Homeಮುಖಪುಟಗುರು ರವಿದಾಸ್‌ ಜಯಂತಿ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯಿಂದ ಲಂಗರ್ ಸೇವೆ

ಗುರು ರವಿದಾಸ್‌ ಜಯಂತಿ: ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯಿಂದ ಲಂಗರ್ ಸೇವೆ

- Advertisement -
- Advertisement -

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಗುರು ರವಿದಾಸ್ ಜಯಂತಿಯ ಅಂಗವಾಗಿ ವಾರಣಾಸಿಯ ದೇವಸ್ಥಾನದಲ್ಲಿ ಇಂದು ಲಂಗರ್ ಸೇವೆ ಸಲ್ಲಿಸಿದ್ದಾರೆ.

15-16 ನೇ ಶತಮಾನದ ಕವಿ ಮತ್ತು ಸಮಾಜ ಸುಧಾರಕನ ಜನ್ಮಸ್ಥಳ ಸೀರ್ ಗೋವರ್ಧನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಇಬ್ಬರೂ ‘ಲಂಗರ್ ಸೇವೆ’ ನೀಡಿದ್ದಾರೆ. ಬಾಬತ್‌ಪುರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರನ್ನು ಮಾಜಿ ಶಾಸಕ ಅಜಯ್ ರೈ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡು ನೇರವಾಗಿ ಗುರು ರವಿದಾಸ್ ದೇವಸ್ಥಾನಕ್ಕೆ ಕರೆದೊಯ್ದರು.

ಗುರು ರವಿದಾಸ್ ದೇವಸ್ಥಾನದ ಆಡಳಿತ ಮಂಡಳಿಯು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ  ಗಾಂಧಿ ಅವರಿಗೆ ಗುರು ರವಿದಾಸ್ ಅವರ ಚಿತ್ರವನ್ನು ನೀಡಿ ಗೌರವಿಸಿತು.

ಇದನ್ನೂ ಓದಿ: ಗುರು ರವಿದಾಸ್ ಜಯಂತಿ: ಯುಪಿಯಲ್ಲಿ ಹುಟ್ಟಿದ ಸಂತನ ಜನ್ಮದಿನಕ್ಕೆ ಸಿಖ್ಖರ ನಾಡು ಪಂಜಾಬ್‌ನಲ್ಲಿ ಹಬ್ಬ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಚಮ್ಮಾರ ಕುಲದಲ್ಲಿ ಜನಿಸಿದ್ದ ಗುರು ರವಿದಾಸ್, ಜಾತಿಯ ಆಧಾರದ ಮೇಲೆ ಸಮಾನತೆ ಮತ್ತು ಘನತೆಯ ನೀಡದಿರುವ ಬಗ್ಗೆ ಖಂಡಿಸಿದ್ದರು. ಲಿಂಗ ಸಮಾನತೆಯನ್ನು ಉತ್ತೇಜಿಸಿದರು. ಲಿಂಗ ಅಥವಾ ಜಾತಿಯ ಆಧಾರದ ಮೇಲೆ ಸಮಾಜದ ವಿಭಜನೆಯನ್ನು ವಿರೋಧಿಸಿದ್ದರು. ಇವರು ಭಕ್ತಿ ಚಳವಳಿಯ ಮತ್ತೊಬ್ಬ ಪ್ರಮುಖ ಕವಯರ್ತಿ ಮೀರಾ ಬಾಯಿ ಅವರ ಆಧ್ಯಾತ್ಮಿಕ ಮಾರ್ಗದರ್ಶಕರಾಗಿದ್ದರು ಎಂದು ಕೆಲವರು ಹೇಳುತ್ತಾರೆ.

ಇಂದು ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.  ಗುರು ರವಿದಾಸ್ ಅವರ ಜನ್ಮಸ್ಥಳವಾದ ಸೀರ್ ಗೋವರ್ಧನಪುರಕ್ಕೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಕೂಡ ಭೇಟಿ ನೀಡಿ ಗೌರವ ಸಲ್ಲಿಸಿದ್ದರು.

ಗುರು ರವಿದಾಸ್ ಜನ್ಮದಿನದ ದೃಷ್ಟಿಯಿಂದ ಭಾರತದ ಚುನಾವಣಾ ಆಯೋಗ ಕೂಡ ಪಂಜಾಬ್ ವಿಧಾನಸಭೆ ಚುನಾವಣೆಯನ್ನು ಮುಂದೂಡಿದೆ. ಫೆಬ್ರವರಿ 14 ರಂದು ನಡೆಯಬೇಕಿದ್ದ ಚುನಾವಣೆಯನ್ನು ಫೆಬ್ರವರಿ 20 ಕ್ಕೆ ನಿಗದಿಪಡಿಸಲಾಗಿದೆ.


ಇದನ್ನೂ ಓದಿ:  ಹೋರಾಟನಿರತ ರೈತರ ದೇಹ, ಮನಸ್ಸಿಗೆ ಶಕ್ತಿ ತುಂಬುತ್ತಿರುವ ವಿಭಿನ್ನ ಲಂಗರ್‌ಗಳು…!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...