ಉತ್ತರ ಪ್ರದೇಶ ಕಾನ್ಪುರದ ಸರಕಾರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ.ಆರತಿ ಲಾಲ್ ಚಾಂದನಿ ಅವರ ದ್ವೇಷ ಮಾತುಗಳಿಗಾಗಿ ಅವರನ್ನು ಅವರ ಹುದ್ದೆಯಿಂದ ಕಿತ್ತೊಗೆಯಲಾಗಿದೆ. ಅವರು ತಬ್ಲೀಘಿ ಜಮಾಅತ್ ಮುಸ್ಲಿಮರನ್ನು ಭಯೋತ್ಪಾದಕರು ಎಂದು ಉಲ್ಲೇಖಿಸಿ ದ್ವೇಷಕಾರುವ ಮಾತುಗಳನ್ನು ಆಡಿದ್ದರು. ಈ ಮಾತಿನ ವಿಡಿಯೊ ವೈರಲ್ ಆಗಿ ಭಾರೀ ಕೋಲಾಹಲವನ್ನೆಬ್ಬಿಸಿತ್ತು.
ವೀಡಿಯೊದಲ್ಲಿ ತಾನು ‘ತಬ್ಲೀಘಿ ಅಥವಾ ಮುಸ್ಲಿಮರು’ ಎಂಬ ಪದವನ್ನು ಹೇಳಿಲ್ಲ ಎಂದಿರುವ ಆರತಿ, ಪತ್ರಕರ್ತ ವಿಡಿಯೋವನ್ನು ಮಾರ್ಫ್ ಮಾಡಿದ್ದಾರೆ. ತನ್ನಿಂದ ಹಣವನ್ನು ಸುಲಿಗೆ ಮಾಡಲು ಅವರು ಈ ರೀತಿ ಮಾಡಿದ್ದಾರೆ. ಪತ್ರಕರ್ತನ ವಿರುದ್ದ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ.
This mentality ill Dr.Arti Lalchandani
saying to "Inject Poison to COVID19 Patient's"
they are terrorists- Muslims are wasting our money.
Comment What Action should be Taken against her?#Islamophobia_In_India #coronavirus@DIPR_COVID19 pic.twitter.com/jZVHieuxbD— TheGulbargaMirror (@TGulbargamirror) June 1, 2020
ಈ ಸಂಬಂಧ ವೈದ್ಯಕೀಯ ಶಿಕ್ಷಣ ಪ್ರಧಾನ ಕಾರ್ಯದರ್ಶಿ ರಜನೀಶ್ ದುಬೆ, ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ವರದಿ ಕೋರಿದ್ದರು, ಇದಾದ ನಂತರ ಪ್ರಾಂಶುಪಾಲರಾದ ಡಾ.ಆರತಿ ಲಾಲ್ ಚಾಂದನಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಇದಲ್ಲದೆ ವೈದ್ಯೆಯ ದ್ವೇಷ ಮಾತಿನ ವಿಡಿಯೊ ಜಾಗತಿಕ ಮಟ್ಟದಲ್ಲಿ ವೈರಲ್ ಆಗಿದ್ದು, ಗಲ್ಪ್ ದೇಶಗಳಲ್ಲಿ ಹಿಂದೂ ವೈದ್ಯರು ಹಾಗೂ ದಾದಿಯರನ್ನು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹ ಪ್ರಾರಂಭವಾಗಿದೆ. ಅಲ್ಲದೆ ಭಾರತೀಯರೊಂದಿಗೆ ಎಲ್ಲಾ ಆರೋಗ್ಯ ಸೇವೆಗಳ ಒಪ್ಪಂದವನ್ನು ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಕುವೈತ್‌ನ ಪ್ರಭಾವಿ ಸಂಸದರಾದ ಮೊಹಮ್ಮದ್ ಹೈಫ್ ಅಲ್ ಮುತೈರಿ ತಮ್ಮ ದೇಶದ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
تزايدت في الآونة الأخيرة وتيرة الكراهية عند الهندوس ضد المسلمين لكن لم نتوقع أن تصل للمجال الصحي ولهذا المستوى من الحقد والكراهية لذلك يجب على وزير الصحة وقف التعاقد مع الجاليةالهندوسية وإعادة النظر في العقود الحالية وتحمل المسئولية في عدم التهاون في حماية مرضانا من أي ضرر محتمل https://t.co/x1HmZGgkVR
— محمد هايف المطيري (@mhamdhaif) June 4, 2020
ಅಲ್ಲಿನ ಸಾಮಾಜಿಕ ಕಾರ್ಯಕರ್ತರು ಕೂಡಾ ಇದಕ್ಕೆ ಧ್ವನಿ ಸೇರಿಸಿದ್ದಾರೆ. ಮುಸ್ಲಿಂ ರೋಗಿಗಳಿಗೆ ವಿಷವುಣಿಸಿ ಕೊಲ್ಲಲು ಹಿಂದೂತ್ವ ವೈದ್ಯರು ಸ್ವಯೋಪ್ರೇರಿತರಾಗಿ ಹೊರಟಿರುವುದು ಅತ್ಯಂತ ಅಪಾಯಕಾರಿ ಪ್ರವೃತ್ತಿಯಾಗಿದೆ. ಅರಬ್ ಸಂಸತ್ತು ಹಾಗೂ ಆರೋಗ್ಯ ಸಚಿವಾಲಯ ಎಚ್ಚೆತ್ತುಕೊಂಡಿವೆ, ಮದ್ಯ ಪ್ರಾಚ್ಯದಲ್ಲಿ ಇಸ್ಲಾಮೋಫೋಬಿಕ್ ಸಂಘಿ ವೈದ್ಯರನ್ನು ತಡೆಯಲು ಹಾಗೂ ತನಿಖೆ ಮಾಡಲಾಗುತ್ತಿದೆ ಎಂದಿದ್ದಾರೆ.
ALERT:Hindutva doctors volunteering to kill Muslim patients by poisoning them is an extremely dangerous trend. Arab parliaments and health ministries are alarmed & warning being issued to stop & investigate Islamophobic Sanghi doctors in the ME. @MoHFW_INDIA @MEAIndia @PMOIndia pic.twitter.com/8O1lhHf5LY
— المحامي⚖مجبل الشريكة (@MJALSHRIKA) June 4, 2020
ಡಾ.ಆರತಿ ಲಾಲ್ ಚಾಂದನಿ ಮಹಾರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ದ್ವೇಷ ಮಾತುಗಳನ್ನು ಸ್ಟಿಂಗ್ ಮೂಲಕ ಚಿತ್ರೀಕರಿಸಿದ ಪತ್ರಕರ್ತನ ವಿರುದ್ಧ ಯಾವುದೇ ಎಫ್‌ಐಆರ್ ಇನ್ನೂ ದಾಖಲಾಗಿಲ್ಲ ಎನ್ನಲಾಗದೆ.
ಓದಿ: ಕ್ಯಾಮರ ಎದುರೆ ಇಸ್ಲಾಮೋಫೋಬಿಯ ಹರಡಿದ ಪ್ರಾಂಶುಪಾಲೆ: ತೀವ್ರ ವಿರೋಧ


