Homeಕರ್ನಾಟಕ‘ಹಿಂದೂ’ ಪದಕ್ಕೆ ಹೀನರ್ಥವಿದೆ: ಲೇಖನ ಪ್ರಕಟಿಸಿದ ಇಸ್ಕಾನ್‌ ವಿರುದ್ಧ ಬಿಜೆಪಿ ಹೋರಾಡುವುದೆ?

‘ಹಿಂದೂ’ ಪದಕ್ಕೆ ಹೀನರ್ಥವಿದೆ: ಲೇಖನ ಪ್ರಕಟಿಸಿದ ಇಸ್ಕಾನ್‌ ವಿರುದ್ಧ ಬಿಜೆಪಿ ಹೋರಾಡುವುದೆ?

- Advertisement -
- Advertisement -

“ಹಿಂದೂ ಎಂಬ ಪದಕ್ಕೆ ಕೆಟ್ಟ ಅರ್ಥವಿದೆ. ಹಲವು ಗ್ರಂಥಗಳಲ್ಲಿ ಈ ಉಲ್ಲೇಖಗಳನ್ನು ಮಾಡಲಾಗಿದೆ” ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿಯವರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ. “ಕಾಂಗ್ರೆಸ್‌ ಪಕ್ಷವು ಹಿಂದೂ ವಿರೋಧಿ”, “ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ” ಎಂದು ಬಿಜೆಪಿ ಹಾಗೂ ಸಂಘಪರಿವಾರ ಬೀದಿಗೆ ಇಳಿದು ಪ್ರತಿಭಟಿಸಿವೆ.

ಬಿಜೆಪಿ ನಾಯಕರಂತೂ ತರಹೇವಾರಿ ಹೇಳಿಕೆಗಳನ್ನು ನೀಡುತ್ತಾ, ಜಾರಕಿಹೊಳಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಈ ಪದದ ಹಿನ್ನೆಲೆಯ ಕುರಿತು ತನಿಖೆ ನಡೆಸುವಂತೆ ಸತೀಶ್ ಜಾರಕಿಹೊಳಿಯವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಲ್ಲಿ ಮನವಿಯನ್ನೂ ಮಾಡಿದ್ದಾರೆ. ಆದರೆ ಜಾರಕಿಹೊಳಿಯವರ ವಿರುದ್ಧ ದ್ವೇಷ ಅಭಿಯಾನ ನಡೆಯುತ್ತಲೇ ಇದೆ. ಈ ಚರ್ಚೆಯ ಹೊತ್ತಿನಲ್ಲಿ ‘ಇಸ್ಕಾನ್‌ ಸಂಸ್ಥೆ’ ಪ್ರಕಟಿಸಿರುವ ಲೇಖನ ಚರ್ಚೆಗೆ ಗ್ರಾಸವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಇಸ್ಕಾನ್‌’ ಧಾರ್ಮಿಕ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಈ ಹಿಂದೆ ಪ್ರಕಟವಾಗಿರುವ ಲೇಖನವೊಂದು ಚರ್ಚೆಗೆ ಬಳಕೆಯಾಗುತ್ತಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹಾಗೂ ವಕೀಲರಾದ ಭೀಮನಗೌಡ ಪರಗೊಂಡ ಅವರು, “ನಂದ ನಂದನದಾಸ ಎಂಬುವವರ ಹತ್ತಾರು ಲೇಖನಗಳನ್ನು ಇಸ್ಕಾನ್‌ ಸಂಸ್ಥೆಯ ಜಾಲತಾಣದಲ್ಲಿ ಬರೆದಿರುವ ಇಸ್ಕಾನ್‌ ಸದಸ್ಯರಾಗಿದ್ದಾರೆ. 4 ವರ್ಷಗಳ ಹಿಂದೆಯೇ ʼಹಿಂದೂʼ ಎಂದರೆ ಕಳ್ಳ, ಕರಿಯ ಎಂದಿದ್ದಾರೆ. ಸತೀಶ್‌ ಜಾರಕಿಹೊಳಿಯವರ ವಿರುದ್ದ ಹರಿಹಾಯ್ದವರು ಇಸ್ಕಾನ್‌ ವಿರುದ್ದ ಉಸಿರೆತ್ತುತ್ತಾರಾ?” ಎಂದು ಪ್ರಶ್ನಿಸುತ್ತಾ ಬಿಜೆಪಿಯನ್ನು ಟ್ಯಾಗ್‌ ಮಾಡಿದ್ದಾರೆ.

ಭೀಮನಗೌಡ ಪರಗೊಂಡ ಅವರು ಲಗತ್ತಿಸಿರುವ ಲಿಂಕ್‌ ಕ್ಲಿಕ್ ಮಾಡಿದರೆ, ‘ಹಿಂದೂ’ ಎಂಬ ಪದದ ಹಿನ್ನೆಲೆಯ ಕುರಿತು ಮಾಡಲಾಗಿರುವ ಹಲವಾರು ಉಲ್ಲೇಖನಗಳನ್ನು ನಂದ ನಂದನದಾಸ ಅವರ ಲೇಖನದಲ್ಲಿ ಕಾಣಬಹುದು.

ಲೇಖನದಲ್ಲಿರುವ ಆಯ್ದ ಕೆಲವು ಅಂಶಗಳು ಹೀಗಿವೆ:

‘ಹಿಂದೂ’ ಎಂಬ ಪದವು ಸಂಸ್ಕೃತದದ್ದಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಯಾವುದೇ ವೈದಿಕ ಸಾಹಿತ್ಯದಲ್ಲಿ ಇದು ಕಂಡುಬರುವುದಿಲ್ಲ ಎಂದು ಹಲವು ವಿದ್ವಾಂಸರು ಹೇಳುತ್ತಾರೆ. ಹಾಗಾದರೆ ಅಂತಹ ಹೆಸರು ನಿಜವಾಗಿಯೂ ವೈದಿಕ ಮಾರ್ಗ ಅಥವಾ ಸಂಸ್ಕೃತಿಯನ್ನು ಹೇಗೆ ಪ್ರತಿನಿಧಿಸುತ್ತದೆ? ಮತ್ತು ವೈದಿಕ ಸಾಹಿತ್ಯವಿಲ್ಲದೆ, “ಹಿಂದೂ ಧರ್ಮಕ್ಕೆ ಯಾವುದೇ ಆಧಾರವಿಲ್ಲ”….

‘ಹಿಂದೂ’ ಎಂಬ ಹೆಸರನ್ನು ಹೊರಗಿನವರು, ಸಿಂಧು ನದಿಯ ಹೆಸರನ್ನು ಸರಿಯಾಗಿ ಉಚ್ಚರಿಸಲು ಸಾಧ್ಯವಾಗದ ಆಕ್ರಮಣಕಾರರು ಬಳಸಿರುವುದಾಗಿ ಹೆಚ್ಚಿನ ವಿದ್ವಾಂಸರು ಭಾವಿಸುತ್ತಾರೆ. ಸಂಸ್ಕೃತ ನಿಘಂಟುತಜ್ಞರಾದ ಸರ್ ಮೋನಿಯರ್ ವಿಲಿಯಮ್ಸ್ ಪ್ರಕಾರ, “ಹಿಂದೂ ಅಥವಾ ಭಾರತ ಪದಗಳಿಗೆ ಸ್ಥಳೀಯ ಮೂಲವನ್ನು ಕಂಡುಹಿಡಿಯಲಾಗುವುದಿಲ್ಲ. ಈ ಪದಗಳು ಯಾವುದೇ ಬೌದ್ಧ, ಜೈನ ಪಠ್ಯಗಳಲ್ಲಿ ಅಥವಾ ಭಾರತದ ಯಾವುದೇ ಅಧಿಕೃತ 23 ಭಾಷೆಗಳಲ್ಲಿ ಕಂಡುಬರುವುದಿಲ್ಲ….”

ದಿ ಗ್ರೇಟ್ ಅಲೆಕ್ಸಾಂಡರ್ ಮೊದಲಿಗೆ ಸಿಂಧು ನದಿಯನ್ನು ‘ಇಂದು’ ಎಂದು ಮರುನಾಮಕರಣ ಮಾಡಿದನು ಎಂದು ಕೆಲವು ಮೂಲಗಳು ಹೇಳುತ್ತವೆ. ಆರಂಭದಲ್ಲಿನ “ಎಸ್‌‌” ಅನ್ನು ಕೈಬಿಡಲಾಯಿತು, ಹೀಗಾಗಿ ಗ್ರೀಕರು ಉಚ್ಚರಿಸಲು ಸುಲಭವಾಯಿತು. ಇದು ‘ಇಂದೂಸ್‌’ ಎಂದು ಹೆಸರಾಯಿತು. ಕ್ರಿಸ್ತ ಪೂರ್ವ 325ರ ಸುಮಾರಿಗೆ ಅಲೆಕ್ಸಾಂಡರ್ ಭಾರತವನ್ನು ಆಕ್ರಮಿಸಿದಾಗ ಅವನ ಮೆಸಿಡೋನಿಯನ್ ಪಡೆಗಳು ಸಿಂಧೂ ನದಿಯ ಪೂರ್ವದ ಭೂಮಿಯನ್ನು ಭಾರತ ಎಂದು ಕರೆದರು. ಇದನ್ನು ವಿಶೇಷವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿ ಬಳಸಲಾಗುತ್ತಿತ್ತು….

ನಂತರ, ಮುಸ್ಲಿಂ ಆಕ್ರಮಣಕಾರರು ಅಫ್ಘಾನಿಸ್ತಾನ ಮತ್ತು ಪರ್ಷಿಯಾದಂತಹ ಸ್ಥಳಗಳಿಂದ ಆಗಮಿಸಿದಾಗ, ಅವರು ಸಿಂಧೂ ನದಿಯನ್ನು ಹಿಂದೂ ನದಿ ಎಂದು ಕರೆದರು. ಅದರ ನಂತರ, ಸಿಂಧೂ ನದಿ ಇರುವ ಭಾರತದ ವಾಯುವ್ಯ ಪ್ರಾಂತ್ಯಗಳಲ್ಲಿನ ಆ ಭೂಪ್ರದೇಶದ ನಿವಾಸಿಗಳನ್ನು ವಿವರಿಸಲು ‘ಹಿಂದೂ’ ಎಂಬ ಹೆಸರನ್ನು ಬಳಸಲಾಯಿತು ಮತ್ತು ಆ ಪ್ರದೇಶವನ್ನು ‘ಹಿಂದುಸ್ತಾನ್’ ಎಂದು ಕರೆಯಲಾಯಿತು.

‘ಹಿಂದೂ’ ಎಂಬ ಹೆಸರಿನ ಇನ್ನೊಂದು ನೋಟವು ಭಾರತದ ಆಧ್ಯಾತ್ಮಿಕ ಪಥಗಳ ನಿಜವಾದ ಸಾರವನ್ನು ಅರ್ಥಮಾಡಿಕೊಳ್ಳಲು ಕಾರಣವಾಗುವ ಗೊಂದಲಮಯ ಸ್ವಭಾವವನ್ನು ತೋರಿಸುತ್ತದೆ. ಆರ್.ಎನ್.ಸೂರ್ಯನಾರಾಯಣ ಅವರು ತಮ್ಮ ಯೂನಿವರ್ಸಲ್ ರಿಲಿಜನ್ (ಪು.1-2, 1952ರಲ್ಲಿ ಮೈಸೂರಿನಲ್ಲಿ ಪ್ರಕಟವಾದ) ಪುಸ್ತಕದಲ್ಲಿ ಬರೆದಿರುವಂತೆ, “….ಪಾಶ್ಚಿಮಾತ್ಯ ವಿದ್ವಾಂಸರು ಮತ್ತು ಇತಿಹಾಸಕಾರರು ಕೂಡ ಈ ಬ್ರಾಹ್ಮಣಭೂಮಿಯ ನಿಜವಾದ ಹೆಸರನ್ನು ಪತ್ತೆಹಚ್ಚಲು ವಿಫಲರಾಗಿದ್ದಾರೆ…. ಅವರು ಅದನ್ನು ‘ಹಿಂದೂ’ ಎಂಬ ಅರ್ಥಹೀನ ಪದದಿಂದ ಕರೆದು ತೃಪ್ತಿಪಡಿಸಿದ್ದಾರೆ. ವಿದೇಶಿಗರು ನವೀಕರಿಸಿದ ಈ ಪದವನ್ನು ನಮ್ಮ ಯಾವುದೇ ಸಂಸ್ಕೃತ ಲೇಖಕರು, ಪೂಜ್ಯ ಆಚಾರ್ಯರು ತಮ್ಮ ಕೃತಿಗಳಲ್ಲಿ ಬಳಸಿಲ್ಲ. ಹಿಂದೂ ಪದವನ್ನು ನಿರಂತರವಾಗಿ ಬಳಸಬೇಕೆಂದು ಒತ್ತಾಯಿಸಲು ರಾಜಕೀಯ ಶಕ್ತಿಯು ಕಾರಣವಾಗಿದೆ ಎಂದು ತೋರುತ್ತದೆ. ಹಿಂದೂ ಎಂಬ ಪದವು ಪರ್ಷಿಯನ್ ಸಾಹಿತ್ಯದಲ್ಲಿ ಕಂಡುಬರುತ್ತದೆ. ಹಿಂದೂ-ಇ-ಫಲಾಕ್ ಎಂದರೆ ‘ಆಕಾಶದ ಕಪ್ಪು’ ಮತ್ತು ‘ಶನಿ’ ಎಂದರ್ಥ…. ಪರ್ಷಿಯನ್ನರು ಸಿಂಧುವಿನ ಪವಿತ್ರ ನೆಲಕ್ಕೆ ಬಂದಾಗ, ಹಿಂದೂ ಎಂಬ ಹೆಸರನ್ನು ಇಟ್ಟರು ಎಂದು ಇತಿಹಾಸದಲ್ಲಿ ಓದಿರುವುದು ನಾಚಿಕೆಗೇಡಿನ ಮತ್ತು ಹಾಸ್ಯಾಸ್ಪದವಾಗಿದೆ.

ಹಿಂದೂ ಎಂಬ ಹೆಸರಿನ ಮೂಲದ ಇನ್ನೊಂದು ದೃಷ್ಟಿಕೋನವು ಅವಹೇಳನಕಾರಿ ಅರ್ಥವನ್ನು ಆಧರಿಸಿದೆ. “ಇದಲ್ಲದೆ, ಈ ಹೆಸರನ್ನು [ಹಿಂದೂ] ಮೂಲ ಆರ್ಯ ಜನಾಂಗಕ್ಕೆ ಮುಸ್ಲಿಂ ಆಕ್ರಮಣಕಾರರು ಅವಮಾನಿಸಲು ನೀಡಿರುವುದಾಗಿದೆ. ನಮ್ಮ ಲೇಖಕರು ಹೇಳುವಂತೆ ಪರ್ಷಿಯನ್ ಭಾಷೆಯಲ್ಲಿ ಈ ಪದದ ಅರ್ಥ ಗುಲಾಮ. ಇಸ್ಲಾಂ ಪ್ರಕಾರ, ಇಸ್ಲಾಂ ಧರ್ಮವನ್ನು ಸ್ವೀಕರಿಸದ ಎಲ್ಲರನ್ನು ಗುಲಾಮರು ಎಂದು ಕರೆಯಲಾಗುತ್ತದೆ” (ಉಲ್ಲೇಖ: 1898ರಲ್ಲಿ ಲಾಹೋರ್‌ನಲ್ಲಿ ಪ್ರಕಟವಾಗಿರುವ ಮಹರ್ಷಿ ಶ್ರೀ ದಯಾನಂದ ಸರಸ್ವತಿಯವರ ಕೃತಿ).

“ಇದಲ್ಲದೆ, 1964 ರಲ್ಲಿ ಲಕ್ನೋದಲ್ಲಿ ಪ್ರಕಟವಾದ ಲುಘೆತ್-ಎ-ಕಿಶ್ವರಿ ಎಂಬ ಪರ್ಷಿಯನ್ ನಿಘಂಟಿನಲ್ಲಿ ಹಿಂದೂ ಪದದ ಅರ್ಥವನ್ನು- ‘ಚೋರ್ [ಕಳ್ಳ], ಡಕೂ [ಡಕಾಯಿಟ್], ರಾಹ್ಜಾನ್ [ವೇಲೇಯರ್] ಮತ್ತು ಗುಲಾಮ್ [ಗುಲಾಮ]” ಎಂದು ನೀಡಲಾಗಿದೆ. ಮತ್ತೊಂದು ನಿಘಂಟಾದ ಉರ್ದು-ಫಿರೋಜ್-ಉಲ್-ಲಘಾತ್ (ಭಾಗ ಒಂದನೇ, ಪುಟ 615)ನಲ್ಲಿ ಹಿಂದೂ ಪದದ ಪರ್ಷಿಯನ್ ಅರ್ಥವನ್ನು- ಬರ್ದಾ (ವಿಧೇಯ ಸೇವಕ), ಸಿಯಾ ಫಾಮ್ (ಕಪ್ಪು ಬಣ್ಣ) ಮತ್ತು ಕಾಲಾ (ಕಪ್ಪು) ಎಂದು ವಿವರಿಸಲಾಗಿದೆ.

ಇದನ್ನೂ ಓದಿರಿ: ಸದುದ್ದೇಶದಿಂದ ನೀಡಿದ ಹೇಳಿಕೆ ಹಿಂಪಡೆಯುವೆ: ಸತೀಶ್ ಜಾರಕಿಹೊಳಿ

ಆದ್ದರಿಂದ, ಮೂಲತಃ, ಹಿಂದೂ ಎಂಬುದು ಕೇವಲ ಮುಸ್ಲಿಂ ಮೂಲದ ಮುಂದುವರಿಕೆಯಾಗಿದ್ದು ಅದು ಕಳೆದ 1300 ವರ್ಷಗಳಲ್ಲಿ ಮಾತ್ರ ಬಳಕೆಗೆ ಬಂದಿತು. ಹೀಗಾಗಿ ಇದು ಮಾನ್ಯವಾದ ಸಂಸ್ಕೃತ ಪದವಲ್ಲ, ನಿಜವಾದ ವೈದಿಕ ಸಂಸ್ಕೃತಿ ಅಥವಾ ವೈದಿಕ ಆಧ್ಯಾತ್ಮಿಕ ಮಾರ್ಗದೊಂದಿಗೆ ಯಾವುದೇ ಸಂಬಂಧವನ್ನು ಇದು ಹೊಂದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬಹುದು. “ಹಿಂದೂ ಧರ್ಮ” ಎಂದು ಕರೆಯಲ್ಪಡುವ ಯಾವುದೇ ಧರ್ಮವು ಅಸ್ತಿತ್ವದಲ್ಲಿಲ್ಲ…. (ಪೂರ್ಣ ಲೇಖನವನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ) (ಲೇಖನದ ‘ಆರ್ಕೈವ್‌ ಲಿಂಕ್‌’)

ಸತೀಶ್ ಜಾರಕಿಹೊಳಿಯವರ ಮೇಲಷ್ಟೇ ವಿರೋಧವೇಕೆ?

ಹಿಂದೂ ಪದಕ್ಕೆ ಹೀನಾರ್ಥಗಳಿವೆ ಎಂದು ತಿಳಿಸುವ ಲೇಖವನ್ನು ಧಾರ್ಮಿಕ ಸಂಸ್ಥೆಯೊಂದು ಕಳೆದ ನಾಲ್ಕು ವರ್ಷಗಳ ಹಿಂದೆಯೇ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಸತೀಶ್ ಜಾರಕಿಹೊಳಿಯವರು ಹೇಳಿದ್ದನ್ನೇ ಇಸ್ಕಾನ್‌ ಕೂಡ ಹೇಳಿದೆ. ಬಿಜೆಪಿ ಹಾಗೂ ಸಂಘಪರಿವಾರ ‘ಇಸ್ಕಾನ್‌’ ವಿರುದ್ಧ ಹೋರಾಡುತ್ತದೆಯೇ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಜಾರಕಿಹೊಳಿರವರು

    ಇವರ ಚೀರಾಟಗಳಿಗೆ ಬೆದರಿ ಶೀಘ್ರವಾಗಿ ಬಬಿಜೆಪಿ ಸೇರಿಬಿಟ್ಟರೆ ಸಬ್ ಕಾ ಸಾಥ್ ಸಬ್ಕಾ ವಿನಾಶ್ ಆದರೂ ಅಸಲೀ ದೇಶಭಕ್ತ ಆಗುತ್ತಾರೆ.

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...