Homeಮುಖಪುಟಗಾಝಾ ಕದನ ವಿರಾಮದ ಕರಡು ಒಪ್ಪಂದಕ್ಕೆ ಹಮಾಸ್ ಒಪ್ಪಿಗೆ : ಶೀಘ್ರದಲ್ಲೇ ಯುದ್ಧ ಕೊನೆಗೊಳ್ಳುವ ಭರವಸೆ

ಗಾಝಾ ಕದನ ವಿರಾಮದ ಕರಡು ಒಪ್ಪಂದಕ್ಕೆ ಹಮಾಸ್ ಒಪ್ಪಿಗೆ : ಶೀಘ್ರದಲ್ಲೇ ಯುದ್ಧ ಕೊನೆಗೊಳ್ಳುವ ಭರವಸೆ

- Advertisement -
- Advertisement -

ಗಾಝಾದಲ್ಲಿ ಮತ್ತೊಮ್ಮೆ ಕದನ ವಿರಾಮದ ಭರವಸೆ ಚಿಗೊರೊಡೆದಿದೆ. ಪರಸ್ಪರ ಯುದ್ಧ ಕೊನೆಗೊಳಿಸುವ ಕರಡು ಒಪ್ಪಂದಕ್ಕೆ ಹಮಾಸ್ ಒಪ್ಪಿಗೆ ಸೂಚಿಸಿದೆ ಎಂದು ಮಾತುಕತೆಯಲ್ಲಿ ಭಾಗಿಯಾಗಿರುವ ಇಬ್ಬರು ಅಧಿಕಾರಿಗಳು ಹೇಳಿದ್ದಾಗಿ ಅಸೋಸಿಯೇಟೆಡ್ ಪ್ರೆಸ್‌ ವರದಿ ಮಾಡಿದೆ.

ಇಸ್ರೇಲಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿರುವ ವರದಿಯು, ಕದನ ವಿರಾಮದ ಒಪ್ಪಂದ ಪ್ರಕ್ರಿಯೆ ಪ್ರಗತಿ ಕಂಡಿದೆ. ಆದರೆ, ಅಂತಿಮಗೊಳ್ಳಬೇಕಿದೆ ಎಂದು ಹೇಳಿದೆ.

ಅಕ್ಟೋಬರ್ 2023ರಿಂದ ಹಮಾಸ್ ಮತ್ತು ಇಸ್ರೇಲ್‌ ಸೇನೆ ನಡುವೆ ನಡೆಯುತ್ತಿರುವ ಯುದ್ದ
ಕೊನೆಗೊಳಿಸಲು ಮತ್ತು ಹಮಾಸ್ ಒತ್ತೆಯಾಳುಗಾಗಿ ಇಟ್ಟುಕೊಂಡಿರುವ ಇಸ್ರೇಲಿಗರ ಬಿಡುಗಡೆಗೆ ಈ ಕದನ ವಿರಾಮ ಅಗತ್ಯವಾಗಿದೆ.

ಈ ಪ್ರಕ್ರಿಯೆಯಲ್ಲಿ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ಮಧ್ಯಸ್ಥಗಾರರಾಗಿದ್ದಾರೆ. ಕದನ ವಿರಾಮದ ನಿಟ್ಟಿನಲ್ಲಿ ಈ ರಾಷ್ಟ್ರಗಳು ಈ ಹಿಂದೆ ಹಲವು ಬಾರಿ ಪ್ರಯತ್ನಗಳನ್ನು ಮಾಡಿವೆ. ಆದರೆ, ಅದು ವಿಫಲವಾಗಿವೆ ಎಂದು ವರದಿಗಳು ಹೇಳಿವೆ. ಮಂಗಳವಾರ (ಜ.14) ಈ ರಾಷ್ಟ್ರಗಳು ಮತ್ತೊಮ್ಮೆ ಕದನ ವಿರಾಮ ಸಂಬಂಧ ಸಭೆ ನಡೆಸಿವೆ ಎಂದು ತಿಳಿದು ಬಂದಿದೆ.

ಆದರೆ, ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವ ಅಮೆರಿಕ ಮತ್ತೊಂದೆಡೆ ಗಾಝಾದಲ್ಲಿ ಆಕ್ರಮಣ ನಡೆಸಲು ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ಸಹಾಯ ಒದಗಿಸುತ್ತಿದೆ ಎಂದು ಎಂಬುವುದು ಇಲ್ಲಿ ಗಮನಾರ್ಹ ಸಂಗತಿ.

ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್-ಅನ್ಸಾರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕದನ ವಿರಾಮ ಸಂಬಂಧ ಎರಡೂ ಕಡೆಯವರಿಗೆ ಪಠ್ಯ ಸಂದೇಶವನ್ನು ನೀಡಲಾಗಿದೆ ಮತ್ತು ಕೊನೆಯ ವಿವರಗಳ ಕುರಿತು ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಮಂಗಳವಾರದಂದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಕೂಡ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ.

‘ಕದನ ವಿರಾಮ ಈ ಹಿಂದೆಂದಿಗಿಂತಲೂ ಹತ್ತಿರದಲ್ಲಿದೆ’. ಗಂಟೆಗಳು ಅಥವಾ ದಿನಗಳಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಬಹುದು ಎಂದಿದ್ದಾರೆ.

ಕದನ ವಿರಾಮ ಯಶಸ್ವಿಯಾದರೆ ಮುಂದೇನು?

ಕೆಲ ವರದಿಗಳ ಪ್ರಕಾರ, ಕದನ ವಿರಾಮ ಯಶಸ್ವಿಯಾದರೆ ಮುಂದಿನ ಸೋಮವಾರದ ಮೊದಲು, ಅಂದರೆ ಯುಎಸ್‌ನಲ್ಲಿ ಬೈಡೆನ್ ಆಡಳಿತದ ಕೊನೆಯ ವಾರದಲ್ಲಿ ಹಮಾಸ್ 33 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ.

ಅಕ್ಟೋಬರ್ 2023ರ ದಾಳಿಯ ಸಮಯದಲ್ಲಿ ಇಸ್ರೇಲ್‌ನಿಂದ ಸೆರೆಹಿಡಿಯಲಾದ 94 ಒತ್ತೆಯಾಳುಗಳನ್ನು ಹಮಾಸ್ ಮತ್ತು ಅದರ ಮಿತ್ರರಾಷ್ಟ್ರಗಳು ಇನ್ನೂ ಹಿಡಿದಿಟ್ಟುಕೊಂಡಿವೆ ಎಂದು ಇಸ್ರೇಲ್ ಸರ್ಕಾರ ಆರೋಪಿಸಿದೆ. ಅವರಲ್ಲಿ ಕನಿಷ್ಠ 34 ಮಂದಿ ಸಾವನ್ನಪ್ಪಿದ್ದಾರೆ ಎಂದಿದೆ.

ಕದನ ವಿರಾಮದ ಮೊದಲ ಹಂತವು ಯೋಜಿಸಿದಂತೆ ನಡೆದರೆ, ಒಪ್ಪಂದ ಜಾರಿಗೆ ಬಂದ 16ನೇ ದಿನದಂದು, ಎರಡನೇ ಹಂತದ ಮಾತುಕತೆಗಳು ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಉಳಿದ ಜೀವಂತ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತದೆ ಮತ್ತು ಸತ್ತ ಒತ್ತೆಯಾಳುಗಳ ಶವಗಳನ್ನು ಹಿಂತಿರುಗಿಸಲಾಗುತ್ತದೆ.

ಒಪ್ಪಂದದ ಅಡಿಯಲ್ಲಿ, ಇಸ್ರೇಲ್‌ ಪಡೆಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳಲಾಗುವುದು. ಇಸ್ರೇಲಿ ಪಡೆಗಳು ಇಸ್ರೇಲ್ ಗಡಿ ಪಟ್ಟಣಗಳು ​​ಮತ್ತು ಹಳ್ಳಿಗಳನ್ನು ರಕ್ಷಿಸಲು ಗಡಿ ಪರಿಧಿಯಲ್ಲಿ ಉಳಿಯಲಿವೆ. ಇದರ ಜೊತೆಗೆ, ಗಾಝಾದ ದಕ್ಷಿಣ ಅಂಚಿನಲ್ಲಿರುವ ಫಿಲಡೆಲ್ಫಿ ಕಾರಿಡಾರ್‌ನಲ್ಲಿ ಭದ್ರತಾ ವ್ಯವಸ್ಥೆಗಳಿರುತ್ತವೆ. ಒಪ್ಪಂದದ ಮೊದಲ ಕೆಲವು ದಿನಗಳ ನಂತರ ಇಸ್ರೇಲ್ ಅದರ ಕೆಲವು ಭಾಗಗಳಿಂದ ಹಿಂದೆ ಸರಿಯಲಿದೆ.

ಅಲ್ಲದೆ, ನಿರಾಯುಧ ಉತ್ತರ ಗಾಝಾ ನಿವಾಸಿಗಳನ್ನು ಅವರ ಮೂಲ ಸ್ಥಳಗಳಿಗೆ ಹಿಂತಿರುಗಲು ಅನುಮತಿಸಲಾಗುವುದು. ಯಾವುದೇ ಶಸ್ತ್ರಾಸ್ತ್ರಗಳನ್ನು ಅಲ್ಲಿಗೆ ಸಾಗಿಸದಂತೆ ನೋಡಿಕೊಳ್ಳಲಾಗುವುದು. ಮಧ್ಯ ಗಾಝಾದಲ್ಲಿರುವ ನೆಟ್‌ಜಾರಿಮ್ ಕಾರಿಡಾರ್‌ನಿಂದ ಇಸ್ರೇಲಿ ಪಡೆಗಳು ಹಿಂದೆ ಸರಿಯಲಿವೆ. ಈ ನಡುವೆ ಕೊಲೆ ಅಥವಾ ಮಾರಕ ದಾಳಿಗಳಿಗೆ ಶಿಕ್ಷೆಗೊಳಗಾದ ಪ್ಯಾಲೆಸ್ತೀನಿಯನ್ ಬಂಡುಕೋರರನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ. ಆದರೆ, ಅದರ ಸಂಖ್ಯೆಗಳು ಜೀವಂತ ಒತ್ತೆಯಾಳುಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.  ಕೈದಿಗಳನ್ನು ಪಶ್ಚಿಮ ದಂಡೆಯಲ್ಲಿ ಬಿಡುಗಡೆ ಮಾಡಲಾಗುವುದಿಲ್ಲ. ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ ಹಮಾಸ್ ಹೋರಾಟಗಾರರನ್ನು ಬಿಡುಗಡೆ ಮಾಡಲಾಗುವುದಿಲ್ಲ.

ಮುಂದುವರಿದು, ಗಾಝಾ ಪಟ್ಟಿಗೆ ಮಾನವೀಯ ನೆರವಿನಲ್ಲಿ ಗಮನಾರ್ಹ ಹೆಚ್ಚಳವೂ ಆಗಲಿದೆ. ಏಕೆಂದರೆ ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಂಸ್ಥೆಗಳು ಅಲ್ಲಿನ ಜನಸಂಖ್ಯೆಯು ತೀವ್ರ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಈಗಾಗಲೇ ಎಚ್ಚರಿಸಿವೆ.

ಗಾಝಾದ ಆಡಳಿಯ ನಡೆಸುವವರು ಯಾರು?

ಯುದ್ಧದ ನಂತರ ಗಾಝಾವನ್ನು ಯಾರು ಮುನ್ನಡೆಸುತ್ತಾರೆ ಅಥವಾ ಯಾರು ಆಡಳಿತ ನಡೆಸಲಿದ್ದಾರೆ ಎಂಬುದು ಕದನ ವಿರಾಮದ ಅತ್ಯಂತ ಪ್ರಮುಖ ವಿಷವಾಗಿದೆ. ವರದಿಗಳ ಪ್ರಕಾರ, ಪ್ರಸ್ತುತ ಒಪ್ಪಂದದಲ್ಲಿ ಸರ್ಕಾರ ರಚಿಸುವ ಕುರಿತು ಉಲ್ಲೇಖವಿಲ್ಲ. ಏಕೆಂದರೆ, ಸರ್ಕಾರ ರಚನೆ ಬಹಳ ಸಂಕೀರ್ಣ ವಿಷಯವಾಗಿರುವುದರಿಂದ, ಅದನ್ನು ಈ ಒಪ್ಪಂದದಲ್ಲಿ ಉಲ್ಲೇಖಿಸಿದರೆ ಒಪ್ಪಂದಕ್ಕೆ ತಡೆಯಾಗಬಹುದು ಎಂದು ವರದಿಯಾಗಿದೆ.

ಹಮಾಸ್ ಸರ್ಕಾರ ರಚಿಸುವುದಕ್ಕೆ ಇಸ್ರೇಲ್ ವಿರೋಧ ವ್ಯಕ್ತಪಡಿಸಿದೆ. ಮೂರು ದಶಕಗಳ ಹಿಂದೆ ಓಸ್ಲೋ ಮಧ್ಯಂತರ ಶಾಂತಿ ಒಪ್ಪಂದಗಳ ಅಡಿಯಲ್ಲಿ ಸ್ಥಾಪಿಸಲಾದ ಪ್ಯಾಲೆಸ್ಟೀನಿಯನ್ ಪ್ರಾಧಿಕಾರ ಅಧಿಕಾರ ಚಲಾಯಿಸುವುದಕ್ಕೂ ಇಸ್ರೇಲ್‌ನ ವಿರೋಧವಿದೆ. ಪ್ಯಾಲೆಸ್ಟೀನಿಯನ್ ಪ್ರಾಧಿಕಾರ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸೀಮಿತ ಸಾರ್ವಭೌಮತ್ವವನ್ನು ಹೊಂದಿದೆ.

ಕದನ ವಿರಾಮ ಒಪ್ಪಂದ ಮಾಡಿಕೊಂಡು ಯುದ್ದ ಕೊನೆಗೊಳಿಸಿದರೂ ಗಾಝಾ ಮೇಲೆ ನಿಯಂತ್ರಣ ಸಾಧಿಸುವ ಒಲವನ್ನು ಇಸ್ರೇಲ್ ಹೊಂದಿದೆ. ಆದರೆ, ಅಂತಾರಾಷ್ಟ್ರೀಯ ಸಮುದಾಯವು ಗಾಝಾವನ್ನು ಪ್ಯಾಲೆಸ್ತೀನಿಯರು ಮುನ್ನಡೆಸಬೇಕು ಎಂದು ಹೇಳಿದೆ. ಆದರೆ, ಪ್ಯಾಲೆಸ್ತೀನ್‌ ರಾಜಕೀಯದಲ್ಲಿ ಹಲವು ಬಿಕ್ಕಟ್ಟುಗಳಿರುವುದರಿಂದ ಅದು ಅಷ್ಟು ಸುಲಭದ ವಿಚಾರವಲ್ಲ. ಹಾಗಾಗಿ, ಗಾಝಾದ ಆಡಳಿತ ನಡೆಸುವವರು ಯಾರು? ಎಂಬುವುದು ಗೊಂದಲಮಯವಾಗಿದೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಬಜೆಟ್ 2026: ‘ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್’: ಸಿಎಂ ಸಿದ್ದರಾಮಯ್ಯ

‘ಮೋದಿ ಸರ್ಕಾರ ಆರ್ಥಿಕ ದೂರದೃಷ್ಟಿಕೋನಗಳಿಲ್ಲದೆ, ದೇಶವನ್ನು ಯಾವ ದಿಕ್ಕಿನತ್ತ ಮುನ್ನಡೆಸಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲದೆ ದಣಿದಿದೆ ಎಂಬುದರ ಸಂಕೇತ ಈ 2026 ಬಜೆಟ್’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.  ಕಲಬುರಗಿ ವಿಮಾನ...

ಕೇಂದ್ರ ಬಜೆಟ್ 2026: ಅಪರೂಪದ ಭೂಮಿಯ ಕಾರಿಡಾರ್‌ನಿಂದ ಹೈಸ್ಪೀಡ್ ರೈಲಿನವರೆಗೆ: ಚುನಾವಣೆ ನಡೆಯಲಿರುವ ರಾಜ್ಯಗಳಿಗೆ ಕೇಂದ್ರ ಬಜೆಟ್ ನಲ್ಲಿ ಸಿಕ್ಕಿದ್ದೇನು?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಲೋಕಸಭೆಯಲ್ಲಿ ತಮ್ಮ ಸತತ 9 ನೇ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಜೆಟ್ ನಲ್ಲಿ ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂತಹ ಚುನಾವಣೆ...

ಬಲೂಚಿಸ್ತಾನ: ಭದ್ರತಾ ಕಾರ್ಯಾಚರಣೆಯಲ್ಲಿ 15 ಪಾಕ್ ಸೈನಿಕರು, 92 ಭಯೋತ್ಪಾದಕರು ಸಾವು

ಬಲೂಚಿಸ್ತಾನ ಪ್ರಾಂತ್ಯದ ಸುಮಾರು 12 ಸ್ಥಳಗಳಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ಕನಿಷ್ಠ 15 ಪಾಕಿಸ್ತಾನಿ ಸೈನಿಕರು ಮತ್ತು 92 ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿರುವುದಾಗಿ ಪಿಟಿಐ ವರದಿ...

ಕೇಂದ್ರ ಬಜೆಟ್ 2026 | ಯಾವುದು ಅಗ್ಗ ಮತ್ತು ಯಾವುದು ದುಬಾರಿ..? 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ (ಫೆಬ್ರವರಿ 1, 2026) ತಮ್ಮ ಒಂಬತ್ತನೇ ಬಜೆಟ್ ಮಂಡಿಸಿದ್ದಾರೆ. ಈ ವರ್ಷದ (2026-27 ಹಣಕಾಸು) ಬಜೆಟ್ ತೀವ್ರಗೊಳ್ಳುತ್ತಿರುವ ಜಾಗತಿಕ ವ್ಯಾಪಾರ ಉದ್ವಿಗ್ನತೆ, ರೂಪಾಯಿ ಮೌಲ್ಯದಲ್ಲಿ...

ಕೇಂದ್ರ ಬಜೆಟ್ 2026| ರಕ್ಷಣಾ ಇಲಾಖೆಗೆ 7.85 ಲಕ್ಷ ಕೋಟಿ ರೂ. ಮೀಸಲು

ಕೇಂದ್ರ ಸರ್ಕಾರದ ಬಜೆಟ್ 2026 ರಲ್ಲಿ ರಕ್ಷಣಾ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈ ವಲಯಕ್ಕೆ 7.85 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಇದು ಕಳೆದ ವರ್ಷದ 6.81 ಲಕ್ಷ ಕೋಟಿ ರೂ.ಗಳಿಗಿಂತ ಗಮನಾರ್ಹ...

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...