ಗೋಸಂರಕ್ಷಣೆಯ ಹೆಸರಿನಲ್ಲಿ ಗುಂಪುಹತ್ಯೆ ವಿರುದ್ಧ ಕಾನೂನು ಪರಿಚಯ ಮತ್ತು ಕಳೆದ ವರ್ಷ ಜಿಲ್ಲೆಯನ್ನು ಬೆಚ್ಚಿಬೀಳಿಸಿದ ಕೋಮು ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುತ್ತೇನೆ ಎಂದು ಹರಿಯಾಣದ ಮುಸ್ಲಿಂ ಪ್ರಾಬಲ್ಯದ ನುಹ್ ಕ್ಷೇತ್ರದಿಂದ ಮರು ಆಯ್ಕೆ ಬಯಸುತ್ತಿರುವ ಕಾಂಗ್ರೆಸ್‌ನ ಅಫ್ತಾಬ್ ಅಹ್ಮದ್ ಅವರು ಕ್ಷೇತ್ರ ಜನರಿಗೆ ಭರವಸೆ ನೀಡಿದ್ದಾರೆ.ಹರಿಯಾಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಹರಿಯಾಣ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಆಗಿರುವ ಅಫ್ತಾಬ್ ಅಹ್ಮದ್ ಅವರು, ನುಹ್ ಕೋಮುಗಲಭೆಯ ಬಗ್ಗೆ ಮುನ್ನೆಚ್ಚರಿಕೆ ನೀಡಲಾಗಿತ್ತು ಮತ್ತು ತಾನು ಸರ್ಕಾರದೊಂದಿಗೆ ಈ ಬಗ್ಗೆ ಮೊದಲೇ ಆತಂಕ ವ್ಯಕ್ತಪಡಿಸಿದ್ದೆ ಎಂದು ಹೇಳಿದ್ದಾರೆ. ತಾನು ಈ ಬಗ್ಗೆ ಆತಂಕ ವ್ಯಕ್ತಿಪಡಿಸಿದ್ದರು ಕೂಡಾ ಸರ್ಕಾರ “ಇದು ಸಂಭವಿಸಲಿ” ಎಂದು ಬಯಸಿದ್ದರು ಎಂದು ಹೇಳುದ್ದಾರೆ. ಈ ಗಲಭೆಯು ಜೀವ ಮತ್ತು ಆಸ್ತಿ ನಷ್ಟವನ್ನು ಮಾತ್ರವಲ್ಲದೆ ನಂಬಿಕೆಯನ್ನೂ ನಷ್ಟಮಾಡಿತ್ತು ಎಂದು ಅವರು ಹೇಳಿದ್ದಾರೆ.
ಇದನ್ನೂಓದಿ: ತಮ್ಮ ಬಗೆಗಿನ ಜನರ ಗ್ರಹಿಕೆಯನ್ನು ರಾಹುಲ್ ಗಾಂಧಿ ಬದಲಾಯಿಸಿದ್ದಾರೆ: ನಟ ಸೈಫ್ ಅಲಿ ಖಾನ್
“ಕಳೆದ ವರ್ಷ ನುಹ್ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಯು ಬಿಜೆಪಿಯು ಗೋರಕ್ಷಕರ ವೇಷದಲ್ಲಿ ಸಮಾಜವಿರೋಧಿಗಳನ್ನು ಪ್ರಚಾರ ಮಾಡಿತ್ತು. ಅವರು ಭಯದ ವಾತಾವರಣವನ್ನು ಸೃಷ್ಟಿಸಿದರು ಮತ್ತು ಅದನ್ನು ಹೆಚ್ಚಿಸಿದರು. ಶಾಸಕನಾಗಿ ನಾನು ಅದನ್ನು ಸರ್ಕಾರದ ಗಮನಕ್ಕೆ ತಂದಿದ್ದೆ. ನೀವು ಅಂತಹ ಘಟನೆಗಳನ್ನು ತಡೆಯಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದ್ದೆ. ಆದರೆ ಅವರು ಅದನ್ನು ನಡೆಯಲು ಅವಕಾಶ ಮಾಡಿಕೊಡುತ್ತಾರೆ” ಎಂದು ಅಫ್ತಾಬ್ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಹರಿಯಾಣ
“ಮುಖ್ಯಮಂತ್ರಿ ರೇವಾರಿಯಲ್ಲಿ ಸಭೆ ನಡೆಸುವುದರಲ್ಲಿ ನಿರತರಾಗಿದ್ದರು. ಎರಡೂ ಕಡೆಯಿಂದ ಸಮಾಜ ವಿರೋಧಿ ಶಕ್ತಿಗಳು ಸವಾಲು ಹಾಕಿದಾಗಲೂ ಇಡೀ ದಾರಿಗೆ ಕೇವಲ 300 ಪೊಲೀಸರನ್ನು ನಿಯೋಜಿಸಲಾಗಿತ್ತು. ಸರ್ಕಾರ ಅದನ್ನು ನಡೆಯಲು ಅವಕಾಶ ಮಾಡಿಕೊಟ್ಟಿತು. ಅದನ್ನು ನಿರ್ವಹಿಸಿದ ಅಧಿಕಾರಿಗಳು, ಅಂತಹ ಹಿಂಸಾಚಾರಕ್ಕೆ ಕಾರಣಗಳು ಮತ್ತು ಅಧಿಕಾರಿಗಳು ಹಿಂಸಾಚಾರವನ್ನು ನಿರ್ವಹಿಸಿದ ರೀತಿಯನ್ನು ಕಂಡುಹಿಡಿಯಲು ನ್ಯಾಯಾಂಗ ತನಿಖೆ ನಡೆಸಬೇಕೆಂದು ನಾವು ಇಲ್ಲಿಯವರೆಗೆ ಒತ್ತಾಯಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯ ವೇಳೆ ನುಹ್‌ನಲ್ಲಿ ಪ್ರಾರಂಭವಾದ ಗಲಭೆಯು ಗುರುಗ್ರಾಮ್‌ಗೆ ಹರಡಿ ಇಬ್ಬರು ಗೃಹ ರಕ್ಷಕ ದಳ ಮತ್ತು ಧರ್ಮಗುರು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದರು. ನಂತರ ಪೊಲೀಸರು ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಫಿರೋಜ್‌ಪುರ ಜಿರ್ಕಾ ಶಾಸಕ ಮಮ್ಮನ್ ಖಾನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಆರೋಪಗಳನ್ನು ಹೊರಿಸಿದ್ದರು.
ಇದನ್ನೂಓದಿ: ಕೇರಳ ಮನಿ ಹೈಸ್ಟ್ | ಕಂಟೈನರ್ ಟ್ರಕ್‌ನಲ್ಲಿ ಪರಾರಿಯಾಗುತ್ತಿದ್ದ ಕಳ್ಳರ ಬಂಧನ; ಒಬ್ಬ ಸಾವು!
“ಹಿಂಸಾಚಾರದ ಒಂದು ದಿನದ ನಂತರ, ಹಿಂಸಾಚಾರದಲ್ಲಿ ಭಾಗಿಯಾಗದ ಕೆಲವು ಜನರ ಮನೆಗಳನ್ನು ಕೆಡವಿದರು. ಸಾವಿರಾರು ಕಟ್ಟಡಗಳನ್ನು ನೆಲಸಮಗೊಳಿಸಿದರು. ಆದರೆ ಅವರು ಯಾರೂ ಈ ಘಟನೆಯಲ್ಲಿ ಭಾಗಿಯಾಗಿರಲಿಲ್ಲ. ಅಷ್ಟೆ ಅಲ್ಲದೆ, ಅವರ ವಿರುದ್ಧ ಕಠಿಣ UAPA ಪ್ರಕರಣ ದಾಖಲಿಸಲಾಯಿತು. ಹಾಗಾಗಿಯೆ ಈ ಕೋಮು ಘಟನೆಗೆ ಕಾರಣವೇನು ಎಂಬುದರ ಬಗ್ಗೆ ನ್ಯಾಯಾಂಗ ತನಿಖೆಗೆ ಕಾಂಗ್ರೆಸ್ ಒತ್ತಾಯಿಸುತ್ತಿದೆ. ಈ ಘಟನೆಯಿಂದ ಕೇವಲ ಜೀವ ಮತ್ತು ಆಸ್ತಿ ನಷ್ಟದ ಮಾತ್ರವಲ್ಲ, ಜನರಲ್ಲಿ ನಂಬಿಕೆ ಕೂಡಾ ನಷ್ಟವಾಗಿದೆ. ನಾವು ಗೋಸಂರಕ್ಷಣೆ ಹೆಸರಿನಲ್ಲಿ ಹತ್ಯೆ ಮಾಡುವುದರ ವಿರುದ್ಧ ಕಾನೂನು ತರುತ್ತೇವೆ” ಎಂದು ಅಫ್ತಾಬ್ ಹೇಳಿದ್ದಾರೆ.
58 ವರ್ಷದ ಅಫ್ತಾಬ್ ಅವರು ಸೋಹ್ನಾ ಕ್ಷೇತ್ರದ ಹಾಲಿ ಶಾಸಕ ಬಿಜೆಪಿಯ ಸಂಜಯ್ ಸಿಂಗ್ ವಿರುದ್ಧ ನುಹ್‌ನಲ್ಲಿ ಕಣಕ್ಕಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) ತಾಹಿರ್ ಹುಸೇನ್ ಅವರನ್ನು ಕಣಕ್ಕಿಳಿಸಿದೆ. ತಾಹಿರ್ ಹುಸೇನ್ ಅವರು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿರುವ ಮತ್ತು ಹರಿಯಾಣ ವಕ್ಫ್ ಮಂಡಳಿಯ ಅಧ್ಯಕ್ಷರಾದ ಜಾಕಿರ್ ಹುಸೇನ್ ಅವರ ಪುತ್ರರಾಗಿದ್ದಾರೆ. ಅವರು ಇತ್ತೀಚೆಗೆ INLD ಗೆ ಸೇರಿದ್ದರು.
ನುಹ್ ಕ್ಷೇತ್ರದಲ್ಲಿ ಬಿಜೆಪಿ ಎಂದಿಗೂ ಗೆದ್ದಿಲ್ಲ ಮತ್ತು ಇಲ್ಲಿನ ಮತದಾರರು ಐತಿಹಾಸಿಕವಾಗಿ ಕಾಂಗ್ರೆಸ್ ಮತ್ತು ಐಎನ್‌ಎಲ್‌ಡಿಯನ್ನು ಬೆಂಬಲಿಸಿದ್ದಾರೆ. ನುಹ್ ಅನ್ನು 2005 ರಲ್ಲಿ ಗುರ್ಗಾಂವ್ ಮತ್ತು ಫರಿದಾಬಾದ್ ಭಾಗಗಳಿಂದ ಪ್ರತ್ಯೇಕ ಜಿಲ್ಲೆಯಾಗಿ ಸ್ಥಾಪಿಸಲಾಯಿತು. ಇದು ನುಹ್, ಫಿರೋಜ್‌ಪುರ ಜಿರ್ಕಾ ಮತ್ತು ಪುನ್ಹಾನಾ ಎಂಬ ಮೂರು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಹರ್ಯಾಣದಲ್ಲಿ ಅಕ್ಟೋಬರ್ 5 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ವಿಡಿಯೊ ನೋಡಿ: ಅಟ್ರಾಸಿಟಿ ಕಾದಂಬರಿ ಚರ್ಚೆಯಲ್ಲಿ ವಿಕಾಸ್ ಮತ್ತು ಗುರುಪ್ರಸಾದ್ ಪ್ರತಿಕ್ರಿಯೆ


