ಜಾರ್ಖಂಡ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ “ಕೋಮು ಉದ್ವಿಗ್ನ ಮತ್ತು ವಿಭಜಕ” ಹೇಳಿಕೆಗಳನ್ನು ನೀಡಿದ್ದಾರೆ ಎಂದು ಅರೋಪಿಸಿ ಅಸ್ಸಾಂ ಮುಖ್ಯಮಂತ್ರಿ, ಬಿಜೆಪಿ ನಾಯಕ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಇಂಡಿಯಾ ಒಕ್ಕೂಟ ಶನಿವಾರ ಚುನಾವಣಾ ಆಯೋಗಕ್ಕೆ ಔಪಚಾರಿಕ ದೂರು ದಾಖಲಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ದ್ವೇಷ ಭಾಷಣ
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್), ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪ್ರತಿನಿಧಿಗಳು ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿದ್ದಾರೆ. ದ್ವೇಷ ಭಾಷಣ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ನವೆಂಬರ್ 13 ಮತ್ತು 20 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಉದ್ದೇಶದಿಂದ ಹಿಮಂತ ಶರ್ಮಾ ಅವರು ಭಾಷಣ ಮಾಡಿದ್ದಾರೆ ಎಂದು ಇಂಡಿಯಾ ಒಕ್ಕೂಟದ ನಾಯಕರು ಆರೋಪಿಸಿದ್ದಾರೆ.
Latehar, Jharkhand: Assam CM Himanta Biswa Sarma says, "… If we lose; this is the land of Tilka Manjhi, Nilamber-Pitamber, Sidhu-Kanhu, and Bhagwan Birsa Munda. Irfan, Ansari, Alam, these people will loot it. They have looted our daughters, looted our land, and looted our… pic.twitter.com/ANM9QICmrI
— IANS (@ians_india) November 2, 2024
ನವೆಂಬರ್ 1 ರಂದು ಶರತ್‌ನಲ್ಲಿ ಮಾಡಿದ ಭಾಷಣದಲ್ಲಿ ಅವರು, “ಮುಸ್ಲಿಮರು ಪ್ರಧಾನವಾಗಿ ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆ, ಆದರೆ ಹಿಂದೂ ಮತಗಳು ವಿಭಜನೆಯಾಗುತ್ತವೆ” ಎಂದು ಶರ್ಮಾ ಹೇಳಿಕೊಂಡಿದ್ದಾರೆ. ಹೇಮಂತ್ ಸೊರೆನ್ ನೇತೃತ್ವದ ರಾಜ್ಯ ಸರ್ಕಾರವು ‘ವಿಶೇಷ ಸಮುದಾಯ’ದ ಮತಕ್ಕಾಗಿ ‘ಒಳನುಸುಳುಕೋರರನ್ನು ಆಹ್ವಾನಿಸುತ್ತದೆ’ ಎಂದು ಅವರು ಆರೋಪಿಸಿದ್ದರು.
ಹಿಮಂತ ಅವರು ನೀಡಿದ ಈ ಭಾಷಣವು ಅವರು ಮತ್ತು ಅವರ ಪಕ್ಷವಾದ ಬಿಜೆಪಿಯಿಂದ ಪ್ರಚಾರ ಮಾಡುತ್ತಿರುವ ವಿಭಜಕ ರಾಜಕೀಯಕ್ಕೆ ಉದಾಹರಣೆಯಾಗಿದೆ ಎಂದು ಇಂಡಿಯಾ ಒಕ್ಕೂಟ ನಾಯಕರು ಹೇಳಿದ್ದಾರೆ.
“ಒಳನುಸುಳುವವರು” ಎಂಬಂತಹ ಪದಗಳನ್ನು ಬಳಸುವ ಮೂಲಕ ಅವರು “ದ್ವೇಷ ಮತ್ತು ಅಸಮಾಧಾನದ ಜ್ವಾಲೆಯನ್ನು ಹುಟ್ಟುಹಾಕುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಹಿಮಂತ ಶರ್ಮಾ ಅವರು ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರನ್ನು ಗುರಿಯಾಗಿಸಿಕೊಂಡ ಸಂದರ್ಶನವನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
24 ಗಂಟೆಯೊಳಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಇಂಡಿಯಾ ಒಕ್ಕೂಟ ಎಚ್ಚರಿಸಿದೆ.
“ಅವರು ಉದ್ದೇಶಪೂರ್ವಕವಾಗಿ ಇಡೀ ಧಾರ್ಮಿಕ ಅಲ್ಪಸಂಖ್ಯಾತರನ್ನು ಒಂದೇ ದೃಷ್ಟಿಕೋನದಲ್ಲಿ ಚಿತ್ರಿಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಸಾಮಾಜಿಕ ವಿಭಜನೆಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ‘ಅಲ್ಪಸಂಖ್ಯಾತರನ್ನು’ ಒಳನುಸುಳುವವರು ಎಂದು ಬ್ರಾಂಡ್ ಮಾಡುತ್ತಿದ್ದಾರೆ. ಇಂತಹ ಭಾಷಣವು ಕೋಮು ಉದ್ವಿಗ್ನತೆಯನ್ನು ಉಲ್ಬಣಗೊಳಿಸುತ್ತದೆ ಮತ್ತು ಚುನಾವಣಾ ಲಾಭಕ್ಕಾಗಿ ಜಾರ್ಖಂಡ್‌ನ ಸಾಮಾಜಿಕ ರಚನೆಯನ್ನು ಮುರಿಯುವ ಅಪಾಯವನ್ನು ಸೃಷ್ಟಿ ಮಾಡುತ್ತಿದ್ದಾರೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜಾರ್ಖಂಡ್‌ನ ಹೇಮಂತ್ ಸೊರೆನ್ ಸರ್ಕಾರವು ಬಾಂಗ್ಲಾದೇಶಿ ನುಸುಳುಕೋರರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿರುವ ಹಿಮಂತಾ ಶರ್ಮಾ ಅವರ ಧ್ವನಿಮುದ್ರಣಗಳನ್ನು ಇಂಡಿಯಾ ಒಕ್ಕೂಟ ದೂರಿನೊಂದಿಗೆ ಸಲ್ಲಿಸಿದೆ.
“ಈ ಅಪಾಯಕಾರಿ ತಂತ್ರವು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುವುದು ಮಾತ್ರವಲ್ಲದೆ ನಮ್ಮ ಸಂವಿಧಾನದ ಮೂಲಭೂತ ರಚನೆಯನ್ನು ಉಲ್ಲಂಘಿಸುತ್ತದೆ. ದ್ವೇಷ ಭಾಷಣದ ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ ವಿವಿಧ ನ್ಯಾಯಾಂಗ ಹೇಳಿಕೆಗಳನ್ನು ಮತ್ತು ತೀರ್ಪುಗಳ ವಿರುದ್ಧ ಅವರ ಈ ಹೇಳಿಕೆ ಇವೆ” ಎಂದು ಇಂಡಿಯಾ ನಾಯಕರು ಹೇಳಿದ್ದಾರೆ.
ಇದನ್ನೂ ಓದಿ: ಬಡತನ | ಬ್ಯಾಂಕ್ ಸಾಲ ತೀರಿಸಲು ಮಗುವನ್ನೆ ₹9000ಕ್ಕೆ ಮಾರಾಟ!


