Homeಮುಖಪುಟಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ.

- Advertisement -
- Advertisement -

ಹಿಂದೆ ಒಂದು ಕಾಲವಿತ್ತು. ಬ್ರಿಟಿಷರ ವಿರುದ್ಧ ನಿಂತು ನಮ್ಮವರು, ಸುಧೀರ್ಘ ಹೋರಾಟದ ನಂತರ ಸ್ವಾಂತಂತ್ರ್ಯ ದೊರಕಿಸುವಲ್ಲಿ ಯಶಸ್ವಿಯಾದರು. ಅಂದಿನ ಹೋರಾಟ, ಪ್ರತಿಭಟನೆ ಅತೀ ಅಗತ್ಯದ್ದಾಗಿತ್ತು. ಸ್ವತಂತ್ರ ಭಾರತದ ನಂತರದ ಗುರಿ, ದೇಶದ ಅಭಿವೃದ್ಧಿ. ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿಯೋರ್ವನ ಏಳಿಗೆ, ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಮಹಾನ್ ವ್ಯಕ್ತಿಯಾದ ಅಂಬೇಡ್ಕರ್ ಸಂವಿಧಾನ ರೂಪಿಸಿದರು. ಈ ಇತಿಹಾಸ ಬಹಳಷ್ಟು ಸರಳ ಮತ್ತು ಪ್ರತಿಯೋರ್ವನಿಗೂ ತಿಳಿದಿರುವ ವಿಚಾರ. ಆದರೆ ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ‘ದೇಶದ ಏಳಿಗೆ’ಯ ಕುರಿತಾಗಿ.

ಒಂದು ದೇಶವನ್ನು ನಾವು ಅಭಿವೃದ್ಧಿ ಹೊಂದಿದೆ ಅಥವಾ ಅಭಿವೃದ್ಧಿ ಹೊಂದುತ್ತಿದೆ ಎಂದು ಕರೆಯಬೇಕಾದರೆ,

·       ರಾಷ್ಟ್ರೀಯ ಉತ್ಪನ್ನ (GDP), ರಾಷ್ಟ್ರೀಯ ಆದಾಯ (GNI)

·       ದೇಶದ ಕೈಗಾರೀಕರಣದ ಹಂತ

·       ಜನರ ಜೀವನ ಮಟ್ಟ

·       ಬಳಸುತ್ತಿರುವ ತಂತ್ರಜ್ಞಾನದ ಗುಣಮಟ್ಟ

ಇವೇ ಮೊದಲಾದ ಅಂಶಗಳು ಮುಖ್ಯವಾಗಿ ಅಳತೆಗೋಲಾಗುತ್ತವೆ. ಇವುಗಳ ಆಧಾರದ ಮೇಲೆ ದೇಶದ ಏಳಿಗೆ ನಿಂತಿದೆ. ಇಂದು ಸುಮಾರು 22 ಶೇಕಡಾ ಭಾರತೀಯರು ಬಡತನದಲ್ಲಿದ್ದರೆ, ನಿರುದ್ಯೋಗ ಗೆರೆ 7ಶೇಕಡದಷ್ಟಿದೆ. ವಿಶ್ವದೆಲ್ಲೆಡೆ ವ್ಯಾಪಿಸಿದ ಕೊರೊನಾ ಭಾರತಕ್ಕೂ ತಗುಲಿ ಬಹಳಷ್ಟು ಬಳಲಿದೆ. ಕೊರೊನಾ ಸೇರಿದಂತೆ ಇನ್ನಿತರ ಕಾರಣಗಳಿಂದ ದೇಶದ ಸಾವಿಸಸಂಖ್ಯೆ 7.5 ಶೇಕಡಾವಾರು ಏರಿದೆ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ನಾವಿಂದು ಕೋಮುಗಲಭೆಯಲ್ಲಿ ವಿಜ್ರಂಭಿಸುತ್ತಿದ್ದೇವೆ.

ಹಿಜಾಬ್ ಕುರಿತಾಗಿ ಇಂದು ದೇಶದಲ್ಲಿ ಸಾಕಷ್ಟುಗಲಭೆಗಳು, ವಿವಾದಗಳು, ಚರ್ಚೆಗಳು ಭುಗಿಲೆದ್ದಿದೆ. ಮುಸ್ಲೀಂ ಹೆಣ್ಣು ಮಕ್ಕಳ ವಸ್ತ್ರಸಂಹಿತೆಯ ಕುರಿತು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ. ಇದಕ್ಕೆ ಹೆಣ್ಣು ಮಕ್ಕಳ ಶಿಕ್ಷಣ ಬಲಿಯಾಗುತ್ತಿರುವುದು ವಿಷಾದನೀಯ. ಈ ಸಂಘರ್ಷಕ್ಕೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ರಾಜಕೀಯ ಲಾಭ ಪಡೆಯುತ್ತಿರುವ ಪಕ್ಷಗಳ ನಡೆ ಬೇಸರದ ಸಂಗತಿ. ಹಿಂದಿನಿಂದಲೂ ಶಾಲಾ-ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಬಂದು ಶಿಕ್ಷಣ ಪಡೆಯುತ್ತಿದ್ದ ಅದೆಷ್ಟೋ ಮುಸ್ಲೀಂ ವಿದ್ಯಾರ್ಥಿನಿಯರಿದ್ದರು. ಆಗ ನಮಗೆ ಇದೊಂದು ವಿಷಯವೇ ಆಗಿರಲಿಲ್ಲ. ನಮ್ಮ ಶಿಕ್ಷಣಕ್ಕೆ ತೊಂದರೆ ಆಗಿರಲಿಲ್ಲ. ನಮಗವರು ಬೇರೆ ಎಂದೆಣಿಸಿರಲಿಲ್ಲ. ಜೊತೆಯಾಗಿ ಕುಳಿತುಕೊಳ್ಳುವುದಕ್ಕೂ, ಮಾತನಾಡುವುದಕ್ಕೂ, ಗೆಳೆತನಕ್ಕೂ ಕಷ್ಟವಾಗಿರಲಿಲ್ಲ. ಇಂದೇಕೆ ಏಕಾಏಕಿ ಈ ಮನಸ್ಥಿತಿಗೆ ನಾವು ಬಂದಿದ್ದೇವೆ? ಮುಸ್ಲೀಂ ಹೆಣ್ಣು ಮಗಳೊಬ್ಬಳು ನಮ್ಮ ಒತ್ತಾಯದ ಮೇರೆಗೆ ಹಿಜಾಬ್ ಧರಿಸದೇ ಬಂದಳೆಂದರೆ ನಮ್ಮ ಶಿಕ್ಷಣ ಪ್ರಗತಿ ಸಾಧಿಸುತ್ತದೆಯೆ? ಇದರಿಂದ ನಮಗೇನು ದೊರಕುತ್ತದೆ?

ಏಕೆ ನಮಗೆ ಅನ್ಯಕೋಮಿನ ಪ್ರತಿಯೊಂದು ಆಚಾರ, ವಿಚಾರಗಳು ಪ್ರಚೋದನಕಾರಿಯಾಗಿ ಕಾಣುತ್ತಿದೆ? ಮಾನವ ಸಂಘಜೀವಿ ಸರಿ. ಆದರೆ ನಾವು ಆರಿಸಿಕೊಂಡ ಸಂಘ, ನಾವು ಮಾಡಿಕೊಂಡಿರುವ ಒಡನಾಟಗಳು ಏನನ್ನು ಕಲಿಸುತ್ತಿವೆ? ಯಾವುದರತ್ತ ಮುಖಮಾಡಿದೆ? ಅದರ ಮುಖ್ಯಗುರಿ ಏನು? ದೇಶದ ಏಳಿಗೆ ಅದರಿಂದ ಹೇಗೆ ಸಾಧ್ಯ?ನಾವು ಮಾಡುತ್ತಿರುವ ಇವೆಲ್ಲಾ ಗಲಭೆಗಳು ದೇಶಪ್ರೇಮ ಎಂದೆನ್ನಿಸಿರಬಹುದು. ಆದರೆ ‘ವಿವಿಧತೆಯಲ್ಲಿನ ಏಕತೆ’, ‘ನಾವೆಲ್ಲರೂ ಒಂದೇ’ ಎನ್ನುವ ಸಂವಿಧಾನದ ಧ್ಯೇಯ ಇಂದು ಪಠ್ಯಗಳಲ್ಲಷ್ಟೇ ಉಳಿತ್ತಿದೆಯೇ ವಿನಃ ನಮ್ಮ ಮನದೊಳಗೆ ಇಳಿಯುತ್ತಿಲ್ಲ. ನಾವು ಅಂದುಕೊಂಡಿರುವ ಈ ದೇಶಪ್ರೇಮ ಒಂದುಗೂಡಿಸುವ ಬದಲು, ದೇಶವನ್ನು ಒಡೆಯುತ್ತಿದೆ.

ಇಂದು ನಾವು ಅನ್ಯಕೋಮಿನ ಪ್ರತಿಯೋರ್ವನನ್ನು ಅನುಮಾನಿಸುತ್ತೇವೆ, ಕಾರಣವಿಲ್ಲದೆ ದ್ವೇಷಿಸುತ್ತೇವೆ. ಕಾಳಜಿ, ಪ್ರೀತಿ, ನಂಬಿಕೆಗಳು ಮೂಡುವುದಿಲ್ಲ. ಈ ವಿಷಯಕ್ಕೆ ಕೆಲವು ಮಾಧ್ಯಮ ಮತ್ತು ರಾಜಕಾರಣಿಗಳು ಇನ್ನಿಲ್ಲದಂತೆ ಕೆಲಸ ಮಾಡುತ್ತಿದ್ದಾರೆ. ಮಾಧ್ಯಮ ಬಿತ್ತರಿಸುವ ಸುದ್ದಿಗಳು ಎಷ್ಟು ಸರಿ ಎಂದು ಅವಲೋಕಿಸುವ ಬದಲಿಗೆ ದ್ವೇಷ ಕಾರುವ ವಿಷಯಗಳನ್ನು ಆನಂದಿಸುತ್ತೇವೆ. ನಾವೇ ಆಯ್ಕೆ ಮಾಡಿದ ನಾಯಕರುಗಳು ವೇದಿಕೆಗಳಲ್ಲಿ ಉದ್ರೇಕದಿಂದ ಮಾತುನಾಡುತ್ತಿದ್ದರೆ ಚಪ್ಪಾಳೆ ತಟ್ಟುತ್ತೇವೆ, ಬೆಂಬಲಿಸುತ್ತೇವೆ. ಇದರಿಂದ ದೇಶದ ಪ್ರಗತಿ ಸಾಧ್ಯವೇ ಎಂದು ಯೋಚಿಸುವುದಿಲ್ಲ. ನಮ್ಮ ನಾಯಕರುಗಳ ಕೆಲಸ ನಮ್ಮನ್ನು ಉದ್ರೇಕಿಸಿ, ಗಲಭೆ ಸೃಷ್ಟಿಸುವುದೇ? ಎಂದು ನಮಗೆ ಹೊಳೆಯುವುದೇ ಇಲ್ಲ. ಮಾಧ್ಯಮ ಪ್ರತಿನಿಧಿಯೋರ್ವ ಚರ್ಚಿಸುತ್ತಾ ಮತ್ತೊಬ್ಬನ ಮಾತೇ ಕೇಳಿಸದಷ್ಟು ಬೊಬ್ಬೆ ಹಾಕುವಾಗ ನಮಗೇ ಗೆಲುವು ಸಿಕ್ಕಿದಷ್ಟು ಖುಷಿಯಾಗುತ್ತದೆ. ಹಾಗಾದರೆ ದೇಶ ಒಡೆಯುವುದರಲ್ಲಿ ನಮಗೆ ವಿಕೃತ ಆನಂದ ಸಿಗುತ್ತಿದೆ ಎಂದಲ್ಲವೇ ಇದರರ್ಥ. ನಮ್ಮ ಮನಸ್ಥಿತಿ ಎಲ್ಲಿಗೆ ತಲುಪಿದೆ ಹಾಗಾದರೆ?

ಎಲ್ಲಾ ಧರ್ಮಗಳಲ್ಲೂ ಒಳ್ಳೆಯವರಿದ್ದಾರೆ, ಕೆಟ್ಟವರಿದ್ದಾರೆ. ಅವರವರಿಗೆ ಅವರದೇ ಆದ ಧರ್ಮವಿದೆ. ಎಲ್ಲದರಲ್ಲೂ ಕೊರತೆಯಿದೆ, ಒಳ್ಳೆಯ ವಿಚಾರಗಳಿವೆ. ಅವರವರ ಧರ್ಮ ಪಾಲಿಸುವುದು ಅವರದೇ ಇಚ್ಚೆ. ಈ ವಿಷಯಗಳು ದೇಶದ ಬೆಳವಣಿಗೆಗೆ ಮಾರಕವಾಗದಿರಲಿ. ಪ್ರಜೆಯಾಗಿ ನಾವು ನಾಳೆ ಎಂತಹ ಭಾರತವನ್ನು ಕಟ್ಟಲು ಹೊರಟಿದ್ದೇವೆ ಎನ್ನುವುದನ್ನು ಬೇರೆಯವರೊಂದಿಗೆ ಚರ್ಚಿಸುವ ಮೊದಲು, ವಾದಕ್ಕಿಳಿಯುವ ಮೊದಲು ನಮ್ಮೊಳಗೆ ಉತ್ತರ ಕಂಡುಕೊಳ್ಳಬೇಕಿರುವುದು ಈಗಿನ ತುರ್ತು. ನಮ್ಮ ದೇಶ ಪ್ರಗತಿ ಹೊಂದುವುದು ಹಲವಾರು ಸದ್ಯದ ತೊಂದರೆಗಳಿಗೆ ಪರಿಹಾರ ಕಂಡುಹಿಡಿದಾಗ ಮಾತ್ರ. ನಿರುದ್ಯೋಗ ,ಬಡತನ ಮುಂತಾದ ಅತೀ ದೊಡ್ಡ ಸಮಸ್ಯೆಗಳಿಗೆ ಎಲ್ಲರೂ ಒಂದಾಗಿದ್ದಾರೆ ಮಾತ್ರವೇ ಮುಕ್ತಾಯ ದೊರಕುತ್ತದೆ. ಯೋಚಿಸಿ ಮುನ್ನಡೆಯಬೇಕಾದದ್ದು ಪ್ರತಿಯೋರ್ವನ ಕರ್ತವ್ಯವಾಗಿರಲಿ ಎಂಬುದಷ್ಟೇ ಆಶಯ.

  • ಆದಿತ್ಯ ಪ್ರಸಾದ್ ಪಾಂಡೇಲು

ಪ್ರಸ್ತುತ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಆದಿತ್ಯ ಪ್ರಸಾದ್‌ರವರಿಗೆ ಸಾಹಿತ್ಯ ಹಾಗು ರಂಗಭೂಮಿ ಆಸಕ್ತಿಯ ಕ್ಷೇತ್ರಗಳು. ಸಣ್ಣ ವಯಸ್ಸಿನಿಂದ ಬರಹಗಾರನಾಗಬೇಕೆಂಬ ತುಡಿತಕ್ಕೆ ದಿಕ್ಕು ತೋರಿದ್ದು ರಂಗಭೂಮಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.


ಇದನ್ನೂ ಓದಿ: ಪೇಟ ಧರಿಸಿದವರು ಸೇನೆಯಲ್ಲಿರಬಹುದಾದರೆ, ಶಾಲೆಯಲ್ಲಿ ಹಿಜಾಬ್ ಯಾಕಿರಬಾರದು: ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...