Homeಮುಖಪುಟಲಾಕ್‌ಡೌನ್‌ ಸಂಕಷ್ಟ: 1,610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ ಯಡಿಯೂರಪ್ಪ

ಲಾಕ್‌ಡೌನ್‌ ಸಂಕಷ್ಟ: 1,610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಿಸಿದ ಯಡಿಯೂರಪ್ಪ

- Advertisement -
- Advertisement -

ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವವರನ್ನು ಮತ್ತೆ ಆರ್ಥಿಕವಾಗಿ ಮುನ್ನೆಲೆಗೆ ತರುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಇಂದು 1,610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ಅನ್ನು ಬಿಡುಗಡೆ ಮಾಡಿದ್ದಾರೆ.

ಇಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಮಾತನಾಡಿದ ಅವರು ಸ್ಥಗಿತವಾಗಿರುವ ರಾಜ್ಯದ ಆರ್ಥಿಕತೆಗೆ ಮತ್ತೆ ಉತ್ತೇಜನ ನೀಡುವ ಮತ್ತು ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ವರ್ಗದ ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ 1610 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಅಗತ್ಯ ಎಂದಿದ್ದಾರೆ.

ವಿಶೇಷ ಪ್ಯಾಕೇಜ್‌ನ ಭಾಗವಾಗಿ ರಾಜ್ಯದಲ್ಲಿರುವ ಸುಮಾರು 2,30,000 ಜನ ಕ್ಷೌರಿಕ (ಸವಿತಾ ಸಮುದಾಯ) ವರ್ಗಕ್ಕೆ ತಲಾ 5,000 ಹಣ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಅದೇ ರೀತಿ 60,000 ಅಗಸರಿಗೆ ಹಾಗೂ 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ 5,000 ಹಣವನ್ನು ಬ್ಯಾಂಕ್‌ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದಾರೆ.

ರಾಜ್ಯದಲ್ಲಿರುವ ನೋಂದಾಯಿತ 18 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗೆ ಈಗಾಗಲೇ 2,000 ರೂ ಜಮಾ ಮಾಡಲಾಗಿದೆ. ಆದರೂ, ಬೆಂಗಳೂರಿನಿಂದ ಅವರು ತಮ್ಮ ಜಿಲ್ಲೆಗಳಿಗೆ ಹಿಂದಿರುಗುವುದನ್ನು ತಡೆಯುವ ಸಲುವಾಗಿ ಹೆಚ್ಚುವರಿ 2,000 ಹಣ ಖಾತೆಗೆ ಜಮೆ ಮಾಡುವುದಾಗಿ ಘೋಷಿಸಿದ್ದಾರೆ.

ನೇಕಾರರ ಯೋಗಕ್ಷೇಮಕ್ಕಾಗಿ ಅವರ ಖಾತೆಗೆ ತಲಾ 2,000 ಜಮಾ. ನೇಕಾರಿಗೆ ಉದ್ಯಮದ ಬೆಳವಣಿಗೆಗಾಗಿ ನೇಕಾರ ಸಮ್ಮಾನ್ ಯೋಜನೆ ಮೂಲಕ 80 ಕೋಟಿ ರೂ ಬಿಡುಗಡೆ ಮಾಡಿದ್ದು, ಕಳೆದ ವರ್ಷ ನೇಕಾರರು ಪಾವತಿಸಿದ್ದ 1 ಲಕ್ಷ ವರೆಗಿನ ಸಾಲ ವಾಪಸ್‌ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ.

ರಾಜ್ಯದಲ್ಲಿ ಈ ವರ್ಷ 11,675 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹೂವಿನ ಬೆಳೆ ನಾಶವಾಗಿದೆ. ಹೀಗಾಗಿ ಹೂ ಬೆಳೆಗಾರರಿಗೆ ಒಂದು ಎಕರೆಗೆ ತಲಾ 25,000 ರೂ ಪರಿಹಾರ ಘೋಷಿಸಿದ್ದಾರೆ.

ಇದಲ್ಲದೆ ಪ್ಯಾಕೇಜ್ ನಲ್ಲಿ ಸಣ್ಣ ಮತ್ತು ಮದ್ಯಮ ಕೈಗಾರಿಕೆಗೆಗಳ 2 ತಿಂಗಳ ವಿದ್ಯುತ್‌ ಬಿಲ್ ಮನ್ನಾ, ಗ್ರಾಹಕರ ವಿದ್ಯುತ್‌ ಬಿಲ್ ಮೇಲೆ ಶೇ.1 ರಷ್ಟು ಕಡಿತ ಮಾಡಿದ್ದಾರೆ.


ಇದನ್ನೂ ಓದಿ: ಬಿಲ್ಡರ್‌ ಲಾಬಿಗೆ ಮಣಿದು ರೈಲುಸೇವೆ ರದ್ದುಗೊಳಿಸಿದ ರಾಜ್ಯಸರ್ಕಾರ: ಸಂಕಷ್ಟದಲ್ಲಿ ಕಾರ್ಮಿಕರು 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...