Homeಮುಖಪುಟಇಂಗ್ಲಿಷ್ ಪಠ್ಯಪುಸ್ತಕಗಳಿಗೆ ಹಿಂದಿ ಶೀರ್ಷಿಕೆಗಳು: ‘ಸಾಂಸ್ಕೃತಿಕ ಹೇರಿಕೆ’ ವಿರೋಧಿಸಿದ ದಕ್ಷಿಣ ರಾಜ್ಯಗಳು

ಇಂಗ್ಲಿಷ್ ಪಠ್ಯಪುಸ್ತಕಗಳಿಗೆ ಹಿಂದಿ ಶೀರ್ಷಿಕೆಗಳು: ‘ಸಾಂಸ್ಕೃತಿಕ ಹೇರಿಕೆ’ ವಿರೋಧಿಸಿದ ದಕ್ಷಿಣ ರಾಜ್ಯಗಳು

- Advertisement -
- Advertisement -

ನವದೆಹಲಿ: ಇತ್ತೀಚೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಇಂಗ್ಲಿಷ್ ಪಠ್ಯಪುಸ್ತಕಗಳಿಗೆ ಹಿಂದಿ ಶೀರ್ಷಿಕೆಗಳನ್ನು ನೀಡಿರುವ ಕ್ರಮವು ಹೊಸ ವಿವಾದವನ್ನು ಹುಟ್ಟುಹಾಕಿದೆ. ದಕ್ಷಿಣ ರಾಜ್ಯಗಳ ನಾಯಕರು ಕೇಂದ್ರವನ್ನು ಭಾಷಾ ಹೇರಿಕೆಗೆ ಖಂಡಿಸಿದ್ದಾರೆ.

ಈ ಕ್ರಮವು 6ನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕಕ್ಕೆ ಪೂರ್ವಿ ಎಂದು ಮರುನಾಮಕರಣ ಮಾಡಿರುವುದನ್ನು ನೋಡಬಹುದಾಗಿದೆ. ಹಾಗೆಯೇ 1 ಮತ್ತು 2ನೇ ತರಗತಿಯ ಇಂಗ್ಲಿಷ್ ಪುಸ್ತಕಗಳನ್ನು ‘ಮೃದಂಗ್’ ಮತ್ತು 3ನೇ ತರಗತಿಯ ಪುಸ್ತಕಗಳನ್ನು ‘ಸಂತೂರ್’ ಎಂದು ಮರುನಾಮಕರಣ ಮಾಡಲಾಗಿದೆ. ಇವು ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ವಾದ್ಯಗಳೊಂದಿಗೆ ಸಂಬಂಧಿಸಿದ ಹೆಸರುಗಳಾಗಿವೆ. ಅದೇ ರೀತಿ 6ನೇ ತರಗತಿಯ ಗಣಿತ ಪುಸ್ತಕವನ್ನು ಈಗ ‘ಗಣಿತ ಪ್ರಕಾಶ್’ ಎಂದು ಮತ್ತು 3ನೇ ತರಗತಿಯನ್ನು ಗಣಿತ ಮೇಳ ಎಂದು ಕರೆಯಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ (NEP) ಅಡಿಯಲ್ಲಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡುವ ಭಾಗವಾಗಿ ತೆಗೆದುಕೊಳ್ಳಲಾದ ಈ ನಿರ್ಧಾರವನ್ನು ಕೇರಳ ಮತ್ತು ತಮಿಳುನಾಡಿನಲ್ಲಿ ತೀವ್ರವಾಗಿ ಟೀಕಿಸಲಾಗುತ್ತಿದೆ. ರಾಜಕಾರಣಿಗಳು ಇಂತಹ ಕ್ರಮಗಳು ದೇಶದ ಭಾಷಾ ವೈವಿಧ್ಯತೆ ಮತ್ತು ಒಕ್ಕೂಟ ರಚನೆಗೆ ಬೆದರಿಕೆ ಹಾಕುತ್ತವೆ ಎಂದು ಎಚ್ಚರಿಸಿದ್ದಾರೆ.

ಕೇರಳ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಈ ಬದಲಾವಣೆಯನ್ನು ಖಂಡಿಸಿ, ತಕ್ಷಣದ ಪರಿಶೀಲನೆಗೆ ಒತ್ತಾಯಿಸಿದ್ದಾರೆ. “ಇದು ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ನಮ್ಮ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ. ಶಿಕ್ಷಣವು ಸಬಲೀಕರಣ ಮತ್ತು ಪರಸ್ಪರರ ಒಪ್ಪಿಗೆಯ ಸಾಧನವಾಗಿರಬೇಕು, ಹೇರಿಕೆಯಲ್ಲ” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇಂಗ್ಲಿಷ್ ಶೀರ್ಷಿಕೆಗಳನ್ನು ದಶಕಗಳಿಂದ ಭಾಷಾ ಸಾಮರಸ್ಯವನ್ನು ಉತ್ತೇಜಿಸಲು ಬಳಸಲಾಗುತ್ತಿದೆ. ಅವುಗಳನ್ನು ಹಿಂದಿ ಪದಗಳೊಂದಿಗೆ ಬದಲಾಯಿಸುವುದು ಸಂಪೂರ್ಣವಾಗಿ ತಪ್ಪು ಮತ್ತು ಭಾರತದ ಬಹುಭಾಷಾ ಪಾತ್ರದ ಮೂಲಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ರೀತಿಯ ಕಳವಳಗಳನ್ನು ಪ್ರತಿಧ್ವನಿಸುತ್ತಾ, ಹಿಂದಿ ಹೇರಿಕೆಯನ್ನು ನಿರಂತರವಾಗಿ ವಿರೋಧಿಸುತ್ತಿರುವ ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷವು ಈ ಕ್ರಮವನ್ನು ಟೀಕಿಸಿದೆ. ರಾಜ್ಯಸಭಾ ಸಂಸದ ಪಿ.ವಿಲ್ಸನ್ ಅವರು, “ಕೇಂದ್ರವು ಮಾತನಾಡುತ್ತಿರುವ ತ್ರಿಭಾಷಾ ನೀತಿ ಇದೇನಾ? ಇಂಗ್ಲಿಷ್ ಪುಸ್ತಕಗಳಿಗೂ ಈಗ ಹಿಂದಿ ಹೆಸರುಗಳನ್ನು ನೀಡಲಾಗುತ್ತಿದೆ. ಪ್ರಾದೇಶಿಕ ಭಾಷೆಗಳಿಗೆ ಜಾಗ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಹಳ ಹಿಂದಿನಿಂದಲೂ ಎನ್‌ಇಪಿಯ ಭಾಷಾ ನೀತಿಯು ಶಿಕ್ಷಣದಲ್ಲಿ ಹಿಂದಿ ಪ್ರಾಬಲ್ಯವನ್ನು ಉತ್ತೇಜಿಸುವ ಪರೋಕ್ಷ ಪ್ರಯತ್ನವಾಗಿದೆ ಎಂದು ತಮ್ಮ ಈ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ವಿಶೇಷವಾಗಿ ತಮಿಳುನಾಡಿನಂತಹ ಹಿಂದಿಯೇತರ ಮಾತನಾಡುವ ರಾಜ್ಯದಲ್ಲಿ ತನ್ನದೇ ಆದ ಶಿಕ್ಷಣ ನೀತಿಯನ್ನು ರೂಪಿಸಲು ಈಗಾಗಲೇ ತಜ್ಞರ ಸಮಿತಿಯನ್ನು ಸ್ಥಾಪಿಸಿದೆ ಮತ್ತು ಎನ್‌ಇಪಿಯನ್ನು ಜಾರಿಗೆ ತರಲು ನಿರಾಕರಿಸಿದೆ.

ಮರುನಾಮಕರಣವು ಕೇವಲ ಇಂಗ್ಲಿಷ್ ಪುಸ್ತಕಗಳಿಗೆ ಸೀಮಿತವಾಗಿಲ್ಲ. 1ರಿಂದ 6ನೇ ತರಗತಿಯವರೆಗಿನ ಹೊಸ NCERT ಪುಸ್ತಕಗಳನ್ನು NEP ಚೌಕಟ್ಟಿನಡಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಹಿಂದಿನ ಆವೃತ್ತಿಗಳು ವಿಭಿನ್ನ ಭಾಷೆಗಳಲ್ಲಿ ಅಂದರೆ Mathematics in English, ಹಿಂದಿಯಲ್ಲಿ ಗಣಿತ  and Riyazi in Urdu  ಮುಂತಾದವು ವಿಭಿನ್ನ ಶೀರ್ಷಿಕೆಗಳನ್ನು ಆಯಾ ಭಾಷೆಯಲ್ಲೇ ಹೊಂದಿದ್ದವು. ಹೊಸ ಆವೃತ್ತಿಗಳು ‘ಗಣಿತ್ ಪ್ರಕಾಶ್‌’ ಎಂದು ಎಲ್ಲಾ ಭಾಷೆಗಳಿಗೂ ಈ ಹಿಂದಿ ಶೀರ್ಷಿಕೆಯನ್ನು ಹೊಂದಿವೆ.

ಸಾಂಸ್ಕೃತಿಕ ಮತ್ತು ಭಾಷಾ ಸ್ವಾಯತ್ತತೆಯನ್ನು ಗೌರವಿಸುವ ಕೇರಳದಂತಹ ರಾಜ್ಯಗಳು ಈ ಬದಲಾವಣೆಯನ್ನು ಸಾಂಸ್ಕೃತಿಕ ಕೇಂದ್ರೀಕರಣದ ದೊಡ್ಡ ಪ್ರವೃತ್ತಿಯ ಸಂಕೇತವೆಂದು ನೋಡುತ್ತಿವೆ. “ಇದು ಸಾಂಸ್ಕೃತಿಕ ಹೇರಿಕೆ. ಇಂಗ್ಲಿಷ್ ಪುಸ್ತಕಗಳನ್ನು ಹಿಂದಿಯಲ್ಲಿ ಮರುನಾಮಕರಣ ಮಾಡಿರುವುದಕ್ಕೆ ಯಾವ ಸಮರ್ಥನೆಯನ್ನು ನೀಡಬಹುದು?” ಎಂದು ಶಿವನ್‌ಕುಟ್ಟಿ ಪ್ರಶ್ನಿಸಿದ್ದಾರೆ. ಇತರ ದಕ್ಷಿಣ ರಾಜ್ಯಗಳು ಕೇಂದ್ರದ ಇಂತಹ ಕ್ರಮಗಳನ್ನು “ಸಾಮೂಹಿಕವಾಗಿ ವಿರೋಧಿಸಲು” ಕರೆ ನೀಡಿದೆ.

ಹೆಚ್ಚುತ್ತಿರುವ ಟೀಕೆಗಳ ಹೊರತಾಗಿಯೂ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ತ್ರಿಭಾಷಾ ನೀತಿಯು ಸಾಂವಿಧಾನಿಕ ಆದೇಶ ಮತ್ತು NEP 2020ರ ಕೇಂದ್ರದ ಅಂಶವಾಗಿದೆ ಎಂದು ಹೇಳಿದ್ದಾರೆ.

ಆದಾಗ್ಯೂ ಇಂಗ್ಲಿಷ್ ಪಠ್ಯಪುಸ್ತಕಗಳನ್ನು ಹಿಂದಿಯಲ್ಲಿ ಹೆಸರಿಸುವುದು ಸರಿಯಾದುದಲ್ಲ  ಎಂದು ವಿಮರ್ಶಕರು ವಾದಿಸುತ್ತಾರೆ. “ಇಂಗ್ಲಿಷ್ ಪುಸ್ತಕಗಳು ಹಿಂದಿ ಶೀರ್ಷಿಕೆಗಳನ್ನು ಹೊಂದಿರಬೇಕು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ” ಎಂದು ಅನಾಮಧೇಯರಾಗಿ ಉಳಿಯಲು ಬಯಸುವ ಹಿರಿಯ ಶಿಕ್ಷಣತಜ್ಞರು ಹೇಳುತ್ತಾರೆ.

ಈ ನಿರ್ಧಾರವು ಕೇಂದ್ರದ ಶಿಕ್ಷಣ ಸುಧಾರಣೆಯ ವಿಧಾನ ಮತ್ತು ಪ್ರಾದೇಶಿಕ ಭಾಷೆಗಳ ಸ್ಥಿತಿಗತಿಯ ಬಗ್ಗೆ ವಿಶಾಲವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇಂತಹ ನಿರ್ಧಾರಗಳು ಉತ್ತರ-ದಕ್ಷಿಣ ವಿಭಜನೆಯನ್ನು ಇನ್ನಷ್ಟು ಹೆಚ್ಚಿಸಬಹುದು ಮತ್ತು ಒಕ್ಕೂಟ ವ್ಯವಸ್ಥೆಯನ್ನು ಹಾನಿಗೊಳಿಸಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಭಾಷಾ ರಾಜಕೀಯವು ಭಾರತದಲ್ಲಿ ವಿಶೇಷವಾಗಿ ಹಿಂದಿ ಮಾತನಾಡುವ ಹೃದಯಭಾಗ ಮತ್ತು ದಕ್ಷಿಣ ರಾಜ್ಯಗಳ ನಡುವೆ ಬಹಳ ಹಿಂದಿನಿಂದಲೂ ವಿವಾದಾತ್ಮಕ ವಿಷಯವಾಗಿದೆ. 1960ರ ದಶಕದ ಹಿಂದಿ ವಿರೋಧಿ ಆಂದೋಲನದಿಂದಲೂ ತಮಿಳುನಾಡಿಗೆ ಹಿಂದಿ ಹೇರಿಕೆಯನ್ನು ವಿರೋಧಿಸುವ ಇತಿಹಾಸವಿದೆ. ಹೀಗಾಗಿ ಪ್ರಸ್ತುತ ನಡೆಯನ್ನು ವಿಶಾಲವಾದ ಐತಿಹಾಸಿಕ ಸಂದರ್ಭದಲ್ಲಿ ನೋಡಲಾಗುತ್ತಿದೆ.

ಇಲ್ಲಿ ಆಳವಾಗಿ ಬೇರೂರಿರುವ ಅನುಮಾನಗಳಿವೆ. ಭಾಷಾ ಗುರುತನ್ನು ಹಾಳುಮಾಡುವ ಯಾವುದೇ ಪ್ರಯತ್ನವು ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಕೇಂದ್ರವು ನೆನಪಿನಲ್ಲಿಡಬೇಕು ಎಂದು ರಾಜಕೀಯ ವಿಶ್ಲೇಷಕ ಆರ್.ಬಾಲಸುಬ್ರಮಣಿಯಂ ಹೇಳುತ್ತಾರೆ.

ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿಯನ್ನು ಪ್ರಚಾರ ಮಾಡುವುದು. ಪಠ್ಯಪುಸ್ತಕ ಶೀರ್ಷಿಕೆಗಳ ಮೂಲಕವೂ ಸಹ  ಹಿಂದಿ ಹೇರುವುದು ನಮ್ಮನ್ನು ಹೊರಗಿಡುವಿಕೆಯ ಸಂದೇಶ ಎಂದು ದಕ್ಷಿಣ ರಾಜ್ಯಗಳು ವಾದಿಸುತ್ತಿವೆ. ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವುದು ಮುಖ್ಯವಾದರೂ, ಪ್ರಾದೇಶಿಕ ಭಾಷೆಗಳು ಮತ್ತು ಜಾಗತಿಕ ಭಾಷೆಯಾಗಿ ಉಳಿದಿರುವ ಇಂಗ್ಲಿಷ್ ಅನ್ನು ಬದಿಗಿಡುವ ನೆಪದಲ್ಲಿ ಅದು ಬರಬಾರದು ಎಂದು ವಿಮರ್ಶಕರು ವಾದಿಸುತ್ತಾರೆ.

ರಾಜಕೀಯ ವಿವಾದದ ನಡುವೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಗೊಂದಲವನ್ನು ಎದುರಿಸಬೇಕಾಗಿದೆ. “ನಮ್ಮ ವಿದ್ಯಾರ್ಥಿಗಳು ಈಗಾಗಲೇ ಹೊಸ ಪಠ್ಯಕ್ರಮ ಮತ್ತು ಸ್ವರೂಪದೊಂದಿಗೆ ಹೋರಾಡುತ್ತಿದ್ದಾರೆ. ಹೆಸರುಗಳಲ್ಲಿನ ಈ ಬದಲಾವಣೆಗಳು ಅವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ” ಎಂದು ಬೆಂಗಳೂರಿನ ಶಾಲಾ ಶಿಕ್ಷಕರೊಬ್ಬರು ಅವಲತ್ತುಕೊಂಡಿದ್ದಾರೆ.

ಶಿಕ್ಷಣದ ಮೂಲಕ ಭಾರತೀಯ ಮೌಲ್ಯಗಳನ್ನು ಉತ್ತೇಜಿಸುವುದು ಮುಖ್ಯವಾದರೂ, ಬೋಧನಾ ಮಾಧ್ಯಮ ಮತ್ತು ಭಾಷೆ ದೇಶದ ವೈವಿಧ್ಯಮಯ ಭಾಷಾ ವಾಸ್ತವತೆಯನ್ನು ಪ್ರತಿಬಿಂಬಿಸಬೇಕು ಎಂದು ಅನೇಕ ಶಿಕ್ಷಕರು ಭಾವಿಸುತ್ತಾರೆ. “ಇಂಗ್ಲಿಷ್ ಪುಸ್ತಕಗಳನ್ನು ಹಿಂದಿಯಲ್ಲಿ ಹೆಸರಿಸುವುದರಿಂದ ಹಿಂದಿಯೇತರ ಭಾಷಿಕರನ್ನು ದೂರವಿಡಬಹುದು ಮತ್ತು ಕಲಿಕೆಯನ್ನು ಸಂಕೀರ್ಣಗೊಳಿಸಬಹುದು” ಎಂದು ಚೆನ್ನೈ ಮೂಲದ ಪ್ರಾಂಶುಪಾಲರು ಹೇಳಿದರು.

ಉತ್ತರ ಪ್ರದೇಶ| ವಾಕ್-ಶ್ರವಣದೋಷವುಳ್ಳ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಚಿತ್ರಹಿಂಸೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...