Homeಅಂತರಾಷ್ಟ್ರೀಯಮಾಸ್ಕ್ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿದರೂ ಮಾಸ್ಕ್ ಧರಿಸಲು ಒಪ್ಪದ ಟ್ರಂಪ್

ಮಾಸ್ಕ್ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿದರೂ ಮಾಸ್ಕ್ ಧರಿಸಲು ಒಪ್ಪದ ಟ್ರಂಪ್

- Advertisement -
- Advertisement -

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರಿಜೋನಾದ ಫೀನಿಕ್ಸ್‌ನಲ್ಲಿ ಮಾಸ್ಕ್ ತಯಾರಿಸುವ ಕಾರ್ಖಾನೆಗೆ ಭೇಟಿ ನೀಡಿದರೂ ಮಾಸ್ಕ್ ಧರಿಸಲು ನಿರಾಕರಿಸಿರುವ ಘಟನೆ ಜರುಗಿದೆ.

ಕೊರೊನಾ ಲಾಕ್‌ಡೌನ್‌ ನಂತರ ತಮ್ಮ ಮೊದಲ ಪ್ರವಾಸದಲ್ಲಿ ಅರಿಜೋನಾದ ಫೀನಿಕ್ಸ್‌ನ ಮಾಸ್ಕ್ ತಯಾರಿಸುವ ಕಾರ್ಖಾನೆಯಾದ ಹನಿವೆಲ್‌ಗೆ ಭೇಟಿ ನೀಡಿದ್ದರು. ಅಲ್ಲಿಯ ಸಿಬ್ಬಂದಿ ಮಾಸ್ಕ್‌‌ ‌ಅನ್ನು ನೀಡಿದರೂ ಟ್ರಂಪ್ ಧರಿಸಲು ನಿರಾಕರಿಸಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಾದ ಆರ್ಥಿಕತೆಯನ್ನು ಪುನಃ ತೆರೆದರೆ ಹೆಚ್ಚಿನ ಅಮೆರಿಕನ್ನರು ಸಾಯುತ್ತಾರೆ ಎಂದು ಒಪ್ಪಿಕೊಂಡರು. “ಅಪಾರ್ಟ್ಮೆಂಟ್, ಮನೆ ಅಥವಾ ಅದು ಏನೇ ಇರಲಿ ನಿಮ್ಮನ್ನು ಲಾಕ್ ಮಾಡಲಾಗುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ. ಕೆಲವು ಜನರ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತಾರೆ ಎಂದು ಕಾರ್ಖಾನೆಯಲ್ಲಿ ಒಪ್ಪಿಕೊಂಡ ಅವರು, ಆದರೆ ನಾವು ನಮ್ಮ ದೇಶವನ್ನು ಮುಕ್ತಗೊಳಿಸಬೇಕು ಎಂದರು.

ವೈದ್ಯಕೀಯ ಸಿಬ್ಬಂದಿ ಮತ್ತು ಇತರರು ಬಳಸುವ ಮುಖವಾಡಗಳನ್ನು ತಯಾರಿಸುವ ಹನಿವೆಲ್ ಕಾರ್ಮಿಕರನ್ನು ಶ್ಲಾಘಿಸಿದ ಟ್ರಂಪ್, ಇದು ಮುಂದೆ ನೋಡುವ ಸಮಯವಾಗಿದೆ ಎಂದಿದ್ದಾರೆ.

ಅಮೆರಿಕಾದಲ್ಲಿ ನವೆಂಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಮರು ಆಯ್ಕೆಯಾಗಲು ಬಯಸಿದ್ದಾರೆ. ಆದರೆ ಕೊರೊನಾ ಸಾಂಕ್ರಮಿಕವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂದು ಅಮೆರಿಕಾದಾದ್ಯಂತ ಟ್ರಂಪ್ ಟೀಕೆಗೆ ಒಳಗಾಗಿದ್ದಾರೆ.

ಅಮೆರಿಕಾದಲ್ಲಿ ಇದುವರೆಗೂ 12 ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಕೊರೊನಾ ಸೋಂಕು ತಗುಳಿದ್ದು, 72 ಸಾವಿರಕ್ಕಿಂತಲೂ  ಹೆಚ್ಚು ಜನರು ಮೃತಪಟ್ಟಿದ್ದಾರೆ. ವಿಶ್ವದಾದ್ಯಂತ 36 ಲಕ್ಷ ಜನರಿಗೆ ಸೋಂಕು ಹರಡಿದ್ದು, 2,57,000 ಜನರು ಮೃತಪಟ್ಟಿದ್ದಾರೆ.


ಇದನ್ನೂ ಓದಿ:  ಕೊರೊನಾ ವೈರಸನ್ನು ಚೀನಾದಲ್ಲಿ ಸೃಷ್ಟಿಸಲಾಗಿದೆ: ಡೊನಾಲ್ಡ್ ಟ್ರಂಪ್ ಆರೋಪ


ವಿಡಿಯೊ ನೋಡಿ: ಸದ್ದು…ಈ ಸುದ್ದಿ ಏನಾಗಿದೆ ? 3 ನೇ ಸಂಚಿಕೆ

ಸದ್ದು ಈ ಸುದ್ದಿಗಳೇನಾದವು? – 03

ಮಾರತ್ತಹಳ್ಳಿ ಷೆಡ್‌ ಧ್ವಂಸ ಪ್ರಕರಣದಲ್ಲಿ ಹೈಕೋರ್ಟ್‌ ಹೇಳಿದ್ದು ಜಾರಿಯಾಯಿತಾ? ಅಕ್ರಮ ಕೆಲಸಕ್ಕೆ ಕುಮ್ಮಕ್ಕು ಕೊಟ್ಟಿದ್ದ ಅರವಿಂದ ಲಿಂಬಾವಳಿ ಮತ್ತು ಸುವರ್ಣ ಟಿವಿ ಏನು ಮಾಡಬೇಕಿತ್ತು?ಆನೇಕಲ್‌ ರೀ-ಪ್ಯಾಕಿಂಗ್‌ ಪ್ರಕರಣದಲ್ಲಿ ದೂರುದಾರರು ಸ್ಥಳೀಯ ಸರ್ಕಾರಿ ಅಧಿಕಾರಿಯಾಗಿದ್ದರೂ, ಇದುವರೆಗೆ ಕ್ರಮ ಏಕಾಗಿಲ್ಲ? ಇವೆರಡು ಫಾಲೋಅಪ್‌ ಒಳಗೊಂಡಂತೆ ಮರೆಯಬಾರದ ಹಳೆಯ ಸುದ್ದಿಗಳು ಮತ್ತು ಇಂದಿನ ಸುದ್ದಿಗಳ ಇನ್ನೊಂದು ಮಗ್ಗುಲನ್ನು ತೋರಿಸುವ ವಿಶಿಷ್ಟ ಕಾರ್ಯಕ್ರಮವಿದು.ನೋಡಿ ಷೇರ್‌ ಮಾಡಿ.

Posted by Naanu Gauri on Tuesday, May 5, 2020


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿ ‘ಸಂವಿಧಾನ ಮತ್ತು ಮೀಸಲಾತಿ’ಯನ್ನು ರದ್ದುಗೊಳಿಸಲು ಬಯಸುತ್ತಿದೆ: ಲಾಲು ಪ್ರಸಾದ್ ಯಾದವ್

0
ಬಿಜೆಪಿ ಸಂವಿಧಾನ ಮತ್ತು ಮೀಸಲಾತಿಯನ್ನು ರದ್ದುಗೊಳಿಸಲು ಬಯಸುತ್ತಿದೆ, ಸರ್ಕಾರಿ ಉದ್ಯೋಗ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮರು ಕೂಡ ಮೀಸಲಾತಿಯನ್ನು ಪಡೆಯಬೇಕು, ಅವರ ಮೀಸಲಾತಿ ಪರವಾಗಿ ನಾನಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ)...