Homeಕರ್ನಾಟಕಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ವಿಚಾರಣೆ ಗುರುವಾರಕ್ಕೆ ಮುಂದೂಡಿದ ನ್ಯಾಯಾಲಯ

- Advertisement -
- Advertisement -

ಹಿಜಾಬ್‌ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಜೆಎಂ ಖಾಜಿ ಅವರನ್ನೊಳಗೊಂಡ ಪೂರ್ಣ ಪೀಠ ಬುಧವಾರದಂದು ವಿಚಾರಣೆಯನ್ನು ಮುಂದುವರೆಸಿದೆ. ಸೋಮವಾರದಂದು ಮಧ್ಯಂತರ ಆದೇಶವನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಲ್ಲಿಸಿದ್ದ ಅಫಿಡವಿಟ್‌ ಅನ್ನು ನ್ಯಾಯಾಲಯ ನಿರಾಕರಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಾದ ಮಂಡಿಸಿದ ಹಿರಿಯ ವಕೀಲ ರವಿವರ್ಮ ಕುಮಾರ್, ಬುಧವಾರದಿಂದ ಕಾಲೇಜುಗಳು ಪುನರಾರಂಭವಾಗುತ್ತಿದ್ದು, ಮಧ್ಯಂತರ ಆದೇಶಕ್ಕೆ ಸ್ಪಷ್ಟನೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಬೇಕು ಎಂದು ತಿಳಿಸಿದ್ದರು. ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ ನಾವಡಗಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, “ಅರ್ಜಿ ದೋಷಪೂರಿತವಾಗಿದೆ. ಇದು ಕಕ್ಷಿದಾರರಿಂದ ಬಂದ ಅಫಿಡವಿಟ್ ಅಲ್ಲ. ಅದನ್ನು ವಕೀಲರೇ ಸ್ವತಃ ದಾಖಲಿಸಿದ್ದಾರೆ. ಸರ್ಕಾರ ಸರಿಯಾದ ಅರ್ಜಿಗೆ ಮಾತ್ರ ಪ್ರತಿಕ್ರಿಯಿಸುತ್ತದೆ. ‘ಅಸ್ಪಷ್ಟ ಅಫಿಡವಿಟ್’ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಸರ್ಕಾರದ ವಾದವನ್ನು ಒಪ್ಪಿಕೊಂಡ ನ್ಯಾಯ ಪೀಠವು ಅಫಿಡವಿಟ್ ಅನ್ನು ಅಸಮರ್ಪಕ ಎಂದು ತಿರಸ್ಕೃತಗೊಳಿಸಿತ್ತು.

ಬುಧವಾರ ವಿಚಾರಣೆ ಪ್ರಾರಂಭಿಸಿದ ನ್ಯಾಯಾಲಯ

ಮಂಗಳವಾರ ಹಿರಿಯ ವಕೀಲ ದೇವದತ್‌ ಕಾಮತ್‌ ಅವರು ತನ್ನ ವಾದ ಪೂರ್ಣಗೊಳಿಸಿದ್ದು, ಇಂದು ಮತ್ತೊಬ್ಬ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ವಾದ ಮುಂದುವರಿಸಲಿದ್ದಾರೆ.

  • ವಕೀಲ ಕಲೀಶ್ವರಂ ರಾಜ್‌: ಗೊಂದಲಗಳನ್ನು ನಿಯಂತ್ರಿಸಲು ಪ್ರತಿ ವಕೀಲರಿಗೆ ನಿರ್ದಿಷ್ಟ ಸಮಯ ನಿಗದಿಪಡಿಸುವುದು ಉತ್ತಮ.
  • ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ ಇದಕ್ಕೆ ಸಹಮತ ವ್ಯಕ್ತಪಡಿಸುತ್ತಾರೆ.
  • ಮುಖ್ಯನ್ಯಾಯಮೂರ್ತಿ ಅವಸ್ಥಿ: ಮಧ್ಯಪ್ರವೇಶದ ಮೂಲಕ ಮನವಿಗಳನ್ನು ಆಲಿಸುವುದರಿಂದ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ.
  • ವಕೀಲ ಶಾದನ್‌ ಫರಾಸತ್‌: ಸಮಯ ನಿಗದಿಪಡಿಸಿ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ, ನಮ್ಮೆಲ್ಲರ ವಾದವನ್ನೂ ಆಲಿಸಿ. ನಮ್ಮನ್ನು ವಾದದಿಂದ ಹೊರಗಿಡಬೇಡಿ.
  • ತನ್ನ ವಾದ ಮಂಡನೆ ಪ್ರಾರಂಭಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌
  • ರವಿವರ್ಮ ಕುಮಾರ್‌: ಕರ್ನಾಟಕ ಶಿಕ್ಷಣ ನಿಯಮಗಳು 1995ರಲ್ಲಿನ ನಿಯಮ 11 ಅನ್ನು ನೋಡಿ. ಈ ನಿಯಮದ ಪ್ರಕಾರ ಶಿಕ್ಷಣ ಸಂಸ್ಥೆ ತನ್ನ ಸಮವಸ್ತ್ರ ಬದಲಿಸಬೇಕಾದರೆ ಆ ಸಂಸ್ಥೆಯು ಒಂದು ವರ್ಷ ಮುಂಚಿತವಾಗಿ ನೋಟಿಸ್‌ ನೀಡಬೇಕು. ಕರ್ನಾಟಕ ಶಿಕ್ಷಣ ಕಾಯಿದೆ ಅಡಿ ಇನ್ನೊಂದು ರೂಪದಲ್ಲಿ ನಿಯಮಗಳನ್ನು ರೂಪಿಸಲಾಗಿದೆ.
  • ಪರಿಶೀಲನಾ ಸಮಿತಿಯ ನಿಯಮಗಳ ಉಲ್ಲೇಖಿಸಿದ ರವಿವರ್ಮ ಕುಮಾರ್‌ ಅವರು, ಈ ನಿಯಮಗಳ ಅಡಿಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಗೆ ಮಾನ್ಯತೆ ಇಲ್ಲ. ಆಕ್ಷೇಪಾರ್ಹ ಸಂಸ್ಥೆಯನ್ನು ನಿರ್ವಹಿಸುವ ಸರ್ಕಾರಿ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಪದವಿ ಪೂರ್ವ ಸರ್ಕಾರಿ ಕಾಲೇಜುಗಳಿಗೆ ಸಮವಸ್ತ್ರ ಸೂಚಿಸುವುದು ಕಾನೂನುಬಾಹಿರವಾಗಿದೆ.
  • ಮುಖ್ಯ ನ್ಯಾಯಮೂರ್ತಿ: ಈ ಮಾರ್ಗಸೂಚಿಯನ್ನು ಯಾವ ಅಧಿಕಾರದಿಂದ ಹೊರಡಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿಲ್ಲ.
  • ರವಿವರ್ಮ ಕುಮಾರ್‌: ಇದನ್ನು ಸರ್ಕಾರದ ಇಲಾಖೆ ಹೊರಡಿಸಿದೆ.
  • ಮುಖ್ಯನ್ಯಾಯಮೂರ್ತಿ: ಇದು ನಿಯಮವಲ್ಲ.
  • ರವಿವರ್ಮ ಕುಮಾರ್‌: ಇದು ನಿಯಮವಲ್ಲ ಎಂಬುದಕ್ಕೆ ನನ್ನ ಸಹಮತವಿದೆ. ಆದರೆ, ಸಮವಸ್ತ್ರ ನಿಗದಿ ಮಾಡಿಲ್ಲ ಎಂಬುದು ವಾಸ್ತವಿಕ ಹೇಳಿಕೆಯಾಗಿದೆ.
  • ಯಮೂರ್ತಿ ದೀಕ್ಷಿತ್‌: ನೀವು ಇದನ್ನು ಆಧರಿಸಿ ವಾದಿಸುತ್ತಿದ್ದೀರಿ. ಇದನ್ನು ನೀವು ಆಧರಿಸುವುದಾದರೆ ಅದರ ಕಾನೂನು ಸ್ಥಿತಿಗತಿ ತಿಳಿಯಲು ನಾವು ಬಯಸುತ್ತೇವೆ.
  • ರವಿವರ್ಮ: ಈ ದಾಖಲೆಯಲ್ಲಿ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ಇಲ್ಲಿ ಶೈಕ್ಷಣಿಕ ವರ್ಷ, ಪ್ರತಿ ಕೋರ್ಸ್‌ಗೆ ಪ್ರವೇಶಾತಿ ಹೇಗೆ ನೀಡಬೇಕು ಎಂಬುದು ಇದೆ. ಯಾವುದೇ ಪ್ರಾಂಶುಪಾಲರು ಸಮವಸ್ತ್ರವನ್ನು ರೂಪಿಸಬಾರದು, ಒಂದು ವೇಳೆ ಪ್ರಾಂಶುಪಾಲರು ಸಮವಸ್ತ್ರಕ್ಕೆ ಒತ್ತಾಯಿಸಿದರೆ ಅವರ ವಿರುದ್ಧ ಕ್ರಮಕೈಗೊಳ್ಳಬಹುದು ಎಂದು ಸ್ವತಃ ಇಲಾಖೆಯೆ ಖಡಾಖಂಡಿತವಾಗಿ ಹೇಳಿದೆ. ಇದರ ಬಗ್ಗೆ ದಾಖಲೆ ನಾನು ಸಲ್ಲಿಸುತ್ತಿದ್ದೇನೆ. ಆದರೆ ಈಗ ಹಿಜಾಬ್‌ ಧರಿಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮವಹಿಸಲಾಗುತ್ತಿದೆ.
  • ರವಿವರ್ಮ: ಕಾಯಿದೆಯ ನಿಬಂಧನೆ ಅಥವಾ ಯಾವುದೇ ನಿಯಮದ ಅಡಿ ಯಾವುದೇ ಸಮವಸ್ತ್ರ ಉಲ್ಲೇಖಿಸಿಲ್ಲ. ಕಾಯಿದೆ ಅಥವಾ ನಿಯಮಗಳ ಅಡಿ ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಲಾಗಿಲ್ಲ.
  • ನ್ಯಾಯಮೂರ್ತಿ ದೀಕ್ಷಿತ್‌: ನಾನು ಅದನ್ನು ತಾರ್ಕಿಕವಾಗಿ ವಿಶ್ಲೇಷಿಸಲು ಪ್ರಯತ್ನಿಸುತ್ತಿದ್ದೇನೆ. ಹಾಗೆಂದು ಯಾವುದೇ ನಿಷೇಧವಿಲ್ಲ. ತಾರ್ಕಿಕವಾಗಿ ಅದನ್ನು ವಿಶ್ಲೇಷಿಸಿದರೆ – ಕೃಪಾನ್ ಒಯ್ಯಲು ಅಥವಾ ಆಕ್ಷೇಪಾರ್ಹವಾದ ಯಾವುದಕ್ಕೂ ಯಾವುದೇ ನಿಷೇಧವಿಲ್ಲ. ಏಕೆಂದರೆ, ಇವುಗಳು ಕಾಯಿದೆಯ ಬಗ್ಗೆ ಮಾತನಾಡುವುದಿಲ್ಲ ಎಂದರೆ ಅದನ್ನು ಅನುಮತಿಸಬಹುದು ಎಂದರ್ಥವಲ್ಲ. ಹಿಜಾಬ್ ಅನ್ನು ಅನುಮತಿಸಬೇಕು ಅಥವಾ ಅನುಮತಿಸಬಾರದು ಎಂದು ಅದು ಹೇಳುವುದಿಲ್ಲ ನಿಜ. ಆದರೆ, ಅದನ್ನು ಸ್ವತಂತ್ರವಾಗಿ ವಾದಿಸಬೇಕು.
  • ರವಿವರ್ಮ ಕುಮಾರ್‌: ಹಿಜಾಬ್‌ ನಿಷೇಧಿಸಿಲ್ಲ ಎಂದಷ್ಟೇ ನಾನು ಹೇಳುತ್ತಿದ್ದೇನೆ. ಹೀಗಾಗಿ, ಕಾನೂನಿನ ಯಾವ ನಿಯಮದಡಿ ನನ್ನನ್ನು ತರಗತಿಯಿಂದ ಹೊರಗಿಡಲಾಗಿದೆ? ಇದಕ್ಕೆ ಅನುಮತಿಸಿದವರು ಯಾರು?
  • ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಿಜಾಬ್‌ ಉಲ್ಲೇಖಿಸಿರುವ ಸರ್ಕಾರದ ಭಾಗಶಃ ಆದೇಶವನ್ನು ಉಲ್ಲೇಖಿಸಿ, “ಅಂತಿಮವಾಗಿ ಸರ್ಕಾರ ಹೊರಡಿಸಿದ ಆದೇಶದ ಪ್ರಕಾರ ಸರ್ಕಾರವು ಕಾಲೇಜು ಅಭಿವೃದ್ಧಿ ಸಮಿತಿಗೆ ಸಮವಸ್ತ್ರ ಸೂಚಿಸುವ ಅಧಿಕಾರ ನೀಡಿದೆ”
  • “ಕೆಲವು ವಿದ್ಯಾರ್ಥಿಗಳು ತಮ್ಮ ಧರ್ಮದ ಪ್ರಕಾರ ಆಚರಣೆಯಲ್ಲಿ ತೊಡಗಿದ್ದಾರೆ ಎಂಬುದು ಗಮನಕ್ಕೆ ಬಂದಿದೆ” ಎಂದು ಸರ್ಕಾರದ ಆದೇಶದ ಒಂದು ಭಾಗವನ್ನು ಉಲ್ಲೇಖಿಸಿ, ಇದು ಹಿಜಾಬ್‌ ಧರಿಸಿ ಬಂದವರ ಮೇಲೆ ಮಾಡಿದ ನೇರ ದೋಷಾರೋಪಣೆಯಾಗಿದೆ ಎಂದು ಕುಮಾರ್‌ ಹೇಳುತ್ತಾರೆ.
  • ನಿಯೋಗದ ಬಗ್ಗೆ ಉಲ್ಲೇಖವಿರುವ ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್‌ 143 ಅನ್ನು ಉಲ್ಲೇಖಿಸಿದ ರವಿವರ್ಮ ಕುಮಾರ್, ಸೆಕ್ಷನ್ 143 ರ ಪ್ರಕಾರ ನಿಯೋಗವು “ಅಂತಹ ಅಧಿಕಾರಿ ಅಥವಾ ರಾಜ್ಯ ಸರ್ಕಾರಕ್ಕೆ ಅಧೀನವಾಗಿರುವ ಪ್ರಾಧಿಕಾರ” ದಲ್ಲಿ ಇರಬೇಕು ಎಂದು ಹೇಳುತ್ತದೆ. ಆದರೆ ಕಾಲೇಜು ಅಭಿವೃದ್ಧಿ ಸಮಿತಿ ಆ ಪ್ರಾಧಿಕಾರವಲ್ಲ ಎಂದು ಹೇಳುತ್ತಾರೆ.
  • ರವಿವರ್ಮ ಕುಮಾರ್‌: ವಿದ್ಯಾರ್ಥಿಗಳ ಕಲ್ಯಾಣ ಅಥವಾ ಶಿಸ್ತಿನ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ರಚಿಸಲಾಗಿಲ್ಲ. ಇದು ಶೈಕ್ಷಣಿಕ ಗುಣಮಟ್ಟಕ್ಕೆ ಮಾತ್ರ ಸೀಮಿತ.
  • ಮುಖ್ಯ ನ್ಯಾಯಮೂರ್ತಿ: ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಕಾಲೇಜುಗಳು ಸಮವಸ್ತ್ರ ಸೂಚಿಸಬಾರದೇ? ಏಕರೂಪತೆ, ಶಿಸ್ತು, ಸಮವಸ್ತ್ರವನ್ನು ಕಾಪಾಡಿಕೊಳ್ಳಲು ಏಕೆ ಸಾಧ್ಯವಿಲ್ಲ? ಇದು ಶೈಕ್ಷಣಿಕ ಮಾನದಂಡಗಳ ಭಾಗವಾಗಿರಬಹುದಲ್ಲವೆ.
  • ರವಿವರ್ಮ ಕುಮಾರ್‌: ಇದು ಶೈಕ್ಷಣಿಕ ಗುಣಮಟ್ಟಕ್ಕೆ ಸಂಬಂಧಿಸಿಲ್ಲ. ಶೈಕ್ಷಣಿಕ ಗುಣಮಟ್ಟವನ್ನು ಶಿಕ್ಷಕರು-ವಿದ್ಯಾರ್ಥಿಗಳ ಅನುಪಾತ, ಪಠ್ಯಕ್ರಮ, ತರಗತಿ ನಡೆಸುವ ವಿಧಾನ ಇತ್ಯಾದಿ ನಿರ್ಧರಿಸುತ್ತದೆ. ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ಅಧಿಕಾರ ಬಳಸುವುವುದನ್ನು ಯಾವುದೇ ದಿಕ್ಕಿನಿಂದ ನೋಡಿದರೂ ಊಹಿಸುವುದಕ್ಕೆ ಸಾಧ್ಯವಿಲ್ಲ.
  • ಮುಖ್ಯ ನ್ಯಾಯಮೂರ್ತಿ: ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳಲು ಅತ್ಯಗತ್ಯವಾದ ಶಿಸ್ತು ಮತ್ತು ಏಕರೂಪತೆಯನ್ನು ಕಾಪಾಡಿಕೊಳ್ಳುವುದು ಎಂದು ಏಕೆ ಅರ್ಥೈಸಲಾಗುವುದಿಲ್ಲ.
  • ರವಿವರ್ಮ ಕುಮಾರ್‌: ಅದನ್ನು ಈಗಾಗಲೇ ಒಳಗೊಳ್ಳಲಾಗಿದೆ. ಸೆಕ್ಷನ್‌ 2ರಲ್ಲಿ ಅದಕ್ಕೆ ಅವಕಾಶವಿದೆ.
  • ನ್ಯಾಯಮೂರ್ತಿ ದೀಕ್ಷಿತ್‌: ಈ ಪೊಲೀಸ್‌ ಅಧಿಕಾರ ಎಂದರೇನು. ಪೊಲೀಸ್‌ ಇಲಾಖೆಯಲ್ಲಿ ಇದನ್ನು ಪೊಲೀಸ್‌ ಅಧಿಕಾರ ಎಂದರೆ ಅರ್ಥವಾಗುತ್ತದೆ. ಶೈಕ್ಷಣಿಕ ಸಂಸ್ಥೆಯಲ್ಲಿ ಇದನ್ನು ಪೊಲೀಸ್‌ ಅಧಿಕಾರ ಎನ್ನಲಾಗದು. ನೀವು ಹೇಳುತ್ತಿರುವುದಕ್ಕೆ ನ್ಯಾಯಾಂಗದ ಅಭಿಪ್ರಾಯವೂ ವಿರುದ್ಧವಾಗಿದೆ. ಒಂದೇ ಒಂದು ನಿರ್ಧಾರ ವಿರುದ್ಧವಾಗಿದ್ದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಾನು ತಪ್ಪು ಎಂದು ನಾನು ಒಪ್ಪಿಕೊಳ್ಳುವೆ.
  • ರವಿವರ್ಮ ಕುಮಾರ್‌: ನಾನು ಹೇಳುತ್ತಿರುವುದು ಸಮವಸ್ತ್ರವನ್ನು ಸೂಚಿಸುವ ಅಧಿಕಾರವನ್ನು ಸರ್ಕಾರದ ಆದೇಶ ನೀಡುವುದಿಲ್ಲ.
  • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ಸಮವಸ್ತ್ರ ಸೂಚಿಸುವ ಅಧಿಕಾರ ಕಾಲೇಜು ಅಭಿಮೃದ್ದಿ ಸಮಿತಿಗೆ ಇಲ್ಲ ಎಂದು ನೀವು ಹೇಳುತ್ತಿದ್ದೀರಾ?
  • ರವಿವರ್ಮ ಕುಮಾರ್‌: ಹೌದು. ಇದಕ್ಕೆ ಸೆಕ್ಷನ್‌ 143ರಲ್ಲಿ ಯಾವುದೇ ಅಧಿಕಾರ ನೀಡಲಾಗಿಲ್ಲ. ಕಾಯಿದೆ ಅಡಿ ಕಾಲೇಜು ಅಭಿವೃದ್ದಿ ಸಮಿತಿ ಪ್ರಾಧಿಕಾರವಲ್ಲ. ಶಾಸಕರೊಬ್ಬರನ್ನು ಸರ್ಕಾರಕ್ಕೆ ‘ಅಧೀನ’ ಎಂದು ಕರೆಯಬಹುದೇ? ನಮ್ಮ ಸಂವಿಧಾನದ ಅಡಿ ಜನಪ್ರತಿನಿಧಿಗಳು, ಶಾಸಕರು ಮತ್ತು ಸಂಸದರು ಸರ್ಕಾರವನ್ನು ಉತ್ತರಾದಾಯಿತ್ವಕ್ಕೆ ಗುರುತುಪಡಿಸುತ್ತಾರೆ. ಸರ್ಕಾರವನ್ನು ಉತ್ತರಾದಾಯಿತ್ವಕ್ಕೆ ಒಳಪಡಿಸುವುದು ಭಾರತ ಸಂವಿಧಾನದ ಹಾಲ್‌ಮಾರ್ಕ್‌ ಆಗಿದೆ.
  • ರವಿವರ್ಮ ಕುಮಾರ್‌: ಆಡಳಿತವನ್ನು ಶಾಸಕರು ಹೇಗೆ ತಮ್ಮ ಕೈಗೆ ಪಡೆಯಬಹುದು? ಅಧಿಕಾರಗಳ ಪ್ರತ್ಯೇಕತೆ ಸಿದ್ಧಾಂತವು ಅಧಿಕಾರಗಳ ಮಿಶ್ರಣವಿಲ್ಲ ಎಂದು ಖಚಿತಪಡಿಸಿಕೊಳ್ಳುವುದು. ಶಾಸಕ ಅಥವಾ ಸಂಸದರಿಗೆ ಶಾಸನದ ಅಡಿಯಲ್ಲಿ ಅಥವಾ ಸಂವಿಧಾನದ 162 ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ವಹಿಸಲಾಗುವುದಿಲ್ಲ.
  • ರವಿವರ್ಮ ಕುಮಾರ್‌: ಶಾಸಕರಿಗೆ ಆಡಳಿತಾತ್ಮಕ ಅಧಿಕಾರ ನೀಡುವುದು ಆತ್ಮಹತ್ಯೆಕಾರಿ ನಿರ್ಧಾರ. ಒಬ್ಬ ಶಾಸಕ, ಅವರು ಯಾರೇ ಆಗಿರಲಿ, ಅವರು ರಾಜಕೀಯ ಪಕ್ಷ ಅಥವಾ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ. ವಿದ್ಯಾರ್ಥಿಗಳ ಕಲ್ಯಾಣವನ್ನು ನೀವು ರಾಜಕೀಯ ಪಕ್ಷ ಅಥವಾ ರಾಜಕೀಯ ಸಿದ್ಧಾಂತಕ್ಕೆ ಒಪ್ಪಿಸಬಹುದೇ? ಹೀಗಾಗಿ, ಇಂಥ ಸಮಿತಿಯನ್ನು ರಚಿಸುವುದು ಭಾರತದ ಸಂವಿಧಾನ ಮತ್ತು ಅಧಿಕಾರ ಪ್ರತ್ಯೇಕತಾ ಸಿದ್ಧಾಂತಕ್ಕೆ ಸಾವಿನ ಮೊಳೆ ಹೊಡೆದಂತೆ.
  • ರವಿವರ್ಮ ಕುಮಾರ್‌: ದಕ್ಷಿಣ ಭಾರತದಲ್ಲಿ ನಮಗೆ ಧಾರ್ಮಿಕ ಸಂಕೇತಗಳ ಬಗ್ಗೆ ಹೆಚ್ಚು ಒಲವು. ಯಾವುದೇ ಸ್ಥಳಕ್ಕೆ ಹೋದರೂ ವಿಶೇಷವಾಗಿ ಸಾರ್ವಜನಿಕ ಸ್ಥಳಗಳಿಗೆ ಹೋದಾಗ, ನಮ್ಮ ಶಿಕ್ಷಕರೂ ಧಾರ್ಮಿಕ ಸಂಕೇತಗಳನ್ನು ಬಿಂಬಿಸುವ ಉಡುಪು ಹಾಕುತ್ತಾರೆ.
  • ಪ್ರಕರಣದ ಒಂದರ ಉಲ್ಲೇಖ ಮಾಡಿದ ರವಿವರ್ಮ, ದೇವಸ್ಥಾನವೊಂದರಲ್ಲಿ ಆನೆ ಇತ್ತು. ಆ ಆನೆಯ ಹಣೆಯಲ್ಲಿ ಯಾವ ಧಾರ್ಮಿಕ ಚಿಹ್ನೆ ಇರಬೇಕು ಎಂಬ ಪ್ರಶ್ನೆ ಎದ್ದಿತು. ಸದರಿ ವಿಚಾರವು ಸಮಾಲೋಚನಾ ಸಭೆಯಲ್ಲಿ ನಿರ್ಧಾರವಾಗುವ ವೇಳೆಗೆ ಆನೆ ಸಾವನ್ನಪ್ಪಿತ್ತು ಎಂದು ಹೇಳುತ್ತಾರೆ.
  • ನ್ಯಾಯಮೂರ್ತಿ ದೀಕ್ಷಿತ್‌: ಈ ಪ್ರಕರಣದಲ್ಲಿ ಅದಾಗಬಾರದು.
  • ರವಿವರ್ಮ ಕುಮಾರ್‌: ಇಲ್ಲಿ ಆ ರೀತಿ ಆಗಬಾರದು ಎಂದು ನಾನು ವಿನಯಪೂರ್ವಕವಾಗಿ ಕೇಳುತ್ತೇನೆ. ಈ ವಿಷಯವಾಗಿ ಸುಮಾರು 50 ವರ್ಷಗಳ ಕಾಲ ಕಾನೂನು ಹೋರಾಟ ಕಂಡಿತು. ಕೊನೆಯ ಹಂತದಲ್ಲಿ ಖ್ಯಾತ ಪರಾಸರನ್‌ ಅವರು ಇದರಲ್ಲಿ ವಾದಿಸಿದ್ದರೆನ್ನುವ ನೆನಪು.
  • ರವಿವರ್ಮ ಕುಮಾರ್‌ ಅವರಿಂದ ಸಂಶೋಧನಾ ಪ್ರಬಂಧದ ಉಲ್ಲೇಖ. ಇದರಲ್ಲಿ ಬಹುತೇಕ ಮಹಿಳೆಯರು ಶಿರವಸ್ತ್ರ ಬಳಸುತ್ತಾರೆ ಎಂದು ಕಂಡುಕೊಳ್ಳಲಾಗಿದೆ. 85%ರಷ್ಟು ಮುಸ್ಲಿಮ್‌, 86%ರಷ್ಟು ಸಿಖ್‌ ಮತ್ತು 59%ರಷ್ಟು ಹಿಂದೂ ಮಹಿಳೆಯರು ಶಿರವಸ್ತ್ರ ಬಳಸುತ್ತಾರೆ ಎಂದು ಹೇಳಲಾಗಿದೆ.
  • ನ್ಯಾಯಮೂರ್ತಿ ದೀಕ್ಷಿತ್‌: ಸಂಶೋಧನಾ ಪ್ರಬಂಧದ ಅಧಿಕೃತತೆ ಕುರಿತು ಪ್ರಶ್ನೆಯಿಂದೆ.
  • ರವಿವರ್ಮ ಕುಮಾರ್‌: ದೇಶದ ವೈವಿಧ್ಯತೆಯನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ನೂರಾರು ಧಾರ್ಮಿಕ ಸಂಕೇತಗಳು ಇರುವಾಗ ಸರ್ಕಾರ ಹಿಜಾಬ್‌ ಅನ್ನೇ ಏಕೆ ಗುರಿಯಾಗಿಸಿಕೊಂಡಿದೆ? ಸಂವಿಧಾದನ 15ನೇ ವಿಧಿಯ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮ ಸ್ಥಳ ಆಧರಿಸಿ ರಾಜ್ಯವು ಯಾವುದೇ ನಾಗರಿಕರ ವಿರುದ್ಧ ತಾರತಮ್ಯ ಮಾಡಬಾರದು. ಈ ಪ್ರಕರಣದಲ್ಲಿ ನನ್ನ ಧರ್ಮದ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ.
  • ಮುಖ್ಯ ನ್ಯಾಯಮೂರ್ತಿ ಅವಸ್ಥಿ: 15ನೇ ವಿಧಿಯು ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುತ್ತದೆ ಎಂದು ನೀವು ಹೇಳುತ್ತೀರಿ. ಆದರೆ ನಿಯಮವು ಎಲ್ಲರಿಗೂ ಶಿರವಸ್ತ್ರ ನಿಷೇಧಿಸುತ್ತದೆ, ಒಂದು ನಿರ್ದಿಷ್ಟ ವರ್ಗಕ್ಕೆ ಮಾತ್ರವಲ್ಲ.
  • ರವಿವರ್ಮ ಕುಮಾರ್‌: ಹಿಜಾಬ್‌ ಅನ್ನು ಕೇವಲ ಮುಸ್ಲಿಮರು ಮಾತ್ರವೇ ಧರಿಸುತ್ತಾರೆ. ಗೂಂಗಟ್‌ ಧರಿಸಲು ಅನುಮತಿ ಇದೆ, ಬಳೆ ಧರಿಸಲು ಅನುಮತಿ ಇದೆ. ಕ್ರಿಶ್ಚಿಯನ್ನರ ಶಿಲುಬೆಗೇಕೆ ನಿಷೇಧವಿಲ್ಲ? ಸಿಖ್ಖರ ಪಗಡಿಗೇಕೆ ನಿಷೇಧವಿಲ್ಲ? ಇಲ್ಲಿ ಧಾರ್ಮಿಕ ಪೂರ್ವಾಗ್ರಹ ತುಂಬಿದೆ, ಸೂಚನೆ ಇಲ್ಲ. ಕಾಯಿದೆಯ ಅಡಿಯಲ್ಲಿ ಯಾವುದೇ ಅಧಿಕಾರವನ್ನು ಹೊಂದಿರದ ವ್ಯಕ್ತಿಗಳಿಂದ ನಮ್ಮನ್ನು ತರಗತಿಯಿಂದ ಹೊರಗೆ ಕುಳಿತುಕೊಳ್ಳುವಂತೆ ಮಾಡಲಾಗಿದೆ.
  • ರವಿವರ್ಮ ಕುಮಾರ್: ಶಿಕ್ಷಣದ ಗುರಿ ಬಹುತ್ವವನ್ನು ಉತ್ತೇಜಿಸುವುದಾಗಿದೆಯೆ ಹೊರತು ಏಕರೂಪತೆಯನ್ನಲ್ಲ. ತರಗತಿಯು ಸಮಾಜದ ವೈವಿಧ್ಯತೆಯ ಪ್ರತಿಬಿಂಬವಾಗಬೇಕು.
    ಮೇಲಿನ ವಾದಕ್ಕೆ ಪೂರಕವಾಗಿ ಪುಟ್ಟಸ್ವಾಮಿ ಮತ್ತು ಎನ್‌ಎಎಲ್‌ಎಸ್‌ಎ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲೇಖಿಸುತ್ತಾರೆ.
  • ರವಿವರ್ಮ ಕುಮಾರ್: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಆಕೆಯ ಧಾರ್ಮಿಕ ಚಿಹ್ನೆ ಧರಿಸಿರುವ ವ್ಯಕ್ತಿಗೆ ತರಗತಿಗಳಿಗೆ ಹಾಜರಾಗಲು ಏಕೆ ಅವಕಾಶ ನೀಡಬಾರದು? ಇದು ಕಠಿಣ ಕ್ರಮವಾಗಿದೆ.
  • ‘ತರಗತಿಯಲ್ಲಿ ವೈವಿಧ್ಯತೆಯನ್ನು ಕಾಪಾಡಿಕೊಳ್ಳಬೇಕು. ಇದು ಆರ್‌ಟಿಇ ಕಾಯಿದೆಯ ಧ್ಯೇಯವಾಕ್ಯ’ – ಇದನ್ನು ಸೊಸೈಟಿ ಆಫ್ ಅನ್‌ಅಯ್ಡೆಡ್ ಸ್ಕೂಲ್ಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಮುಂದೆ ಭಾರತ ಸರ್ಕಾರ ಹೇಳಿದೆ ಎಂದು ರವಿವರ್ಮ ವಾದಿಸುತ್ತಾರೆ.
  • ರವಿವರ್ಮ: ನನ್ನ ವಾದ ಏನೆಂದರೆ, ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಧಾರ್ಮಿಕ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಯನ್ನು ತರಗತಿಗಳಿಗೆ ಹಾಜರಾಗಲು ಯಾಕೆ ಅನುಮತಿಸಬಾರದು.
  • ರವಿವರ್ಮ ಕುಮಾರ್: ಮುಸ್ಲಿಂ ಹುಡುಗಿಯರು ತರಗತಿಗಳಲ್ಲಿ ಕನಿಷ್ಠ ಪ್ರಾತಿನಿಧ್ಯ ಹೊಂದಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಪರಿಗಣಿಸಬೇಕು. ಈ ಆಧಾರದ ಮೇಲೆ ಅವರನ್ನು ತರಗತಿಯಿಂದ ಹೊರಗೆ ಹಾಕಿದರೆ ನಿಜಕ್ಕೂ ಅವರ ಭವಿಷ್ಯಕ್ಕೆ ಕತ್ತಲು ಕವಿಯಲಿದೆ.
  • ಹಿರಿಯ ವಕೀಲ ರವಿವರ್ಮ ಕುಮಾರ್ ತಮ್ಮ ಅಹವಾಲುಗಳನ್ನು ಮುಕ್ತಾಯಗೊಳಿಸುತ್ತಾರೆ.
  • ಹಿರಿಯ ವಕೀಲ ಯೂಸೂಫ್‌ ಮುಚ್ಚಾಲ ಅವರಿಂದ ವಾದ ಮಂಡನೆ ಆರಂಭ.
  • ಯೂಸೂಫ್‌ ಮುಚ್ಚಾಲ: ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶಿಸಲು ಫೆಬ್ರವರಿ 3ರಿಂದ ನಿರ್ಬಂಧ ವಿಧಿಸಲಾಗಿದೆ. 25ನೇ ವಿಧಿ ಅಡಿ ಆತ್ಮಸಾಕ್ಷಿ ಎಂಬುವುದು ಬಹಳ ವಿಶಾಲವಾದ ಪದವಾಗಿದೆ. ದೇವರನ್ನು ನಂಬದ ಜನರು ಇನ್ನೂ ಆತ್ಮಸಾಕ್ಷಿಯಲ್ಲಿ ತಮ್ಮ ನಂಬಿಕೆಗೆ ಅರ್ಹರಾಗಿರುತ್ತಾರೆ. ಧರ್ಮಗಳ ಸಾರ್ವತ್ರಿಕತೆಯನ್ನು ನಂಬುವ ಜನರು ಇರಬಹುದು. ಅವರ ರಕ್ಷಣೆಗಾಗಿ ನ್ಯಾಯಾಲಯದ ಮುಂದೆ ಬಂದರೆ, ಅತ್ಯಗತ್ಯ ಧಾರ್ಮಿಕ ಆಚರಣೆ ಬಗ್ಗೆ ಮಾತನಾಡಬೇಕಾಗಿಲ್ಲ.
  • ಒಂದೋ ಶಿಕ್ಷಣ ಪಡೆಯಬೇಕು ಇಲ್ಲವೆಂದರೆ ಆತ್ಮಸಾಕ್ಷಿಯನ್ನು ಉಳಿಸಿಕೊಳ್ಳಬೇಕು ಎಂಬಂತ ಪರಿಸ್ಥಿತಿಗೆ ಮುಸ್ಲಿಂ ಮಹಿಳೆಯರನ್ನು ಯಾಕೆ ದೂಡಬೇಕು? ಎಂದು ಯೂಸುಫ್ ಪ್ರಶ್ನಿಸುತ್ತಾರೆ.
  • ಯೂಸುಫ್ :ಸಂವಿಧಾನದ 15ಎ ವಿಧಿಯ ಪ್ರಕಾರ ಪ್ರತಿಯೊಬ್ಬ ನಾಗರಿಕನು ಧಾರ್ಮಿಕ, ಭಾಷಾ ಮತ್ತು ಪ್ರಾದೇಶಿಕ ಅಥವಾ ವಿಭಾಗೀಯ ವೈವಿಧ್ಯಗಳನ್ನು ಮೀರಿ ಭಾರತದ ಎಲ್ಲಾ ಜನರಲ್ಲಿ ಸಾಮರಸ್ಯ ಮತ್ತು ಸಾಮಾನ್ಯ ಸಹೋದರತ್ವದ ಮನೋಭಾವವನ್ನು ಉತ್ತೇಜಿಸಬೇಕು. ಏಕರೂಪತೆ ಮತ್ತು ಶಿಸ್ತು ಹೊಂದುವ ಉದ್ದೇಶದಿಂದ ಸಮವಸ್ತ್ರ ತರಲು ಎಂದು ಬಯಸಿದ್ದಾರೆ ಎಂದು ಇಟ್ಟುಕೊಂಡರೂ ಸಂಬಂಧಪಟ್ಟವರು ಮತ್ತು ತಮ್ಮ ಹಕ್ಕುಗಳಿಗೆ ಧಕ್ಕೆಯಾಗುವುದನ್ನು ಯಾಕೆ ಹೇಳಬಾರದು.
  • ಯೂಸುಫ್: ಮಧ್ಯಂತರ ಮನವಿಗಳನ್ನು ವಿಲೇವಾರಿ ಮಾಡಲಾಗಿಲ್ಲ. ಇದು ಮಧ್ಯಂತರ ಆದೇಶದ ಮೇಲಿನ ವಾದವೋ ಅಥವಾ ಅಂತಿಮ ವಿಚಾರಣೆಯೋ?
  • ಮುಖ್ಯ ನ್ಯಾಯಮೂರ್ತಿ ಅವಸ್ಥಿ: ನೀವು ವಾದ ಆರಂಭಿಸಿದಿರಿ ನಾವು ಕೇಳುತ್ತಿದ್ದೇವೆ. ನೀವು ಅಂತಿಮ ವಾದ  ಮಂಡಿಸಿದ್ದೀರೋ ಅಥವಾ ಮಧ್ಯಂತರ ವಾದವೋ ನಮಗೆ ಗೊತ್ತಿಲ್ಲ. ಮಧ್ಯಂತರ ಪರಿಹಾರ ಕೋರಿದ್ದ ಯಾವುದೇ ಮನವಿಯನ್ನು ನಾವು ವಿಲೇವಾರಿ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ.
  • ಈ ನಡುವೆ ಪ್ರೊ. ರವಿವರ್ಮ ಕುಮಾರ್‌ ಅವರು ಮಧ್ಯಂತರ ಆದೇಶದಲ್ಲಿ ಸ್ಪಷ್ಟತೆ ಕೇಳುತ್ತಾರೆ.
  • ಇದಕ್ಕೆ ಸಂಬಂಧಿಸಿದ ಮನವಿಯನ್ನು ಕೆಲವು ತಾಂತ್ರಿಕ ಕಾರಣಗಾಗಿ ನಿನ್ನೆ ಆಲಿಸಿಲ್ಲ.
    ಹೆಚ್ಚುವರಿ ಶಿರವಸ್ತ್ರಕ್ಕೆ ಬದಲಾಗಿ, ಒಂದೇ ಬಣ್ಣದ ದುಪ್ಪಟ್ಟಾ ಹಾಕಲು ವಿದ್ಯಾರ್ಥಿಗಳಿಗೆ ಅನುಮತಿಸಬೇಕು ಎಂಬುದನ್ನು ಮನವಿಯಲ್ಲಿ ವಿವರಿಸಲಾಗಿದೆ.
  • ಈ ಮನವಿಗೆ ಆಕ್ಷೇಪಣೆ ಸಲ್ಲಿಸಲು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವಡಗಿ ಎರಡು ದಿನ ಕಾಲಾವಕಾಶ ಕೋರುತ್ತಾರೆ.
  • ಇದಕ್ಕೆ ನ್ಯಾಯಾಲಯ ಅನುಮತಿ ನೀಡುತ್ತದೆ.
  • ದಿನ ವಿಚಾರಣೆ ಮುಕ್ತಾಯ; ವಿಚಾರಣೆ ನಾಳೆಗೆ ಮುಂದೂಡಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...