Homeಮುಖಪುಟವಲಸೆ ಕಾಮಿ೯ಕರನ್ನು ಬಿಲ್ಡರ್‌ಗಳ ಜೀತದಾಳು ಮಾಡುತ್ತಿರುವ ಸಕಾ೯ರ : ಸಿಪಿಐ(ಎಂ) ಖಂಡನೆ

ವಲಸೆ ಕಾಮಿ೯ಕರನ್ನು ಬಿಲ್ಡರ್‌ಗಳ ಜೀತದಾಳು ಮಾಡುತ್ತಿರುವ ಸಕಾ೯ರ : ಸಿಪಿಐ(ಎಂ) ಖಂಡನೆ

- Advertisement -
- Advertisement -

ತಮ್ಮ ರಾಜ್ಯಗಳಿಗೆ ಹಿಂತಿರುಗಿ ಹೋಗಬಯಸುವ ಹೊರ ರಾಜ್ಯದ ವಲಸೆ ಕಾಮಿ೯ಕರನ್ನು ತಮ್ಮ ಊರುಗಳಿಗೆ ಹೋಗಲು ಬಿಡದೆ ರೈಲು ರದ್ದುಗೊಳಿಸುವ ಮೂಲಕ ಬಿಲ್ಡರ್‌ಗಳ ಜೀತದಾಳುಗಳನ್ನಾಗಿಸುತ್ತಿರುವ ರಾಜ್ಯ ಸಕಾ೯ರದ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

ಈ ಕುರಿತು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಸಿಪಿಐ(ಎಂ) ಕಾರ್ಯದರ್ಶಿಯಾದ ಕೆ. ಎನ್.ಉಮೇಶ್ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಸಮಿತಿಯ ಕಾರ್ಯದರ್ಶಿಯದ ಎನ್. ಪ್ರತಾಪ್ ಸಿಂಹರವರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಅನಾಗರೀಕ ನಿರ್ಧಾರದಿಂದ ಕೂಡಲೇ ಸರ್ಕಾರ ಹಿಂದೆ ಸರಿಯಬೇಕೆಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: 2 ದಿನದಿಂದ ಊಟವಿಲ್ಲ, ದಯವಿಟ್ಟು ನಮ್ಮೂರಿಗೆ ಕಳಿಸಿಬಿಡಿ : ವಲಸೆ ಕಾರ್ಮಿಕರ ಅಳಲು 


ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳಿಸದೇ ದೂರದ ಮಾದಾವರ ಬಳಿಯ ಬಿಐಇಸಿಯಲ್ಲಿ ಕೂಡಿಹಾಕಲಾಗಿದೆ. ಮೊದಲಿಗೆ ಕಳುಹಿಸುವುದಾಗಿ ಹೇಳಿ, ಆನಂತರ ಸಚಿವರಾದ ಆರ್. ಅಶೋಕ್ ರವರು ಬಿಹಾರ ಮುಖ್ಯಮಂತ್ರಿಯವರು ಒಪ್ಪದ ಕಾರಣ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ‌ಆದರೆ ಅದೇ ಸಮಯದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್‌ ಪ್ರಸಾದ್‌ ಸುತ್ತೋಲೆ ಮೂಲಕ ರೈಲುಸೇವೆಯನ್ನು ರದ್ದುಗೊಳಿಸಿದ್ದಾರೆ. ಇದರ ಹಿಂದೆ ಬಿಲ್ಡರ್‌ಗಳ ಹಿತವೇ ರಾಜ್ಯ ಬಿಜೆಪಿ ಸಕಾ೯ರಕ್ಕೆ ಪ್ರಧಾನವಾಗಿದೆ ಎಂಬುದನ್ನು ಸಾಬೀತು ಮಾಡಿದೆ ಎಂದು ಹೇಳಿಕೆಯಲ್ಲಿ ಟೀಕಿಸಲಾಗಿದೆ.

ಕೂಲಿಯಿಲ್ಲದೆ ಹಸಿದಿದ್ದ ಅವರಿಗೆ ಬಿಜೆಪಿ ಬೆಂಬಲಿತ ಅದಮ್ಯ ಚೇತನ, ರವಿ ಶಂಕರ್ ಆಶ್ರಮ ಮುಂತಾದವರಿಗೆ ಸಿದ್ಧ ಆಹಾರ ಗುತ್ತಿಗೆ ನೀಡಿ ಉಪ್ಪು ಹುಳಿ ಈರುಳ್ಳಿ ಬೆಳ್ಳುಳ್ಳಿ ಇಲ್ಲದ ಆಹಾರ ನೀಡಿ ಅವರನ್ನು ಮತ್ತಷ್ಟು ಹತಾಶರನ್ನಾಗಿಸಿತ್ತು. ಈ ಎಲ್ಲದರ ಪರಿಣಾಮವಾಗಿ ವಲಸೆ ಕಾಮಿ೯ಕರು ಬೇಸತ್ತು ಪೋಲಿಸರ ವಿರುದ್ಧ ತಿರುಗಿ ಬಿದ್ದಿದ್ದರು. ಕನ್ನಡ ಇಂಗ್ಲಿಷ್ ಬಾರದ ಕಾಮಿ೯ಕರಿಗೆ ಸೇವಾ ಸಿಂಧು ಆಪ್ ಮೂಲಕವೇ ನೋಂದಾಯಿಸಲು ಹೇಳಿ ಅವರನ್ನು ವಂಚಿಸಿದ ಸಕಾ೯ರವು, ಇತರರ ಸಹಾಯ ಪಡೆದು ನೋಂದಾಯಿಸಲು ಮುಂದಾದಾಗ ಸವ೯ರ್ ಡೌನ್ ಮಾಡಿ ನೋಂದಾಯಿಸಿ ಕೊಳ್ಳಲು ಬಿಡದೆ ಇದೀಗ ರೈಲುಗಳನ್ನು ರದ್ದು ಪಡಿಸಿ ವಲಸೆ ಕಾಮಿ೯ಕರನ್ನು ಜೀತದಾಳುಗಳಂತೆ ನೆಡೆಸಿ ಕೊಳ್ಳುತ್ತಿದೆ ಎಂದು ಕೆ. ಎನ್.ಉಮೇಶ್ ರವರು ಆರೋಪಿಸಿದ್ದಾರೆ.

ಇದು ಕಾರ್ಮಿಕರನ್ನು ಹತಾಶ ಸ್ಥಿತಿಗೆ ತಳ್ಳಿದ್ದು ಮುಂದೆ ಕಾಮಿ೯ಕರಿಗೆ ಉಂಟಾಗುವ ಎಲ್ಲಾ ಅನಾಹುತಗಳಿಗೂ ರಾಜ್ಯ ಬಿಜೆಪಿ ಸಕಾ೯ರದ ದುರಾಡಳಿತವೇ ಕಾರಣವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: ಬಿಲ್ಡರ್‌ ಲಾಬಿಗೆ ಮಣಿದು ರೈಲುಸೇವೆ ರದ್ದುಗೊಳಿಸಿದ ರಾಜ್ಯಸರ್ಕಾರ: ಸಂಕಷ್ಟದಲ್ಲಿ ಕಾರ್ಮಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಸ್ಪರ್ಧಿಸುವ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ನಡೆದಿದ್ಯಾ ಅಕ್ರಮ?

0
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆಯಾ? ಹೌದು ಈಗೊಂದು ಆರೋಪವನ್ನು ಸ್ಪರ್ಧೆಯ ಆಕಾಂಕ್ಷಿಗಳಾಗಿದ್ದ ಹಲವು ಅಭ್ಯರ್ಥಿಗಳು ಮಾಡಿದ್ದಾರೆ. ವಾರಾಣಾಸಿಯಲ್ಲಿ ಚುನಾವಣಾಧಿಕಾರಿಗಳು ಮತ್ತು ಬಿಜೆಪಿ-ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿದ್ದ...