Homeಮುಖಪುಟಸೇನಾ ಮುಖ್ಯಸ್ಥರುಗಳ ಜೊತೆ ರಕ್ಷಣಾ ಪಡೆ ಮುಖ್ಯಸ್ಥರಾದ 'ಜನರಲ್ ಬಿಪಿನ್ ರಾವತ್' ಪತ್ರಿಕಾಗೋಷ್ಟಿ

ಸೇನಾ ಮುಖ್ಯಸ್ಥರುಗಳ ಜೊತೆ ರಕ್ಷಣಾ ಪಡೆ ಮುಖ್ಯಸ್ಥರಾದ ‘ಜನರಲ್ ಬಿಪಿನ್ ರಾವತ್’ ಪತ್ರಿಕಾಗೋಷ್ಟಿ

- Advertisement -
- Advertisement -

ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಜನರಲ್ ಬಿಪಿನ್ ರಾವತ್ ದೇಶದ ಮೂರೂ ಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ಇಂದು ಸಂಜೆ ಆರು ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ANI ವರದಿ ಮಾಡಿದೆ.

ಪ್ರಮುಖ ವಿಷಯಗಳ ಕುರಿತು ಪತ್ರಿಕಾಗೋಷ್ಟಿ ನಡೆಸಲಿದ್ದಾರೆ ಎಂದಿರುವ ವರದಿಯೂ ನಿರ್ದಿಷ್ಟವಾಗಿ ಯಾವುದೆ ವಿಷಯವನ್ನು ಸೂಚಿಸಿಲ್ಲ. ಇದು ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥರಾದ ನಂತರ ಮೂರು ಸೇನಾ ಪಡೆಗಳ ಮುಖ್ಯಸ್ಥರ ಜೊತೆ ಸೇರಿ ನಡೆಸುವ ಮೊದಲ ಪತ್ರಿಕಾಗೋಷ್ಟಿಯಾಗಿದೆ.

ದೇಶ ಕೊರೊನಾ ಲಾಕ್ ಡೌನ್ ಸ್ಥಿತಿಯಲ್ಲಿರುವಾಗ ಸೇನಾ ಮುಖ್ಯಸ್ಥರ ಈ ಪತ್ರಿಕಾಗೋಷ್ಟಿ ದೇಶದಾದ್ಯಂತ ಭಾರಿ ಕುತೂಹಲವನ್ನು ಕೆರಳಿಸಿದೆ.

“ದೇಶವು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ  ರಕ್ಷಣಾ ಪಡೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ಮೀರಿ ಸರಕಾರ ಮತ್ತು ಜನರಿಗೆ ಬೆಂಬಲ ನೀಡಬೇಕಿದೆ,” ಎಂದು ಬಿಪಿನ್ ರಾವತ್ ಈ ಹಿಂದೆ ಹೇಳಿದ್ದರು.

ಭಾರತದಲ್ಲಿ ಈ ವರೆಗೆ ಕೊರೊನಾ ವೈರಸ್ 35 ಸಾವಿರ ಪ್ರಕರಣಗಳು ಪತ್ತೆಯಾಗಿದೆ. 1100 ಕ್ಕಿಂತಲೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.


ಇದನ್ನೂ ಓದಿ:  ಕೇಂದ್ರ ಸರ್ಕಾರ ಖದೀಮ ಶ್ರೀಮಂತರ ಪರ ನಿಂತಿದೆ: ಕಾರ್ಮಿಕ ದಿನದಂದು ರಾಷ್ಟ್ರಪತಿಗೆ ಪತ್ರ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಅಡ್ಡ ಪರಿಣಾಮ: ‘ಬಿಜೆಪಿ’ ದೇಣಿಗೆಗಾಗಿ ‘ಜನರ ಜೀವ’ವನ್ನು ಪಣಕ್ಕಿಟ್ಟಿದೆ; ಅಖಿಲೇಶ್ ಯಾದವ್

0
ಕೋವಿಶೀಲ್ಡ್ ಲಸಿಕೆಯ "ಅಡ್ಡಪರಿಣಾಮಗಳ" ವಿವಾದದ ಮಧ್ಯೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಲಸಿಕೆ ತಯಾರಕರಿಂದ "ರಾಜಕೀಯ ದೇಣಿಗೆಗಳನ್ನು" ಪಡೆಯಲು 'ಬಿಜೆಪಿ' ಜನರ ಜೀವನವನ್ನು ಪಣಕ್ಕಿಟ್ಟಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ...