ಬಿಜೆಪಿ ಪರ ಹಿಂದುತ್ವ ದುಷ್ಕರ್ಮಿಗಳ ಬೆದರಿಕೆಗಳ ಕಾರಣಕ್ಕೆ ಹಿಮಾಚಲ ಪ್ರದೇಶದ ಶಿಮ್ಲಾದ ಖಾಸಗಿ ಶಾಲೆಯೊಂದು ಸೋಮವಾರ ವಿದ್ಯಾರ್ಥಿಗಳಿಗಾಗಿ ಯೋಜಿಸಿದ್ದ ಈದ್ ಆಚರಣೆಯನ್ನು ರದ್ದುಗೊಳಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ನಮ್ಮ ಮಕ್ಕಳ ಸುರಕ್ಷತೆ ಮತ್ತು ಯೋಗಕ್ಷೇಮ ನಮ್ಮ ಅತ್ಯುನ್ನತ ಆದ್ಯತೆ” ಎಂದು ಹೇಳುವ ಮೂಲಕ ಶಾಲಾ ಅಧಿಕಾರಿಗಳು ಪ್ರಸ್ತಾವಿತ ಆಚರಣೆಗಳನ್ನು ರದ್ದುಗೊಳಿಸಿದ್ದಾರೆ. ಹಿಮಾಚಲ ಪ್ರದೇಶ
ಈದ್ ಆಚರಣೆಗಾಗಿ ಆಕ್ಲೆಂಡ್ ಹೌಸ್ ಸ್ಕೂಲ್ ವಿದ್ಯಾರ್ಥಿಗಳೊಂದಿಗೆ ಕುರ್ತಾ-ಪೈಜಾಮಾ ಮತ್ತು ಕ್ಯಾಪ್‌ಗಳನ್ನು ಧರಿಸುವಂತೆ ಮತ್ತು ಪನೀರ್, ಸೇಮಿಯಾ ಮತ್ತು ಒಣ ಹಣ್ಣುಗಳೊಂದಿಗೆ ರೋಟಿ ರೋಲ್ ಅನ್ನು ತರಲು ಕೇಳಿಕೊಂಡಿತ್ತು ಎಂದು ಪಿಟಿಐ ವರದಿ ಮಾಡಿದೆ.
ಅದಾಗ್ಯೂ, ಹಿಂದೂತ್ವ ದುಷ್ಕರ್ಮಿಗಳ ಗುಂಪಾದ ದೇವ್ ಭೂಮಿ ಸಂಘರ್ಷ ಸಮಿತಿ ಇದನ್ನು ವಿರೋಧಿಸಿದ್ದು, ಒಂದು ವೇಳೆ ಆಚರಣೆ ನಡೆಸಿದರೆ ಶಾಲೆಯನ್ನು “ಘೇರಾವ್” ಮಾಡುವುದಾಗಿ ಹೇಳಿದೆ. ಆಚರಣೆಗಳನ್ನು ರದ್ದುಗೊಳಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿರುವ ದುಷ್ಕರ್ಮಿಗಳು, ಹಿಮಾಚಲ ಪ್ರದೇಶದಲ್ಲಿ ಇಸ್ಲಾಂ ಅನ್ನು ಪ್ರಚಾರ ಮಾಡಲು “ದುರದೃಷ್ಟಕರ” ಪ್ರಯತ್ನ ನಡೆಯುತ್ತಿದೆ ಎಂದು ದುಷ್ಕರ್ಮಿಗಳ ಗುಂಪಿನ ಸದಸ್ಯರು ಆರೋಪಿಸಿದ್ದಾರೆ. ಹಿಮಾಚಲ ಪ್ರದೇಶ
“ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಪ್ರಯತ್ನಗಳ ಒಂದು ಭಾಗವಾಗಿ ನಾವು ಹೋಳಿ, ದೀಪಾವಳಿ ಮತ್ತು ಕ್ರಿಸ್‌ಮಸ್ ಅನ್ನು ಆಚರಿಸುವಂತೆಯೇ ನರ್ಸರಿಯಿಂದ 2 ನೇ ತರಗತಿಯವರೆಗೆ ಈದ್-ಉಲ್-ಫಿತರ್ ಆಚರಣೆಗಳನ್ನು ನಡೆಸಲಾಯಿತು” ಎಂದು ಶಾಲೆಯು ಪೋಷಕರಿಗೆ ನೀಡಿದ ಹೇಳಿಕೆಯಲ್ಲಿ ಶಾಲೆ ತಿಳಿಸಿದೆ.
“ಇದು ಸಂಪೂರ್ಣವಾಗಿ ಸಾಂಸ್ಕೃತಿಕ ಕಲಿಕೆಯ ಅನುಭವವಾಗಿ ಉದ್ದೇಶಿಸಲಾಗಿತ್ತು. ಇದರಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು ಇರಲಿಲ್ಲ. ವಿದ್ಯಾರ್ಥಿಗಳ ಭಾಗವಹಿಸುವಿಕೆ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿತ್ತು.” ಎಂದು ಅದು ಹೇಳಿದೆ.
“ಕೆಲವು ವ್ಯಕ್ತಿಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಮ್ಮ ಸಂಸ್ಥೆಯ ಬಗ್ಗೆ ಸುಳ್ಳು, ದಾರಿತಪ್ಪಿಸುವ ಮತ್ತು ಕೋಮುವಾದಿಯಾಗಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ” ಎಂಬ ಅಂಶವನ್ನು ಶಾಲೆಯು ಪ್ರತ್ಯೇಕ ಹೇಳಿಕೆಯಲ್ಲಿ ಖಂಡಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಆಚರಣೆಯಲ್ಲಿ ಭಾಗವಹಿಸುವುದು “ಸ್ವಯಂಪ್ರೇರಿತ”ವಾಗಿದ್ದು, ಇದರಲ್ಲಿ “ಯಾವುದೇ ಧಾರ್ಮಿಕ ಆಚರಣೆ ಅಥವಾ ಸೂಚನೆಯನ್ನು ಒಳಗೊಂಡಿಲ್ಲ” ಎಂದು ಶಾಲಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಪ್ರತಿಕ್ರಿಯಿಸಿರುವ ರಾಜ್ಯದ ಶಿಕ್ಷಣ ಸಚಿವ ರೋಹಿತ್ ಠಾಕೂರ್ ಈ ವಿಷಯವನ್ನು ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸ್ಥಳೀಯ ಬುಡಕಟ್ಟು ಸಮುದಾಯದ ಭೂಮಿ ವಶಕ್ಕೆ ಯತ್ನ | ನಿತ್ಯಾನಂದನ ಕೈಲಾಸದ ಸದಸ್ಯರನ್ನು ಗಡೀಪಾರು ಮಾಡಿದ ಬೊಲಿವಿಯಾ
ಸ್ಥಳೀಯ ಬುಡಕಟ್ಟು ಸಮುದಾಯದ ಭೂಮಿ ವಶಕ್ಕೆ ಯತ್ನ | ನಿತ್ಯಾನಂದನ ಕೈಲಾಸದ ಸದಸ್ಯರನ್ನು ಗಡೀಪಾರು ಮಾಡಿದ ಬೊಲಿವಿಯಾ

