ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಬೆಂಬಲಿಸುವ ಸುಪ್ರೀಂಕೋರ್ಟಿನ ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ವಕೀಲ ಕಪಿಲ್ ಸಿಬಲ್, ‘ಕೆಲವು ಯುದ್ಧಗಳು ಕಳೆದುಹೋಗಲು ಹೋರಾಡುತ್ತವೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
2019ರ ಆಗಸ್ಟ್ ನಲ್ಲಿ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವುದನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದ ಅರ್ಜಿದಾರರ ಪರ ವಕೀಲರಾಗಿ ಕಪಿಲ್ ಸಿಬಲ್ ವಾದ ಮಂಡಿಸುತ್ತಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಕೆಲವು ಯುದ್ಧಗಳು ಕಳೆದುಹೋಗಲು ಹೋರಾಡುತ್ತವೆ. ಇತಿಹಾಸವು ತಲೆಮಾರುಗಳಿಗೆ ಅಹಿತಕರವಾದ ಸಂಗತಿಗಳನ್ನು ದಾಖಲಿಸಬೇಕು. ಸಾಂಸ್ಥಿಕ ಕ್ರಮಗಳ ಸರಿ ಮತ್ತು ತಪ್ಪುಗಳು ಮುಂಬರುವ ವರ್ಷಗಳಲ್ಲಿ ಚರ್ಚೆಯಾಗುತ್ತವೆ. ಇತಿಹಾಸವೊಂದೇ ಅಂತಿಮ ತೀರ್ಪುಗಾರ; ಐತಿಹಾಸಿಕ ನಿರ್ಧಾರಗಳ ನೈತಿಕ ದಿಕ್ಸೂಚಿ’ ಎಂದು ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದಾರೆ.
Courts
Some battles are fought to be lost
For history must record the uncomfortable facts for generations to know
The right and wrong of institutional actions will be debated for years to come
History alone is the final arbiter
of the moral compass of historic decisions— Kapil Sibal (@KapilSibal) December 11, 2023
ಕಾಶ್ಮೀರದಲ್ಲಿ ಆದಷ್ಟು ಬೇಗ ಚುನಾವಣೆ ನಡೆಸಬೇಕು: ಓವೈಸಿ
370ನೇ ವಿಧಿ ರದ್ದು ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಎಐಎಂಎಂ ಮುಖಂಡ ಅಸಾದುದ್ದೀನ್ ಓವೈಸಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘2019ರಲ್ಲಿ ನಡೆದ ಸೆಮಿನಾರ್‌ನಲ್ಲಿ ಮಾತನಾಡಿದ ಸಿಜೆಐ, ‘ಸಾರ್ವಜನಿಕರ ಅನುಪಸ್ಥಿತಿಯಲ್ಲಿ ಅಧಿಕಾರವನ್ನು ಸ್ಥಾಪಿಸಿದವರಿಗೆ ಆ ಕುರಿತ ಚರ್ಚೆ ಯಾವಾಗಲೂ ಬೆದರಿಕೆಯಾಗಿರುತ್ತದೆ’ ಎಂದು ಹೇಳಿದ್ದರು. 356ನೇ ವಿಧಿಗೆ ಒಳಪಟ್ಟಿರುವಾಗ. ರಾಜ್ಯದಲ್ಲಿ ಚುನಾಯಿತ ವಿಧಾನಸಭೆ ಅಸ್ತಿತ್ವದಲ್ಲಿ ಇಲ್ಲದೆ ಇದ್ದರೂ ಇಡೀ ರಾಜ್ಯವನ್ನು ಕರ್ಫ್ಯೂನಲ್ಲಿ ಇರಿಸುವ ಮೂಲಕ ನೀವು ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಬಹುದೇ ಎಂಬುದು ಪ್ರಶ್ನೆ’ ಎಂದಿದ್ದಾರೆ.
‘ಒಕ್ಕೂಟವು (ಫೆಡರಲಿಸಂ) ಸಂವಿಧಾನದ ಮೂಲ ರಚನೆಯ ಭಾಗವಾಗಿದೆ ಎಂದು ಸುಪ್ರೀಂಕೋರ್ಟ್ ಬೊಮ್ಮಾಯಿ (ಎಸ್ಆರ್ ಬೊಮ್ಮಾಯಿ ತೀರ್ಪು) ತೀರ್ಪಿನಲ್ಲಿ ಹೇಳಿರುವುದನ್ನು ನಾವು ಸ್ಪಷ್ಟಪಡಿಸೋಣ. ಫೆಡರಲಿಸಂ ಎಂದರೆ ರಾಜ್ಯವು ತನ್ನದೇ ಆದ ಧ್ವನಿ ಹೊಂದಿದ್ದು, ಅದರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲು ಸಂಪೂರ್ಣ ಸ್ವಾತಂತ್ರ್ಯವನ್ನು ಹೊಂದಿದೆ. ರಾಜ್ಯದ ಕುರಿತು ವಿಧಾನಸಭೆ ಬದಲಿಗೆ ಲೋಕಸಭೆ ಹೇಗೆ ಮಾತನಾಡಬಹುದು? ಸಂವಿಧಾನದಲ್ಲಿ ವಿಧಾನಸಭೆ ಅಂಗೀಕರಿಸಬೇಕಾದ ನಿರ್ಣಯವನ್ನು ಸಂಸತ್ತು ಹೇಗೆ ಅಂಗೀಕರಿಸಬಹುದು? 370 ಅನ್ನು ರದ್ದುಪಡಿಸಿದ ವಿಧಾನವು ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ. ಇನ್ನೂ ಕೆಟ್ಟ ನಿರ್ಧಾರವೆಂದರೆ, ಸ್ವತಂತ್ರ ರಾಜ್ಯದ ಸ್ಥಾನಮಾನ ರದ್ದುಗೊಳಿಸಿ ವಿಭಜಿಸಿರುವುದು. ಕೇಂದ್ರಾಡಳಿತ ಪ್ರದೇಶದ ತಳಮಟ್ಟಕ್ಕಿಳಿಸಿರುವುದು ಕಾಶ್ಮೀರದ ಜನರಿಗೆ ಒಕ್ಕೂಟ ಸರ್ಕಾರ ಎಸಗಿದ ಗಂಭೀರ ಮಹಾ ದ್ರೋಹವಾಗಿದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.
#Article370
1. In 2019, the CJI spoke at a seminar and said that “public deliberation will always be a threat to those who achieved power in its absence.” The question is whether you can abrogate the special status of a state by putting the whole state in curfew, while it is…— Asaduddin Owaisi (@asadowaisi) December 11, 2023
‘ನಾನು ಒಮ್ಮೆ ಹೇಳಿದ್ದೇನೆ, ಮತ್ತೊಮ್ಮೆ ಹೇಳುತ್ತೇನೆ. ಒಮ್ಮೆ ಇದನ್ನು ಕಾನೂನುಬದ್ಧಗೊಳಿಸಿದರೆ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್ ಅಥವಾ ಮುಂಬೈಯನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ಅಡ್ಡಿಯಿಲ್ಲ. ಲಡಾಖ್ ಪ್ರಕರಣವನ್ನು ನೋಡೋಣ, ಇದು ಲೆಫ್ಟಿನೆಂಟ್ ಗವರ್ನರ್ ಆಳ್ವಿಕೆಯಲ್ಲಿದೆ. ಅಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯವಿಲ್ಲ’ ಎಂದು ಹೇಳಿದ್ದಾರೆ.
‘ರಾಜ್ಯವು ಭಾರತದ ಅವಿಭಾಜ್ಯ ಅಂಗ ಎಂಬುದರಲ್ಲಿ ಸಂದೇವಿಲ್ಲ. ಆದರೆ, ಒಂದು ಅವಿಭಾಜ್ಯ ಅಂಗವಾಗಿರುವುದರಿಂದ ಅದು ಒಕ್ಕೂಟದೊಂದಿಗೆ ವಿಶಿಷ್ಟವಾದ ಸಾಂವಿಧಾನಿಕ ಸಂಬಂಧವನ್ನು ಹೊಂದಿಲ್ಲ ಎಂದು ಅರ್ಥವಲ್ಲ. ಕಾಶ್ಮೀರದ ಸಂವಿಧಾನ ಸಭೆಯ ವಿಸರ್ಜನೆಯ ನಂತರ ಈ ಸಾಂವಿಧಾನಿಕ ಸಂಬಂಧವನ್ನು ಶಾಶ್ವತಗೊಳಿಸಲಾಯಿತು’ ಎಂದಿದ್ದಾರೆ.
‘ಒಕ್ಕೂಟದ ನಿರ್ಧಾರದಿಂದ ಸೋತವರು ಜಮ್ಮುವಿನ ಡೋಗ್ರಾಸ್ ಮತ್ತು ಲಡಾಖ್‌ನ ಬೌದ್ಧರು, ಅವರು ಜನಸಂಖ್ಯಾ ಬದಲಾವಣೆಯನ್ನು ಎದುರಿಸಬೇಕಾಗುತ್ತದೆ. ರಾಜ್ಯತ್ವವನ್ನು ಮರುಸ್ಥಾಪಿಸುವ ಬಗ್ಗೆ ಟೈಮ್‌ಲೈನ್ ಏಕೆ ಇಲ್ಲ? ಕಾಶ್ಮೀರದಲ್ಲಿ ದೆಹಲಿ ಆಡಳಿತಕ್ಕೆ ಈಗಾಗಲೇ ಐದು ವರ್ಷಗಳಾಗಿವೆ. 2024ರ ಲೋಕಸಭೆ ಚುನಾವಣೆ ಜತೆಗೆ ರಾಜ್ಯದಲ್ಲಿ ಆದಷ್ಟು ಬೇಗ ವಿಧಾನಸಭೆ ಚುನಾವಣೆ ನಡೆಯಬೇಕು’ ಎಂದು ಓವೈಸಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ; ತೀರ್ಪಿಗೂ ಮುನ್ನ ನಮ್ಮನ್ನು ಗೃಹಬಂಧನದಲ್ಲಿಟ್ಟಿದ್ದರು: ಒಮರ್ ಅಬ್ದುಲ್ಲಾ


