ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ 89 ಸ್ಥಾನಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು, ಇಂಡಿಯಾ ಒಕ್ಕೂಟದ ಮಿತ್ರ ಪಕ್ಷವಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)ಗೆ ಭಿವಾನಿ ಕ್ಷೇತ್ರವನ್ನು ಬಿಟ್ಟಕೊಡಲಾಗಿದೆ. ಕಾಂಗ್ರೆಸ್ ಬುಧವಾರ ತಡರಾತ್ರಿ ಐವರು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮತ್ತು ಕೊನೆಯ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಸಿರ್ಸಾದ ರಾನಿಯಾ ವಿಧಾನಸಭಾ ಕ್ಷೇತ್ರದಿಂದ ಪತ್ರಕರ್ತ ಸರ್ವ ಮಿತ್ರ ಕಾಂಬೋಜ್ ಅವರನ್ನು ಕಣಕ್ಕಿಳಿಸಿದೆ. ಅಂಬಾಲಾ ಕ್ಯಾಂಟ್‌ನಿಂದ ಪರಿಮಲ್ ಪರಿ, ಪಾಣಿಪತ್ ಗ್ರಾಮಾಂತರದಿಂದ ಯುವ ನಾಯಕ ಸಚಿನ್ ಕುಂದು, ನರ್ವಾನಾ (ಎಸ್‌ಸಿ) ಸ್ಥಾನದಿಂದ ಸತ್ಬೀರ್ ದುಬ್ಲೇನ್ ಮತ್ತು ಟಿಗಾಂವ್‌ನಿಂದ ರೋಹಿತ್ ನಗರ್ ಪಟ್ಟಿಯಲ್ಲಿದ್ದ ಇತರ ಅಭ್ಯರ್ಥಿಗಳಾಗಿದ್ದಾರೆ.
ಗುರುವಾರ ಬೆಳಗ್ಗೆ, ಉಕ್ಲಾನಾದಿಂದ ನರೇಶ್ ಸೆಲ್ವಾಲ್ (ಎಸ್‌ಸಿ-ಮೀಸಲು) ಮತ್ತು ನಾರ್ನಾಂಡ್ ಸ್ಥಾನದಿಂದ ಜಸ್ಬೀರ್ ಸಿಂಗ್ ಎಂಬ ಇಬ್ಬರು ಅಭ್ಯರ್ಥಿಗಳ ಐದನೇ ಮತ್ತು ಕೊನೆಯ ಪಟ್ಟಿಯನ್ನು ಪಕ್ಷವೂ ಬಿಡುಗಡೆ ಮಾಡಿತ್ತು. ಉಕ್ಲಾನಾದಿಂದ ಸಂಸದೆ ಕುಮಾರಿ ಸೆಲ್ಜಾ ಸ್ಪರ್ಧಿಸಲು ಉತ್ಸುಕರಾಗಿದ್ದರು. ಅಂತಿಮ ಪಟ್ಟಿಯಲ್ಲಿ, ಸೋಹ್ನಾದಿಂದ ಈ ಹಿಂದೆ JJP ಜೊತೆಗೆ ಇದ್ದ ರೋಹ್ತಾಶ್ ಖತಾನಾ ಅವರನ್ನು ಅಭ್ಯರ್ಥಿಯನ್ನಾಗಿ ಪಕ್ಷವು ಘೋಷಿಸಿ, ಭಿವಾನಿ ಸ್ಥಾನವನ್ನು CPI(M) ಗೆ ಬಿಟ್ಟುಕೊಟ್ಟಿದೆ.
ಇದನ್ನೂ ಓದಿ: ಮಹಾರಾಷ್ಟ್ರ ವಿಧಾನಸಭೆ ವಿಪಕ್ಷಗಳ ಮೈತ್ರಿ | ಇನ್ನೂ ತೀರ್ಮಾನವಾಗದ 163 ಕ್ಷೇತ್ರಗಳು
ಹರ್ಯಾಣ ಚುನಾವಣೆಗೆ ಪಕ್ಷವು ಆಮ್ ಆದ್ಮಿ ಪಕ್ಷ (ಎಎಪಿ) ಯೊಂದಿಗೆ ಸೀಟು ಹಂಚಿಕೆ ಮಾತುಕತೆಯಲ್ಲಿ ತೊಡಗಿತ್ತಾದರೂ, ಎರಡೂ ಕಡೆಯಿಂದ ಭಾರಿ ಚೌಕಾಶಿ ನಡೆದು ಸೀಟು ತೀರ್ಮಾನ ಬಿಕ್ಕಟ್ಟಿಗೆ ಸಿಲುಕಿತ್ತು. ಕೊನೆಗೆ AAP ತನ್ನ ಅಭ್ಯರ್ಥಿಗಳ ಅನೇಕ ಪಟ್ಟಿಗಳನ್ನು ಬಿಡುಗಡೆ ಮಾಡಿದೆ.
ಹರಿಯಾಣ ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್‌ನ ಕೆಲವು ನಾಯಕರು ಸ್ವತಂತ್ರರಾಗಿ ಚುನಾವಣಾ ಕಣಕ್ಕೆ ಪ್ರವೇಶಿಸಲು ನಿರ್ಧರಿಸಿದ್ದು, ಪಕ್ಷವೂ ಗುರುವಾರ ಬಂಡಾಯ ಎದುರಿಸಿದೆ. ಬಂಡಾಯ ಎದ್ದವರಲ್ಲಿ ನಲ್ವಾದಿಂದ ಮಾಜಿ ರಾಜ್ಯ ಸಚಿವ ಸಂಪತ್ ಸಿಂಗ್, ತಿಗಾಂವ್‌ನಿಂದ ಮಾಜಿ ಶಾಸಕರಾದ ಲಲಿತ್ ನಗರ ಮತ್ತು ಬಲ್ಲಭಗಢದಿಂದ ಶಾರದಾ ರಾಥೋಡ್ ಸೇರಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಇತರ ಆಕಾಂಕ್ಷಿಗಳಲ್ಲಿ ಚಿತ್ರಾ ಸರ್ವರಾ (ಅಂಬಾಲಾ ಕಂಟೋನ್ಮೆಂಟ್) ಮತ್ತು ರೋಹಿತಾ ರೇವ್ರಿ (ಪಾಣಿಪತ್ ನಗರ) ಇದ್ದಾರೆ.
ಬವಾನಿ ಖೇರಾದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ರಾಮ್ ಕಿಶನ್ ಫೌಜಿ ಕೂಡ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಕೂಡಾ ಟಿಕೆಟ್ ನಿರಾಕರಿಸಿದ ಪಕ್ಷದ ನಾಯಕರಿಂದ ಬಂಡಾಯ ಎದುರಿಸುತ್ತಿದೆ.
ವಿಡಿಯೊ ನೋಡಿ: ಕಲಬುರಗಿ- ಗೌರಿಯದ್ದು ವೈಚಾರಿಕ ಕೊಲೆ: ಗೌರಿ ನೆನಪು ಕಾರ್ಯಕ್ರಮದಲ್ಲಿ ರಹಮತ್ ತರೀಕೆರೆ ಮಾತುಗಳು


