ಶನಿವಾರ ಗಾಜಾದಲ್ಲಿ ದೊಡ್ಡ ಜನಸಮೂಹದ ಮುಂದೆ ಹಮಾಸ್ ಮೂವರು ಒತ್ತೆಯಾಳುಗಳನ್ನು ಪೆರೇಡ್ ಮಾಡಿದ ನಂತರ ರೆಡ್ ಕ್ರಾಸ್‌ಗೆ ಹಸ್ತಾಂತರಿಸಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
ಒತ್ತೆಯಾಳುಗಳಲ್ಲಿ 46 ವರ್ಷದ ಇಯಾರ್ ಹಾರ್ನ್, 36 ವರ್ಷದ ಸಗುಯ್ ಡೆಕೆಲ್ ಮತ್ತು 29 ವರ್ಷದ ಅಲೆಕ್ಸಾಂಡರ್ (ಸಾಶಾ) ಟ್ರೌಫನೋವ್ ಸೇರಿದ್ದಾರೆ.
ಹಾರ್ನ್ ಇಸ್ರೇಲ್ ಮತ್ತು ಅರ್ಜೆಂಟೀನಾದ ದ್ವಿಪೌರತ್ವವನ್ನು ಹೊಂದಿದ್ದಾರೆ, ಡೆಕೆಲ್ ಅವರು ಅಮೇರಿಕನ್-ಇಸ್ರೇಲಿ ಮತ್ತು ಟ್ರೌಫನೋವ್ ಅವರು ಇಸ್ರೇಲಿ ಮತ್ತು ರಷ್ಯಾದ ಪೌರತ್ವವನ್ನು ಹೊಂದಿದ್ದಾರೆ. ಅಕ್ಟೋಬರ್ 7, 2023ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿ ಈ ಮೂವರನ್ನು ಅಪಹರಿಸಿತ್ತು.
ಶನಿವಾರ ಬೆಳಿಗ್ಗೆ ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದ ಸ್ಥಳಕ್ಕೆ ರೆಡ್ ಕ್ರಾಸ್ ವಾಹನಗಳು ಬಂದವು. ಹಿಂದಿನ ವಿನಿಮಯದಂತೆ ಫೆಲೇಸ್ತಿನಿಯರ ಧ್ವಜಗಳು ಮತ್ತು ಹಮಾಸ್ ಬಣಗಳ ಬ್ಯಾನರ್‌ಗಳಿಂದ ಅಲಂಕರಿಸಲ್ಪಟ್ಟ ವೇದಿಕೆಯ ಬಳಿ ಡಜನ್ ಗಟ್ಟಲೆ ಮುಖವಾಡ ಧರಿಸಿದ ಶಸ್ತ್ರಸಜ್ಜಿತ ಹಮಾಸ್ ಹೋರಾಟಗಾರರು ಸಾಲುಗಟ್ಟಿ ನಿಂತರು, ಧ್ವನಿವರ್ಧಕಗಳಿಂದ ಸಂಗೀತ ಮೊಳಗಿತು.
ಜನವರಿ 19ರಂದು ಕದನ ವಿರಾಮ ಜಾರಿಗೆ ಬಂದ ನಂತರ ಇದು ಆರನೇ ವಿನಿಮಯವಾಗಿದೆ. ಇಲ್ಲಿಯವರೆಗೆ, ಕದನ ವಿರಾಮದ ಮೊದಲ ಹಂತದಲ್ಲಿ 21 ಒತ್ತೆಯಾಳುಗಳು ಮತ್ತು 730 ಕ್ಕೂ ಹೆಚ್ಚು ಫೆಲೇಸ್ತಿನಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ.
ಹಮಾಸ್ ಮತ್ತು ಇಸ್ರೇಲ್ ನಡುವೆ ಸಹಿ ಹಾಕಲಾದ ಕದನ ವಿರಾಮದ ಭಾಗವಾಗಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಹಮಾಸ್ ನೂರಾರು ಫೆಲೇಸ್ತಿನಿ ಕೈದಿಗಳನ್ನು ಬಿಡುಗಡೆ ಮಾಡಬೇಕಿದೆ. ಸುಮಾರು ನಾಲ್ಕು ವಾರಗಳ ಹಿಂದೆ ಪ್ರಾರಂಭವಾದ ಕದನ ವಿರಾಮವು ಇತ್ತೀಚಿನ ದಿನಗಳಲ್ಲಿ ಉದ್ವಿಗ್ನ ವಿವಾದದಿಂದ ಅಪಾಯಕ್ಕೆ ಸಿಲುಕಿದ್ದು, ಇದು ಯುದ್ಧವನ್ನು ಪುನರಾರಂಭಿಸುವ ಬೆದರಿಕೆ ಹಾಕಿತ್ತು.
ಒತ್ತೆಯಾಳುಗಳ ಬಿಡುಗಡೆ ಸಂಭ್ರಮಿಸಿದ ನೆತನ್ಯಾಹು ಕಚೇರಿ
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು ಸಗುಯಿ ಡೆಕೆಲ್-ಚೆನ್, ಸಶಾ ಅಲೆಕ್ಸಾಂಡರ್ ಟ್ರೌಫನೋವ್ ಮತ್ತು ಐಯರ್ ಹಾರ್ನ್ ಅವರ ಬಿಡುಗಡೆಯನ್ನು ಸಂಭ್ರಮಿಸಿ, ಹೇಳಿಕೆಯನ್ನು ಬಿಡುಗಡೆ ಮಾಡಿತು.
“ನಾವು ಅವರನ್ನು ದೊಡ್ಡ ಅಪ್ಪುಗೆಯೊಂದಿಗೆ ಸ್ವಾಗತಿಸುತ್ತೇವೆ. ಸೆರೆಯಲ್ಲಿ ದೀರ್ಘ ಮತ್ತು ಕಷ್ಟಕರ ದಿನಗಳ ನಂತರ ನಾವು ಅವರ ಪುನರ್ವಸತಿಗೆ ಸಹಾಯ ಮಾಡುತ್ತೇವೆ.” ಎಂದು ಅದು ಹೇಳಿದೆ.
“ನಮ್ಮ ಎಲ್ಲಾ ಒತ್ತೆಯಾಳುಗಳನ್ನು ರಕ್ಷಿಸುವ ಗುರಿಯೊಂದಿಗೆ ಇಸ್ರೇಲ್ ಅಮೆರಿಕದೊಂದಿಗೆ ಸಂಪೂರ್ಣ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ” ಎಂದು ನೆತನ್ಯಾಹು ಅವರ ಕಚೇರಿ ತಿಳಿಸಿದೆ.
2018 ರಿಂದ 108 ಮಹಿಳೆಯರು,161 ಎಸ್‌ಸಿ, ಎಸ್‌ಟಿ, ಒಬಿಸಿಗಳು ನ್ಯಾಯಾಧೀಶರಾಗಿ ನೇಮಕ : ಕಾನೂನು ಸಚಿವಾಲಯ


