ಮಹಾರಾಷ್ಟ್ರದ ಈರುಳ್ಳಿ ಬೆಳೆಯುವ ರೈತರಿಗಿಂತ ಗುಜರಾತ್‌ನ ಬಿಳಿ ಈರುಳ್ಳಿ ರೈತರಿಗೆ ಏಕೆ ಆದ್ಯತೆ ನೀಡಲಾಗಿದೆ ಮತ್ತು ಮಹಾರಾಷ್ಟ್ರದಲ್ಲಿ ಆದಿವಾಸಿಗಳ ಅರಣ್ಯ ಹಕ್ಕುಗಳನ್ನು ಬಿಜೆಪಿ ಏಕೆ ದುರ್ಬಲಗೊಳಿಸಿದೆ ಎಂದು ಕಾಂಗ್ರೆಸ್ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದೆ. ಧುಲೆ ಮತ್ತು ನಾಸಿಕ್‌ನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಗಳಿಗೆ ಮುಂಚಿತವಾಗಿ ಕಾಂಗ್ರೆಸ್ ಈ ಪ್ರಶ್ನೆಗಳನ್ನು ಪ್ರಧಾನಿಯ ಮುಂದಿಟ್ಟಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು X ನಲ್ಲಿ ಈ ಪ್ರಶ್ನೆಗಳನ್ನು ಹಾಕಿದ್ದಾರೆ. ಗುಜರಾತ್
ಕಳೆದ ವರ್ಷ ಡಿಸೆಂಬರ್‌ನಿಂದ ಮಹಾರಾಷ್ಟ್ರದ ಈರುಳ್ಳಿ ರಫ್ತಿನ ಮೇಲೆ ಮೋದಿ ಸರ್ಕಾರ ಹೇರಿದ ನಿರ್ಬಂಧದಿಂದ ಈರುಳ್ಳಿ ರೈತರು ತತ್ತರಿಸಿ ಹೋಗಿದ್ದಾರೆ. ಬೆಳೆಯ ಋತುವಿನಲ್ಲಿ ಹವಾಮಾನ ಮತ್ತು ನೀರಿನ ಬಿಕ್ಕಟ್ಟಿನಿಂದ ರೈತರು ತಮ್ಮ ಸಾಮಾನ್ಯ ಬೆಳೆಯಲ್ಲಿ ಕೇವಲ 50% ದಷ್ಟು ಮಾತ್ರ ಉತ್ಪಾದಿಸಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಅಂತಿಮವಾಗಿ ಈರುಳ್ಳಿಯನ್ನು ಕೊಯ್ಲು ಮಾಡಿದಾಗ, ರೈತರು ಅನಿಯಂತ್ರಿತ ರಫ್ತು ನಿಷೇಧವನ್ನು ಎದುರಿಸಿದ್ದಾರೆ. ಈ ನಿಷೇಧ ಅವರಿಗೆ ಮಾರಕವಾಗಿ ಕಡಿಮೆ ಬೆಲೆಗೆ ಬೆಳೆಯನ್ನು ಮಾರಾಟ ಮಾಡಬೇಕಾಯಿತು. ಈ ಮೂಲಕ ಅವರು ಭಾರಿ ನಷ್ಟ ಅನುಭವಿಸಿದರು. ಆದರೆ ಕೇಂದ್ರ ಸರ್ಕಾರ ಇದನ್ನು ಮತ್ತಷ್ಟು ಹದಗೆಡಿಸಿದ್ದು, ಬಿಳಿ ಈರುಳ್ಳಿ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಈ ಈರುಳ್ಳಿಯನ್ನು ಪ್ರಾಥಮಿಕವಾಗಿ ಗುಜರಾತ್‌ನಲ್ಲಿ ಬೆಳೆಯಲಾಗುತ್ತದೆ. ಆದರೆ ಕೆಂಪು ಈರುಳ್ಳಿ ಬೆಳೆಯುವ ಮಹಾರಾಷ್ಟ್ರದ ರೈತರು ರಫ್ತು ನಿಷೇಧದಿಂದ ಎರಡು ತಿಂಗಳು ಹೊರಗುಳಿದರು. ಈ ನಿಷೇಧ ತೆರವು ಮಾಡಿದ್ದರೂ, ರಫ್ತಿನ ಮೇಲೆ 20% ಸುಂಕವು ಜಾರಿಯಲ್ಲಿದೆ” ಎಂದು ಅವರು ಹೇಳಿದ್ದಾರೆ. ಗುಜರಾತ್
The non-biological PM is in Dhule and Nashik today. Three questions for him –
1. Why were Gujarat’s white onion farmers given preferential treatment over Maharashtra’s onion farmers?
Since December 2023, onion farmers in Maharashtra have been reeling from the Modi Sarkar’s…
— Jairam Ramesh (@Jairam_Ramesh) November 8, 2024
“ಜೈವಿಕವಲ್ಲದ ಪ್ರಧಾನಿ ಅವರು ಈ ರೀತಿಯಾಗಿ ಪಕ್ಷಾಪಾತ ಮಾಡಿದರು ಎಂದು ವಿವರಿಸಬಹುದೇ? ಗುಜರಾತ್‌ನ ಈರುಳ್ಳಿ ಬೆಳೆಯುವ ರೈತರ ಪರವಾಗಿ ಕಾಳಜಿ ವ್ಯಕ್ತಪಡಿಸುವಾಗ, ಮಹಾರಾಷ್ಟ್ರದ ಈರುಳ್ಳಿ ರೈತರನ್ನು ಅವರು ಏಕೆ ನಿರ್ಲಕ್ಷಿಸಿದ್ದಾರೆ?” ಎಂದು ರಮೇಶ್ ಅವರು ತಮ್ಮ ಪೋಸ್ಟ್‌ನಲ್ಲಿ ಕೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಆದಿವಾಸಿಗಳ ಅರಣ್ಯ ಹಕ್ಕುಗಳನ್ನು ಬಿಜೆಪಿ ದುರ್ಬಲಗೊಳಿಸಿದೆ
2006 ರಲ್ಲಿ ಕಾಂಗ್ರೆಸ್ ಅರಣ್ಯ ಹಕ್ಕುಗಳ ಕಾಯಿದೆ (ಎಫ್‌ಆರ್‌ಎ) ಅನ್ನು ಅಂಗೀಕರಿಸಿತು, ಇದು ಆದಿವಾಸಿ ಮತ್ತು ಅರಣ್ಯ-ವಾಸಿಸುವ ಸಮುದಾಯಗಳಿಗೆ ತಮ್ಮದೇ ಆದ ಕಾಡುಗಳನ್ನು ನಿರ್ವಹಿಸಲು ಕಾನೂನು ಹಕ್ಕುಗಳನ್ನು ನೀಡಿತು ಎಂದು ರಮೇಶ್ ಹೇಳಿದ್ದಾರೆ. ಆದರೆ ಈ ಅರಣ್ಯ ಹಕ್ಕು ಕಾಯ್ದೆ (ಎಫ್‌ಆರ್‌ಎ) ಅನುಷ್ಠಾನಕ್ಕೆ ಬಿಜೆಪಿ ಸರ್ಕಾರ ಅಡ್ಡಿಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ಕಾಯ್ದೆಗೆ ಅಡ್ಡಿಪಡಿಸಿದ ಕಾರಣಕ್ಕೆ ಲಕ್ಷಾಂತರ ಆದಿವಾಸಿಗಳು ಅದರ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ. ಅವರು ಸಲ್ಲಿಸಿದ 401, 046 ವೈಯಕ್ತಿಕ ಹಕ್ಕುಗಳಲ್ಲಿ ಕೇವಲ 52% ವನ್ನು ಮಾತ್ರ ಅನುಮೋದಿಸಲಾಗಿದೆ ಮತ್ತು ಸಮುದಾಯ ಹಕ್ಕುಗಳಿಗೆ ಅರ್ಹವಾದ 50,045 ಚದರ ಕಿಮೀಗಳಲ್ಲಿ ಕೇವಲ 23.5% ದಷ್ಟು (11,769 ಚದರ ಕಿಮೀ) ಭೂಮಿ ಹಕ್ಕುಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
“ಮಹಾರಾಷ್ಟ್ರದ ಮಹಾಯುತಿ ಸರ್ಕಾರವು ಆದಿವಾಸಿ ಸಮುದಾಯಗಳಿಗೆ ಅವರ ಹಕ್ಕುಗಳನ್ನು ಒದಗಿಸಲು ಏಕೆ ವಿಫಲವಾಗಿದೆ?” ರಮೇಶ್ ಕೇಳಿದ್ದು, ನಾಸಿಕ್ ಮುನ್ಸಿಪಲ್ ಕಾರ್ಪೊರೇಶನ್‌ಗೆ ಮಹಾಯುತಿ ಸರ್ಕಾರ ಏಕೆ ಚುನಾವಣೆ ನಡೆಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೋಲ್ಕತ್ತಾ ಅತ್ಯಾಚಾರ – ಕೊಲೆ ಪ್ರಕರಣ | ವಿಚಾರಣೆಯನ್ನು ಪ.ಬಂಗಾಳದಿಂದ ವರ್ಗಾಯಿಸಲು ಸುಪ್ರೀಂ ನಕಾರ
ಕೋಲ್ಕತ್ತಾ ಅತ್ಯಾಚಾರ – ಕೊಲೆ ಪ್ರಕರಣ | ವಿಚಾರಣೆಯನ್ನು ಪ.ಬಂಗಾಳದಿಂದ ವರ್ಗಾಯಿಸಲು ಸುಪ್ರೀಂ ನಕಾರ


