ಪ್ರಸ್ತುತ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವ್ಯವಸ್ಥೆಯು ಮತದಾರರ ಸಾಂವಿಧಾನಿಕ ಹಕ್ಕನ್ನು ಕಸಿದುಕೊಂಡಿದೆ ಎಂದು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಕಾಂಗ್ರೆಸ್‌ಗೆ ದಿಗ್ಭ್ರಮೆ ಮೂಡಿಸಿದ ಕೆಲವೇ ದಿನಗಳಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಹರಿಯಾಣ ಸೋಲು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಂತೆ, ಅಂಚೆ ಮತಪತ್ರಗಳಿಗೆ ಸಂಬಂಧಿಸಿದಂತೆ ಹರಿಯಾಣದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ ಎಂದು ಅವರು ಹೇಳಿದ್ದಾರೆ. ದಿಗ್ವಿಜಯ್ ಸಿಂಗ್ ಅವರು ಈ ಹಿಂದೆ ಕೂಡಾ ಹಲವಾರು ಸಂದರ್ಭಗಳಲ್ಲಿ ಇವಿಎಂಗಳ ಮೂಲಕ ಚಲಾಯಿಸಿದ ಮತಗಳ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಹರಿಯಾಣ ಸೋಲು
ಇದನ್ನೂಓದಿ: ‘ಪೆನ್ ಪಿಂಟರ್’ ಪ್ರಶಸ್ತಿಯನ್ನು ಈಜಿಪ್ಟ್ ಬರಹಗಾರ ಅಲಾ ಅಬ್ದುಲ್ ಫತ್ತಾಹ್ ಅವರೊಂದಿಗೆ ಹಂಚಿಕೊಂಡ ಅರುಂಧತಿ ರಾಯ್
“ನಾನು ಮತದಾರನಾಗಿದ್ದು, ನನ್ನ ಮತ ನನ್ನ ಆಯ್ಕೆಯ ಅಭ್ಯರ್ಥಿಗೆ ಹೋಗಬೇಕೆಂಬುದು ನನ್ನ ಸಂವಿಧಾನದ ಹಕ್ಕು. ನಾನು ಮತಯಂತ್ರವನ್ನು ನನ್ನ ಕೈಯಿಂದ ಮತಪೆಟ್ಟಿಗೆಗೆ ಹಾಕಬೇಕು ಮತ್ತು ಈ ಮೂಲಕ ಚಲಾವಣೆಯಾದ ಮತಗಳನ್ನು 100 ಪ್ರತಿಶತ ಎಣಿಸಬೇಕು. ಆದರೆ ನನ್ನ ಸಾಂವಿಧಾನಿಕ ಹಕ್ಕನ್ನು ಪ್ರಸ್ತುತ ಇವಿಎಂ ವ್ಯವಸ್ಥೆಯಿಂದ ಕಸಿದುಕೊಳ್ಳಲಾಗಿದೆ” ಎಂದು ದಿಗ್ವಿಜಯ್ ಸಿಂಗ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನವೆಂಬರ್ 2023 ರಲ್ಲಿ ನಡೆದ ಎಂಪಿ ಚುನಾವಣೆಯಲ್ಲಿ, ಅಂಚೆ ಮತಪತ್ರಗಳ ಎಣಿಕೆಯಲ್ಲಿ ಅವರ ಪಕ್ಷವು 230 ಸ್ಥಾನಗಳಲ್ಲಿ 199 ಸ್ಥಾನಗಳನ್ನು ಗೆದ್ದಿದೆ ಎಂದು ದಿಗ್ವಿಜಯ್ ಸಿಂಗ್ ಹೇಳಿಕೊಂಡಿದ್ದಾರೆ. ಆದರೆ ಇವಿಎಂಗಳ ಮೂಲಕ ಚಲಾವಣೆಯಾದ ಮತಗಳ ಎಣಿಕೆಯ ನಂತರ ಅದು ಕೇವಲ 66 ಸ್ಥಾನಗಳನ್ನು ಪಡೆಯಲು ಸಾಧ್ಯವಾಯಿತು.
ಇದನ್ನೂಓದಿ: ಬಿಜೆಪಿ ಸರ್ಕಾರದಿಂದ ನಿರ್ಲಕ್ಷ್ಯ | ಕೊಳೆಯುತ್ತಿದೆ ವಿದ್ಯಾರ್ಥಿನಿಯರ 1,500 ಸ್ಕೂಟರ್‌ಗಳು
ಅಂಚೆ ಮತ ಪದ್ಧತಿಯಲ್ಲಿ ಮತಪತ್ರಗಳ ವಿತರಣೆ ಮತ್ತು ಗುರುತು ಮಾಡಿದ ಮತಪತ್ರದ ವಾಪಸಾತಿ ಅಂಚೆ ಮೂಲಕವೇ ನಡೆಯುತ್ತದೆ. ಹರಿಯಾಣದಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ 90 ಸ್ಥಾನಗಳ ಪೈಕಿ 76 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆದರೆ, ಇವಿಎಂಗಳಲ್ಲಿ ದಾಖಲಾದ ಮತಗಳ ಎಣಿಕೆಯ ನಂತರ ಪಕ್ಷದ ಸ್ಥಾನಗಳ ಸಂಖ್ಯೆ 37ಕ್ಕೆ ಇಳಿದಿದೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ದೇಶದ ಮುಸ್ಲಿಂ ಜನಸಂಖ್ಯೆಯ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. “ನೀವು ಕಳೆದ ದಶಕಗಳ ಜನಸಂಖ್ಯೆಯ ಅಂಕಿಅಂಶಗಳನ್ನು ನೋಡಬಹುದು. ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯು ಹಿಂದೂಗಳಿಗಿಂತ ಹೆಚ್ಚು ವೇಗವಾಗಿ ಕುಸಿಯುತ್ತಿದೆ” ಎಂದು ಅವರು ಹೇಳಿದ್ದಾರೆ.
ಅವರು ದೇಶದಲ್ಲಿ ಜಾತಿ ಆಧಾರಿತ ಜನಗಣತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಯಬೇಕು ಎಂದು ಪ್ರತಿಪಾದಿಸಿದ್ದಾರೆ. “ಈ ಗಣತಿ ಮತ್ತು ಸಮೀಕ್ಷೆ ವಿವಿಧ ಜಾತಿಗಳು ಮತ್ತು ಉಪಜಾತಿಗಳ ಸಾಮಾಜಿಕ-ಆರ್ಥಿಕ ಹಿಂದುಳಿದಿರುವಿಕೆಯ ಬಗ್ಗೆ ನಿಖರವಾದ ಮಾಹಿತಿಯನ್ನು ಒದಗಿಸುತ್ತದೆ. ಈ ಮಾಹಿತಿ ಆಧರಿಸಿ ಅವರ ಅಭಿವೃದ್ಧಿಗೆ ಯೋಜನೆ ರೂಪಿಸಬಹುದು” ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ‘ಜಯವೋ ನಮ್ಮ ಭಾರತ, ಸಂವಿಧಾನವೇ ನಮ್ಮ ಗ್ರಂಥ’ -ದಲಿತ ಐಕ್ಯತಾ ಸಮಾವೇಶದಲ್ಲಿ ಗೊಲ್ಲಹಳ್ಳಿ ಶಿವಪ್ರಸಾದ್‌ರವರ ಹಾಡು.


