Homeಕರ್ನಾಟಕಎನ್‌ಇಟಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ವಿವಾದ: ‘ಕೀ ಆನ್ಸರ್‌’ ನೋಡಿ ಪರೀಕ್ಷಾರ್ಥಿಗಳಿಗೆ ಆತಂಕ

ಎನ್‌ಇಟಿ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ವಿವಾದ: ‘ಕೀ ಆನ್ಸರ್‌’ ನೋಡಿ ಪರೀಕ್ಷಾರ್ಥಿಗಳಿಗೆ ಆತಂಕ

ತಾಂತ್ರಿಕ ದೋಷದ ನಡುವೆಯೂ ಕನ್ನಡ ಎನ್‌ಇಟಿ ಬರೆದವರು ಕೀ ಆನ್ಸರ್‌ ನೋಡಿ ಆತಂಕಿತರಾಗಿದ್ದಾರೆ.

- Advertisement -
- Advertisement -

ಕನ್ನಡ ಇಚ್ಛಿಕ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ) ಗೊಂದಲದ ಗೂಡಾಗಿತ್ತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಹಿಂದಿ ಪ್ರಶ್ನೆಗಳು ಕಾಣಿಸಿಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ನಂತರದಲ್ಲಿ ನ್ಯಾಷನಲ್‌ ಟೆಸ್ಟಿಂಗ್ ಏಜೆನ್ಸಿ ‘ಮರು ಪರೀಕ್ಷೆ’ ನಡೆಸುವುದಾಗಿಯೂ ಹೇಳಿತ್ತು. ಆದರೆ ಈಗ ಬಿಡುಗಡೆ ಮಾಡಿರುವ ‘ಕೀ ಆನ್ಸರ್‌‌ಗಳು’ ಪರೀಕ್ಷೆ ಬರೆದವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

2021, ಡಿಸೆಂಬರ್‌ 26ನೇ ತಾರೀಖಿನಂದು ಆನ್‌ಲೈನ್‌ನಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಸಾಮಾನ್ಯಜ್ಞಾನ ಪ್ರಶ್ನೆಪತ್ರಿಕೆ (100 ಅಂಕಗಳು) ಸರಿಯಾಗಿತ್ತು. ಆದರೆ ಕನ್ನಡ ಪ್ರಶ್ನೆಪತ್ರಿಕೆ (200 ಅಂಕ) ಗೊಂದಲವನ್ನು ಉಂಟುಮಾಡಿತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಒಟ್ಟು ನೂರು ಪ್ರಶ್ನೆಗಳು ಇರುತ್ತವೆ. ತಾಂತ್ರಿಕ ದೋಷದಿಂದಾಗಿ ಮೊದಲ ಹತ್ತು ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದವು. ಉಳಿದ ಪ್ರಶ್ನೆಗಳೆಲ್ಲ ಹಿಂದಿ ಭಾಷೆಯದ್ದಾಗಿದ್ದವು. ಹೀಗಾಗಿ ಪರೀಕ್ಷಾ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರು.

ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ದೋಷದ ನಡುವೆಯೇ ಪರೀಕ್ಷೆ ನಡೆದಿತ್ತು. “ಹೆಚ್ಚುವರಿ ಸಮಯ ನೀಡಿ ಪರೀಕ್ಷೆ ನಡೆಸಿದರೂ ಮತ್ತೊಂದು ಸಮಸ್ಯೆಯಾಗಿತ್ತು. ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಗಳು ಪುನಾರಾವರ್ತನೆಯಾಗಿದ್ದವು. ಹೀಗಾಗಿ ಪರೀಕ್ಷೆ ಬರೆದವರಿಗೂ ಮರು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ. ಅಲ್ಲದೆ ತುಮಕೂರಿನಲ್ಲಿ ಪರೀಕ್ಷೆ ಬರೆಯಲು ಬಯಸಿದ್ದ ಅನೇಕರನ್ನು ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಹಾಕಲಾಗಿತ್ತು. ಹೀಗಾಗಿ ನಮ್ಮ ಸಮಯ, ಹಣ ಎರಡೂ ವ್ಯರ್ಥವಾಗಿದೆ” ಎಂದು ಪರೀಕ್ಷಾ ಅಭ್ಯರ್ಥಿ ಹರೀಶ್ ಸಿಂಗ್ರಿಹಳ್ಳಿ ಅವರು ‘ನಾನುಗೌರಿ.ಕಾಂ’ಗೆ ತಿಳಿಸಿದ್ದರು.

ಪರೀಕ್ಷಾ ಅಭ್ಯರ್ಥಿಗಳ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹೊಸ ನೋಟಿಫಿಕೇಷನ್‌ ಹೊರಡಿಸಿತ್ತು. ಮರು ಪರೀಕ್ಷೆ ನಡೆಸುವುದಾಗಿ ಅಂದು ಸಂಜೆಯೇ ಸ್ಪಷ್ಟನೆ ನೀಡಿತ್ತು.

“ತಾಂತ್ರಿಕ ದೋಷದಿಂದಾಗಿ ಯುಜಿಸಿ-ಎನ್‌ಇಟಿ ಕನ್ನಡ ಪರೀಕ್ಷೆಯಲ್ಲಿ ತೊಂದರೆಯಾಗಿದ್ದು, ಶೀಘ್ರದಲ್ಲೇ ಮರುಪರೀಕ್ಷೆ ನಡೆಸಲು ಕ್ರಮ ವಹಿಸಲಾಗುವುದು” ಎಂದು ಎನ್‌ಟಿಎ ಹೇಳಿತ್ತು. ತಾಂತ್ರಿಕ ದೋಷದ ನಡುವೆಯೇ ಪರೀಕ್ಷೆ ಬರೆದ ಆಕಾಂಕ್ಷಿಗಳ ಸಂಬಂಧ ಯಾವುದೇ ಸ್ಪಷ್ಟನೆ ಇರಲಿಲ್ಲ.

“ಎಲ್ಲರಿಗೂ ಮತ್ತೆ ಪರೀಕ್ಷೆ ನಡೆಸುವುದು ಅಗತ್ಯ” ಎಂದು ಕನ್ನಡ ಪರೀಕ್ಷಾರ್ಥಿಗಳು ಆಗ್ರಹಿಸಿದ್ದರು. ಈ ನಡುವೆಯೇ ಕೀ ಅನ್ಸರ್‌ ಬಿಡುಗಡೆಗೊಳಿಸಲಾಗಿದೆ. ಪರೀಕ್ಷಾ ಬರೆದ ವಿದ್ಯಾರ್ಥಿಗಳು ತಮ್ಮ ‘ಕೀ ಆನ್ಸರ್‌’ಗಳನ್ನು ನೋಡಿ ಆತಂಕಕ್ಕೊಳಗಾಗಿದ್ದಾರೆ. ನೂರು ಪ್ರಶ್ನೆಗಳಲ್ಲಿ ಸುಮಾರು 30ರಿಂದ 60 ಪ್ರಶ್ನೆಗಳನ್ನು ಅಟೆಂಪ್ಟ್‌‌ ಮಾಡಿಯೇ ಇಲ್ಲ ಎಂದು ಕೀ ಆನ್ಸರ್‌ ತೋರಿಸುತ್ತಿದೆ ಎಂದು ಅಭ್ಯರ್ಥಿಗಳು ದೂರಿದ್ದಾರೆ. ನಾನುಗೌರಿ.ಕಾಂಗೆ ಕರೆ ಮಾಡಿದ ಅನೇಕ ಪರೀಕ್ಷಾರ್ಥಿಗಳು ಆತಂಕವನ್ನು ತೋಡಿಕೊಂಡು ತಮ್ಮ ಭವಿಷ್ಯದ ಅನಿಶ್ಚಿತತೆಯನ್ನು ವ್ಯಕ್ತಪಡಿಸಿದ್ದಾರೆ.

ಮಂಡ್ಯದಿಂದ ಕರೆ ಮಾಡಿದ (ಮೈಸೂರು ವಿವಿ ವಿದ್ಯಾರ್ಥಿ) ಸಂದೀಪ್‌‌  ಅವರು, “ನನ್ನ ಕೀ ಆನ್ಸರ್‌ನಲ್ಲಿ ಶೇ. 60ರಷ್ಟು ಪ್ರಶ್ನೆಗಳು ‘not attempt’ ಎಂದು ಬಂದಿದೆ. ಪ್ರಶ್ನೆ ಪತ್ರಿಕೆಯೂ ಸುಲಭವಾಗಿತ್ತು. ಹೀಗಾಗಿ ಈ ಭಾರಿ ಎನ್‌ಇಟಿ ಪಾಸ್‌ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು ಕಾಯುತ್ತಿದ್ದೆವು. ಕೆಲವರಿಗೆ ಮೊದಲ ಪ್ರಶ್ನೆ ಪತ್ರಿಕೆ ಹೀಗೆ ಸಮಸ್ಯೆಯಾಗಿದೆ. ನನಗೆ ಎರಡನೇ ಪ್ರಶ್ನೆಪತ್ರಿಕೆ ಸಮಸ್ಯೆಯಾಗಿದೆ. submit ಕೊಟ್ಟು ಬಂದಿದ್ದೇನೆ. submit ಕೊಟ್ಟಿಲ್ಲದಿದ್ದರೂ ಅದು auto submit ಆಗಬೇಕಿತ್ತು. ಆದರೂ ಸಮಸ್ಯೆಯಾಗಿದೆ. ಪರೀಕ್ಷಾರ್ಥಿಳೆಲ್ಲ ಚಿಂತೆಗೊಳಗಾಗಿದ್ದೇವೆ. ಒಂದೋ ಎರಡೋ ಪ್ರಶ್ನೆಗಳು not attempt ಎಂದರೆ ಪರವಾಗಿಲ್ಲ. ಆದರೆ ಶೇ. 60 ಪ್ರಶ್ನೆಗಳು ಹೀಗೆಯೇ ಆದರೆ ನಾನು ಕೇವಲ ಶೇ. 40ರಷ್ಟು ಪ್ರಶ್ನೆಗಳನ್ನಷ್ಟೇ ಪ್ರಯತ್ನಿಸಿದ್ದೇನೆ ಎಂದಾಗುತ್ತದೆ. ಸಾಮಾನ್ಯ ಪ್ರಶ್ನೆಪತ್ರಿಕೆಯ ಕೀ ಆನ್ಸರ್‌ನಲ್ಲಿ ಕೆಲವರಿಗೆ ಈ ಸಮಸ್ಯೆಯಾಗಿದ್ದರೆ, ಕನ್ನಡ ಐಚ್ಛಿಕ ಪ್ರಶ್ನೆಪತ್ರಿಕೆಯಲ್ಲಿ ಮಾತ್ರ ಪ್ರತಿಯೊಬ್ಬರಿಗೂ ಈ ತೊಂದರೆಯಾಗಿದೆ. ಕನಿಷ್ಠ 30 ಪ್ರಶ್ನೆಗಳಾದರೂ not Attempt ಎಂದು ಎಲ್ಲರಿಗೂ ತೋರಿಸುತ್ತಿದೆ” ಎಂದು ಆರೋಪಿಸಿದರು.

 

“ಪರೀಕ್ಷೆ ದಿನ ಹಿಂದಿ ಪ್ರಶ್ನೆಗಳೆಲ್ಲ ಕಾಣಿಸಿಕೊಂಡು ಆತಂಕಕ್ಕೊಳಗಾದೆವು. ಮತ್ತೆ ಲಾಗಿನ್‌ ಆಗಿ ಅನೇಕರು ಪರೀಕ್ಷೆ ಬರೆದಿದ್ದೇವೆ. ಏನು ಮಾಡಬೇಕೆಂದೇ ಗೊತ್ತಾಗುತ್ತಿಲ್ಲ. ಕನ್ನಡ ವಿದ್ಯಾರ್ಥಿಗಳಿಗೆ ಮಾತ್ರ ಈ ಸಮಸ್ಯೆಯಾಗುತ್ತಿದೆ” ಎಂದು ಆತಂಕ ತೋಡಿಕೊಂಡರು.

ಮೈಸೂರು ವಿವಿ ವಿದ್ಯಾರ್ಥಿ ಶರತ್‌ ಮಾತನಾಡಿ, “ನೀವು ಸಬ್ಮಿಟ್‌ ಮಾಡಿದ್ದೀರಿ. ಸಬ್ಮಿಟ್ ಆದವರಿಗೆ ಮತ್ತೆ ಪರೀಕ್ಷೆ ಬರೆಯುವ ಅಗತ್ಯವಿಲ್ಲ ಎನ್ನಲಾಗಿತ್ತು. ಸಬ್ಮಿಟ್ ಆದವರಿಗೆ ಸರಿಯಾಗಿ ಫಲಿತಾಂಶ ಕೊಡಬೇಕು ತಾನೇ? ಈಗ ನಾಟ್ ಅಟೆಂಪ್ಟ್‌ ಎಂದು ಬರುತ್ತಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನೇ ನೀಡಿ ಬಂದಿದ್ದೇವೆ. ಮೂರ್ನಾಲ್ಕು ಪ್ರಶ್ನೆಗಳನ್ನು ಬಿಟ್ಟು ಬಂದಿದ್ದೇವೆ ಎಂದರೆ ಒಪ್ಪಬಹುದು. ಆದರೆ ಮೂವತ್ತರಿಂದ ಅರವತ್ತು ಪ್ರಶ್ನೆಗಳನ್ನು ಬಿಟ್ಟು ಬರಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

ಕೀ ಆನ್ಸರ್‌ ಸಂಬಂಧ ನೋಟಿಫಿಕೇಷನ್‌ ಬಿಡುಗಡೆ ಮಾಡಿರುವ ಎನ್‌ಟಿಎ, ತೊಂದರೆಯಾಗಿರುವ ಕನ್ನಡ ಪರೀಕ್ಷಾರ್ಥಿಗಳ ಉತ್ತರ ಪತ್ರಿಕೆಯನ್ನೂ ಒಳಗೊಂಡಿರುವುದಾಗಿ ತಿಳಿಸಿದೆ. ಆದರೆ ತಾಂತ್ರಿಕ ದೋಷದ ನಡುವೆಯೂ ಪರೀಕ್ಷೆ ಬರೆದವರ ಕೀ ಆನ್ಸರ್‌ಗಳಲ್ಲಿ ತೊಂದರೆ ಕಾಣಿಸಿರುವುದು ಗೊಂದಲ ಸೃಷ್ಟಿಸಿದೆ. ಕನ್ನಡದ ಎಲ್ಲ ಪರೀಕ್ಷಾರ್ಥಿಗಳಿಗೂ ಇದೇ ಸಮಸ್ಯೆಯಾಗಿರುವಾಗ ಕೀ ಆನ್ಸರ್‌ ಬಿಟ್ಟು ಗೊಂದಲ ಸೃಷ್ಟಿಸಿರುವುದು ಏತಕ್ಕೆ ಎಂದು ಅಭ್ಯರ್ಥಿಗಳು ಕೇಳುತ್ತಿದ್ದಾರೆ.

 

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು, ಕೀ ಆನ್ಸರ್‌ಗಳನ್ನು ಜನವರಿ 21, 2022ರಂದು ಬಿಡುಗಡೆ ಮಾಡಿದೆ. UGC ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ugcnet.nta.nic.inನಲ್ಲಿ ಪರಿಶೀಲಿಸಬಹುದು. ಆಕ್ಷೇಪಣೆಗಳನ್ನು ಜನವರಿ 24, 2022ರವರೆಗೆ ಸಲ್ಲಿಬಹುದು.

ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ಆಕ್ಷೇಪಣೆ ಶುಲ್ಕವನ್ನು ಪಾವತಿಸಲು ಜನವರಿ 24 ಕೊನೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಪ್ರತಿ ಸವಾಲಿನ ಉತ್ತರಕ್ಕೆ ₹1000 ಸಂಸ್ಕರಣಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಆಕ್ಷೇಪಣೆ ಸರಿಯಾಗಿದ್ದರೆ ಕೀ ಆನ್ಸರ್‌ ಪರಿಷ್ಕರಿಸಲಾಗುತ್ತದೆ. ಪಾವತಿಸಿದ ಸಂಸ್ಕರಣಾ ಶುಲ್ಕವನ್ನೂ ಮರುಪಾವತಿಸಲಾಗುತ್ತದೆ.


ಎನ್‌ಇಟಿ ‘ಕನ್ನಡ’ ಪ್ರಶ್ನೆಪತ್ರಿಕೆಯಲ್ಲಿ ‘ಹಿಂದಿ’ ಹಾವಳಿ; ಅಭ್ಯರ್ಥಿಗಳ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...