ರಾಜಸ್ಥಾನ ವಿಧಾನಸಭಾ ಸ್ಪೀಕರ್ ಅವರು ನೀಡಿರುವ ಅನರ್ಹತೆ ನೋಟಿಸ್‌ಗಳನ್ನು ಪ್ರಶ್ನಿಸಿ ಸಚಿನ್ ಪೈಲಟ್ ಮತ್ತು ಇತರ 18 ಭಿನ್ನಮತೀಯ ಕಾಂಗ್ರೆಸ್ ಶಾಸಕರು ಸಲ್ಲಿಸಿದ್ದ ರಿಟ್ ಅರ್ಜಿಯ ಕುರಿತು ಜುಲೈ 24ರಂದು ತೀರ್ಪು ಪ್ರಕಟಿಸುವುದಾಗಿ ರಾಜಸ್ಥಾನ ಹೈಕೋರ್ಟ್ ತಿಳಿಸಿದೆ. ಅಲ್ಲಿಯವರೆಗೆ ಶಾಸಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಸ್ಪೀಕರ್‌ಗೆ ಸೂಚಿಸಲಾಗಿದೆ.
ಕಳೆದ ವಾರ ನಡೆದ ಎರಡು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗಳಲ್ಲಿ ಪಾಲ್ಗೊಳ್ಳಲು ಶಾಸಕರು ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಸ್ಪೀಕರ್ ಸಿಪಿ ಜೋಶಿಗೆ ದೂರು ನೀಡಿದ ನಂತರ ಶಾಸಕರಿಗೆ ಅನರ್ಹತೆ ನೀಡಲಾಗಿತ್ತು.
ಸಂವಿಧಾನದ 10 ನೇ ಶೆಡ್ಯೂಲ್‌ನಡಿ ಪೈಲಟ್ ಮತ್ತು ಅವರನ್ನು ಬೆಂಬಲಿಸುವ ಶಾಸಕರ ವಿರುದ್ಧ ಕಾಂಗ್ರೆಸ್ ಕ್ರಮಕೈಗೊಂಡಿದೆ ಎಂದು ಸ್ಪೀಕರ್‌ಗೆ ನೀಡಿದ ದೂರಿನಲ್ಲಿ ತಿಳಿಸಿದೆ. ಆದರೂ ವಿಧಾನಸಭಾ ಅಧಿವೇಶನದಲ್ಲಿದ್ದಾಗ ಮಾತ್ರ ಪಕ್ಷದ ವಿಪ್ ಅನ್ವಯಿಸುತ್ತದೆ ಎಂದು ಪೈಲಟ್ ಬಣ ವಾದಿಸಿತ್ತು.
ಬಂಡೆಯಂತೆ ಬೆನ್ನಿಗೆ ನಿಲ್ಲಿ – ಗೆಹ್ಲೋಟ್
ಇನ್ನೊಂದೆಡೆ ಮೂರನೇ ಶಾಸಕಾಂಗ ಪಕ್ಷದ ಸಭೆ ನಡೆಸಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮನ್ನು ಬೆಂಬಲಿಸುವ ಶಾಸಕರು “ಬಂಡೆಯಂತೆ ದೃಢವಾಗಿ ಬೆನ್ನಿಗೆ ನಿಲ್ಲುವಂತೆ” ಮನವಿ ಮಾಡಿದ್ದಾರೆ.
ಕಳೆದ ವಾರದಿಂದ ಅವರ ಬೆಂಬಲಿಗರು ತಂಗಿದ್ದ ಐಷಾರಾಮಿ ಹೋಟೆಲ್ ಫೇರ್‌ಮಾಂಟ್ ಜೈಪುರದಲ್ಲಿ ಗೆಹ್ಲೋಟ್ 100 ಕ್ಕೂ ಹೆಚ್ಚು ಶಾಸಕಾಂಗ ಸಭೆಯ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.
“ನಾವು 115 ಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದೇವೆ, ಕೆಲವರು ಗೈರುಹಾಜರಾಗಿದ್ದಾರೆ ಅಷ್ಟೇ. ಕಾಂಗ್ರೆಸ್ ಆಗಿರಲಿ ಅಥವಾ ಬಿಜೆಪಿ ಆಗಿರಲಿ ಚುನಾವಣೆಗಳು ನಡೆಯಬೇಕೆಂದು ಯಾರೂ ಬಯಸುವುದಿಲ್ಲ” ಎಂದು ಗೆಹ್ಲೋಟ್ ಹೇಳಿದ್ದಾರೆ.
ಇದನ್ನೂ ಓದಿ: ಮಗುವಿನ ಮುಖದ ನಿಷ್ಪ್ರಯೋಜಕ : ಸಚಿನ್ ಪೈಲಟ್ ವಿರುದ್ಧ ಗೆಹ್ಲೋಟ್ ವಾಗ್ದಾಳಿ
ಬಿಜೆಪಿ ಸೇರಲು ಸಚಿನ್ ಪೈಲಟ್‌ರಿಂದ 35 ಕೋಟಿ ರೂ ಆಮಿಷ: ಕಾಂಗ್ರೆಸ್ ಶಾಸಕನ ಆರೋಪ


