ವೈದ್ಯರಂತೆ ನಟಿಸಿ, ವೈದ್ಯಕೀಯ ಅರ್ಹತೆ ಇಲ್ಲದೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಇಬ್ಬರು ನಕಲಿ ವೈದ್ಯರನ್ನು ಗುಜರಾತಿನ ಸೂರತ್ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ನಕಲಿ ವೈದ್ಯರ ವಿರುದ್ಧ ಕಡಿವಾಣ ಹಾಕುವ ಅಭಿಯಾನದ ಭಾಗವಾಗಿ ಈ ಬಂಧನ ನಡೆದಿದೆ.
ಆರೋಪಿಗಳ ಪೈಕಿ ಲಲಿತಾ ಕೃಪಾ ಶಂಕರ್ ಸಿಂಗ್ ಎಂಬ ಮಹಿಳೆ 12ನೇ ತರಗತಿವರೆಗೆ ಓದಿದ್ದರೆ, ಪ್ರಯಾಗ್ ರಾಮಚಂದ್ರ ಪ್ರಸಾದ್ ಎಂಬಾತ 10ನೇ ತರಗತಿವರೆಗೆ ಮಾತ್ರ ಓದಿದ್ದಾನೆ.
ಡಿಸಿಪಿ ವಿಜಯ್ ಸಿಂಗ್ ಗುರ್ಜಾರ್ ಪ್ರಕಾರ, ಇಬ್ಬರೂ ಕ್ಲಿನಿಕ್ ನಡೆಸುತ್ತಿದ್ದರು ಮತ್ತು ರೋಗಿಗಳಿಗೆ ಅಲೋಪತಿ ಔಷಧಿಗಳನ್ನು ಸೂಚಿಸುತ್ತಿದ್ದರು. ತನಿಖೆಯ ನಂತರ, ಪೊಲೀಸರಿಗೆ ಅವರ ಬಳಿ ಯಾವುದೇ ಮಾನ್ಯ ವೈದ್ಯಕೀಯ ಪದವಿಗಳು ಅಥವಾ ಪ್ರಮಾಣೀಕರಣಗಳು ಕಂಡುಬಂದಿಲ್ಲ. ಹೆಚ್ಚಿನ ಪರೀಕ್ಷೆಗಾಗಿ ಕ್ಲಿನಿಕ್‌ನಿಂದ ಔಷಧಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಉಮ್ರಾ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರ ಶೈಕ್ಷಣಿಕ ಪ್ರಮಾಣ ಮತ್ತು ಅವರು ಸೂರತ್‌ನಲ್ಲಿ ಎಷ್ಟು ದಿನ ನಕಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ಈಗ ತನಿಖೆ ನಡೆಸುತ್ತಿದ್ದಾರೆ. ಇಬ್ಬರ ವಿರುದ್ಧವೂ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಇದನ್ನೂ ಓದಿ; ʼಮುಖ್ಯಮಂತ್ರಿ ಅತಿಶಿ ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆ ಇದೆʼ : ಅರವಿಂದ್ ಕೇಜ್ರಿವಾಲ್


