ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ ಎಂದು ವಿಡಿಯೊ ತಿರುಚಿ ಪೋಸ್ಟ್ ಮಾಡಿದ್ದ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.
ಪೊಲೀಸರು ಪ್ರಕರಣ ದಾಖಲಿಸದಿರುವಾಗ ಆಮ್‌ಆದ್ಮಿ ಪಾರ್ಟಿಯ ಶಾಸಕಿ ಆತಿಶಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಪಾತ್ರ ಅವರು ಜನವರಿ 30ರಂದು ವಿಡಿಯೊವನ್ನು ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿದ್ದರು.
ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ‘ಆಲ್ಟ್‌ನ್ಯೂಸ್’ ಸಹ ಸಂಸ್ಥಾಪಕ ಮೊಹಮದ್ ಜುಭೈರ್ ಅವರು ಮಂಗಳವಾರ ಟ್ವೀಟ್ ಮಾಡಿ, ಸಂಬೀತ್ ಪಾತ್ರ ಅವರು ತಿರುಚಿದ ವಿಡಿಯೊದ ಅರ್ಕೈವ್ ಲಿಂಕ್ ಹಾಕಿದ್ದಾರೆ.
ANI, What do you mean "Allegedly" posting a doctored video?? He did post the doctored video and deleted after many days. Here is the Archive link of deleted tweet. : https://t.co/NsQSsxYIWM
— Mohammed Zubair (@zoo_bear) November 23, 2021
Also here is Altnews fact check.https://t.co/yRkjuL88NI https://t.co/NTxitW6w7x
ಫ್ಯಾಕ್ಟ್‌ಚೆಕ್ ಮಾಡಿದ್ದ ‘ಆಲ್ಟ್ ನ್ಯೂಸ್’, ಸಂಬಿತ್ ವಿಡಿಯೊ ತಿರುಚಿದ್ದಾರೆ ಎಂಬದನ್ನು ಪತ್ತೆ ಹಚ್ಚಿತ್ತು. ಅರವಿಂದ ಕೇಜ್ರಿವಾಲ್ ಅವರು ಕೃಷಿ ಕಾಯ್ದೆಗಳ ವಿರುದ್ಧ ಮಾತನಾಡಿದ್ದರೂ, ವಿಡಿಯೊದ ತುಣುಕುಗಳನ್ನು ಕಟ್ ಮಾಡಿ ಪೋಣಿಸಿ, ಕೇಜ್ರಿವಾಲ್ ಕೃಷಿ ಕಾಯ್ದೆಗಳನ್ನು ಬೆಂಬಲಿಸಿದ್ದಾರೆ ಎಂದು ಸಂಬಿತ್ ಬಿಂಬಿಸಿದ್ದರು.
“ಕೇಜ್ರಿವಾಲ್ ವಿರುದ್ಧ ಜನರನ್ನು ಎತ್ತಿಕಟ್ಟಲೆಂದು ಸಂಬಿತ್ ಯತ್ನಿಸಿದ್ದಾರೆ” ಎಂದು ಆತಿಶಿ ಆರೋಪಿಸಿ, ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದು ಅಪರಾಧ ಕೃತ್ಯವಾಗಿದ್ದು, ಪ್ರಕರಣ ದಾಖಲಿಸಬೇಕಾದದ್ದು ಪೊಲೀಸರ ಜವಾಬ್ದಾರಿ ಎಂದು ಅರ್ಜಿಯಲ್ಲಿ ಅವರು ಕೋರಿದ್ದರು.
ಇದನ್ನೂ ಓದಿರಿ: ದೆಹಲಿ ಗಲಭೆ: ಸುಳ್ಳು ಸುದ್ದಿ ಬಿತ್ತರಿಸಿದ್ದ ಟೈಮ್ಸ್ ನೌ, ವಿಡಿಯೋ ಡಿಲೀಟ್ ಮಾಡಲು ಸೂಚನೆ
ಸಂಬಿತ್ ಪಾತ್ರ ಈ ಹಿಂದೆಯೂ ಸುಳ್ಳುಗಳನ್ನು ಹಬ್ಬಿಸಿ ಟೀಕೆಗೆ ಒಳಗಾಗಿದ್ದಾರೆ. ಎಐಸಿಸಿ (ಕಾಂಗ್ರೆಸ್) ಸಂಶೋಧನಾ ವಿಭಾಗದ ನಕಲಿ ಲೆಟರ್‌ಹೆಡ್ ಬಳಸಿ, “ಸುಳ್ಳು ಮತ್ತು ಕಲ್ಪಿತ” ವಿಷಯವನ್ನು ಮುದ್ರಿಸಿ ಅಪಪ್ರಚಾರ ಮಾಡಿದ ಆರೋಪದ ಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ರಮಣ್ ಸಿಂಗ್ ಮತ್ತು ಪಕ್ಷದ ವಕ್ತಾರ ಸಂಬಿತ್ ಪಾತ್ರಾ ವಿರುದ್ಧ ಛತ್ತೀಸಘಡದಲ್ಲಿ ಎಫ್‌ಐಆರ್ ದಾಖಲಾಗಿತ್ತು.
ವೃತ್ತಿಯಲ್ಲಿ ವೈದ್ಯರಾದ ಸಂಬಿತ್ ಪಾತ್ರಾ ಬಿಜೆಪಿಯ ರಾಷ್ಟ್ರೀಯ ವಕ್ತಾರರ ಪೈಕಿ ಹೆಚ್ಚು ಪ್ರಚಾರದಲ್ಲಿರುವ ವ್ಯಕ್ತಿಯಾಗಿದ್ದಾರೆ. ರಾಷ್ಟ್ರೀಯ ಚಾನೆಲ್‌ಗಳ ಚರ್ಚೆಗಳಲ್ಲಿ ಪಕ್ಷದ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುವ ಅವರು, ಪ್ರತಿಪಕ್ಷಗಳ ವಿರುದ್ಧ ಅದರಲ್ಲೂ ಕಾಂಗ್ರೆಸ್ ವಿರುದ್ಧ ದಾಳಿ ನಡೆಸಲು ಕೆಲವೊಮ್ಮೆ ಸತ್ಯ, ಬಹುಪಾಲು ಸಂದರ್ಭಗಳಲ್ಲಿ ಅರೆಸತ್ಯ, ಸುಳ್ಳು ಮತ್ತು ತಿರುಚಲ್ಪಟ್ಟ ಸಂಗತಿಗಳನ್ನು ತಮ್ಮ ಅಸ್ತ್ರಗಳನ್ನಾಗಿ ಬಳಸುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಟ್ವಿಟರ್ ಅವರ ನೆಚ್ಚಿನ ವೇದಿಕೆಯಾಗಿದೆ. ಅವರು ನಾಲ್ಕು ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲು ಅವರು ಟ್ವಿಟರ್ ಬಳಸುತ್ತಾರೆ. ಇವರು ಮಾಡಿದ್ದ ಟೂಲ್‌ಕಿಟ್ ಟ್ವೀಟ್‌ಗೆ ಟ್ವಿಟರ್ ಕಂಪನಿ ’ತಿರುಚಲ್ಪಟ್ಟ ಸಂಗತಿ’ (’ಮ್ಯಾನಿಪುಲೆಟೆಡ್ ಮೀಡಿಯಾ’) ಎಂಬ ಟ್ಯಾಗ್ ಹಾಕಿತ್ತು. ಅವರು ರಾಷ್ಟ್ರೀಯ ಚಾನೆಲ್‌ಗಳಲ್ಲಿ ತಪ್ಪು ಮಾಹಿತಿಯನ್ನು ಉತ್ತೇಜಿಸುತ್ತಿದ್ದಾರೆ, ಟ್ವೀಟ್‌ಗಳಲ್ಲಿ ತಿರುಚಿದ ವಿಡಿಯೋ-ಮಾಹಿತಿ ಹಾಕುತ್ತಾರೆ ಎಂದು ಹಲವಾರು ಫ್ಯಾಕ್ಟ್‌ಚೆಕ್‌ಗಳು ಹಲವಾರು ಸಲ ನಿರೂಪಿಸಿವೆ. ಆದರೂ ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿ ಸಂಬಿತ್ ಮುಂದುವರಿದಿದ್ದಾರೆ.
ಇದನ್ನೂ ಓದಿರಿ: ರೈತರ ಕುರಿತು ಅವಹೇಳನಕಾರಿ ಪೋಸ್ಟ್: ಮುಂಬೈನಲ್ಲಿ ಕಂಗನಾ ವಿರುದ್ಧ FIR


