Homeಮುಖಪುಟಗೌತಮ್ ನವಲಖ ಪ್ರಕರಣ: ಹೈಕೋರ್ಟ್ ಎದುರು ಸುಪ್ರೀಂಕೋರ್ಟ್ ಎತ್ತಿಕಟ್ಟುತ್ತಿರುವ ಸರ್ಕಾರ!

ಗೌತಮ್ ನವಲಖ ಪ್ರಕರಣ: ಹೈಕೋರ್ಟ್ ಎದುರು ಸುಪ್ರೀಂಕೋರ್ಟ್ ಎತ್ತಿಕಟ್ಟುತ್ತಿರುವ ಸರ್ಕಾರ!

- Advertisement -
- Advertisement -

60 ವರ್ಷ ಮೀರಿದವರಿಗೆ ಕೋವಿಡ್ ಅಪಾಯಕಾರಿಯಾಗಿದ್ದರೂ, 68 ವರ್ಷದ ನವಲಖ ಅವರನ್ನು ಅವರ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸದೆಯೇ ತರಾತುರಿಯಲ್ಲಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಮುಂಬಯಿಗೆ ರೈಲಿನಲ್ಲಿ ಸಾಗಿಸಿದುದು ಮತ್ತು ಸುಪ್ರೀಂಕೋರ್ಟ್ ಹೈಕೋರ್ಟಿನ ಆದೇಶವನ್ನು ಪರಿಗಣಿಸದೇ ಇರುವುದು ಆಕ್ಷೇಪಾರ್ಹ ಎಂಬುದು ನವಲಖ ಅವರ ವಕೀಲರುಗಳ ವಾದ.

ಕೃಪೆ: ದಿ ವೈರ್‌

ಸಂಗ್ರಹಾನುವಾದ: ನಿಖಿಲ್ ಕೋಲ್ಪೆ

ಗೌತಮ್ ನವಲಖರ “ಅವಸರದ ವರ್ಗಾವಣೆ”ಯ ವಿವರಗಳನ್ನು ದಿಲ್ಲಿ ಹೈಕೋರ್ಟಿಗೆ ನೀಡಲು ವಿಫಲವಾದ ಎಎನ್‌ಐಗೆ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ!. ಹಿಂದೆಯೇ ಈ ವಿಷಯದ ಕಾರ್ಯವ್ಯಾಪ್ತಿಯ ಪ್ರಶ್ನೆಯನ್ನು ಎತ್ತಲು ವಿಫಲವಾಗಿ, ನಂತರ ತಾನು ಈ ವಿಷಯವನ್ನು ನಿಭಾಯಿಸಿದ ಕುರಿತು ಅಫಿಡವಿಟ್ ಸಲ್ಲಿಸುವುದಾಗಿ ಹೇಳಿದ್ದ ಸರಕಾರವೀಗ ದಿಲ್ಲಿ ಹೈಕೋರ್ಟಿನ ಏಕ ಸದಸ್ಯ ಪೀಠಕ್ಕೆ ಎನ್ಐಎ ಕಾಯಿದೆಯನ್ವಯ ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ನಡೆಸಲು ಕಾರ್ಯವ್ಯಾಪ್ತಿಯಿಲ್ಲವೆಂದು ವಾದಿಸುತ್ತಿದೆ.

ಒಂದು ಸಾಂವಿಧಾನಿಕ ನ್ಯಾಯಾಲಯವನ್ನು ಇನ್ನೊಂದು ಸಾಂವಿಧಾನಿಕ ನ್ಯಾಯಾಲಯದ ಎದುರು ಎತ್ತಿಕಟ್ಟುವ ಕ್ರಮವೊಂದರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಿಲ್ಲಿ ಹೈಕೋರ್ಟಿನ ನ್ಯಾಯಮೂರ್ತಿ ಅನೂಪ್ ಭಂಭಾನಿ ಅವರ ಏಕಸದಸ್ಯ ಪೀಠದ ನಿರ್ದೇಶನವನ್ನು ಪಾಲಿಸುವುದಕ್ಕೆ ಬದಲಾಗಿ ಅವಸರವಸರದಲ್ಲಿ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟಿನ ಮೊರೆಹೋಗಲು ನಿರ್ಧರಿಸಿತು. ಗೌತಮ್ ನವಲಖ ಅವರನ್ನು ತರಾತುರಿಯಲ್ಲಿ ಮುಂಬಯಿಗೆ ವರ್ಗಾಯಿಸಿದ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ನೀಡುವಂತೆ ಈ ಪೀಠ ಎನ್‌ಐಎಗೆ ನಿರ್ದೇಶನ ನೀಡಿತ್ತು.

ಪ್ರಸಿದ್ಧ ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖ ಅವರನ್ನು ಅವರ ಮಧ್ಯಂತರ ಜಾಮೀನು ಅರ್ಜಿ ಇನ್ನೂ ದಿಲ್ಲಿ ಹೈಕೋರ್ಟಿನಲ್ಲಿ ವಿಚಾರಣೆಗೆ ಬಾಕಿ ಇರುವಾಗಲೇ ಮೇ 25ರಂದು ಕೇವಲ ಐದು ನಿಮಿಷಗಳ ಅವಧಿಯಲ್ಲಿ ಮುಂಬಯಿಗೆ ಹೋಗುವ ರೈಲಿನಲ್ಲಿ ಕುಳ್ಳಿರಿಸಲಾಗಿತ್ತು.

ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ಜೂನ್ 2ರಂದು ಆರೋಪಿಯ ಅನುಪಸ್ಥಿತಿಯಲ್ಲಿ ನಡೆಸಿದ ವಿಚಾರಣೆಯಲ್ಲಿ- ದಿಲ್ಲಿ ಹೈಕೋರ್ಟಿಗೆ ಈ ವಿಷಯದಲ್ಲಿ ಕಾರ್ಯವ್ಯಾಪ್ತಿಯಿಲ್ಲವೆಂಬ ಎನ್ಐಎಯ ವಾದವನ್ನು ಜೂನ್ ಮಧ್ಯ ಭಾಗದಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿದೆ.

ವಿಶೇಷವೆಂದರೆ ಸುಪ್ರೀಂಕೋರ್ಟ್ ದಾಖಲೆ ಪುಸ್ತಕದಲ್ಲಿ ದಾಖಲೆ ಅವಧಿಯಲ್ಲಿ ನಮೂದಾಗಿದ್ದರೂ ಎನ್‌ಐಎಯ ವಿಶೇಷ ತೆರವು ಅರ್ಜಿಯ ಪ್ರತಿಯನ್ನು ನವಲಖ ಅವರ ವಕೀಲರಿಗೆ ನೀಡಲಾಗಿಲ್ಲ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನವಲಖ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಎಪ್ರಿಲ್ 14ರಂದು ಎನ್‌ಐಎಯು ಕರಾಳ ಕಾನೂನುಬಾಹಿರ ಕೃತ್ಯ (ತಡೆ) ಕಾಯಿದೆಯನ್ವಯ ದಿಲ್ಲಿಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡಿತ್ತು.

ಎನ್‌ಐಎಯ ಮುಂಬಯಿ ಕಚೇರಿಯು ಈ ಪ್ರಕರಣದ ತನಿಖೆ ನಡೆಸುತ್ತಿರುವುದರಿಂದ ಕೋವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಗೆ ಸಾಗಿಸುವ ಬದಲು ದಿಲ್ಲಿಯ ತಿಹಾರ್ ಜೈಲಿನಲ್ಲಿ ತಾತ್ಕಾಲಿಕವಾಗಿ, ಆದರೆ ಅನಿರ್ದಿಷ್ಟಾವಧಿಗೆ ಇರಿಸಲಾಗಿತ್ತು.

ಮುಂಬಯಿಯಲ್ಲಿ ಕೊರೋನ ಪ್ರಕರಣಗಳು ವ್ಯಾಪಕವಾಗಿ ಹಬ್ಬಿರುವ ಮತ್ತು ಅಲ್ಲಿನ ಜೈಲುಗಳಲ್ಲಿಯೂ ಸೋಂಕಿತರು ಇರುವ ಕಾರಣದಿಂದ 68 ವರ್ಷ ಪ್ರಾಯದ ನವಲಖ ಅವರ ವೈದ್ಯಕೀಯ ಪರಿಸ್ಥಿತಿ ಮತ್ತು ಅವರು ಎದುರಿಸಬೇಕಾಗಿ ಬರಬಹುದಾದ ಸಂಕೀರ್ಣತೆಗಳ ಹಿನ್ನೆಲೆಯಲ್ಲಿ ಅವರ ವಕೀಲರು ಮಧ್ಯಂತರ ಜಾಮೀನು ಕೋರಿ ದಿಲ್ಲಿ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

ಯುಎಪಿಎ ಮತ್ತು ಎನ್‌ಐಎ ಕಾಯಿದೆ ಪ್ರಕಾರ ಸಾಮಾನ್ಯವಾಗಿ ಜಾಮೀನು ಅರ್ಜಿಯ ವಿಚಾರಣೆಯನ್ನು ನಿಯೋಜಿತ ವಿಶೇಷ ನ್ಯಾಯಾಲಯ ನಡೆಸಬೇಕಾಗಿದ್ದರೂ, ದಿಲ್ಲಿಯಲ್ಲಿ ಯಾವುದೇ ಎನ್ಐಎ ವಿಶೇಷ ನ್ಯಾಯಾಲಯ ಕಾರ್ಯಾಚರಿಸದೇ ಇರುವುದರಿಂದ ಮತ್ತು ನವಲಖ ಅವರ ರಿಮಾಂಡ್ ವಿಷಯವನ್ನು ಕೂಡಾ ಸಾಮಾನ್ಯ ನ್ಯಾಯಾಲಯವೇ ನಡೆಸಿರುವುದರಿಂದ ಹೈಕೋರ್ಟ್ ಮಾತ್ರ ಅವರಿಗೆ ಉಳಿದಿರುವ ಏಕೈಕ ದಾರಿಯಾಗಿತ್ತು.

ಹೈಕೋರ್ಟ್ ವ್ಯಾಪ್ತಿಯನ್ನು ಎನ್‌ಐಎ ಒಪ್ಪಿತ್ತು

ಮಧ್ಯಂತರ ಜಾಮೀನು ಅರ್ಜಿಯ ವಿಚಾರಣೆ ಮೇ 22ರಂದು ನಡೆದಾಗ ಎನ್‌ಐಎಯು ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲ್ಲ ಮತ್ತು ಉತ್ತರ ನೀಡಲು ಸಮಯಾವಕಾಶ ಕೇಳಿತ್ತು. ಅದರಂತೆ ಮುಂದಿನ ವಿಚಾರಣೆ ನಡೆಯುವ ಮೇ 27ರ ತನಕ ಸಮಯಾವಕಾಶ ನೀಡಲಾಗಿತ್ತು. ವಿಮಾನಯಾನ ಆರಂಭವಾಗುವ ಹಿನ್ನೆಲೆಯಲ್ಲಿ ಎನ್‌ಐಎಯು ನವಲಖ ಅವರನ್ನು ಮುಂಬಯಿಗೆ ವರ್ಗಾಯಿಸುವ ಉದ್ದೇಶ ಹೊಂದಿದೆ ಎಂದು ಮನಗಂಡ ಹೈಕೋರ್ಟ್, ಸೂಕ್ತ ನ್ಯಾಯಾಲಯದಿಂದ ಆದೇಶ ಪಡೆದ ಮೇಲೆಯೇ ಹಾಗೆ ಮಾಡಬೇಕೆಂದು ನಿರ್ದೇಶಿಸಿತ್ತು.

ಆದರೂ ಮೇ 25ರಂದು ಎನ್‌ಐಎಯು ಅವರನ್ನು ರೈಲಿನಲ್ಲಿ ಮುಂಬಯಿಗೆ ಕೊಂಡೊಯ್ದು, ಮರುದಿನ ಅಲ್ಲಿನ ಎನ್‌ಐಎ ನ್ಯಾಯಾಲಯದಿಂದ ನ್ಯಾಯಾಂಗ ವಶದ ಆದೇಶ ಪಡೆಯಿತು. ಅಂದಿನಿಂದ ಅವರು ಮುಂಬಯಿಯ ಪೂರ್ವ ಭಾಗದಲ್ಲಿರುವ ತಲೋಜ ಜೈಲಿನಲ್ಲಿ ಇದ್ದಾರೆ.

ನವಲಖ ಅವರನ್ನು ಮುಂಬಯಿಗೆ ಕೊಂಡೊಯ್ದ ತರಾತುರಿಯ ಕ್ರಮದಿಂದ ಕಿರಿಕಿರಿಗೆ ಒಳಗಾದ ದಿಲ್ಲಿ ಹೈಕೋರ್ಟ್, ವರ್ಗಾವಣೆಯ ಸಂಪೂರ್ಣ ದಾಖಲೆ ಮತ್ತು ಮುಂಬಯಿಯ ಎನ್‌ಐಎ ನ್ಯಾಯಾಲಯ ನೀಡಿದ ವಾರಂಟ್ ಮಾತ್ರವಲ್ಲ, ದಿಲ್ಲಿಯ ಎನ್ಐಎ ನ್ಯಾಯಾಲಯ ನೀಡಿದ ವರ್ಗಾವಣೆ ಆದೇಶ ಮತ್ತು ಈ ನ್ಯಾಯಾಲಯಗಳಿಗೆ ಅವರ ವೈದ್ಯಕೀಯ ಪರಿಸ್ಥಿತಿಯ ಬಗ್ಗೆ ವರದಿ ಸಲ್ಲಿಸಲಾಗಿದೆಯೇ ಎಂಬ ಮಾಹಿತಿ ಸಲ್ಲಿಸುವಂತೆ ಆದೇಶಿಸಿತ್ತು.

ಇದಕ್ಕೆ ಜೂನ್ 3ರ ದಿನವನ್ನು ಹೈಕೋರ್ಟ್ ನಿಗದಿಪಡಿಸಿತ್ತು. ಆದರೆ, ಎನ್‌ಐಎಯು ಜೂನ್ 2ರಂದೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೂಲಕ ದಿಲ್ಲಿ ಹೈಕೋರ್ಟಿನ ಪೀಠದ ವಿಚಾರಣೆಗೆ ತಡೆಯಾಜ್ಞೆ ಪಡೆಯಿತು. ಸುಪ್ರೀಂಕೋರ್ಟಿನ ಈ ತಡೆಯಾಜ್ಞೆಯು ದಿಲ್ಲಿ ಹೈಕೋರ್ಟ್ ತನ್ನ ಕಾರ್ಯವ್ಯಾಪ್ತಿಯ ಅಧೀನ ನ್ಯಾಯಾಲಯಗಳ ಮೇಲೆ ಹೊಂದಿರುವ ಅಧಿಕಾರವನ್ನೇ ಪ್ರಶ್ನಿಸಿರುವುದರಿಂದ ಕಾನೂನು ವಲಯದಲ್ಲಿ ಅನೇಕರ ಹುಬ್ಬುಗಳನ್ನು ಮೇಲೇರಿಸಿದೆ!

“ಭಾರತೀಯ ಸಂವಿಧಾನದ ಪ್ರಕಾರ ಹೈಕೋರ್ಟ್‌ಗಳೂ ಸಾಂವಿಧಾನಿಕ ನ್ಯಾಯಾಲಯಗಳಾಗಿದ್ದು, ಅವುಗಳ ಆಜ್ಞೆಗಳನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುವಾಗ ಎರಡೂ ಕೋರ್ಟ್‌ಗಳು ಒಂದು ಸ್ಥಾನಮಾನ ಹೊಂದಿರುತ್ತವೆ ಮತ್ತು ಯಾವುದೇ ರೀತಿಯಲ್ಲಿ ಹೈಕೋರ್ಟ್‌ಗಳು ಸುಪ್ರೀಂಕೋರ್ಟ್‌ಗಿಂತ ಕೆಳಗೆ ಇಲ್ಲ. ತನ್ನ ಅಧೀನ ನ್ಯಾಯಾಲಯವು ಕಾನೂನು ನಿಯಮಗಳನ್ನು ಪಾಲಿಸಿದೆಯೇ, ಇಲ್ಲವೇ ಎಂದು ವಿಚಾರಿಸುವುದರಿಂದ ಹೈಕೋರ್ಟನ್ನು ತಡೆಯುವಂತಿಲ್ಲ” ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ವಕೀಲರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

60 ವರ್ಷ ಮೀರಿದವರಿಗೆ ಕೋವಿಡ್ ಅಪಾಯಕಾರಿಯಾಗಿದ್ದರೂ, 68 ವರ್ಷದ ನವಲಖ ಅವರನ್ನು ಅವರ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸದೆಯೇ ತರಾತುರಿಯಲ್ಲಿ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿ ಮುಂಬಯಿಗೆ ರೈಲಿನಲ್ಲಿ ಸಾಗಿಸಿದುದು ಮತ್ತು ಸುಪ್ರೀಂಕೋರ್ಟ್ ಹೈಕೋರ್ಟಿನ ಆದೇಶವನ್ನು ಪರಿಗಣಿಸದೇ ಇರುವುದು ಆಕ್ಷೇಪಾರ್ಹ ಎಂಬುದು ನವಲಖ ಅವರ ವಕೀಲರುಗಳ ವಾದ.


ಓದಿ: ರಾಷ್ಟ್ರೀಯ ತನಿಖಾ ಸಂಸ್ಥೆಯ ಮುಂದೆ ಶರಣಾದ ಹೋರಾಟಗಾರರಾದ ತೇಲ್ತುಂಬ್ಡೆ ಹಾಗೂ ನವಲಖ


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...