾಡಲು ಸಾಧ್ಯವಾಗದ ಕಾರಣ, ಅವರ ಮೊಬೈಲ್ ಫೋನ್ ಸ್ಥಳದ ಬಗ್ಗೆ ತಾಂತ್ರಿಕ ತನಿಖೆಯನ್ನು ಪ್ರಾರಂಭಿಸಲಾಯಿತು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
“ಅವರು ತಡವಾಗಿ ಶಾಲೆಯನ್ನು ತೊರೆದ ಸಮಯದಿಂದ, ಏನೋ ತಪ್ಪಾಗಿದೆ ಎಂಬ ಸುಳಿವು ನಮಗೆ ಸಿಕ್ಕಿತು. ವಿಚಾರಣೆಯ ಸಮಯದಲ್ಲಿ, ತನ್ನ ಕಾರಿನಲ್ಲಿ ಶಾಲೆಗೆ ಹೋಗುವ ದಾರಿಯಲ್ಲಿ ಬಲಿಪಶುವಿಗೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾಗಿ ಒಪ್ಪಿಕೊಂಡನು. ಆದರೆ, ಬಾಲಕಿ ಪ್ರತಿರೋಧ ವ್ಯಕ್ತಪಡಿಸಿ ಕಿರುಚಲು ಆರಂಭಿಸಿದ್ದಳು. ಹುಡುಗಿಯನ್ನು ಮೌನಗೊಳಿಸಲು, ಅವನು ಆಕೆಯನ್ನು ಹೊಡೆದನು” ಎಂದು ಝಾಲಾ ಹೇಳಿದರು.
“ಕೊಲೆ ಬಳಿಕ ಪ್ರಾಂಶುಪಾಲರು ಎಂದಿನಂತೆ ಶಾಲೆಯಲ್ಲಿ ತಮ್ಮ ದಿನವನ್ನು ಕಳೆದರು. ಇಡೀ ದಿನ ಹುಡುಗಿಯ ದೇಹವನ್ನು ಕಾರಿನಲ್ಲಿ ಇರಿಸಿದರು. ಶಾಲೆಯಿಂದ ಎಲ್ಲರೂ ತೆರಳಿದ ನಂತರ, ಆತ ತನ್ನ ಕಾರಿನಿಂದ ಶವವನ್ನು ಹೊರತೆಗೆದು ಹಿತ್ತಲಿನಲ್ಲಿ ಎಸೆದನು. ಅವನು ತನ್ನ ಕಾರಿನಿಂದ ಅವಳ ಚಪ್ಪಲಿಗಳನ್ನು ಹೊರತೆಗೆದು, ಅವುಗಳನ್ನು ತರಗತಿಯ ಹೊರಗೆ ಇಟ್ಟಿದ್ದಾನೆ. ಅವಳ ಬ್ಯಾಗ್ ಅನ್ನು ತರಗತಿಯಲ್ಲಿಯೇ ಇರಿಸಿದ್ದನು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಾಂಶುಪಾಲರ ಮೊಬೈಲ್ ಫೋನ್‌ನ ತಾಂತ್ರಿಕ ತನಿಖೆ ನಡೆಸಲಾಗಿದ್ದು, ಅವರು ಗುರುವಾರ ಬೆಳಿಗ್ಗೆ ಶಾಲೆಗೆ ತಲುಪಲು “ಸಾಮಾನ್ಯಕ್ಕಿಂತ ಹೆಚ್ಚು ಸಮಯ” ತೆಗೆದುಕೊಂಡಿದ್ದಾರೆ ಎಂದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಸಹಪಾಠಿಗಳು ಹಾಗೂ ಶಿಕ್ಷಕರಿಂದ ಪೊಲೀಸರು ಆಕೆ ಶಾಲೆಗೆ ಬಂದಿಲ್ಲ, ಶಾಲಾ ಸಮಯದಲ್ಲಿ ಹಿತ್ತಲಲ್ಲಿ ಆಕೆಯ ಶವ ಕಾಣಿಸಿಲ್ಲ ಎಂದು ತಿಳಿದು ಬಂದಿದೆ. “ಇದಲ್ಲದೆ, ಬಲಿಪಶುವಿನ ಪಾದರಕ್ಷೆಗಳು ಮತ್ತು ಬ್ಯಾಗ್ ಸಹ ದಿನವಿಡೀ ತರಗತಿಯಲ್ಲಿ ಇರಲಿಲ್ಲ ಎಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೇಳಿದರು’ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ; ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಆಯ್ಕೆ


