Homeಚಳವಳಿಹತ್ರಾಸ್: ತೀವ್ರಗೊಂಡ ಆಕ್ರೋಶ, ಪ್ರತಿಭಟನೆ ಹತ್ತಿಕ್ಕಲು ಇಂಡಿಯಾ ಗೇಟ್ ಬಳಿ ನಿಷೇದಾಜ್ಞೆ ಹೇರಿದ ದೆಹಲಿ ಪೊಲೀಸ್!

ಹತ್ರಾಸ್: ತೀವ್ರಗೊಂಡ ಆಕ್ರೋಶ, ಪ್ರತಿಭಟನೆ ಹತ್ತಿಕ್ಕಲು ಇಂಡಿಯಾ ಗೇಟ್ ಬಳಿ ನಿಷೇದಾಜ್ಞೆ ಹೇರಿದ ದೆಹಲಿ ಪೊಲೀಸ್!

ಪ್ರಸ್ತುತ ಪ್ರಕರಣವು ದೇಶಾದ್ಯಂತ ಭಾರಿ ಆಘಾತ ಮತ್ತು ಆಕ್ರೋಶವನ್ನು ಉಂಟುಮಾಡಿದೆ. ಇದು ಎಂಟು ವರ್ಷಗಳ ಹಿಂದೆ 23 ವರ್ಷದ ಯುವತಿ ನಿರ್ಭಯಾಳನ್ನು ಕ್ರೂರವಾಗಿ ಹತ್ಯೆಗೈದ ಘಟನೆಯನ್ನು ನೆನಪಿಸುತ್ತದೆ.

- Advertisement -
- Advertisement -

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ದಲಿತ ಯುವತಿಯ ಅತ್ಯಾಚಾರವನ್ನು ಖಂಡಿಸಿ ಇಂಡಿಯಾ ಗೇಟ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ಯೋಜಿಸಲಾಗುತ್ತಿದೆ. ಆದರೆ ಪ್ರತಿಭಟನೆ ಹತ್ತಿಕ್ಕಲು ದೆಹಲಿ ಪೊಲೀಸರು ಇಂಡಿಯಾ ಗೇಟ್ ಸುತ್ತಮುತ್ತ ಎಲ್ಲ ರೀತಿಯ ಸಭೆ ಸೇರುವುದನ್ನು ನಿಷೇಧಿಸಿದ್ದಾರೆ.

ಆದರೆ ಸಂಬಂಧಿಸಿದ ಪ್ರಾಧಿಕಾರದ ಅನುಮತಿಯೊಂದಿಗೆ 100 ಜನರು ಇಂಡಿಯಾ ಗೇಟ್‌ನಿಂದ 3 ಕಿ.ಮೀ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿ ಸಭೆ ಸೇರಬಹುದಾಗಿದೆ. “ಸೆಕ್ಷನ್ 144 ಸಿಆರ್‌ಪಿಸಿ ಹೇರಿದ ಕಾರಣ ಇಂಡಿಯಾ ಗೇಟ್ ಸುತ್ತ ಯಾವುದೇ ಸಭೆ ನಡೆಸಲು ಅನುಮತಿ ಇಲ್ಲ” ಎಂದು ದೆಹಲಿ ಪೊಲೀಸ್‌ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಹತ್ರಾಸ್‌‌ ಅತ್ಯಾಚಾರ: ಸಂತ್ರಸ್ಥೆಯ ತಂದೆಗೆ ಧಮಕಿ ಹಾಕುತ್ತಿರುವ ಜಿಲ್ಲಾಧಿಕಾರಿ ವಿಡಿಯೋ ವೈರಲ್‌

ಪ್ರಸ್ತುತ ಪ್ರಕರಣವು ದೇಶಾದ್ಯಂತ ಭಾರಿ ಆಘಾತ ಮತ್ತು ಆಕ್ರೋಶವನ್ನು ಉಂಟುಮಾಡಿದೆ. ಇದು ಎಂಟು ವರ್ಷಗಳ ಹಿಂದೆ 23 ವರ್ಷದ ಯುವತಿ ನಿರ್ಭಯಾಳನ್ನು ಕ್ರೂರವಾಗಿ ಹತ್ಯೆಗೈದ ಘಟನೆಯನ್ನು ನೆನಪಿಸುತ್ತದೆ. ಅಂದು ಜನರು ಸ್ವಯಂಪ್ರೇರಿತವಾಗಿ ಪ್ರತಿಭಟನೆಗೆ ಬೀದಿಗಿಳಿದಿದ್ದರು. ಅಂದು ಕೂಡಾ ದೆಹಲಿಯ ಇಂಡಿಯಾ ಗೇಟ್‌ ಬಳಿ ತಿಂಗಳುಗಟ್ಟಲೇ ಭಾರಿ ಪ್ರತಿಭಟನೆ ನಡೆದಿತ್ತು.

ಕಳೆದ ಮೂರು ದಿನಗಳಿಂದ ಸಂತ್ರಸ್ತ ಯುವತಿಗೆ ನ್ಯಾಯಕ್ಕಾಗಿ ಭಾರಿ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸೇರಿದಂತೆ ದೇಶಾದ್ಯಂತ ಹಲವು ಹೋರಾಟಗಳು, ಪ್ರತಿಭಟನೆಗಳು ಜರುಗಿವೆ. ಆದರೆ ಹತ್ರಾಸ್ ಡಿಸಿಪಿ ಅತ್ಯಾಚಾರವೇ ನಡೆದಿಲ್ಲ ಎಂಬ ಹೇಳಿಕೆ ನೀಡಿರುವುದು ಪ್ರಜ್ಞಾವಂತರನ್ನು ಕೆರಳಿಸಿದೆ. ಆಸ್ಪತ್ರೆಯ ವೈದ್ಯರು ನೀಡಿರುವ ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಸಹ ಅತ್ಯಾಚಾರವನ್ನು ಉಲ್ಲೇಖಿಸಿಲ್ಲ. ಇದು ಪ್ರಕರಣವನ್ನು ಮುಚ್ಚಿಹಾಕುವ ಮತ್ತು ಮೇಲ್ಜಾತಿ ಆರೋಪಿಗಳನ್ನು ರಕ್ಷಿಸುವ ಹುನ್ನಾರ ಎಂದು ಹಲವು ಸಂಘಟನೆಗಳು ಕಿಡಿಕಾರಿವೆ. ಹಾಗಾಗಿ ಇಂಡಿಯಾ ಗೇಟ್ ಬಳಿ ಬೃಹತ್ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಲು ನಿರ್ಧರಿಸಲಾಗಿತ್ತು. ಈಗ ಪೊಲೀಸರು ಅದಕ್ಕೆ ನಿಷೇಧವೇರಿದ್ದಾರೆ.

ಇನ್ನು ನಿನ್ನೆ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಹೊರಟ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಪೊಲೀಸಲು ತಡೆದು ತಳ್ಳಾಡಿದ್ದಾರೆ. ಅವರಿಬ್ಬರನ್ನು ವಶಕ್ಕೆ ಪಡೆದಿದ್ದಕ್ಕೆ ದೇಶಾದ್ಯಂತ ಪಕ್ಷಬೇಧ ಮರೆತು ಹಲವು ಮುಖಂಡರು ಖಂಡಿಸಿದ್ದಾರೆ.

ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ, ರಾಹುಲ್ ಗಾಂಧಿ ಮೇಲೆ ಹಲ್ಲೆ ಖಂಡಿಸಿ ಬೀದಿಗಿಳಿದ ಕಾಂಗ್ರೆಸ್: ಪಂಜಿನ ಮೆರವಣಿಗೆ

ವಿಡಿಯೋ ನೋಡಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಸರಗೋಡು: ಅಣಕು ಮತದಾನದ ವೇಳೆ ಬಿಜೆಪಿ ಚಿಹ್ನೆಯೊಂದಿಗೆ ಹೆಚ್ಚುವರಿ ಸ್ಲಿಪ್ ಮುದ್ರಿಸಿದ ವಿವಿಪ್ಯಾಟ್

0
ಕೇರಳದ ಕಾಸರಗೋಡಿನಲ್ಲಿ ಬುಧವಾರ (ಏ.17) ನಡೆದ ಅಣಕು ಮತದಾನದ ಸಂದರ್ಭದಲ್ಲಿ ಮೂರು ವಿವಿ ಪ್ಯಾಟ್ (ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್) ಯಂತ್ರಗಳು ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಮಲದ ಚಿಹ್ನೆಯೊಂದಿಗೆ ತಲಾ...