ಲೋಹರು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಭಿವಾನಿ ಪೊಲೀಸರು ಬಂಧಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಬಂಧಿತನನ್ನು ಆರೋಪಿ ರಾಹುಲ್ ತಂದೆ ಹನುಮಂತ ಎಂದು ಗುರುತಿಸಲಾಗಿದೆ. ಕಾಲೇಜಿನ ವಿರುದ್ಧದ ಆರೋಪಗಳ ತನಿಖೆಗಾಗಿ ಭಿವಾನಿಯ ಜಿಲ್ಲಾ ಉಪ ಆಯುಕ್ತರು ಸಮಿತಿಯನ್ನು ರಚಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮಿತಿಯಲ್ಲಿ ಲೋಹರು ಉಪವಿಭಾಗಾಧಿಕಾರಿ, ಪೊಲೀಸ್ ಉಪ ಅಧೀಕ್ಷಕರು, ಲೋಹರು ಮತ್ತು ಭಿವಾನಿಯ ಜಿಲ್ಲಾ ಉನ್ನತ ಶಿಕ್ಷಣಾಧಿಕಾರಿಗಳು ಸದಸ್ಯರಾಗಿದ್ದರು.
ಹರ್ಯಾಣದಲ್ಲಿ ದಲಿತ ಯುವತಿಯೊಬ್ಬಳು ತನ್ನ ಕಾಲೇಜು ಶುಲ್ಕವನ್ನು ಪಾವತಿಸಲು ಒತ್ತಡಕ್ಕೆ ಒಳಗಾಗಿದ್ದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಲಾಗಿತಯ್ತು. ಬಳಿಕ, ಆಕೆಗೆ ಬಂಧಿತ ಆರೋಪಿ ರಾಹುಲ್ ಲೈಂಗಿಕ ಕಿರುಕುಳ ನೀಡಿದ್ದ ಎಂಬುದು ಬಹಿರಂಗವಾಗಿತ್ತು.
“ಕಾಲೇಜು ಶುಲ್ಕ ಪಾವತಿಸದ ಕಾರಣಕ್ಕೆ ಕಾಲೇಜು ನಿರ್ದೇಶಕರ ಪುತ್ರನೊಂದಿಗೆ ದೈಹಿಕ ಸಂಬಂಧ ಬೆಳೆಸುವಂತೆ ಕಾಲೇಜು ಅಧಿಕಾರಿಗಳು ಯುವತಿ ಮೇಲೆ ಮೇಲೆ ಒತ್ತಡ ಹೇರಿದ್ದರು’ ಎನ್ನಲಾಗಿದೆ.
ಜನವರಿ 2 ರಂದು ಹರಿಯಾಣ ಸಚಿವ ಗೌರವ್ ಗೌತಮ್ ಅವರು ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಮತ್ತು ರಾಜ್ಯ ಸರ್ಕಾರ ನ್ಯಾಯವನ್ನು ಪೂರೈಸುತ್ತದೆ ಎಂದು ಹೇಳಿಕೆ ನೀಡಿದ್ದರು.
ಗೌರವ್ ಗೌತಮ್, “ಕ್ರಿಶನ್ ಸಿಂಗ್ ಬೇಡಿ ಅವರ ಹೇಳಿಕೆಯೊಂದಿಗೆ ನಾವು ನಿಲ್ಲುತ್ತೇವೆ. ಕಾಂಗ್ರೆಸ್ ನವರು ಇಂತಹ ಘಟನೆಯಲ್ಲಿ ಭಾಗಿಯಾಗಿದ್ದರೆ ಅದು ಖಂಡನೀಯ. ತನಿಖೆಯಾಗಬೇಕು. ಸರ್ಕಾರ ನ್ಯಾಯವನ್ನು ನೀಡುತ್ತದೆ” ಎಂದು ಹೇಳಿದರು.
ಈ ಹಿಂದೆ ಹರಿಯಾಣದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಕ್ರಿಶನ್ ಬೇಡಿ ಅವರು ರಾಜ್ಯದ ಭಿವಾನಿ ಜಿಲ್ಲೆಯ ಲೋಹರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಫಾರ್ತಿಯಾ ಭೀಮಾ ಗ್ರಾಮದಲ್ಲಿ ಕಾಂಗ್ರೆಸ್ ರಾಜಕಾರಣಿಯೊಬ್ಬರು ಕಾಲೇಜನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ; ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಖಾಸಗಿ ಕಾಲೇಜು ಮಾಲೀಕನ ಮಗನನ್ನು ಬಂಧಿಸಿದ ಪೊಲೀಸರು


