ಗುಲ್ಬರ್ಗಾ ವಿವಿಯಲ್ಲಿ ಜೆಎನ್‍ಯು ವಿದ್ಯಾರ್ಥಿ ಸಂಘಟನೆ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಉಪನ್ಯಾಸ ರದ್ದುಗೊಳಿಸಿದ ಕಾರಣ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಗಿದೆ.
ಕನ್ಹಯ್ಯ ಕುಮಾರ್ ಇಂದು ‘ಅಂಬೇಡ್ಕರ್ ಕಂಡ ಆಧುನಿಕ ಭಾರತದಲ್ಲಿ ಯುವಕರ ಪಾತ್ರ’ ವಿಷಯದ ಮೇಲೆ ಭಾಷಣ ಮಾಡಬೇಕಿತ್ತು. ಆದರೆ ಬಲಪಂಥೀಯ ಸಂಘಟನೆಗಳ ಒತ್ತಾಯದ ಕಾರಣದಿಂದ ಕನ್ಹಯ್ಯ ಕುಮಾರ್ ಭಾಷಣ ರದ್ದಾಗಿದ್ದರೂ ಪಟ್ಟು ಬಿಡದ ವಿ.ವಿ ಸಂಶೋಧನಾ ವಿದ್ಯಾರ್ಥಿಗಳ ಸಂಘ ಕಲಬುರ್ಗಿ ನಗರದ ಎಸ್‍ವಿಪಿ ವೃತ್ತದ ಬಳಿ ಇರುವ ವಿಶ್ವೆಶ್ವರಯ್ಯ ಎಂಜೀನಿಯರ್ಸ್ ಇನ್‍ಸ್ಟಿಟ್ಯೂಟ್‍ಗೆ ಸ್ಥಳಾಂತರಿಸಲಾಗಿದೆ.
ಇಲ್ಲಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್ ಅಂಬೇಡ್ಕರ್ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯಲ್ಲಿ ಇಂದು ಆಯೋಜಿಸಿದ್ದ ಉಪನ್ಯಾಸವನ್ನು ವಿವಿ.ಕುಲಪತಿ ಪ್ರೊ ಪರಿಮಳಾ ಅಂಬೇಕರ್ ರದ್ದುಗೊಳಿಸಿದ್ದಾರೆ.
ರಾಜ್ಯಪಾಲರ ಮೂಲಕ ಗುಲ್ಬರ್ಗ ವಿವಿ ಕುಲಪತಿ ಅವರಿಗೆ ಮೌಖಿಕ ಆದೇಶ ಬಂದ ಕಾರಣ ಕನ್ಹಯ್ಯ ಭಾಷಣಕ್ಕೆ ನೀಡಿದ್ದ ಅನುಮತಿಯನ್ನು ರದ್ದಾಗಿದ್ದು, ಉನ್ನತ ಶಿಕ್ಷಣ ಇಲಾಖೆಯ ಮೌಖಿಕ ಸೂಚನೆ ಅನುಸಾರ ಈ ಕಾರ್ಯಕ್ರಮ ನಡೆಯುವ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದ ಸುತ್ತಮುತ್ತ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.


