ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅನುದಾನ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕರೆ ಕೊಟ್ಟಿದ್ದ ಟ್ವಿಟರ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಟ್ವಿಟ್ಟರ್‌ನಲ್ಲಿ ಈಗಾಗಲೇ #ಕನ್ನಡವಿವಿಉಳಿಸಿ ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ.
ಈ ಬಗ್ಗೆ ನಿನ್ನೆ ಟ್ವಿಟ್ಟರ್ ಮುಖಾಂತರ ಕರೆ ನೀಡಿದ್ದ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು ಟಿ.ಎ “ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಒದಗಿಸದೆ ರಾಜ್ಯ ಸರ್ಕಾರ ನಿಧಾನ ವಿಷವುಣಿಸಿ ಕೊಲ್ಲುತ್ತಿದೆ. ನಾವು ಒಟ್ಟಾಗಿ ನಿಂತು ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಬೇಕಿದೆ. ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿರುವ ಟ್ವಿಟರ್ ಅಭಿಯಾನದಲ್ಲಿ ಈ ಕುರಿತು ಮಾತನಾಡೋಣ. ಸರ್ಕಾರವನ್ನು ಎಚ್ಚರಿಸೋಣ” ಎಂದು ಹೇಳಿದ್ದರು.
ಇದನ್ನೂ ಓದಿ: ‘ಹಂಪಿ ವಿವಿಗೆ ಅನುದಾನ ಬಿಡುಗಡೆ ಮಾಡಿ’ – ನಾಳೆ #ಕನ್ನಡವಿವಿಉಳಿಸಿ ಟ್ವಿಟರ್ ಅಭಿಯಾನ: ಕರವೇ
ಟ್ವಿಟ್ಟರ್‌ನಲ್ಲಿ #ಕನ್ನಡವಿವಿಉಳಿಸಿ ಟ್ರೆಂಡ್ ಆಗುತ್ತಿದ್ದು ಹಲವಾರು ಕನ್ನಡಾಭಿಮಾನಿಗಳು ಕರವೇ ಕರೆಯನ್ನು ಬೆಂಬಲಿಸಿ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕರವೆ ರಾಜ್ಯಾಧ್ಯಕ್ಷ ನಾರಾಯಣ ಗೌಡ್ರು ಟಿ.ಎ ಸರಣಿ ಟ್ವೀಟ್ ಮಾಡಿದ್ದು, “ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸ್ಥಿತಿ ಶೋಚನೀಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಸಂಶೋಧನೆ, ಬೋಧನೆ ಹೆಚ್ಚು ಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿಯೇ ನ್ಯಾಕ್ ಗುಣಮಟ್ಟದಲ್ಲಿ ಎ+ ಇದ್ದ ಶ್ರೇಣಿ ಮೂರು ಮೆಟ್ಟಿಲು ಕೆಳಗಿಳಿದು ಬಿ ಶ್ರೇಣಿಗೆ ಇಳಿದಿದೆ. ಕಳೆದ ಎರಡು ವರ್ಷಗಳಿಂದ ಕನ್ನಡ ವಿವಿಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ಸಂಶೋಧನಾ ಕಾರ್ಯಗಳು ಸ್ಥಗಿತಗೊಂಡಿವೆ ಅಥವಾ ವೇಗ ಕಳೆದುಕೊಂಡಿವೆ. ದೂರಶಿಕ್ಷಣ ಕೋರ್ಸ್ ಗಳು ಮುಚ್ಚಿಕೊಳ್ಳುತ್ತಿವೆ. ಇದೆಲ್ಲವನ್ನೂ ಸರಿಪಡಿಸಬೇಕಾದ ಆಡಳಿತ ಮಂಡಳಿ ನಿಷ್ಕ್ರಿಯವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1.ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಸ್ಥಿತಿ ಶೋಚನೀಯವಾಗಿದೆ. ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳಿಂದ ಸಂಶೋಧನೆ, ಬೋಧನೆ ಹೆಚ್ಚು ಕಡಿಮೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರ ಪರಿಣಾಮವಾಗಿಯೇ ನ್ಯಾಕ್ ಗುಣಮಟ್ಟದಲ್ಲಿ ಎ+ ಇದ್ದ ಶ್ರೇಣಿ ಮೂರು ಮೆಟ್ಟಿಲು ಕೆಳಗಿಳಿದು ಬಿ ಶ್ರೇಣಿಗೆ ಇಳಿದಿದೆ. #ಕನ್ನಡವಿವಿಉಳಿಸಿ
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) December 18, 2020
ಇದನ್ನೂ ಓದಿ: ಕನ್ನಡದಲ್ಲಿ ಕಲಿಸಿದ ಶಿಕ್ಷಕ ರಂಜಿತ್‌ಸಿಂಹ ದಿಸಾಳೆಗೆ ‘ಗ್ಲೋಬಲ್ ಟೀಚರ್ ಪ್ರೈಜ್- 2020’
ಪ್ರಸಾದ್ ಅವರು, “ಎಲ್ಲ ಶಿಕ್ಷಣವೂ ಕನ್ನಡದಲ್ಲಿಯೇ ಸಿಗಲಿ ಎಂಬ ಚರ್ಚೆ ಆರಂಭವಾಗುತ್ತಿರುವಾಗ, ಹೆಮ್ಮರವಾಗಿ ಸಾವಿರಾರು ಜನರ ಭವಿಷ್ಯ ರೂಪಿಸುವ ವಿವಿಗೆ ಅನುದಾನ ಕಡಿತ ಮಾಡುತ್ತಾರೆ. ಗಿಲ್ಕಿ ತೋರಿಸಿ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರವಲ್ಲವೇ ಇದು?” ಎಂದು ಕಿಡಿ ಕಾರಿದ್ದಾರೆ.
ಎಲ್ಲ ಶಿಕ್ಷಣವೂ ಕನ್ನಡದಲ್ಲಿಯೇ ಸಿಗಲಿ ಎಂಬ ಚರ್ಚೆ ಆರಂಭವಾಗುತ್ತಿರುವಾಗ, ಹೆಮ್ಮರವಾಗಿ ಸಾವಿರಾರು ಜನರ ಭವಿಷ್ಯ ರೂಪಿಸುವ ವಿವಿಗೆ ಅನುದಾನ ಕಡಿತ ಮಾಡುತ್ತಾರೆ. ಗಿಲ್ಕಿ ತೋರಿಸಿ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರವಲ್ಲವೇ ಇದು?#ಕನ್ನಡವಿವಿಉಳಿಸಿ
— ? | ಪ್ರಸಾದ್ | Prasad | Anti-Caste | ? (@Manjina_Hani) December 18, 2020
ಕಿಶೋರ್ ಅವರು, “ಧರ್ಮದ ಅಮಲಿನಲ್ಲಿ ತೇಲಾಡ್ತಾ ಇರೋ ಕನ್ನಡಿಗರೆ, ಇವತ್ತು ಕನ್ನಡ ನಾಡಿನಲ್ಲಿ ಕನ್ನಡ ವಿವಿಗೆ ಬಂದ ಗತಿಯೇ, ನಾಳೆ ಕನ್ನಡ ನಾಡಿನ ಕನ್ನಡಿಗರಿಗೆ ಬರುತ್ತದೆ. ಎಚ್ಚರ” ಎಂದು ಎಚ್ಚರಿಸಿದ್ದಾರೆ.
ಧರ್ಮದ ಅಮಲಿನಲ್ಲಿ ತೇಲಾಡ್ತಾ ಇರೋ ಕನ್ನಡಿಗರೆ, ಇವತ್ತು ಕನ್ನಡನಾಡಿನಲ್ಲಿ ಕನ್ನಡವಿವಿ ಗೆ ಬಂದ ಗತಿಯೇ, ನಾಳೆ ಕನ್ನಡನಾಡಿನಲ್ಲಿ ಕನ್ನಡಿಗರಿಗೆ ಬರೋದು. ಎಚ್ಚರ #ಕನ್ನಡವಿವಿಉಳಿಸಿ
— ಕಿಶೋರ್ (@KishorKumaarKK) December 18, 2020
ಇದನ್ನೂ ಓದಿ: ಹಿಂದುತ್ವದ ಬೀಜಗಳನ್ನು ತೊರೆದು ಬಹುತ್ವದ ಕನ್ನಡ ರಾಷ್ಟ್ರೀಯತೆ ಕಟ್ಟುವ ಸವಾಲುಗಳು
ರಾಘು ಅವರು, “ಸರ್ಕಾರ ಅಧಿಕಾರ,ಪ್ರಾಧಿಕಾರ ಎನ್ನುತ್ತಾ ಉನ್ನತ ಮಟ್ಟದ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುತ್ತಿಲ್ಲ. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡುವ ಅನುದಾನವನ್ನು ಬಿಜೆಪಿ ಸರ್ಕಾರ ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಿದೆ ಇದಕ್ಕೆ ನನ್ನ ಧಿಕ್ಕಾರವಿದೆ, ಇದು ಖಂಡನೀಯ” ಎಂದು ಹೇಳಿದ್ದಾರೆ.
ಸರ್ಕಾರ ಅಧಿಕಾರ,ಪ್ರಾಧಿಕಾರ ಎನ್ನುತ್ತಾ ಉನ್ನತ ಮಟ್ಟದ ಶಿಕ್ಷಣ ವ್ಯವಸ್ಥೆಗೆ ಒತ್ತು ನೀಡುತ್ತಿಲ್ಲ.ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡುವ ಅನುದಾನವನ್ನು ಬಿಜೆಪಿ ಸರ್ಕಾರ ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತಿದೆ ಇದಕ್ಕೆ ನನ್ನ ಧಿಕ್ಕಾರವಿದೆ,
ಇದು ಖಂಡನೀಯ..#ಕನ್ನಡವಿವಿಉಳಿಸಿ #ಡಾ_ರಾಜ್_ಕುಮಾರ್ pic.twitter.com/54WZMs9OxW— Raghu pa ra (@Raghu72643783) December 18, 2020
ಭರತ್. ಪಿ ಅವರು, “ಖಾಸಗಿಯವರು ಬೇಡಿಕೆ ಇದೆ ಎಂದು ಹೇಳಿ ಹೊಸದಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನ ತೆರೆದರೆ,ಈ ಸರ್ಕಾರದವರು ಒಂದೊಂದು ಕುಂಟು ನೆಪ ಹೇಳಿ ಇರುವ ವಿಶ್ವವಿದ್ಯಾಲಯವನ್ನ ಮುಚ್ಚಲು ಹುನ್ನಾರಮಾಡುತ್ತಿದ್ದಾರಲ್ಲ..!ಏನು ಸ್ವಾಮಿ ಕಥೆ ಇದು ಯಡಿಯೂರಪ್ಪನವರೆ” ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದ್ದಾರೆ.
ಖಾಸಗಿಯವರು ಬೇಡಿಕೆ ಇದೆ ಎಂದು ಹೇಳಿ ಹೊಸದಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳನ್ನ ತೆರೆದರೆ,ಈ ಸರ್ಕಾರದವರು ಒಂದೊಂದು ಕುಂಟು ನೆಪ ಹೇಳಿ ಇರುವ ವಿಶ್ವವಿದ್ಯಾಲಯವನ್ನ ಮುಚ್ಚಲು ಹುನ್ನಾರಮಾಡುತ್ತಿದ್ದಾರಲ್ಲ..!ಏನು ಸ್ವಾಮಿ ಕಥೆ ಇದು @BSYBJP #ಕನ್ನಡವಿವಿಉಳಿಸಿ
— ಭರತ್.ಪಿ (@Bharathpkgl) December 18, 2020
ಇದನ್ನೂ ಓದಿ: ಉತ್ತರ ಕನ್ನಡ : ಕನ್ನಡ ಕಟ್ಟಿದ ಕೊಂಕಣಿಗರು


