Homeಮುಖಪುಟವಲಸೆಯ ವ್ಯಥೆ-3: ‘ನಾನು ಇದೇ ದೇಶದ ಪ್ರಜೆ ತಾನೆ? ಅದನ್ನು ನಾನು ‘ಆಧಾರಸಹಿತ’ ಸಾಬೀತು ಮಾಡಬೇಕೆ?’

ವಲಸೆಯ ವ್ಯಥೆ-3: ‘ನಾನು ಇದೇ ದೇಶದ ಪ್ರಜೆ ತಾನೆ? ಅದನ್ನು ನಾನು ‘ಆಧಾರಸಹಿತ’ ಸಾಬೀತು ಮಾಡಬೇಕೆ?’

ವಲಸೆ ಕಾರ್ಮಿಕರು ತಮ್ಮ ಸ್ಥಳಗಳಿಗೆ ತಲುಪಲು ಸಹಾಯ ಮಾಡುವುದಕ್ಕಾಗಿ ಆರಂಭವಾದ ಕರ್ನಾಟಕ ಜನಶಕ್ತಿ ಹೆಲ್ಫ್‌ಲೈನ್‌ನ ಭಾಗವಾದ ಮಲ್ಲಿಗೆ ಸಿರಿಮನೆಯವರು ತಮ್ಮ ಅನುಭವಕ್ಕೆ ಬಂದ ಕಾರ್ಮಿಕರ ವಸಲೆಯ ವ್ಯಥೆಗಳನ್ನು ಇಲ್ಲಿ ದಾಖಲಿಸಿದ್ದಾರೆ.

- Advertisement -
- Advertisement -

ಅಸ್ಸಾಂನ ರಾಜಧಾನಿ ಮತ್ತು ಸುಂದರ ಪಟ್ಟಣವಾದ ಗೌಹಾಟಿಯ ಅರಬಿಂದೋ ಕನ್ವರ್ 20 ವರ್ಷದ ಯುವಕ. ಇದೇ ಫೆಬ್ರವರಿ ತಿಂಗಳಿನಲ್ಲಷ್ಟೇ ಬೆಂಗಳೂರಿಗೆ ಬಂದ. ಕಟ್ಟಡ ಕಾರ್ಮಿಕನಾಗಿ ಸಿಫ್ಲೋ ಎಂಬ ಬೃಹತ್ ನಿರ್ಮಾಣ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ. ಇದೇ ಕಂಪೆನಿಯಲ್ಲಿ ಈತನ ತಂದೆ ಪ್ರಥಮ್ ಕನ್ವರ್ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ಈ ಕಂಪೆನಿಯ ಪ್ರಮುಖ ಕೆಲಸದ ಕ್ಷೇತ್ರ ದೊಡ್ಡ ಕಟ್ಟಡಗಳ ಛಾವಣಿಯನ್ನು ಜೋಡಿಸುವುದು. ಬಹುಮಹಡಿ ಕಟ್ಟಡಗಳ ಅತಿಯಾದ ಎತ್ತರದ ಮೇಲೆ ನಿಂತು, ಅವುಗಳ ಮೇಲ್ಛಾವಣಿಯನ್ನು (ಸೀಲಿಂಗ್) ಜೋಡಿಸುವ ಅತ್ಯಂತ ಅಪಾಯಕಾರಿ ಮತ್ತು ಅಷ್ಟೇ ಕೌಶಲ್ಯಪೂರ್ಣ ಕೆಲಸಕ್ಕೆ ಇವರಿಗೆ ಸಿಗುವುದು ದಿನಕ್ಕೆ 250-350 ರೂ ಮಾತ್ರ.

ಈತನ ಹಾಗೆಯೇ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ದುಡಿಯಲು ಬಂದ ನೂರಾರು ಕಾರ್ಮಿಕರು ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪೆನಿಯೇ ಮಾಡಿಕೊಟ್ಟ ಚಿಕ್ಕ ರೂಮುಗಳಲ್ಲಿ 8-10 ಮಂದಿ ಕಾರ್ಮಿಕರು ಇದ್ದುಕೊಂಡು, ಇಲ್ಲಿನ ಬದುಕುವ ಖರ್ಚು ಕಳೆದು ಒಂದಷ್ಟನ್ನಾದರೂ ಉಳಿಸಿ ಊರಿಗೆ ಕಳಿಸುವ ಪ್ರಯತ್ನದಲ್ಲಿರುತ್ತಾರೆ.

ಅರಬಿಂದೋ ಇಂದ ನಮ್ಮ ಹೆಲ್ಪ್‌ಲೈನ್‌ಗೆ ಕರೆ ಬಂದಾಗ, ಅನೇಕ ಉತ್ತರ ಭಾರತದ ಕಾರ್ಮಿಕರಂತೆಯೇ ಈತನದ್ದೂ ಕೂಡಾ ‘ನಾವು ಯಾವಾಗ ಊರಿಗೆ ಹೋಗಲು ಸಾಧ್ಯ? ಸೇವಾ ಸಿಂಧು ಆಪ್ ನಲ್ಲಿ ಹೆಸರು ನೋಂದಣಿ ಮಾಡಿಸಲು ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದೇವೆ, ನಮಗಿನ್ನೂ ನಮ್ಮ ಸರದಿ ನಂಬರ್ ಸಿಕ್ಕಿಲ್ಲ, ಯಾವಾಗ ಸಿಗುತ್ತದೆ? ಹೇಗಾದರೂ ನಮ್ಮನ್ನು ಊರಿಗೆ ಕಳಿಸಿ’ ಎಂಬ ಅಳಲು.

ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದರೆ ಆಗುತ್ತದೆ, ಸ್ವಲ್ಪ ಕಾದು ನೋಡಿ ಎಂಬ ನಮ್ಮ ಧೈರ್ಯ ತುಂಬುವ ಮಾತುಗಳಿಂದ ಸ್ವಲ್ಪ ದಿನ ಸಮಾಧಾನಪಡಿಸುವ ಪ್ರಯತ್ನ ಮಾಡಿಯಾಯಿತು. ಆದರೆ, ಮತ್ತೆ ಮತ್ತೆ ಅರಬಿಂದೋನ ಕರೆ. ಕೊನೆಗೊಮ್ಮೆ, “ಎಲ್ಲ ಕಡೆ ಖಾಯಿಲೆ ಹರಡುತ್ತಿದೆ. ನಾನು ನಮ್ಮ ತಾಯಿಯೊಂದಿಗೆ ಇರಬೇಕೆನಿಸುತ್ತಿದೆ, ನನ್ನನ್ನು ದಯವಿಟ್ಟು ಕಳಿಸಿಕೊಡಿ” ಎನ್ನುತ್ತಾ ಅಕ್ಷರಶಃ ಆತ ಅಳಲಾರಂಭಿಸಿದಾಗ, ಕರುಳು ಚುರ್ ಎಂದಿತು.

ಪುಟ್ಟ ಮಗುವಿನಂತೆ ತಾಯಿಗಾಗಿ ಹಂಬಲಿಸುತ್ತಿರುವ ಈ ಹುಡುಗನನ್ನು ಊರಿಗೆ ಕಳಿಸಲೇಬೇಕೆಂದು ತೀರ್ಮಾನಿಸಿ, ಆತನ ‘ಸೇವಾ ಸಿಂಧು’ ನೋಂದಣಿಯನ್ನು ಹೆಲ್ಪ್‌ಲೈನ್‌ನ ವಾಲಂಟಿಯರ್ ಆದ ಸಾಫ್ಟ್ವೇರ್ ತಂತ್ರಜ್ಞ ಭರತ್ ಹೆಬ್ಬಾಳ್ ಪರಿಶೀಲಿಸಿದರು. ನೋಡಿದರೆ ಆತನ ನೋಂದಣಿ ಆಗಿರಲಿಲ್ಲ. ಅದನ್ನೂ ನಾವೇ ಮಾಡೋಣವೆಂದು ಅಂದುಕೊಂಡು ವಿವರಗಳನ್ನು ತುಂಬಿಸುತ್ತಾ ಬಂದೆವು. ಆಗ ನಮಗೆ ಸರ್ಕಾರದ ನೀತಿಗಳಲ್ಲಿರುವ ಉದ್ದೇಶಪೂರ್ವಕ ಅಡೆತಡೆಗಳ ಮತ್ತೊಂದು ಜೀವಂತ ಉದಾಹರಣೆ ಸಿಕ್ಕಿತು.

ಆಧಾರ್ ಸಂಖ್ಯೆ ಇಲ್ಲದೆ ಸೇವಾ ಸಿಂಧುವಿನಲ್ಲಿ ನೋಂದಣಿ ಸಾಧ್ಯವಿರಲಿಲ್ಲ; ಈಶಾನ್ಯ ರಾಜ್ಯಗಳ ಪ್ರಜೆಯಾದ ಅರಬಿಂಧೋ ಬಳಿ ಆಧಾರ್ ಕಾರ್ಡ್ ಇರಲಿಲ್ಲ! ಅವನೊಬ್ಬನೇ ಅಲ್ಲ, ಅಂತಹ ಹಲವು ಮಂದಿ ಇದ್ದಾರೆಂದು ತಿಳಿಯಿತು.

ಮೊದಮೊದಲಿಗೆ ವಲಸೆ ಕಾರ್ಮಿಕರ ಮರಳುವಿಕೆಗೆ ಸಂಬಂಧಿಸಿ ಬಂದ ಪ್ರಕಟಣೆಗಳನ್ನು ಹುಡುಕಿ ತೆಗೆದು ನೋಡಿದರೆ, ಅದರಲ್ಲಿ ಯಾವುದಾದರೊಂದು ಐಡಿ ಪ್ರೂಫ್ ಇದ್ದರೆ ಸಾಕು ಎಂದು ಹೇಳಲಾಗಿದೆ. ಆದರೆ, ಸೇವಾಸಿಂಧು ರಚನೆಯಲ್ಲಿ ಮಾತ್ರ ಆಧಾರ್ ಸಂಖ್ಯೆ ಇಲ್ಲದೆ ಮುಂದುವರೆಯಲು ಸಾಧ್ಯವಿಲ್ಲದಂತಹ ವ್ಯವಸ್ಥೆ ಮಾಡಲಾಗಿದೆ. ಸರಾಗವಾಗಿ ನಡೆಯಬಹುದಾದ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿ, ಒಂದಷ್ಟು ಮಂದಿ ಕಾರ್ಮಿಕರು ಈ ಕೂಡಲೇ ಮರಳಲು ಸಾಧ್ಯವಾಗದಂತಹ ಸ್ಥಿತಿ ಉಂಟುಮಾಡುವುದು ಬಿಟ್ಟು ಇದಕ್ಕೆ ಬೇರೇನಾದರೂ ತರ್ಕವಿರಲು ಸಾಧ್ಯವೇ?

ಅದರ ಬಗ್ಗೆ ಎಲ್ಲ ದಿಕ್ಕಿನಿಂದ ಪರಿಶೀಲನೆ ನಡೆಸಿ ಆಯಿತು. ಈ ಸಮಸ್ಯೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಪರಿಸ್ಥಿತಿ ವಿವರಿಸಿದೆವು; ಸರ್ಕಾರದ ಹಿರಿಯ ಅಧಿಕಾರಿಗಳನ್ನು ಮಾತಾಡಿಸಿದೆವು; ಅಷ್ಟೆಲ್ಲ ಮಾಡಿದ ನಂತರ ನಮಗೆ ಗೊತ್ತಾದದ್ದೇನೆಂದರೆ, ಅವರ‍್ಯಾರಿಗೂ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಅಷ್ಟಕ್ಕೂ ಹೆಚ್ಚಾಗಿ ಇದೊಂದಷ್ಟು ಮಂದಿ ಕಾರ್ಮಿಕರು ವಾಪಾಸ್ ಹೋಗದಿದ್ದರೆ ಯಾರ ಮನೆ ಕೊಚ್ಚಿಹೋಗುತ್ತದೆ ಎಂಬಂತಹ ಧೋರಣೆ ಕಂಡಿತು.

ಪೊಲೀಸ್ ಠಾಣೆಯ ಮುಂದೆ ಕಾರ್ಮಿಕರ ಉದ್ದನೆಯ ಸರತಿ ಸಾಲಿನಲ್ಲಿ ನಿಂತು, ತಾನೇ ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಯತ್ನಿಸಲು ಹೋದ ಅರಬಿಂಧೋ ಒಂದು ದಿನ ಅವರಿಂದ ಲಾಠಿಯೇಟು ತಿಂದು ನಿರಾಶನಾಗಿ ಮರಳಿ ಬಂದ. ಕಣ್ಣಲ್ಲಿ ನೀರು ತುಂಬಿಕೊಂಡು “ನನ್ನ ಬಳಿ ವೋಟರ್ ಐಡಿ ಇದೆ, ರೇಷನ್ ಕಾರ್ಡ್ ಇದೆ, ಪಾನ್ ಕಾರ್ಡ್ ಇದೆ, ಡ್ರೈವಿಂಗ್ ಲೈಸನ್ಸ್ ಇದೆ…………. ಇವ್ಯಾವುವೂ ನನ್ನ ಗುರುತಿನ ಅಧಿಕೃತ ದಾಖಲೆಗಳಲ್ಲವೇ? ಇವೆಲ್ಲವುಗಳ ಪ್ರಕಾರ ನಾನು ಈ ದೇಶದ ಪ್ರಜೆಯಲ್ಲವೇ? ನಮ್ಮ ರಾಜ್ಯದಲ್ಲಿ ನಮಗೆ ಆಧಾರ್ ಯಾವುದಕ್ಕೂ ಬೇಕಿಲ್ಲ. ಅದನ್ನು ಕಡ್ಡಾಯ ಮಾಡಿಲ್ಲ. ಆದ್ದರಿಂದ ನಾನು ಮಾಡಿಸಿಕೊಂಡಿರಲಿಲ್ಲ; ಇಲ್ಲಿಗೆ ಬಂದು ದುಡಿಯುವಾಗ ಬೇಕಿಲ್ಲದ ಆಧಾರ್, ಈಗ ಮಾತ್ರ ಬೇಕಾಗಿದೆಯೇ? ನಾನು ಮಾತ್ರ ಯಾಕೆ ವಾಪಾಸ್ ಹೋಗಲು ಸಾಧ್ಯವಿಲ್ಲ”? ಎಂದ ಅರಬಿಂಧೋನ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ!

ಅವನ ಕಣ್ಣೀರು ಮುಖದ ಗುರುತನ್ನು ಮರೆಮಾಡುತ್ತಿದ್ದ ಮಾಸ್ಕ್‌ನೊಳಗೆ ಇಂಗಿಹೋಯಿತು. ದೇಶದ ಪ್ರಜೆಯಾಗಿ ತನ್ನ ಗುರುತಿನ ಬಗ್ಗೆ ಅವನ ಪ್ರಶ್ನೆಗಳು ದೇಶದ ಬಡವರನ್ನು ಇಲ್ಲದ ಸಮಸ್ಯೆಗಳ ಸುಳಿಗಳಿಗೆ ಸಿಲುಕಿಸುತ್ತಿರುವ ಪ್ರಭುತ್ವಗಳು ಹೆಣೆದಿರುವ ಚಕ್ರವ್ಯೂಹದಲ್ಲಿ ಇಂಗಿಹೋದವು!

ಹೇಗಾದರೂ ಮಾಡಿ ಅರಬಿಂದೋ ಮತ್ತು ಅಂತಹ ದುಡಿಮೆಗಾರರನ್ನು ಅವರೂರಿಗೆ ತಲುಪಿಸಲು ನಮ್ಮ ಪ್ರಯತ್ನ ಮುಂದುವರೆದಿದೆ……… ಅರಬಿಂದೋನ ಕಾಯುವಿಕೆಯಂತೆಯೇ ನಿರಂತರವಾಗಿ………
ಈ ಪ್ರಯತ್ನದಲ್ಲಿ ಯಶಸ್ಸುಗಳಿತ್ತೇವೆಂದು ನಂಬಲು ನಮಗೆ ಯಾವುದೇ ‘ಆಧಾರ’ಗಳಿಲ್ಲ; ಆದರೂ ಪ್ರಯತ್ನ ನಿಲ್ಲುವುದಿಲ್ಲ!!


ಇದನ್ನೂ ಓದಿ: ವಲಸೆಯ ವ್ಯಥೆ: ಈ ಮಹಾವಲಸೆಯ ಮಹಾಘಾತದ ಕೆಲವು ತುಣುಕುಗಳು ನಿಮ್ಮ ಮುಂದೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...