Homeಮುಖಪುಟಹರಿಯಾಣ ನಂತರ ಮಹಾರಾಷ್ಟ್ರದ ಕಡೆಗೆ ಆರೆಸ್ಸೆಸ್‌ | ಬಿಜೆಪಿಗೆ ಲಾಭ ಮಾಡಲು ತಂಡ ರಚನೆ!

ಹರಿಯಾಣ ನಂತರ ಮಹಾರಾಷ್ಟ್ರದ ಕಡೆಗೆ ಆರೆಸ್ಸೆಸ್‌ | ಬಿಜೆಪಿಗೆ ಲಾಭ ಮಾಡಲು ತಂಡ ರಚನೆ!

- Advertisement -
- Advertisement -

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಒಂದು ತಿಂಗಳು ಬಾಕಿಯಿದ್ದು, ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವ್ಯಾಪಕ ಪ್ರಚಾರ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಬಿಜೆಪಿಯ ಮಾತೃ ಸಂಘಟನೆಯಾಗಿರುವ ಆರ್‌ಎಸ್‌ಎಸ್ ತನ್ನ ಎಲ್ಲಾ ಅಂಗಸಂಸ್ಥೆಗಳೊಂದಿಗೆ ಸಮನ್ವಯದಿಂದ ಈ ಕ್ರಮವನ್ನು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹರಿಯಾಣ 

“ರಾಜ್ಯದಾದ್ಯಂತ ತಂಡಗಳನ್ನು ರಚಿಸಲಾಗಿದೆ ಮತ್ತು ಅವರು ತಮ್ಮ ಪ್ರದೇಶಗಳಲ್ಲಿನ ಜನರನ್ನು ತಲುಪಲು ಪ್ರಾರಂಭಿಸಿದ್ದು, ಸಂದೇಶವನ್ನು ತೆಗೆದುಕೊಳ್ಳುತ್ತಿದ್ದಾರೆ” ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ. ಪ್ರತಿ ತಂಡವು 5-10 ಜನರೊಂದಿಗೆ ಸಣ್ಣ ಗುಂಪು ಸಭೆಗಳನ್ನು ನಡೆಸುತ್ತಿದ್ದು, ಆಯಾ ಪ್ರದೇಶಗಳಲ್ಲಿನ ‘ಮೊಹಲ್ಲಾ’ಗಳಲ್ಲಿ ತಮ್ಮ ಸ್ಥಳೀಯ ನೆಟ್‌ವರ್ಕ್ ಮೂಲಕ ಕುಟುಂಬಗಳನ್ನು ತಲುಪುತ್ತಿದೆ ಎಂದು ಮೂಲಗಳು ತಿಳಿಸಿವೆ. ಹರಿಯಾಣ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

“ಈ ಸಭೆಗಳಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಬಿಜೆಪಿಯನ್ನು ಬೆಂಬಲಿಸಿ ಎಂದು ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ರಾಷ್ಟ್ರೀಯ ಹಿತಾಸಕ್ತಿ, ಹಿಂದುತ್ವ, ಉತ್ತಮ ಆಡಳಿತ, ಅಭಿವೃದ್ಧಿ, ಸಾರ್ವಜನಿಕ ಕಲ್ಯಾಣ ಮತ್ತು ಸಮಾಜಕ್ಕೆ ಸಂಬಂಧಿಸಿದ ವಿವಿಧ ಸ್ಥಳೀಯ ವಿಷಯಗಳ ಬಗ್ಗೆ ನಿಕಟ ಚರ್ಚೆಗಳ ಮೂಲಕ ಜನರಲ್ಲಿ ಅಭಿಪ್ರಾಯ ರೂಪಿಸುತ್ತಾರೆ” ಎಂದು ಮೂಲಗಳು ತಿಳಿಸಿವೆ.

ತಂಡಗಳನ್ನು ರಚಿಸುವ ಮೊದಲು, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ಪದಾಧಿಕಾರಿಗಳು ರಾಜ್ಯದ ಎಲ್ಲಾ ಹಂತಗಳಲ್ಲಿ ಕಾರ್ಯತಂತ್ರವನ್ನು ರೂಪಿಸಲು ಸಮನ್ವಯ ಸಭೆಗಳನ್ನು ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಇತ್ತಿಚೆಗೆ ಮುಕ್ತಾಯಗೊಂಡ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ ಆರೆಸ್ಸೆಸ್‌ನ ಈ ಕ್ರಮಕ್ಕೆ ಭಾರಿ ಮಹತ್ವ ಸಿಕ್ಕಿದೆ. ಹರಿಯಾಣದಾದ್ಯಂತ ತನ್ನ ಅಂಗಸಂಸ್ಥೆಗಳೊಂದಿಗೆ ನಡೆಸಿದ ಸಮನ್ವಯದೊಂದಿಗೆ ಆರ್‌ಎಸ್‌ಎಸ್ ನಡೆಸಿದ “ಡ್ರಾಯಿಂಗ್ ರೂಮ್ ಸಭೆಗಳು” ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಯಶಸ್ಸಿನ ಹಿಂದಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಗೆ ಹಿನ್ನೆಡೆ: ಬಿಜೆಪಿ ತೊರೆಯಲು ಮುಂದಾದ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್

90 ಸದಸ್ಯ ಬಲದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಿದ್ದರೂ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಈ ವರೆಗಿನ ಅತ್ಯಂತ ಸ್ಥಾನಗಳನ್ನು ತನ್ನದಾಗಿಸಿತ್ತು. “ಹರಿಯಾಣದಲ್ಲಿ ರಚಿಸಲಾದ ಆರೆಸ್ಸೆಸ್‌ನ ಕಾರ್ಯಕರ್ತರ ತಂಡ ರಾಜ್ಯಾದ್ಯಂತ 1.25 ಲಕ್ಷಕ್ಕೂ ಹೆಚ್ಚು ಸಣ್ಣ ಗುಂಪು ಸಭೆಗಳನ್ನು ನಡೆಸಿದೆ” ಎಂದು ಮತ್ತೊಂದು ಮೂಲವು ಪಿಟಿಐಗೆ ತಿಳಿಸಿದೆ.

ಈ ಸಭೆಗಳು ಹರಿಯಾಣದ ಹಿಂದಿನ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಸರ್ಕಾರದ “ಜಾಟ್-ಕೇಂದ್ರಿತ ನೀತಿಗಳು” ಸೇರಿದಂತೆ ವಿವಿಧ ವಿಷಯಗಳನ್ನು ಹೈಲೈಟ್ ಮಾಡುವ ಮೂಲಕ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ನೆರವಾದವು ಎಂದು ಮೂಲಗಳು ತಿಳಿಸಿವೆ.

“ಈ ತಂಡಗಳು ಅಗ್ನಿಪಥ್ ನೇಮಕಾತಿ ಯೋಜನೆಯ ಬಗ್ಗೆ ಜನರ ಆತಂಕವನ್ನು ನಿವಾರಿಸಿದರು. ಅವರು ರೈತರೊಂದಿಗೆ ತೊಡಗಿಸಿಕೊಂಡಿದ್ದು ಅವರ ಭಾವನೆಗಳನ್ನು ಬಿಜೆಪಿ ಪರವಾಗಿ ತಿರುಗಿಸುವಲ್ಲಿ ಯಶಸ್ವಿಯಾದರು” ಎಂದು ಮೂಲಗಳು ತಿಳಿಸಿವೆ. ಆರೆಸ್ಸೆಸ್ ಕಾರ್ಯಕರ್ತರಲ್ಲಿನ ಉತ್ಸಾಹದ ಕೊರತೆಯಿ ಕಾರಣಕ್ಕೆ ಈ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕಳಪೆ ಪ್ರದರ್ಶನ ಮಾಡುವಂತೆ ಆಗಿತ್ತು ಎಂದು ವ್ಯಾಪಕವಾಗಿ ನಂಬಲಾಗಿದೆ.

ಇದನ್ನೂ ಓದಿ: ಉತ್ತರಾಖಂಡ | ಮುಸ್ಲಿಂ ಕುಟುಂಬಗಳು ಡಿಸೆಂಬರ್ 31 ರೊಳಗೆ ಪಟ್ಟಣದಿಂದ ಹೊರಹೋಗುವಂತೆ ನಿರ್ಣಯ ಅಂಗೀಕರಿಸಿದ ವ್ಯಾಪಾರಿಗಳು!

ಉತ್ತರಾಖಂಡ | ಮುಸ್ಲಿಂ ಕುಟುಂಬಗಳು ಡಿಸೆಂಬರ್ 31 ರೊಳಗೆ ಪಟ್ಟಣದಿಂದ ಹೊರಹೋಗುವಂತೆ ನಿರ್ಣಯ ಅಂಗೀಕರಿಸಿದ ವ್ಯಾಪಾರಿಗಳು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಕಲಿ ಆಪಲ್ ಪರಿಕರಗಳ ದಂಧೆ ಭೇದಿಸಿದ ಮುಂಬೈ ಪೊಲೀಸರು; ₹16.33 ಲಕ್ಷ ಮೌಲ್ಯದ ಸರಕುಗಳ ವಶ; ಆರು ಜನರ ವಿರುದ್ಧ ಪ್ರಕರಣ 

ಮುಂಬೈ: ನಕಲಿ ಬ್ರಾಂಡ್ ಸರಕುಗಳ ಮಾರಾಟದ ಮೇಲೆ ಪ್ರಮುಖ ದಾಳಿ ನಡೆಸಿರುವ ಮುಂಬೈ ಪೊಲೀಸರು, ಘಾಟ್ಕೋಪರ್ ಪೂರ್ವದಲ್ಲಿ ನಕಲಿ ಆಪಲ್ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಸಂಘಟಿತ ದಂಧೆಯನ್ನು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ 16.33...

ಇರಾನ್ ನಮ್ಮ ದೀರ್ಘಕಾಲೀನ ಮಿತ್ರ ರಾಷ್ಟ್ರ; ವಿಶ್ವಾಸಾರ್ಹ ಪಾಲುದಾರರೊಂದಿಗೆ ನಿಲ್ಲಲು ವಿಫಲವಾದರೆ ಭಾರತಕ್ಕೆ ಭಾರಿ ನಷ್ಟ: ರಾಜ್ ಠಾಕ್ರೆ

ಸೂಕ್ತ ಸಮಯದಲ್ಲಿ ಕೇಂದ್ರ ಸರ್ಕಾರ ಇರಾನ್‌ಗೆ ಬೆಂಬಲ ನೀಡದಿರುವುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪ್ರಶ್ನಿಸಿದ್ದಾರೆ.​ ಈ ಕುರಿತು ಗುರುವಾರ (ಮಾ.19) ಮಾತನಾಡಿರುವ ಅವರು, "ಇರಾನ್ ಭಾರತದ ದೀರ್ಘಕಾಲೀನ ಮಿತ್ರ...

ಕೇರಳ: 2026 ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಹಾಲಿ ಸಂಸದರು, ಲೈಂಗಿಕ ಪ್ರಕರಣದ ಆರೋಪಿಗಳಿಗಿಲ್ಲ ಸ್ಥಾನ

ತಿರುವನಂತಪುರಂ: ಬಹಳ ದಿನಗಳ ನಂತರ, ಏಪ್ರಿಲ್ 9 ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಕೇರಳದ ಉಳಿದ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.  ಕಣ್ಣೂರು ಕಾರ್ಪೊರೇಷನ್‌ನ ಮಾಜಿ ಮೇಯರ್ ಟಿ.ಒ. ಮೋಹನನ್ ಅವರನ್ನು ಕಣ್ಣೂರಿನಲ್ಲಿ...

‘ನೀವು ಶಂಕಿತ’ : ಮುಹಮ್ಮದ್ ದೀಪಕ್‌ಗೆ ಉತ್ತರಾಖಂಡ ಹೈಕೋರ್ಟ್ ತರಾಟೆ!

ಇತ್ತೀಚೆಗೆ ಹಿಂದುತ್ವವಾದಿಗಳ ದಾಳಿಯಿಂದ ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿ ಶ್ಲಾಘನೆಗೆ ಪಾತ್ರರಾದ ಮುಹಮ್ಮದ್ ದೀಪಕ್ (ದೀಪಕ್ ಕುಮಾರ್) ಅವರನ್ನು ಉತ್ತರಾಖಂಡ ಹೈಕೋರ್ಟ್ ಗುರುವಾರ (ಮಾ.19) ತೀವ್ರ ತರಾಟೆಗೆ ತೆಗೆದುಕೊಂಡಿದೆ ಎಂದು barandbench.com ವರದಿ...

ಎಂಟು ವರ್ಷ ಜೈಲಿನಲ್ಲಿ ಕಳೆದ ಬಳಿಕ ಯುಎಪಿಎ ಅಡಿ ಬಂಧಿತ ಇಬ್ಬರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದ ನಂತರ, ದೆಹಲಿ ನ್ಯಾಯಾಲಯವು ಗುರುವಾರ (ಮಾರ್ಚ್ 19, 2026) ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ ಇಬ್ಬರು ವ್ಯಕ್ತಿಗಳನ್ನು ಖುಲಾಸೆಗೊಳಿಸಿದೆ...

ಹಾವಿನ ವಿಷ ಪ್ರಕರಣ : ಎಲ್ವಿಶ್ ಯಾದವ್ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಯೂಟ್ಯೂಬರ್ ಎಲ್ವಿಶ್ ಯಾದವ್ ವಿರುದ್ಧದ ಹಾವಿನ ವಿಷ ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್ ಮತ್ತು ಕ್ರಿಮಿನಲ್ ಪ್ರಕ್ರಿಯೆಗಳನ್ನು ಸುಪ್ರೀಂ ಕೋರ್ಟ್ ಗುರುವಾರ (ಮಾ.19) ರದ್ದುಗೊಳಿಸಿದೆ.  ವನ್ಯಜೀವಿ (ರಕ್ಷಣೆ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲು ಅಧಿಕೃತ ವ್ಯಕ್ತಿಯಿಂದ ದೂರು...

ದೆಹಲಿಯ ಉತ್ತಮ್ ನಗರದಲ್ಲಿ ಮುಸ್ಲಿಮರಿಗೆ ಬೆದರಿಕೆ; ಅಮಿತ್ ಶಾಗೆ ಪತ್ರ ಬರೆದ ವಿಪಕ್ಷ ಸಂಸದರು

ರಾಷ್ಟ್ರ ರಾಜಧಾನಿಯ ಉತ್ತಮ್ ನಗರದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಿಂದುತ್ವ ಗುಂಪುಗಳು ಮಾಡುತ್ತಿರುವ ಬೆದರಿಕೆಗಳ ಬಗ್ಗೆ ತುರ್ತು ಹಸ್ತಕ್ಷೇಪವನ್ನು ಕೋರಿ ಹಲವಾರು ವಿರೋಧ ಪಕ್ಷದ ಸದಸ್ಯರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ...

‘ಇರಾನ್ ಕತಾರ್ ಮೇಲೆ ಮತ್ತೊಮ್ಮೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಸ್ಪೋಟಿಸುತ್ತೇವೆ’; ಟ್ರಂಪ್ ಬೆದರಿಕೆ

ಇರಾನ್ ಕತಾರ್‌ನ ಇಂಧನ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡರೆ, ಅಮೆರಿಕ ”ಸೌತ್ ಪಾರ್ಸ್ ಅನಿಲ ಕ್ಷೇತ್ರವನ್ನು ಬೃಹತ್ ಪ್ರಮಾಣದಲ್ಲಿ ಸ್ಫೋಟಿಸುತ್ತದೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ರಾಜ್ಯಸಭೆಯಲ್ಲಿ ಎಚ್ಚರಿಸಿದ್ದಾರೆ. ಇರಾನ್‌ನ ಸೌತ್ ಪಾರ್ಸ್ ಗ್ಯಾಸ್...

ಮುಸ್ಲಿಂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿಕೊಂಡ ಓಲಾ ಚಾಲಕ; ‘ಇಸ್ಲಾಮೋಫೋಬಿಕ್’ ಕುರಿತು ಆತಂಕ ವ್ಯಕ್ತಪಡಿಸಿದ ವಕೀಲ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಓಲಾ ಕ್ಯಾಬ್ ಪ್ರಯಾಣದ ಸಂದರ್ಭದಲ್ಲಿ ಚಾಲಕನಿಂದ ನನಗೆ ಬೆದರಿಕೆ ಮತ್ತು ಇಸ್ಲಾಮೋಫೋಬಿಕ್ ಹೇಳಿಕೆಗಳು ಬಂದಿವೆ ಎಂದು ಸುಪ್ರೀಂ ಕೋರ್ಟ್ ವಕೀಲರೊಬ್ಬರು ಆರೋಪಿಸಿದ್ದಾರೆ. ಈ ಘಟನೆಯು, ಪ್ರಯಾಣಿಕರ ಸುರಕ್ಷತೆ ಮತ್ತು...

ಬೆಳ್ತಂಗಡಿ | ಮುಸ್ಲಿಂ ಬಾಲಕನ ಮೇಲೆ ಗುಂಪು ಹಲ್ಲೆ ಆರೋಪ; ಬಜರಂಗದಳದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸ್ನೇಹಿತರೊಂದಿಗೆ ತೆರಳಿದ್ದ ಮುಸ್ಲಿಂ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ...