ಫ್ಯಾಕ್ಟ್‌ಚೆಕ್‌: ಮೋದಿ ಪಶ್ಚಿಮ ಬಂಗಾಳ ಭೇಟಿ ವೇಳೆ ಚೌಕಿದಾರ್‌ ಚೋರ್‌ ಹೈ ಘೋಷಣೆ ಕೂಗಿದ್ದು ನಿಜವೇ?

0
Factc heck: when Modi visits West Bengal Is Chowkidar Chor Hai's slogans rised is true?

ಅಂಫಾನ್‌ ಚಂಡಮಾರುತದ ಕಾರಣಕ್ಕಾಗಿ ಪಶ್ಚಿಮ ಬಂಗಾಳ ರಾಜ್ಯವು ಅತಿ ಹೆಚ್ಚಿನ ಹಾನಿಗೊಳಗಾಗಿದೆ. ಈ ಸಂದರ್ಭದಲ್ಲಿ ಹಾನಿ ವೀಕ್ಷಿಸಲು ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲರು ಅವರನ್ನು ಸ್ವಾಗತಿಸಿದ್ದರು. ಆದರೆ ಮೋದಿಯವರು ವಾಪಸ್‌ ತೆರಳುವ ವೇಳೆ ಹೆಲಿಕಾಪ್ಟರ್‌ ಹತ್ತುವಾಗ ಚೌಕಿದಾರ್‌ ಚೋರ್‌ ಹೈ ಎಂಬ ಘೋಷಣೆಗಳು ಮೊಳಗಿವೆ ಎಂಬ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಎಕ್ಸ್‌ಪೋಸ್ಟ್‌ ಎಂಬ ಫೇಸ್‌ಬುಕ್‌ ಪೇಜ್‌ನಲ್ಲಿ ಈ ವಿಡಿಯೋವನ್ನು ಎರಡು ಸಾವಿರಕ್ಕೂ ಹೆಚ್ಚು ಜನ ಲೈಕ್‌ ಮಾಡಿದ್ದು, ಮೂರು ಸಾವಿರಕ್ಕೂ ಹೆಚ್ಚು ಜನ ಹಂಚಿಕೊಂಡಿದ್ದಾರೆ.

#ChowkidharChorHai : ke naare , Bengal daure ke dauraan.Join Group => Xpost

Posted by Xpost on Friday, May 22, 2020

 

ಹಲವಾರು ಟ್ವಿಟ್ಟರ್‌ಗಳಲ್ಲಿಯೂ ಈ ವಿಡಿಯೋವನ್ನು ವೈರಲ್‌ ಮಾಡಲಾಗಿದೆ.

ಅಲ್ಲದೇ ಹಾಸನ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಫೇಸ್‌ಬುಕ್‌ ಅಕೌಂಟ್‌ನಿಂದ ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ. ಅಲ್ಲಿ “ಏನು ಗುರು ಇದು ಈ ತರ? ಪಶ್ಚಿಮ ಬಂಗಾಳಕ್ಕೆ ಭೇಟಿ ಕೊಟ್ಟ ಮೋದಿ. ಸ್ವಲ್ಪ ನಿದಾನವಾಗಿ ಕೇಳಿ… ಚೌಕಿದಾರ್ ಚೋರ್ ಹೈ ಅಂತ ಕೂಗ್ತಾ ಇದಾರೆ ಅಲ್ಲವಾ…. ನಿಜ ಹೇಳಿದ ಜನಗಳು” ಎಂಬ ಶೀರ್ಷಿಕೆ ನಿಡಲಾಗಿದೆ.

ಏನು ಗುರು ಇದು ಈ ತರ

ಪಶ್ಚಿಮ ಬಂಗಾಳ ಕ್ಕೆ ಭೇಟಿ ಕೊಟ್ಟ ಮೋದಿ . ಸ್ವಲ್ಪ ನಿದಾನವಾಗಿ ಕೇಳಿ…ಚೌಕಿದರ್ ಚೋರ್ ಹೈ ಅಂತ ಕೊಗ್ತಾ ಇದಾರೆ ಅಲ್ಲವಾ…. ನಿಜ ಹೇಳಿದ ಜನಗಳು

Posted by ಹಾಸನ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ on Saturday, May 23, 2020

ಫ್ಯಾಕ್ಟ್‌ ಚೆಕ್‌

ಮೇಲ್ನೋಟದಲ್ಲಿಯೇ ಇದು ವಾಯ್ಸ್‌ ಎಡಿಟೆಡ್‌ ವಿಡಿಯೋ ಎಂದು ಕಂಡುಬರುತ್ತದೆ. ಇದಕ್ಕೆ ಪುರಾವೆಯಂತೆ ಮೂಲ ವೀಡಿಯೊವನ್ನು ಆಕಾಶವಾಣಿ ಸಾಂಗ್‌ಬಾದ್ ಕೋಲ್ಕತ್ತಾದ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಮೇ 22 ರಂದು ಪೋಸ್ಟ್ ಮಾಡಿದೆ. ಇದು ಕೋಲ್ಕತ್ತಾದ ಆಲ್ ಇಂಡಿಯಾ ರೇಡಿಯೊದ ಪ್ರಾದೇಶಿಕ ಸುದ್ದಿ ಘಟಕವಾಗಿದೆ. ಆ ವಿಡಿಯೋದಲ್ಲಿ ಜನರು ‘ದೀದಿ’ ಮತ್ತು ‘ಜೈಶ್ರೀರಾಂ’ ಎನ್ನುವ ಘೋಷಣೆಗಳನ್ನು ಕೆಲವರು ಕೂಗಿದ್ದಾರೆ.

ಆದರೆ ಅದೇ ವಿಡಿಯೋವನ್ನು ಬಳಸಿಕೊಂಡು ಅಲ್ಲಿ ಆಡಿಯೋವನ್ನು ತೆಗೆದು ಹಾಕಲಾಗಿದೆ. ಜೊಗೆತೆ 2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮೋದಿಯವರು ಬಂಗಾಳಕ್ಕೆ ಭೇಟಿ ನೀಡಿದಾಗ ಕಾಂಗ್ರೆಸ್‌ ಕಾರ್ಯಕರ್ತರು ಚೌಕಿದಾರ್‌ ಚೋರ್‌ ಹೈ ಎಂಬ ಘೋಷಣೆಯ ಆಡಿಯೋವನ್ನು ಪ್ರಸ್ತುತ ಮೋದಿ ಭೇಟಿಯ ವಿಡಿಯೋಗೆ ಸೇರಿಸಿ ಎಡಿಟ್‌ ಮಾಡಲಾಗಿದೆ.

(2019ರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ಭೇಟಿ ನೀಡಿದಾಗ ಚೌಕಿದಾರ್‌ ಚೋರ್‌ ಹೈ ಎಂದು ಕೂಗಿದ ವಿಡಿಯೋ)

ಅಲ್ಲಿಗೆ ಈ ಬಾರಿ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದಾಗ ಚೌಕಿದಾರ್‌ ಚೋರ್‌ ಹೈ ಎಂದು ಘೋಷಣೆ ಕೂಗಲಾಗಿದೆ ಎಂಬುದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ವೈರಲ್‌ ವಿಡಿಯೋವು ಎಡಿಟ್‌ ಮಾಡಿದ ವಿಡಿಯೋ ಆಗಿದೆ.


ಇದನ್ನೂ ಓದಿ: CAA ವಿರೋಧಿ ಹೋರಾಟಗಾರ್ತಿಯವರಿಗೆ ಜಾಮೀನು ನೀಡಿದ ನ್ಯಾಯಾಲಯ: ಮತ್ತೆ ಬಂಧಿಸಿದ ದೆಹಲಿ ಪೊಲೀಸರು! 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here