Homeಅಂತರಾಷ್ಟ್ರೀಯಕೊರೊನಾ ವೈರಸನ್ನು ಚೀನಾದಲ್ಲಿ ಸೃಷ್ಟಿಸಲಾಗಿದೆ: ಡೊನಾಲ್ಡ್ ಟ್ರಂಪ್ ಆರೋಪ

ಕೊರೊನಾ ವೈರಸನ್ನು ಚೀನಾದಲ್ಲಿ ಸೃಷ್ಟಿಸಲಾಗಿದೆ: ಡೊನಾಲ್ಡ್ ಟ್ರಂಪ್ ಆರೋಪ

ಚೀನಾದಲ್ಲೇ ವೈರಸನ್ನು ಸೃಷ್ಟಿಸಲಾಗಿದೆ ಎಂದ ಟ್ರಂಪ್ ಅದಕ್ಕಾಗಿ ಪುರಾವೆ ನೀಡಲು ನಿರಾಕರಿಸಿದ್ದಾರೆ.

- Advertisement -
- Advertisement -

ವಿಶ್ವದಾದ್ಯಂತ ಹರಡಿರುವ ಕೊರೊನಾ ವೈರಸ್ ಚೀನಾದಲ್ಲೇ ತಯಾರಿಸಲಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವೈರಸನ್ನು ಚೀನಾದಲ್ಲೆ ಸೃಷ್ಟಿಸಲಾಗಿದೆ ಎಂದು ಖಚಿತವಾಗಿ ಹೇಳಿರುವ ಅವರು, ಅದಕ್ಕಾಗಿ ಪುರಾವೆಯನ್ನು ನೀಡಲು ನಿರಾಕರಿಸಿದ್ದಾರೆ.

ಚೀನಾದ ವೂಹಾನ್ ಪ್ರಾಂತ್ಯದಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಎಂಬ ಪ್ರಯೋಗಾಲಯದಲ್ಲಿ ಈ ವೈರಸ್ ಸೃಷ್ಟಿ ಮಾಡಲಾಗಿದೆ ಎಂದು ಅಮೇರಿಕಾದ ಶ್ವೇತಭವನದ ಕಾರ್ಯಕ್ರಮವೊಂದರಲ್ಲಿ ಟ್ರಂಪ್ ಹೇಳಿದ್ದಾರೆ. ಅದಕ್ಕೆ ಪುರಾವೆಯಿದೆಯೆ ಎಂದಾಗ ಹೌದು ಎಂದು ಉತ್ತರಿಸಿದ್ದಾರೆ. ಆದರೆ ಸದ್ಯಕ್ಕೆ ನಾನಿದರ ಬಗ್ಗೆ ಹೆಚ್ಚು ಮಾಹಿತಿ ನೀಡುವಂತಿಲ್ಲ, ಅದಕ್ಕೆ ನನಗೆ ಅನುಮತಿಯಿಲ್ಲ ಎಂದು ಅವರು ಹೇಳಿದ್ದಾರೆ.

ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಇದಕ್ಕೆ‌ ಹೊಣೆಯೇ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಅವರು, “ಹಾಗೆ ಹೇಳಲು ಆಗುವುದಿಲ್ಲ, ಆದರೆ ಅದನ್ನು ಮೂಲದಲ್ಲಿಯೇ ತಡೆಯಬಹುದಿತ್ತು. ಚೀನಾದಲ್ಲಿಯೆ ಅದನ್ನು ತಡೆದಿದ್ದರೆ ಇಡೀ ವಿಶ್ವಕ್ಕೇ ಹರಡುವುದನ್ನು ತಡೆಯಬಹುದಿತ್ತು” ಎಂದು ಹೇಳಿದರು.

ಆದರೆ ಚೀನಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದೆ. ಅಲ್ಲದೆ ಈ ಹಿಂದೆಯೆ ವೂಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ನಿರ್ದೇಶಕ ಅದನ್ನು ತಯಾರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ವೈರಲಾಜಿ ತಜ್ಞರು ಈ ವೈರಸ್ ಕಾಡುಪ್ರಾಣಿಗಳನ್ನು ಮಾರಾಟ ಮಾಡುವ ವೂಹಾನ್ ಮಾರುಕಟ್ಟೆಯಲ್ಲಿ ಹುಟ್ಟಿಕೊಂಡಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕಾದಲ್ಲಿ ಈಗಾಗಲೆ ಹತ್ತು ಲಕ್ಷಕ್ಕಿಂತಲೂ ಹೆಚ್ಚು ಕೊರೊನಾ ಪೀಡಿತರಿದ್ದು 63 ಸಾವಿರಕ್ಕಿಂತಲೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದರಿಂದಾಗಿ ಅಮೇರಿಕಾದದ್ಯಂತ ಟ್ರಂಪ್ ಆಡಳಿತದ ಮೇಲೆ ಅಸಹನೆ ಹೆಚ್ಚುತ್ತಿದೆ. ನವೆಂಬರಿನಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಟ್ರಂಪ್ ಮರು ಆಯ್ಕೆಯ ಬಗ್ಗೆ ಚಿಂತಿಸುತ್ತಿದ್ದಾರೆ.


ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟದಲ್ಲಿ ಚೀನಾದ ಯಶಸ್ಸು ಇತರ ದೇಶಗಳಿಗೆ ಭರವಸೆಯಾಗಿದೆ: WHO


 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...