ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. “ಇದು ತಾರತಮ್ಯವನ್ನು ಸೃಷ್ಟಿಸುತ್ತದೆ, ವಿಭಿನ್ನ ಧಾರ್ಮಿಕ ಪದ್ಧತಿಗಳನ್ನು ಅನುಸರಿಸುವ ಪ್ರಯಾಣಿಕರ ಹಕ್ಕುಗಳನ್ನು ಉಲ್ಲಂಘಿಸುತ್ತದೆ” ಎಂದು ದೂರುದಾರರು ವಾದಿಸಿದ್ದಾರೆ ಎಮದು ‘ದಿ ಅಬ್ಸರ್ವರ್ ಪೋಸ್ಟ್’ ವರದಿ ಮಾಡಿದೆ.
ನವೆಂಬರ್ 24 ರ ಎನ್‌ಎಚ್‌ಆರ್‌ಸಿಯ ವಿಚಾರಣೆಯ ಪ್ರಕಾರ, ಆರೋಪಗಳು ಪ್ರಾಥಮಿಕವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದೆ. ಭೋಪಾಲ್‌ನ ಸುನಿಲ್ ಅಹಿರ್ವಾರ್ ಸಲ್ಲಿಸಿದ ದೂರಿನಲ್ಲಿ, ಈ ಪದ್ಧತಿಯು ಸಾಂಪ್ರದಾಯಿಕವಾಗಿ ಮಾಂಸ ವ್ಯಾಪಾರದಲ್ಲಿ ಕೆಲಸ ಮಾಡುವ ಹಿಂದೂ ದಲಿತ ಸಮುದಾಯಗಳ ಜೀವನೋಪಾಯಕ್ಕೆ ಹಾನಿ ಮಾಡುತ್ತದೆ ಎಂದು ಹೇಳಲಾಗಿದೆ. ಮಾಂಸ ಸಂಸ್ಕರಣೆಯ ಒಂದೇ ವಿಧಾನವನ್ನು ಬೆಂಬಲಿಸುವ ಮೂಲಕ ಇದು ಅವರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಹಿಂದೂ ಮತ್ತು ಸಿಖ್ ಪ್ರಯಾಣಿಕರಿಗೆ ಅವರ ಧಾರ್ಮಿಕ ನಂಬಿಕೆಗಳಿಗೆ ಹೊಂದಿಕೆಯಾಗುವ ಆಹಾರ ಆಯ್ಕೆಗಳಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ. ಇದು ನಮ್ಮ ಸಮಾನತೆ, ತಾರತಮ್ಯವಿಲ್ಲದಿರುವಿಕೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಘನತೆಯ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದ್ದಾರೆ. “ಇದು ಸಂವಿಧಾನದ 14, 15, 19(1)(ಜಿ), 21 ಮತ್ತು 25 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ” ಎಂದು ಅವರು ತಮ್ಮ ವಾದವನ್ನು ಬೆಂಬಲಿಸಲು ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿದರು.
ಸದಸ್ಯ ಪ್ರಿಯಾಂಕ್ ಕನೂಂಗೊ ನೇತೃತ್ವದ ಎನ್‌ಎಚ್‌ಆರ್‌ಸಿ ಪೀಠವು ದೂರುದಾರನ ಕಳವಳಗಳನ್ನು ಒಪ್ಪಿಕೊಂಡಿದೆ. ರೈಲ್ವೆ ಮಂಡಳಿಯ ಅಧ್ಯಕ್ಷರಿಗೆ ನೋಟಿಸ್ ನೀಡುವಂತೆ ತನ್ನ ರಿಜಿಸ್ಟ್ರಿಗೆ ನಿರ್ದೇಶಿಸಿತು. ಆರೋಪಗಳನ್ನು ತನಿಖೆ ಮಾಡಿ ಎರಡು ವಾರಗಳಲ್ಲಿ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ರೈಲ್ವೆಗೆ ಸೂಚಿಸಲಾಗಿದೆ. “ರೈಲ್ವೆಯು ಸರ್ಕಾರಿ ಸಂಸ್ಥೆಯಾಗಿರುವುದರಿಂದ, ಸಂವಿಧಾನದ ಜಾತ್ಯತೀತ ಮನೋಭಾವದ ಪ್ರಕಾರ ಎಲ್ಲಾ ಧಾರ್ಮಿಕ ನಂಬಿಕೆಗಳ ಆಹಾರದ ಆಯ್ಕೆಯ ಹಕ್ಕನ್ನು ಗೌರವಿಸಬೇಕು” ಎಂದು ಆಯೋಗ ಹೇಳಿದೆ.
ಹಲಾಲ್ ಮಾಂಸವನ್ನು ಮಾತ್ರ ಮಾರಾಟ ಮಾಡುವುದು ಹಿಂದೂ ಪರಿಶಿಷ್ಟ ಜಾತಿ ಸಮುದಾಯಗಳು ಮತ್ತು ಇತರ ಮುಸ್ಲಿಮೇತರ ಗುಂಪುಗಳ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಎನ್‌ಎಚ್‌ಆರ್‌ಸಿ ಗಮನಿಸಿದೆ.


