ಶ್ರಿಲಂಕಾದ ನೂತನ ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. 2000 ರಲ್ಲಿ ಸಿರಿಮಾವೋ ಬಂಡಾರನಾಯಕೆ ನಂತರ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳಾ ನಾಯಕಿಯಾಗಿ ಹರಿಣಿ ಅವರು ಹೊರಹೊಮ್ಮಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
54 ವರ್ಷದ ಹರಿಣಿ ಅವರು ಜನತಾ ವಿಮುಕ್ತಿ ಪೆರುಮುನ (ಜೆವಿಪಿ) ನಾಯಕ, ದೇಶದ ಅಧ್ಯಕ್ಷ ಅನುರ ಕುಮಾರ ಡಿಸಾನಾಯಕೆ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದಿಸಾನಾಯಕೆ ಅವರು ತಮ್ಮನ್ನು ಒಳಗೊಂಡಂತೆ ನಾಲ್ವರ ಸಂಪುಟವನ್ನು ನೇಮಿಸಿದ್ದಾರೆ.
ಇದನ್ನೂ ಓದಿ: ‘ಹದ್ದಬಸ್ತಿನಲ್ಲಿ ಇರಿ’ | ಮತ್ತೆ ಮುಸ್ಲಿಂ ದ್ವೇಷ ಭಾಷಣ ಮಾಡಿದ ಪ್ರತಾಪ್ ಸಿಂಹ
ಹರಿಣಿ ಅವರು ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಹೂಡಿಕೆ ಸಚಿವರ ಖಾತೆಗಳನ್ನು ನಿಯೋಜಿಸಲಾಗಿದೆ. ಅಧ್ಯಕ್ಷೀಯ ಚುನಾವಣೆಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ದೇಶದ ಮಾಜಿ ಪ್ರಧಾನಿ ದಿನೇಶ್ ಗುಣವರ್ಧನ ಅವರ ನಂತರ ಹರಿಣಿ ಅವರು ದೇಶದ 16ಣೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ವಿಶ್ವವಿದ್ಯಾನಿಲಯದ ಉಪನ್ಯಾಸಕರಾದ ಹರಿಣಿ ಅಮರಸೂರ್ಯ ಅವರು 1994 ರಲ್ಲಿ ದಿವಂಗತ ಸಿರಿಮಾವೊ ಬಂಡಾರನಾಯಕೆ ಅವರು ಅಧಿಕಾರ ವಹಿಸಿಕೊಂಡ ನಂತರ ಶ್ರೀಲಂಕಾದ ಮೊದಲ ಮಹಿಳಾ ಪ್ರಧಾನಿ ಮತ್ತು ದೇಶದ ಇತಿಹಾಸದಲ್ಲಿ ಮೂರನೇ ಮಹಿಳಾ ಪ್ರಧಾನ ಮಂತ್ರಿಯಾಗಿದ್ದಾರೆ. ಅವರ ಜೊತೆಗೆ ಎನ್‌ಪಿಪಿ ಸಂಸದರಾದ ವಿಜಿತಾ ಹೆರಾತ್ ಮತ್ತು ಲಕ್ಷ್ಮಣ್ ನಿಪುಣರಾಚಿ ಅವರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ ನಂತರ 56 ವರ್ಷದ ಡಿಸಾನಾಯಕೆ ಅವರು ಭಾನುವಾರ ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಶ್ರೀಲಂಕಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ನಂತರ ‘ಜನತಾ ವಿಮಿಕ್ತಿ ಪೆರಮುನ (ಜೆವಿಪಿ)ಯ’ ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಶ್ರೀಲಂಕಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದನ್ನೂಓದಿ: ಉತ್ತರ ಪ್ರದೇಶ: ಶಿಕ್ಷಕನ ಹೊಡೆತಕ್ಕೆ ದೃಷ್ಟಿ ಕಳೆದುಕೊಂಡ 6ನೇ ತರಗತಿ ವಿದ್ಯಾರ್ಥಿ
ಪ್ರಮಾಣವಚನ ಸ್ವೀಕರಿಸಿದ ನಂತರ ಮಾತನಾಡಿದ ದಿಸಾನಾಯಕೆ, ತಮ್ಮ ಮುಂದಿರುವ ಮಹತ್ವದ ಸವಾಲುಗಳನ್ನು ಒಪ್ಪಿಕೊಂಡರು. ಬಿಕ್ಕಟ್ಟನ್ನು ನಿಭಾಯಿಸಲು ಸಾಮೂಹಿಕ ಪ್ರಯತ್ನಗಳ ಅಗತ್ಯವನ್ನು ಒತ್ತಿ ಹೇಳಿದ ಅವರು, “ಈ ಆಳವಾದ ಬಿಕ್ಕಟ್ಟನ್ನು ಸರ್ಕಾರ, ಏಕ ಪಕ್ಷ ಅಥವಾ ವ್ಯಕ್ತಿ ಮಾತ್ರ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ನಾವು ನಂಬುವುದಿಲ್ಲ” ಎಂದರು.
“ನಾನು ಮಾಂತ್ರಿಕನಲ್ಲ; ಸಾಮಾನ್ಯ ನಾಗರಿಕ ಎಂದು ನಾನು ಮೊದಲೇ ಹೇಳಿದ್ದೇನೆ. ನನಗೆ ತಿಳಿದಿರುವ ಮತ್ತು ಗೊತ್ತಿಲ್ಲದ ವಿಷಯಗಳಿವೆ. ಈ ದೇಶವನ್ನು ಮೇಲಕ್ಕೆತ್ತಲು ಜ್ಞಾನ ಮತ್ತು ಕೌಶಲ್ಯ ಹೊಂದಿರುವವರನ್ನು ಒಟ್ಟುಗೂಡಿಸುವುದು ನನ್ನ ಗುರಿಯಾಗಿದೆ” ಎಂದು ಅವರು ಹೇಳಿದರು.
ನ್ಯಾಶನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಒಕ್ಕೂಟವನ್ನು ಮುನ್ನಡೆಸುವ ಜೆವಿಪಿಯು ಕ್ರಾಂತಿಕಾರಿ ಹಿನ್ನೆಲೆ ಹೊಂದಿದೆ. 1970 ಮತ್ತು 1980 ರ ದಶಕಗಳ ಸಮಾಜವಾದಿ ಹೋರಾಟದಲ್ಲಿ ಎರಡು ವಿಫಲ ಸಶಸ್ತ್ರ ದಂಗೆಗಳನ್ನು ನಡೆಸಿತು. ಮುಂದಿನ ವರ್ಷಗಳಲ್ಲಿ, ಜೆವಿಪಿ ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಪರಿವರ್ತನೆಯಾಯಿತು. ಸಾಂದರ್ಭಿಕವಾಗಿ ವಿವಿಧ ಅಧ್ಯಕ್ಷರನ್ನು ಬೆಂಬಲಿಸುವಾಗ ವಿರೋಧ ಪಕ್ಷದಲ್ಲಿ ಉಳಿಯಿತು.
ವಿಡಿಯೊ ನೋಡಿ: ಗೌರಿ ಲಂಕೇಶ್ ನೆನಪು-2024; ಕವಿತೆ ವಾಚನ : ಲಕ್ಷ್ಮಣ್ ಮಂಡಲಗೇರಾ- ರಂಗ ಕನಸು ಕಲಾ ತಂಡ ರಾಯಚೂರು


