ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆಯಂತಹ ದುಷ್ಕೃತ್ಯಗಳನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರವು SOP (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್)ಗಳನ್ನು ಕರಡು ಮಾಡಲು ಸಮಿತಿ ರಚನೆಗೆ ನಿರ್ಧರಿಸಿದೆ ಎಂದು ವರದಿಯಾಗಿದೆ. ರಾಜ್ಯದಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷೆಯ ವೇಳೆ ನಕಲು ಮಾಡುವ ದುಷ್ಕೃತ್ಯಕ್ಕೆ ಸಂಬಂಧಿಸಿ ಆತ್ಮಹತ್ಯೆ ಘಟನೆಗಳು ನಡೆದ ಕಾರಣಕ್ಕೆ ಸರ್ಕಾರ ಈ ನಿರ್ಧಾಕ್ಕೆ ಮುಂದಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಶೇಷವಾಗಿ ಪಿಇಎಸ್ ವಿಶ್ವವಿದ್ಯಾಲಯದ 19 ವರ್ಷದ ಬಿ ಟೆಕ್ ವಿದ್ಯಾರ್ಥಿ, ಆದಿತ್ಯ ಪ್ರಭು ಅವರ ಸಾವಿನ ಹಿನ್ನಲೆ ಈ ನಿರ್ಧಾರ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಜುಲೈ 2023 ರಲ್ಲಿ ನಡೆದ ಸೆಮಿಸ್ಟರ್ ಪರೀಕ್ಷೆಯ ವೇಳೆ ಆದಿತ್ಯ ಪ್ರಭು “ನಕಲು” ಮಾಡುವ ವೇಳೆ ಸಿಕ್ಕಿಬಿದ್ದಿದ್ದು, ನಂತರ ಕಾಲೇಜಿನ ಕಟ್ಟಡದಿಂದ ಹಾರಿ ಜೀವ ಕಳೆದುಕೊಂಡಿದ್ದರು. ಅವರ ಪೋಷಕರು ಕಾಲೇಜಿನ ಮ್ಯಾನೇಜ್‌ಮೆಂಟ್ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದು, ವಿದ್ಯಾರ್ಥಿಗೆ ಮಾನಸಿಕ ಕಿರುಕುಳ ನೀಡಲಾಗಿತ್ತು ಎಂಬ ಆರೋಪವನ್ನು ಮಾಡಿದ್ದರು.
ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, SOP ಕರಡು ಸಮಿತಿಯಲ್ಲಿ ಮನಶ್ಶಾಸ್ತ್ರಜ್ಞರು ಮತ್ತು ಉಪಕುಲಪತಿಗಳು ಇರುತ್ತಾರೆ. ಅವರು ಖಾಸಗಿ ಸಂಸ್ಥೆಗಳು ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳು ಸೇರಿದಂತೆ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುವ ಎಸ್‌ಒಪಿಗಳ ಕರಡನ್ನು ರಚಿಸುತ್ತಾರೆ ಎಂದು ಹೇಳಿದ್ದಾರೆ.
“ಎಸ್‌ಒಪಿಗಳನ್ನು ಮಾನವೀಯತೆಯ ಆಧಾರದ ಮೇಲೆ ರಚಿಸಲಾಗುವುದು ಮತ್ತು ವಿದ್ಯಾರ್ಥಿಗಳು ದುಷ್ಕೃತ್ಯದ ಸಮಯದಲ್ಲಿ ಸಿಕ್ಕಿಬಿದ್ದಾಗ ಅವರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದರ ಕುರಿತು ನಿರ್ವಹಣೆಗೆ ಮಾರ್ಗದರ್ಶನ ನೀಡುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಆತ್ಮಹತ್ಯೆ ಪ್ರವೃತ್ತಿಯನ್ನು ಹೊಂದಿರುವುದಿಲ್ಲ. ನಕಲು ನಡೆದಿದೆಯೇ ಎಂಬುದನ್ನು ಮೊದಲು ತನಿಖೆ ಮಾಡುವುದು ಮೂಲಭೂತ ವಿಷಯ. ತನಿಖೆ ವೇಳೆ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು” ಎಂದು ಸುಧಾಕರ್ ಹೇಳಿದ್ದಾರೆ.
“ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ರೀತಿಯಲ್ಲಿ SOP ಗಳನ್ನು ರಚಿಸಲಾಗುವುದು. ಅವರಿಗೆ ಬೆದರಿಕೆ ಇರುವಂತೆ ಇರಬಾರದು. ಇದು ವಿದ್ಯಾರ್ಥಿಗಳಲ್ಲಿ ನೆಮ್ಮದಿಯ ಭಾವನೆ ಮೂಡಿಸಬೇಕು” ಎಂದು ಸಚಿವ ತಿಳಿಸಿದರು.
ಆದಿತ್ಯ ಪ್ರಭು ಅವರ ಸಾವಿನ ನಂತರ ರಾಜ್ಯ ಸರ್ಕಾರ ರಚಿಸಿದ್ದ 11 ಸದಸ್ಯರ ತಜ್ಞರ ಸಮಿತಿಯ ವರದಿಯನ್ನು ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಪರಿಗಣಿಸಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಜಯಕರ್ ಎಸ್.ಎಂ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ವರದಿಯು ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಸರಣಿ ಬದಲಾವಣೆಗಳನ್ನು ಶಿಫಾರಸು ಮಾಡಿದೆ.
ವಿಡಿಯೊ ನೋಡಿ: ‘ಭ್ರಷ್ಟಾಚಾರವನ್ನು ನಾವು ಮರು ವ್ಯಾಖ್ಯಾನಿಸಬೇಕಾಗಿದೆ’ : ವಿ ಎಲ್ ನರಸಿಂಹಮೂರ್ತಿ


