PC: abcnews

ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಹಾಗೂ ಪತ್ನಿಗೆ ಕೊರೊನಾ ಪಾಸಿಟವ್‌ ದೃಡಪಟ್ಟಿದೆ. ತಾನು ಕ್ವಾರಂಟೈನ್ ಆಗಲಿದ್ದೇನೆ ಎಂದು ಟ್ರಂಪ್‌ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್‌, “ಇಂದು ರಾತ್ರಿ ಮೆಲೆನಿಯಾ ಹಾಗೂ ನಾನು ಕೊರೊನಾ ಪಾಸಿಟಿವ್ ಆಗಿದ್ದೇವೆ. ನಾವು ನಮ್ಮ ಕ್ವಾರಂಟೈನ್‌ ಪ್ರಾರಂಭಿಸುತ್ತೇವೆ ಮತ್ತು ಶೀಘ್ರವಾಗಿ ಗುಣಮುಖರಾಗುತ್ತೇವೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಮಾಸ್ಕ್ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿದರೂ ಮಾಸ್ಕ್ ಧರಿಸಲು ಒಪ್ಪದ ಟ್ರಂಪ್

ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ತಮ್ಮ ಆಪ್ತರಲ್ಲಿ ಒಬ್ಬರಾದ ಹೋಪ್ ಹಿಕ್ಸ್ ಕೊರೊನಾ ಪಾಸಿಟಿವ್‌ ಆಗಿದ್ದಾರೆ ಎಂದು ಹೇಳಿದ್ದರು. ಇದಾದ ನಂತರ ತನ್ನ ಹಾಗೂ ಪತ್ನಿಯ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ ಎಂದು ಟ್ವಿಟ್ಟರ್‌‌ನಲ್ಲಿ ಬರೆದಿದ್ದರು.

ಟ್ರಂಪ್ ತಾನು ಎಷ್ಟು ಸಮಯದವರೆಗೆ ಕ್ವಾರೆಟೈನ್ ಆಗಿರುತ್ತೇನೆ ಎಂದು ಸ್ಫಷ್ಟಪಡಿಸಿಲ್ಲ. ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ಇರುವುದರಿಂದ ಶುಕ್ರವಾರ ಫ್ಲೋರಿಡಾದಲ್ಲಿ ಆಯೋಜನೆಯಾಗಿದ್ದ ರ್‍ಯಾಲಿಯು ರದ್ದುಗೊಂಡಿದೆಯೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಆದರೆ ಟ್ರಂಪ್ ಪತ್ನಿ,ಮುಂದಿನ ಎಲ್ಲಾ ಕಾರ್ಯಕ್ರಮವನ್ನು ಮುಂದೂಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಭಟನಾಕಾರರಿಗೆ ಹೆದರಿ ಶ್ವೇತಭವನದ ಬಂಕರ್ ನಲ್ಲಿ ಅಡಗಿದ ಡೊನಾಲ್ಡ್ ಟ್ರಂಪ್

ವಿಡಿಯೋ ನೋಡಿ: ಕೊರೊನಾದ ಜೊತೆಗೂ ಮೂರ್ಖತನವನ್ನೂ ಓಡಿಸೋಣ; ಮಾನವೀಯತೆಯನ್ನಲ್ಲ

LEAVE A REPLY

Please enter your comment!
Please enter your name here