Homeಮುಖಪುಟಒಡಿಶಾದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಒಡಿಶಾದಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಜೂನ್ ಹತ್ತರಿಂದ ಮುಂದಿನ ಸೂಚನೆಯವರೆಗೂ ಮೀನುಗಾರಿಕೆಗೆ ತೆರಳದಂತೆ ಸೂಚನೆ.

- Advertisement -
- Advertisement -

ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುತ್ತಿರುವುದರಿಂದ ಒಡಿಶಾದಲ್ಲಿ ಸುದೀರ್ಘ ಮಳೆಯಾಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮುಂದಿನ ಮೂರು ದಿನಗಳಲ್ಲಿ ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಂಭವವಿದೆ.

ಪೂರ್ವ-ಮಧ್ಯ ಬಂಗಾಳಕೊಲ್ಲಿಯಲ್ಲಿರುವ ಚಂಡಮಾರುತದ ಪ್ರಭಾವದಿಂದ, ಮುಂದಿನ 48 ಗಂಟೆಗಳಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಪಶ್ಚಿಮ ವಾಯುವ್ಯ ದಿಕ್ಕಿಗೆ ಚಲಿಸುತ್ತಿದೆ ಆದ್ದರಿಂದ ನಂತರದ 24 ಗಂಟೆಗಳಲ್ಲಿ ಹೆಚ್ಚು ಗಮನಾರ್ಹವಾಗಿದೆ ಎಂದು ಅಲ್ಲಿನ ಹವಾಮಾನ ಕೇಂದ್ರ ತಿಳಿಸಿದೆ.

ಇಂತಹ ಹವಾಮಾನ ಪರಿಸ್ಥಿತಿಯು ಒಡಿಶಾದಲ್ಲಿ ಮಳೆ ಹೆಚ್ಚಿಸುವ ಸಾಧ್ಯತೆಯಿದೆ, ಜೂನ್ 9 ರಿಂದ ರಾಜ್ಯದ ಅನೇಕ ಭಾಗಗಳಲ್ಲಿ ಮಳೆಯ ತೀವ್ರತೆಯು ಕ್ರಮೇಣ ಹೆಚ್ಚಾಗುವ ನಿರೀಕ್ಷೆಯಿದೆ.


ಓದಿ: ಒಡಿಶಾದ ಶಿಕ್ಷಣ ಇಲಾಖೆ ಪುಸ್ತಕಗಳಲ್ಲಿ “ಮಹಾತ್ಮಾ ಗಾಂಧಿ ಸಾವು ಆಕಸ್ಮಿಕ” ಎಂದು ಉಲ್ಲೇಖ.


ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಹವಮಾನ ಇಲಾಖೆ ಕೇಂದ್ರವು ಸೋಮವಾರದಿಂದ ಜೂನ್ 10 ರವರೆಗೆ ಅನೇಕ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ಮತ್ತು ಜೂನ್ 11 ರಂದು ಉಳಿದ ಜಿಲ್ಲೆಗಳಿಗೆ ಕಿತ್ತಳೆ ಎಚ್ಚರಿಕೆ ನೀಡಿದೆ.

ಇಂದು ಗುಡುಗು-ಮಿಂಚು ಸಹಿತ, ಭಾರೀ ಗಾಳಿಯೊಂದಿಗೆ ಮಳೆಯಾಗುತ್ತದೆ ಎಂದು ಹಲವಾರು ಸ್ಥಳಗಳನ್ನು ಗುರುತಿಸಿದೆ.

ಅಂತೆಯೇ, ಜೂನ್ 9 ರಂದು ಕರಾವಳಿ ಒಡಿಶಾ, ಕಿಯೋಜಾರ್, ಮಯೂರ್ಭಂಜ್, ಧೆಂಕನಲ್, ದಿಯೋಗರ್‌, ರಾಯಗಡ, ಕೊರಪುತ್ ಮತ್ತು ಮಲ್ಕಂಗಿರಿ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗಲಿದೆ. ಗಂಜಾಂ ಮತ್ತು ಗಜಪತಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.

ಜೂನ್ 10 ರಂದು ನಬರಂಗ್‌ಪುರ, ಕೊರಪುತ್, ಮಲ್ಕಂಗಿರಿ, ಗಂಜಾಂ, ಗಜಪತಿ, ಪುರಿ, ಖುರ್ದಾ ಮತ್ತು ಜಗತ್ಸಿಂಗ್‌ಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಕೋರಪುತ್, ಮಲ್ಕಂಗಿರಿ, ನಬರಂಗ್‌ಪುರ, ಕಲಹಂಡಿ, ನುವಾಪಾಡಾ, ಬೋಲಂಗೀರ್, ಕಂಧಮಾಲ್, ಗಂಜಾಂ, ಪುರಿ ಮತ್ತು ಬೌಧ್ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗಬಹುದು ಎಂದು ಜೂನ್ 11 ಕ್ಕೆ ಆರೆಂಜ್ ಎಚ್ಚರಿಕೆ ನೀಡಿದೆ.

ಹವಾಮಾನ ಇಲಾಖೆಯೂ ಜೂನ್ 10 ಮತ್ತು 11 ರಂದು ಉತ್ತರ ಹಾಗೂ ಪಶ್ಚಿಮ ಮಧ್ಯದ ಬಂಗಾಳ ಕೊಲ್ಲಿ ಹಾಗೂ ಒಡಿಶಾ ಕರಾವಳಿಯಿಂದ  40-50 ಕಿ.ಮೀ ವೇಗದ ಮಾರುತವನ್ನು ಸೂಚಿಸಿದೆ. ಇದರಿಂದಾಗಿ ಒಡಿಶಾ ಕರಾವಳಿ, ಉತ್ತರ ಮತ್ತು ಮಧ್ಯ ಬಂಗಾಳ ಕೊಲ್ಲಿಯ  ಮೀನುಗಾರರಿಗೆ ಜೂನ್ 10 ರಿಂದ ಮುಂದಿನ ಸೂಚನೆ ಬರುವವರೆಗೆ ಸಮುದ್ರಕ್ಕೆ ಹೋಗದಂತೆ ಸೂಚಿಸಲಾಗಿದೆ.


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...