Homeಮುಖಪುಟಪಶ್ಚಿಮ ಬಂಗಾಳದ ಬಾಕಿ ಹಣ ಒಂದು 1.1 ಲಕ್ಷ ಕೋಟಿ ಯಾವಾಗ ಕೊಡುತ್ತೀರಿ? ಟಿಎಂಸಿ ಪ್ರಶ್ನೆ

ಪಶ್ಚಿಮ ಬಂಗಾಳದ ಬಾಕಿ ಹಣ ಒಂದು 1.1 ಲಕ್ಷ ಕೋಟಿ ಯಾವಾಗ ಕೊಡುತ್ತೀರಿ? ಟಿಎಂಸಿ ಪ್ರಶ್ನೆ

ಆಂಫಾನ್ ಚಂಡಮಾರುತ‌ದಿಂದ ಉಂಟಾದ ಒಟ್ಟು ಹಾನಿ 1,02,000 ಕೋಟಿ ಎಂದು ಅಂದಾಜಿಸಲಾಗಿದೆ. ಕೇಂದ್ರವು 1 ಸಾವಿರ ಕೋಟಿ ಮಾತ್ರ ನೀಡಿದೆ. ಉಳಿದ ಒಂದು ಲಕ್ಷದ ಒಂದು ಸಾವಿರ ಕೋಟಿಯ ಕತೆಯೇನು? ” ಎಂದು ಡೆರೆಕ್ ಒ'ಬ್ರೇನ್ ಪ್ರಶ್ನಿಸಿದ್ದಾರೆ.

- Advertisement -
- Advertisement -

ಎಂಪಿ ಲೋಕಲ್ ಏರಿಯಾ ಡೆವಲಪ್‌ಮೆಂಟ್ ಸ್ಕೀಮ್ (ಎಂಪಿಎಲ್ಎಡಿಎಸ್) ಅನ್ನು ಎರಡು ವರ್ಷಗಳ ಕಾಲ ಸ್ಥಗಿತಗೊಳಿಸಿ, ಆ ಮೂಲಕ ಉಳಿಸಿರುವ ಹಣವನ್ನು ನೇರವಾಗಿ ವಲಸೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ತೃಣಮೂಲ ಕಾಂಗ್ರೆಸ್ ಒತ್ತಾಯಿಸಿದೆ. ಜೊತೆಗೆ ಪಶ್ಚಿಮ ಬಂಗಾಳಕ್ಕೆ ಬಾಕಿ ಇರುವ ಹಣವನ್ನು ಕೊಡುವಂತೆ ಕೂಡಾ ಮನವಿ ಮಾಡಿದೆ.

ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಡೆರೆಕ್ ಒ’ಬ್ರಿಯೆನ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪಶ್ಚಿಮ ಬಂಗಾಳಕ್ಕೆ ₹ 53 ಸಾವಿರ ಕೋಟಿ ಕೇಂದ್ರದ ಹಿಂದಿನ ಬಾಕಿ ಇದೆ. “ಕೇಂದ್ರವು ಎಂಪಿಎಲ್ಎಡಿಎಸ್ ಹಣವನ್ನು ಎರಡು ವರ್ಷಗಳ ಕಾಲ ನಿಲ್ಲಿಸಿತು, ಇದರಲ್ಲಿ ಸುಮಾರು, 8,000 ಕೋಟಿ ಉಳಿತಾಯವಾಗಿದೆ. ಅಸಂಘಟಿತ ವಲಯದ 80 ಲಕ್ಷ ಕಾರ್ಮಿಕರ ಬ್ಯಾಂಕ್ ಖಾತೆಗಳಲ್ಲಿ ತಲಾ ₹ 10,000 ಹಾಕಿ”ಎಂದು ಅವರು ಹೇಳಿದ್ದಾರೆ.

ಆಂಫಾನ್ ಚಂಡಮಾರುತ‌ದಿಂದ ಉಂಟಾದ ಒಟ್ಟು ಹಾನಿ 1,02,000 ಕೋಟಿ ಎಂದು ಅಂದಾಜಿಸಲಾಗಿದೆ. ಕೇಂದ್ರವು 1 ಸಾವಿರ ಕೋಟಿ ಮಾತ್ರ ನೀಡಿದೆ. ಉಳಿದ ಒಂದು ಲಕ್ಷದ ಒಂದು ಸಾವಿರ ಕೋಟಿಯ ಕತೆಯೇನು? ” ಎಂದು ಡೆರೆಕ್ ಒ’ಬ್ರೇನ್ ಪ್ರಶ್ನಿಸಿದ್ದಾರೆ.

“ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ರಾಜ್ಯವು 1,200 ಕೋಟಿ ಖರ್ಚು ಮಾಡಿದೆ. ಕೇಂದ್ರವು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ 144 ಕೋಟಿ ಮತ್ತು 250 ಕೋಟಿ ಎಸ್‌ಡಿಆರ್‌ಎಫ್ ಅಡಿಯಲ್ಲಿ ನೀಡಿದೆ. ಉಳಿದ ₹ 806 ಕೋಟಿ ಬಗ್ಗೆ ಏನು? ” ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಕೇಂದ್ರವು ಘೋಷಿಸಿದ ಆರ್ಥಿಕ ಉತ್ತೇಜಕ ಪ್ಯಾಕೇಜ್ “ಖಾಲಿ” ಹಾಗೂ ಸುಧಾರಣೆಗಳು “ಟೊಳ್ಳು” ಎಂದು ಆರೋಪಿಸಿದ ಅವರು, ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ (ಎಫ್‌ಆರ್‌ಬಿಎಂ) ಮಿತಿಯನ್ನು ಶೇಕಡಾ 3 ರಿಂದ 5 ಕ್ಕೆ ಏರಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು ತಪ್ಪಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಘೋಷಿಸಿದ ಪ್ಯಾಕೇಜ್‌ನಲ್ಲಿ ಅಸಂಘಟಿತ ವಲಯಕ್ಕೆ ಯಾವುದೇ ನೆರವು ನೀಡಿಲ್ಲ ಎಂದು ಒ’ಬ್ರೇನ್ ಆರೋಪಿಸಿದ್ದಾರೆ.


ಓದಿ: ‌ಮೋದಿಯ ಪಶ್ಚಿಮ ಬಂಗಾಳ ಪ್ರವಾಸದ ವೇಳೆ ’ಚೌಕಿದಾರ್‌ ಚೋರ್’‌ ಘೋಷಣೆ ಕೂಗಲಾಗಿದೆಯೇ?; ಫ್ಯಾಕ್ಟ್ ಚೆಕ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...