Homeಮುಖಪುಟವೈ.ಎಸ್‌.ವಿ ದತ್ತರವರ ಗಣಿತ ಪಾಠ ಸಕ್ಸಸ್‌: ಪಾಠ ಕೇಳಿದವರೆಷ್ಟು ಗೊತ್ತೆ?

ವೈ.ಎಸ್‌.ವಿ ದತ್ತರವರ ಗಣಿತ ಪಾಠ ಸಕ್ಸಸ್‌: ಪಾಠ ಕೇಳಿದವರೆಷ್ಟು ಗೊತ್ತೆ?

- Advertisement -
- Advertisement -

ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಗಣಿತದ ವಿಷಯ ಪಾಠ ಮಾಡಲಿದ್ದೇನೆ. FB live ಇಂದು 7.30ಕ್ಕೆ ಎಂದು ಮಾಜಿ ಶಾಸಕರಾದ ವೈ.ಎಸ್‌.ವಿ ದತ್ತರವರು ನಿನ್ನೆ ತಾನೇ ಘೋಷಿಸಿದ್ದರು. ಆಗಲೇ ಬಹಳಷ್ಟು ಜನ ಈ ಕುರಿತು ಕುತೂಹಲ ಹೊಂದಿದ್ದರು ಮಾತ್ರವಲ್ಲ ಕಾಯುತ್ತಿದ್ದರು ಸಹ. ಕೊನೆಗೂ ದತ್ತರವರ ಪಾಠ ಸಕ್ಸಸ್‌ ಆಗಿದ್ದು ಸಾವಿರಾರು ಜನರಿಗೆ ಅನುಕೂಲವಾಗಿದೆ.

ಹೌದು ಮಾಜಿ ಶಾಸಕರಾದ ಅವರು ಲಾಕ್‌ಡೌನ್‌ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಗಣಿತ ಮೇಷ್ಟು ಆಗಿ ಬದಲಾಗಿದ್ದಾರೆ. ಏಪ್ರಿಲ್‌ 28 ರಂದು ಅವರು ಫೇಸ್‌ಬುಕ್‌ ಲೈವ್‌ನಲ್ಲಿ ಗಣಿತದ ಸ್ವಾರಸ್ಯಕರ ವಿಚಾರಗಳನ್ನು ತಿಳಿಸುವ ಮೂಲಕ ಗಣಿತ ಕಷ್ಟವಲ್ಲ, ಆಸಕ್ತಿಕರ ವಿಷಯ ಎಂಬ ಕುತೂಹಲ ಹುಟ್ಟಿಸಿದ್ದರು.

Posted by Ysv Datta on Tuesday, April 28, 2020

ಮೂಲತಃ ಶಿಕ್ಷಕರಾಗಿದ್ದ ಅವರು ನಿನ್ನೆ ಸಂಜೆ 7.30ರಿಂದ ಹತ್ತನೇ ತರಗತಿಯ ಗಣಿತದ ಮೊದಲ ಪಾಠ ಆರಂಭಿಸಿದ್ದಾರೆ. “ಸಮಾನಾಂತರ ಸರಣಿ” ಎಂಬ ಪಾಠದ ಕುರಿತು ವಿವರಿಸಿದರು. ಸತತ ಒಂದು ಗಂಟೆ 10 ನಿಮಿಷಗಳ ಕಾಲ ಅವರು ನಿರರ್ಗಳವಾಗಿ ಪಾಠ ಮಾಡಿದರೆ 3 ಲಕ್ಷಕ್ಕೂ ಅಧಿಕ ಜನರು ಈ ಫೇಸ್‌ಬುಕ್‌ ಲೈವ್‌ ನೋಡಿದ್ದಾರೆ. ಸಾವಿರಾರು ಜನರು ದತ್ತರವರ ಪ್ರಯೋಗಕ್ಕೆ ಶುಭ ಹಾರೈಸಿದ್ದಾರೆ.

10th Mathematics Class 1

Posted by Ysv Datta on Tuesday, May 5, 2020

ಕೊರೊನ ಲಾಕ್‌ಡೌನ್‌ ಕಾರಣಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮುಂದೂಡಿವೆ. ಯಾವಾಗ ಆರಂಭವಾಗುತ್ತದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಸುರೇಶ್ ಕುಮಾರ್‌ರವರು ಸಿಕ್ಕಿ ಮಕ್ಕಳಿಗೆ ಮನೆಯಿಂದಲೇ ಪಾಠಮಾಡುವ ಕುರಿತು ಚರ್ಚಿಸಿದ್ದರು.

ನಾನು ಅಕಸ್ಮಾತಾಗಿ ರಾಜಕಾರಣಕ್ಕೆ ಬಂದವನು. ಜೆ,ಪಿ ಚಳವಳಿ ಮೂಲಕ ರಾಜಕಾರಣ ಆರಂಭಿಸಿದೆ. ಆದರೆ ನನಗೆ ಮೇಷ್ಟು ಕೆಲಸವೇ ಅಚ್ಚುಮೆಚ್ಚು. ಕನ್ನಡ ಮಾಧ್ಯಮದಲ್ಲಿ ಬೋಧಿಸುವುದು ನನಗೆ ಇಷ್ಟ. ಬಹಳ ವರ್ಷ ಬೆಂಗಳೂರಿನಲ್ಲಿ ಟ್ಯೂಷನ್ ಮಾಡಿದ್ದೇನೆ. ಈಗ ಫೇಸ್‌ಬುಕ್‌ನಲ್ಲಿ ಬೋಧಿಸುವುದು ಖುಷಿ ಕೊಡುತ್ತಿದೆ ಎಂದಿದ್ದಾರೆ.


ಇದನ್ನೂ ಓದಿ: ಬಿಲ್ಡರ್‌ ಲಾಬಿಗೆ ಮಣಿದು ರೈಲುಸೇವೆ ರದ್ದುಗೊಳಿಸಿದ ರಾಜ್ಯಸರ್ಕಾರ: ಸಂಕಷ್ಟದಲ್ಲಿ ಕಾರ್ಮಿಕರು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read