ಹರಿಯಾಣದ ಸಾರ್ವಜನಿಕ ಆರೋಗ್ಯ ಇಲಾಖೆಯ ದಲಿತ ಗುತ್ತಿಗೆ ಕಾರ್ಮಿಕರೊಬ್ಬರನ್ನು ರಾಜ್ಯ ನಾಗರಿಕ ಸೇವಾ ಅಧಿಕಾರಿಯೊಬ್ಬರು ಗನ್‌ಪಾಯಿಂಟ್‌ನಲ್ಲಿ ಇಟ್ಟು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ ಎಂದು ವರದಿಯಾಗಿದ್ದು, ಗುರುವಾರ ಪೊಲೀಸರು ದೂರುದಾರರನ್ನು ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಕೇಳಿಕೊಂಡಿದ್ದಾರೆ. ಹರಿಯಾಣ
ಈ ನಡುವೆ ಜಿಲ್ಲೆಯೊಂದರಲ್ಲಿ ನಿಯೋಜಿಸಲಾದ ಹರಿಯಾಣ ನಾಗರಿಕ ಸೇವೆಗಳ (ಎಚ್‌ಸಿಎಸ್) ಅಧಿಕಾರಿಯನ್ನು ರಾಜ್ಯ ಸರ್ಕಾರ ಗುರುವಾರ ಸಂಜೆ ಅಮಾನತುಗೊಳಿಸಿದೆ. ಅದಾಗ್ಯೂ, ಅವರ ಅಮಾನತು ಆದೇಶದಲ್ಲಿ ಯಾವುದೇ ಕಾರಣವನ್ನು ಉಲ್ಲೇಖಿಸಲಾಗಿಲ್ಲ. ಅಧಿಕಾರಿಯು ಜಾತಿ ನಿಂದನೆ ಮಾಡಿದ್ದಾರೆ ಎಂದು ಸಂತ್ರಸ್ತ ದಲಿತ ವ್ಯಕ್ತಿ ಆರೋಪಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯು ಅಂಚೆ ಮೂಲಕ ದೂರನ್ನು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಘಟನೆ ಹಿಸಾರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಅವರು ಆರೋಪಿಸಿದ್ದು, ತನ್ನ ದೂರಿನ ಪ್ರತಿಯನ್ನು ಪೊಲೀಸರು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿರುವುದಾಗಿ ಹೇಳಿದ್ದಾರೆ.
ಎಚ್‌ಸಿಎಸ್ ಅಧಿಕಾರಿ ತನ್ನನ್ನು ಗುತ್ತಿಗೆ ಆಧಾರದ ಮೇಲೆ ಪ್ಯೂನ್ ಆಗಿ ನೇಮಕ ಮಾಡಿಕೊಂಡಿದ್ದಾರೆ ಎಂದು ಹೇಳಿಕೊಂಡ ಸಂತ್ರಸ್ತ ವ್ಯಕ್ತಿ ಹೇಳಿಕೊಂಡಿದ್ದಾರೆ. ಹರಿಯಾಣ
“ಅವರು ತಮ್ಮ ಅಧಿಕೃತ ನಿವಾಸದಲ್ಲಿ ಮಸಾಜ್‌ಗಾಗಿ ನನ್ನನ್ನು ಕರೆಯುತ್ತಿದ್ದರು. ಅವರು ತಪ್ಪು ಕೆಲಸ ಮಾಡಲು ಪ್ರಾರಂಭಿಸಿದಾಗ, ಅದಕ್ಕೆ ಹಲವಾರು ಬಾರಿ ನಾನು ನಿರಾಕರಿಸಿದ್ದೆ. ಆದರೆ ಅವರು ಪಿಸ್ತೂಲ್ ಹಿಡಿದು ಬೆದರಿಸಿ ನನ್ನನ್ನು ಕೆಲಸದಿಂದ ತೆಗೆದುಹಾಕುವುದಾಗಿ ಹೇಳಿದ್ದರು. ಅದರ ನಂತರ, ನಾನು ಸಾಕ್ಷ್ಯವನ್ನು ಸಂಗ್ರಹಿಸಲು ಈ ಶೋಷಣೆಯ ವೀಡಿಯೊವನ್ನು ಚಿತ್ರೀಕರಿಸಿದ್ದೇನೆ” ಎಂದು ಸಂತ್ರಸ್ತ ದಲಿತ ವ್ಯಕ್ತಿ ಹೇಳಿದ್ದಾರೆ.
“ಅದರ ನಂತರ ನಾನು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದೆ. ನಾನು ಸಾಯಲು ಅಥವಾ ಅವರ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದೆ. ನಾನು ಹೃದ್ರೋಗ ರೋಗಿಯಾಗಿದ್ದು, ಈ ಶೋಷಣೆ ಕಳೆದ ಆರು ತಿಂಗಳಿನಿಂದ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
ಸಂತ್ರಸ್ತ ವ್ಯಕ್ತಿಯಿಂದ ಅಂಚೆ ಮೂಲಕ ದೂರು ಸ್ವೀಕರಿಸಿದ್ದೇವೆ ಎಂದು ಹಿಸಾರ್‌ನ ಪೊಲೀಸ್ ವರಿಷ್ಠಾಧಿಕಾರಿ ಶಶಾಂಕ್ ಕುಮಾರ್ ಸಾವನ್ ಗುರುವಾರ ಹೇಳಿದ್ದಾರೆ. ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ನಾವು ಅವರನ್ನು ಕರೆಸಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.
ಇದನ್ನೂ ಓದಿ: ‘ಪುರುಷರು ಮಹಿಳೆಯರ ಬಟ್ಟೆ ಹೊಲಿಯುವುದು, ಕೂದಲು ಕತ್ತರಿಸುವುದು ಮಾಡಬಾರದು..’; ಯುಪಿ ಮಹಿಳಾ ಆಯೋಗದಿಂದ ವಿಚಿತ್ರ ಪ್ರಸ್ತಾಪ


