Homeಮುಖಪುಟಆರ್‌ಸಿಇಪಿ ಒಪ್ಪಂದಕ್ಕೆ ಈ ಬಾರಿ ಭಾರತ ಸಹಿ ಹಾಕಲಿದೆಯೇ?

ಆರ್‌ಸಿಇಪಿ ಒಪ್ಪಂದಕ್ಕೆ ಈ ಬಾರಿ ಭಾರತ ಸಹಿ ಹಾಕಲಿದೆಯೇ?

- Advertisement -
- Advertisement -

2019ನೇ ವರ್ಷದ ನವೆಂಬರ್ ತಿಂಗಳಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP) ಮಾತುಕತೆಗಳಿಂದ ಹಿಂದೆ ಸರಿದಿದ್ದ ಭಾರತ ಇದೀಗ RCEP ಸದಸ್ಯ ರಾಷ್ಟ್ರಗಳು ಕಳುಹಿಸಿರುವ ಹೊಸ ಪ್ರಸ್ತಾಪವನ್ನು ಪರಿಗಣಿಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಏಪ್ರಿಲ್ 20 ರಿಂದ 24ರವರೆಗೆ ಜರುಗಿದ RCEP ಸದಸ್ಯ ರಾಷ್ಟ್ರಗಳ ವ್ಯಾಪಾರ ಸಮಾಲೋಚನಾ ಸಮಿತಿಯು ತನ್ನ ಸಭೆಯಲ್ಲಿ ನಿರ್ಧಾರವಾದ ಬಳಿಕ ಭಾರತವನ್ನು ಒಪ್ಪಂದದೆಡಿಗಿನ ಮಾತುಕತೆಗೆ ಮತ್ತೆ ಮರಳಿ ಕರೆತರುವ ನಿಟ್ಟಿನಲ್ಲಿ ಭಾರತ ಸರ್ಕಾರಕ್ಕೆ ಪತ್ರ ರವಾನಿಸಿದೆ.

ಪ್ರಸ್ತಾಪಿತ RCEP ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿರುವ ಭಾರತ ಹೊರತುಪಡಿಸಿದ ಹದಿನೈದು ಸದಸ್ಯ ದೇಶಗಳು (ದಕ್ಷಿಣ ಪೂರ್ವ ಏಷ್ಯಾದ 10 ರಾಷ್ಟ್ರಗಳು (ಆಸಿಯಾನ್) ಅಂದರೆ ಚೀನಾ, ಆಸ್ಪ್ರೇಲಿಯಾ, ನ್ಯೂಜಿಲೆಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 15 ರಾಷ್ಟ್ರಗಳು) ಭಾರತದ ಮುಂದೆ ಮಾರುಕಟ್ಟೆ ತೆರೆಯುವ (ಮಾರ್ಕೆಟ್ ಆಕ್ಸೆಸ್) ಕುರಿತ ನಿಯಮಾವಳಿಗಳನ್ನು ಮರುಪರಿಶೀಲಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಈ ಬಗ್ಗೆ ಮೇ 15 ರೊಳಗೆ ಭಾರತಕ್ಕೆ ಪ್ರತಿಕ್ರಿಯಿಸಲು ಕೇಳಿಕೊಂಡಿವೆ ಎಂದು ಇಂಡಿಯಾ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಒಂದು ವೇಳೆ ಭಾರತವು ಒಪ್ಪಂದದ ಕುರಿತ ಮಾತುಕತೆಗೆ ಮರಳದ್ದಿದ್ದರು ಕೂಡ ಈ 15 ದೇಶಗಳು 2020 ರ ನವೆಂಬರ್-ಡಿಸೆಂಬರ್ ವೇಳೆಗೆ ಸದರಿ ಒಪ್ಪಂದವನ್ನು ಅಂತಿಮಗೊಳಿಸಲು ನಿರ್ಧರಿಸಿವೆ.

ಈಗಾಗಲೇ ಭಾರತವು ಚೀನಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ ಇತರೆ ಎಲ್ಲಾ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ.

ಈಗ ಹೊಸದಾಗಿ ನೀಡಿರುವ ಪ್ರಸ್ತಾಪವು ಭಾರತದ ಆದ್ಯತೆಯಂತೆ ಮಾರುಕಟ್ಟೆಗಳಿಗೆ ಪ್ರವೇಶ ಸಂಬಂಧದ ಸುಂಕಗಳನ್ನು ನಿರ್ಧರಿಸುವ ವಿಚಾರಗಳಲ್ಲಿ 2014ರ ಮೂಲ ದರಗಳ ಬದಲಾಗಿ “ಮೋಸ್ಟ ಫೆವರ್ಡ್ ನೇಷನ್- ಎಮ್ಎಫ್ಎನ್”(most favoured nation- ಪರಸ್ಪರ ವ್ಯಾಪಾರಗಳಲ್ಲಿ ಮೊದಲ ಆದ್ಯತೆ ಹೊಂದಿದ ರಾಷ್ಟ್ರ) ಸುಂಕ ದರಗಳನ್ನು ಬಳಸುವ ಮತ್ತು ಆಮದುಗಳ ಹೆಚ್ಚಳದ ವಿರುದ್ಧ ಸುರಕ್ಷತಾ ಕಾರ್ಯವಿಧಾನ ಬಳಸುವ ನಿಟ್ಟಿನಲ್ಲಿ ಭಾರತದ ಬೇಡಿಕೆಗಳನ್ವಯ ಮನ್ನಣ್ಣೆ ನೀಡಿವೆ.

ಆದರೂ ಉಳಿದ 15 ದೇಶಗಳು ಮಾರ್ಕೆಟ್ ಆಕ್ಸೆಸ್ ಮತ್ತು ಸುರಕ್ಷತಾ ಕಾರ್ಯವಿಧಾನ ಎರಡನ್ನೂ ಕೆಲವು ನಿರ್ದಿಷ್ಟ ವಸ್ತುಗಳಿಗೆ ಸೀಮಿತ ಮಾಡ ಬಯಸುತ್ತಿವೆ; ಹಾಗೂ ಮೂರನೇ ಆರ್ಸಿಇಪಿ ದೇಶದ ಮೂಲಕ ಚೀನೀ ಉತ್ಪನ್ನಗಳು ಪ್ರವೇಶಿಸುವುದನ್ನು ನಿಲ್ಲಿಸುವ ಗುರಿಯಿಂದ ಭಾರತ ಬೇಡಿಕೆಯಿಟ್ಟಿದ್ದ ರೂಲ್ಸ್ ಆಫ್ ಆರಿಜಿನ್ (ಸರಕು ತಯಾರಾಗುವ ಮೂಲ ನೆಲೆ) ಕುರಿತ ನಿಯಮಗಳನ್ನು ಎಲ್ಲಾ 15 ದೇಶಗಳು ಕಡೆಗಣಿಸಿರುವುದು ಕಂಡು ಬರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಇತರೆ ದೇಶಗಳು ಸದ್ಯಕ್ಕೆ ಭಾರತಕ್ಕೆ ಕಳಿಸಿರುವ ಪ್ರಸ್ತಾಪದಲ್ಲಿ ಉಲ್ಲೇಖಿಸಿರುವಂತೆ “ಭಾರತದ ಆದ್ಯತೆಯಂತೆ ನವೀಕರಿಸಿದ ಮಾರುಕಟ್ಟೆ ಪ್ರವೇಶದ ಸಂಬಂಧಿತವಾಗಿ ಸೀಮಿತ ಸಂಖ್ಯೆಯ ಅತಿಮುಖ್ಯ ಉತ್ಪನ್ನಗಳ ಮೇಲೆ 2019 ಎಮ್ಎಫ್ಎನ್ ಸುಂಕಗಳನ್ನು ಬಳಸಿಕೊಂಡು ಭಾರತ ಆರ್ಸಿಇಪಿ ದೇಶಗಳೊಂದಿಗೆ ದ್ವಿಪಕ್ಷೀಯವಾಗಿ ಮಾತುಕತೆ ನಡೆಸುವುದನ್ನು ನಾವು ಸ್ವಾಗತಿಸುತ್ತೇವೆ …ಮಾರ್ಕೆಟ್ ಆಕ್ಸೆಸ್ (ಮಾರುಕಟ್ಟೆ ಪ್ರವೇಶ) ಕುರಿತಾದ ವಿಚಾರಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸಬಹುದು ಮತ್ತು ಅದು ಸಮತೋಲನದಲ್ಲಿ ಉಳಿಯುತ್ತದೆ ಎನ್ನುವ ತಿಳುವಳಿಕೆಯ ಮೇಲೆ ಈ ಪ್ರಸ್ತಾಪವನ್ನು ಮುಂದಿಡುತ್ತಿದ್ದೇವೆ, ಭಾರತದ ಟ್ಯಾರಿಫ್ ರಿಸ್ಟ್ರೀಕ್ಷನ್ಸ್ (ಸುಂಕ ಬದ್ಧತೆಗಳು) ಎಲ್ಲರಿಗೂ ಸ್ವೀಕಾರಾರ್ಹವಾಗಿರುತ್ತದೆ ” ಎಂದು ತಿಳಿಸಿವೆ.

ಆರ್ಸಿಇಪಿ ರಾಷ್ಟ್ರಗಳೊಂದಿಗಿನ ಭಾರತದ ವ್ಯಾಪಾರ ಕೊರತೆಯು US $ 105 ಬಿಲಿಯನ್ ಇದೆ. ಭಾರತದ ಒಟ್ಟು ವ್ಯಾಪಾರ ಕೊರತೆಯಲ್ಲಿ ಚೀನಾದ ಪಾಲು ಶೇಕಡಾ 50 ರಷ್ಟಿದೆ. ಚೀನಾದಿಂದ ತಯಾರಿಸಿದ ಸರಕುಗಳು ಹಾಗು ನ್ಯೂಜಿಲೆಂಡಿನ ಡೈರಿ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶ ಮಾಡಿದರೆ ಪರಿಸ್ಥಿತಿ ಮಾರಾಕವಾಗಲಿದೆ ಎನ್ನುವ ಅಳಲು ಭಾರತಕ್ಕಿದೆ. ಈ ಕಾರಣಗಳಿಂದ ನವೆಂಬರ್ 2019 ರಲ್ಲಿ ಬ್ಯಾಂಕಾಕ್ನಲ್ಲಿ ನಡೆದ ಸಭೆಯಲ್ಲಿ ಭಾರತವು ಆರ್ಸಿಇಪಿ ಮಾತುಕತೆಯಿಂದ ಹಿಂದೆ ಸರಿದಿತ್ತು.

ಫೆಬ್ರವರಿ 1, 2020 ರಂದು, ಭಾರತವು ತನ್ನ 2020-21ರ ರಾಷ್ಟ್ರೀಯ ಆಯ-ವ್ಯಯ ಮಂಡನೆಯ ಭಾಗವಾಗಿ ಆಮದು ಸರಕುಗಳ ಮೇಲೆ ಗಮನ ಸೆಳೆಯುವಷ್ಟು ಸುಂಕವನ್ನು ಹೆಚ್ಚಿಸಿದೆ, ಇದು ಪ್ರಧಾನಿ ನರೇಂದ್ರ ಮೋದಿಯವರು “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮವನ್ನು ಉತ್ತೇಜಿಸಲು ಮಾಡಿದ್ದೆನ್ನುವ ವರದಿಗಳಿವೆ. ಭಾರತ ಘೋಷಿಸಿರುವ ಈ ಸುಂಕ ಹೆಚ್ಚಳವು ಆರ್ಸಿಇಪಿ ದೇಶಗಳಿಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ .

ದೇಶದ ವ್ಯಾಪಾರಿಗಳು ಹಾಗೂ ಸ್ಥಳೀಯ ಕೈಗಾರಿಕಾ ಗುಂಪುಗಳ ವಿರೋಧದ ಜೊತೆಗೆ, ಭಾರತೀಯ ನಾಗರಿಕ ಸಮಾಜದಿಂದ, ವಿಶೇಷವಾಗಿ ಮಹಿಳೆಯರು, ಸಣ್ಣ ರೈತರು ಮತ್ತು ಗ್ರಾಮೀಣ ಸಮುದಾಯಗಳಿಂದ ಆರ್ಸಿಇಪಿಗೆ ವ್ಯಾಪಕವಾದ ವಿರೋಧವಿದೆ.

ಇದನ್ನೂ ಓದಿ: ಆರ್‌ಸಿಇಪಿ ಕುರಿತ ಸಮಗ್ರ ಮಾಹಿತಿ ಇಲ್ಲಿದೆ

ಇವರೆಲ್ಲ ಸರಕುಗಳ ಮೇಲಿನ ಸುಂಕದ ಹೊರತಾಗಿ ಎದುರಾಗುವ ಇತರೆ ಸಂಕಷ್ಟಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಬೀಜಗಳು ಮತ್ತು ಸಸ್ಯಗಳ ಪೇಟೆಂಟ್, ಔಷಧಿಗಳ ಮೇಲಿನ ಹೆಚ್ಚಿದ ಏಕಸ್ವಾಮ್ಯ, ಇ-ಕಾಮರ್ಸ್ ಅನಿಯಂತ್ರಣ, ಸಾರ್ವಜನಿಕ ಸೇವೆಗಳ ಖಾಸಗೀಕರಣ ಮತ್ತು ಹೂಡಿಕೆದಾರ-ರಾಜ್ಯ ವಿವಾದ ಇತ್ಯರ್ಥದ ಕುರಿತು ಈಗಾಗಲೇ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಜೀವನಕ್ಕಾಗಿ ಕೃಷಿಯನ್ನು ಅವಲಂಭಿಸಿರುವ ರೈತಾಪಿ ವರ್ಗ ಅತೀವ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

“ಭಾರತವು RCEP ಸದಸ್ಯರಿಂದ ಪತ್ರವೊಂದನ್ನು ಸ್ವೀಕರಿಸಿದ್ದು, ಅದರಲ್ಲಿ ಭಾರತವನ್ನು ಮಾತುಕತೆಗಳಿಗೆ ಮರಳಿ ಸೇರಲು ಕೋರಿದ್ದು ಹಾಗೂ ಈ ಹಿಂದೆ ಉದ್ಬವಿಸಿದ್ದ ಹಲವು ಆತಂಕಗಳನ್ನು ಬಗೆಹರಿಸುವ ಸಲುವಾಗಿ ಕೆಲವು ಷರತ್ತುಗಳಿಗೆ ಬದ್ಧವಾಗಿರುವೆವು ಎಂದು RCEP ಸಧಸ್ಯರು ತಿಳಿಸಿದ್ದಾರೆ. ವಾಣಿಜ್ಯ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯವು ಇದೀಗ, ಪತ್ರವನ್ನು ಪರಿಶೀಲಿಸುತ್ತಿದೆ ಹಾಗೂ ಭಾರತದ ಮುಂದಿನ ಕ್ರಮ ಏನು ಎನ್ನುವುದನ್ನು ಚರ್ಚಿಸುತ್ತಿವೆ ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.”

ಆದರೆ ಸದ್ಯಕ್ಕೆ ತಲೆದೋರಿರುವ ಆರ್ಥಿಕ ಸಮಸ್ಯೆಗಳ ಕಾರಣ ಸರಕಾರ ಮಾತುಕತೆಗಳಿಗೆ ಮರಳುವುದಿಲ್ಲ ಎನ್ನುವ ಆಶಯವಿದ್ದು ಈ ನಡುವೆ ಯುಎಸ್ ಜೊತೆಗೆ ಕೂಡ ವ್ಯಾಪಾರ ಮಾತುಕತೆಗಳನ್ನು ಭಾರತ ನಡೆಸುತ್ತಿರುವ ಸುದ್ದಿಗಳಿವೆ.

ಪ್ರಜಾಪ್ರಭುತ್ವ ದೇಶದಲ್ಲಿ ಸರಕಾರ ನೀತಿ-ನಿರ್ಧಾರಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರುತ್ತದೆಯೇ ಎಂದು ಕಾದು ನೋಡುವ ಸಮಯ ಇದು, ಭಾರತ ಸರಕಾರ ಆರ್‌ಸಿಇಪಿ ಒಪ್ಪಂದದ ಮಾತುಕತೆಗಳಿಗೆ ಮರಳಿದ್ದೇ ಆದರೆ ಕಳೆದ ನವೆಂಬರಿನಲ್ಲಿ ನಡೆದ ಸಮಗ್ರ ಆರ್ಥಿಕ ಸಹಭಾಗಿತ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿ ದೇಶಾದ್ಯಂತ ರೈತರು ಬೀದಿಗಿಳಿದು ನಡೆಸಿದ ಹೋರಾಟಗಳು ಮತ್ತೆ ಮರುಕಳಿಸುವುದು ನಿಶ್ಚಿತವಾಗಿದೆ.


ಇದನ್ನೂ ಓದಿ: ಭಾರತದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ RCEP ಪರಿಣಾಮಗಳು – ಡಾ. ಬಿ.ಸಿ.ಬಸವರಾಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...