ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಜನವರಿ 28, 2024 ರಂದು ಆದಿವಾಸಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಬೈಕ್‌ಗೆ ಕಟ್ಟಿ, ಧಲ್ಸಿಮಲ್ ಗ್ರಾಮದ ಮೂಲಕ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ. ಪ್ರಕರಣದಲ್ಲಿ ಪೊಲೀಸರು 12 ಜನರನ್ನು ಬಂಧಿಸಿದ್ದು, ಆರೋಪಿಗಳಲ್ಲಿ ನಾಲ್ವರು ಮಹಿಳೆಯರು ಮತ್ತು ನಾಲ್ವರು ಅಪ್ರಾಪ್ತ ವಯಸ್ಕರು ಸೇರಿದ್ದಾರೆ ಎಂದು ವರದಿಯಾಗಿದೆ. ಗುಜರಾತ್
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 15-20 ಜನರು ಸಂತ್ರಸ್ತ ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ದಾಹೋದ್ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ದೀಪ್‌ಸಿನ್ಹ್ ಝಾಲಾ ಅವರು ಹೇಳಿದ್ದಾರೆ. ಗುಜರಾತ್
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ದುಷ್ಕರ್ಮಿಗಳು ಹಲ್ಲೆಯ ಘಟನೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದು ಸ್ಥಳೀಯ ಅಧಿಕಾರಿಳಿಗೆ ಸಿಕ್ಕಿತ್ತು. ಕೂಡಲೆ ಎಚ್ಚೆತ್ತ ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಿ, ಮಹಿಳೆಯನ್ನು ಅವರ ಅತ್ತೆ-ಮಾವಂದಿರು ಅಕ್ರಮ ಬಂಧನದಿಂದ ರಕ್ಷಿಸಿದ್ದಾರೆ.
ಬಂಧಿತರಲ್ಲಿ, ವಯಸ್ಕ ಮಹಿಳೆಯರು ನ್ಯಾಯಾಂಗ ಬಂಧನದಲ್ಲಿದ್ದಾರೆ, ಅಪ್ರಾಪ್ತ ವಯಸ್ಕರು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರಾಗಿದ್ದಾರೆ. ನಾಲ್ವರು ಪುರುಷ ಆರೋಪಿಗಳು ವಿಚಾರಣೆಗಾಗಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಜೊತೆಗೆ ಮೂವರು ಶಂಕಿತರು – ಒಬ್ಬ ಪುರುಷ, ಒಬ್ಬ ಮಹಿಳೆ ಮತ್ತು ಒಬ್ಬ ಅಪ್ರಾಪ್ತ ವಯಸ್ಕ – ಇನ್ನೂ ತಲೆಮರೆಸಿಕೊಂಡಿದ್ದಾರೆ.
ಸಂತ್ರಸ್ತ ಮಹಿಳೆಯ ಪತಿ ಪ್ರಸ್ತುತ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ ಎಂದು ಸ್ಥಳೀಯ ಮೂಲಗಳು ವರದಿ ಮಾಡಿವೆ. ಹಾಗಾಗಿ ಮಹಿಳೆಯು ತಮ್ಮ ಅತ್ತೆ-ಮಾವಂದಿರೊಂದಿಗೆ ವಾಸಿಸುತ್ತಿದ್ದರು. ಆದರೆ ಕೌಟುಂಬಿಕ ಕಲಹಗಳಿಂದಾಗಿ ಅವರನ್ನು ಬಿಟ್ಟು ತೆರಳಿದ್ದ ಮಹಿಳೆ, ತನ್ನ ಗಂಡನ ಹಳ್ಳಿಯ ವ್ಯಕ್ತಿಯೊಬ್ಬರೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದರು ಮತ್ತು ಅವರೊಂದಿಗೆ ಮೂರು ತಿಂಗಳಿನಿಂದ ವಾಸಿಸುತ್ತಿದ್ದರು. ಇದನ್ನು ಅವರ ಕುಟುಂಬಿಕರು ವಿರೋಧಿಸಿದ್ದರು ಎಂದು ವರದಿಯಾಗಿದೆ.
ಗುಜರಾತ್‌ನ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಬಹು ಪತ್ನಿತ್ವ ಸ್ವೀಕಾರಾರ್ಹವಾಗಿದ್ದರೂ, ಒಂದೇ ಜಾತಿ, ಬುಡಕಟ್ಟು ಅಥವಾ ಗೋತ್ರದೊಳಗಿನ ಸಂಬಂಧಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದೇ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿದ್ದು, ಇದರಲ್ಲಿ ಮೇ 2022 ರಲ್ಲಿ ಮಾರ್ಗಲಾ ಗ್ರಾಮದಲ್ಲಿ ನಡೆದ ಪ್ರಕರಣವೂ ಒಂದಾಗಿದೆ. ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಅಕ್ರಮ ಸಂಬಂಧಕ್ಕಾಗಿ ಇದೇ ರೀತಿಯ ದೌರ್ಜನ್ಯವನ್ನು ಎದುರಿಸಬೇಕಾಯಿತು.
ಇದನ್ನೂಓದಿ: ಬಜೆಟ್ ಅಧಿವೇಶನ | ಜಿಡಿಪಿ ಬೆಳವಣಿಗೆ ದರ ಶೇ 6.3ರಿಂದ 6.8 : ಆರ್ಥಿಕ ಸಮೀಕ್ಷೆ
ಬಜೆಟ್ ಅಧಿವೇಶನ | ಜಿಡಿಪಿ ಬೆಳವಣಿಗೆ ದರ ಶೇ 6.3ರಿಂದ 6.8 : ಆರ್ಥಿಕ ಸಮೀಕ್ಷೆ


