Homeಅಂಕಣಗಳುದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು

ಹಿಟ್ಲರನ ಜರ್ಮನಿಯೂ ಅಂತರಧರ್ಮೀಯ ವಿವಾಹಗಳನ್ನು ನಿಷೇಧಿಸಿತ್ತು; ಯಹೂದಿಗಳಿಗೆ ನಾಗರಿಕತೆ ನಿರಾಕರಿಸಿತ್ತು.. ಅದೇ ಈಗ ಭಾರತದಲ್ಲಿಯೂ ನಡೆಯುತ್ತಿದೆ

- Advertisement -
- Advertisement -

ಮುಸ್ಲಿಮರನ್ನು ಬಹುಸಂಖ್ಯಾತ ಹಿಂದೂ ರಾಷ್ಟ್ರದ ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸಿ ಸಮಾನತೆಯನ್ನು ನಿರಾಕರಿಸುವುದು ಪೌರತ್ವ ಕಾಯಿದೆ ತಿದ್ದುಪಡಿ ಮತ್ತು ಎನ್‍ಆರ್‌ಸಿಯ ಮೂಲ ಉದ್ದೇಶವಾಗಿತ್ತು. ಈ ಕಾಯಿದೆ ಹತ್ತಾರುಗಳ ಪ್ರಯೋಗ ಆರಂಭವಾಗಿದೆ.

ಸಮಾನತೆ ನಿರಾಕರಿಸುವ ಮತ್ತೊಂದು ಕಾನೂನನ್ನು ಬಿಜೆಪಿ ಆಡಳಿತ ರಾಜ್ಯ ಸರ್ಕಾರಗಳು ಒಂದರ ನಂತರ ಮತ್ತೊಂದರಂತೆ ಜಾರಿಗೆ ತರತೊಡಗಿವೆ. ಮಧ್ಯಪ್ರದೇಶದ ನಂತರ ಮಂಗಳವಾರ ರಾತ್ರಿ ಉತ್ತರಪ್ರದೇಶವೂ ಅಂತರಧರ್ಮೀಯ ವಿವಾಹಗಳನ್ನು ನಿಷೇಧಿಸಿತು. ಮುಸಲ್ಮಾನ ಯುವಕರು ಹಿಂದೂ ಯುವತಿಯರನ್ನು ಪ್ರೇಮಪಾಶಕ್ಕೆ ಸಿಲುಕಿಸಿಕೊಂಡು ಮುಸ್ಲಿಮ್ ಧರ್ಮಕ್ಕೆ ಮತಾಂತರಗೊಳಿಸುವರು ಎಂಬ ಆಪಾದನೆಗೆ ಹಿಂದುತ್ವವಾದ ಇರಿಸಿರುವ ಹೆಸರು ‘ಲವ್ ಜಿಹಾದ್’. ಅಂತರಧರ್ಮೀಯ ವಿವಾಹಗಳ ನಿಷೇಧವನ್ನು ಲವ್ ಜಿಹಾದ್ ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂಬುದು ಹಿಂದುತ್ವವಾದ ಮಂಡಿಸುವ ವಾದ.

ಆದರೆ ವಾಸ್ತವವಾಗಿ ಅಲ್ಪಸಂಖ್ಯಾತರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿಸುವ ಕ್ರಮದ ಮುಂದುವರಿಕೆಯಿದು. ಹಿಟ್ಲರ್ ಸತ್ತಿದ್ದಾನೆ ಎಂದು ಯಾರು ಹೇಳುತ್ತಾರೆ? ಜರ್ಮನಿಯಲ್ಲಿ ದಫನಾದದ್ದು ಅವನ ಭೌತಿಕ ಶರೀರ ಮಾತ್ರ. ಕುಲೀನ ಹಸಿರು ರಕ್ತದ ಆರ್ಯ ಜನಾಂಗೀಯ ಮೇಲ್ಮೆಯನ್ನು ಮತ್ತೆ ಸ್ಥಾಪಿಸುವ ಅವನ ಧೋರಣೆಗಳು ದಫನಾಗಿಲ್ಲ. ಅವು ಗಾಳಿಯಲ್ಲಿ ನೀರಿನಲ್ಲಿ ತೇಲಿ ದೇಶ ದೇಶಗಳನ್ನು ಮುಟ್ಟಿವೆ. ಪ್ರಚಂಡ ನಾಯಕರ ಒಡಲುಗಳನ್ನು ಮೆದುಳುಗಳನ್ನು ಸೇರಿ ಹೋಗಿವೆ. ಜನಾಂಗೀಯ ಶ್ರೇಷ್ಠತೆಯ ಹುಸಿ ಹೆಮ್ಮೆಯನ್ನೂ, ಅನಾರ್ಯ ರಕ್ತದ ಮೇಲೆ ದ್ವೇಷದ ಕಿಚ್ಚನ್ನೂ ಹೊತ್ತಿಸಿ ಉರಿಸತೊಡಗಿವೆ.

ಈ ಅಂಕಣದಲ್ಲಿ ಈ ಹಿಂದೆ ಹೇಳಿರುವ ಹಲವು ಮಾತುಗಳನ್ನು ಪುನಃ ಹೇಳಲೇಬೇಕಿದೆ.

ಕಳೆದ ಆರು ವರ್ಷಗಳಿಂದ ದೇಶದುದ್ದಗಲಕ್ಕೆ ರಸ್ತೆ ರಸ್ತೆಗಳಲ್ಲಿ ಮುಸಲ್ಮಾನರು ದಲಿತರು ಈ ಕಿಚ್ಚಿಗೆ ಬಲಿಯಾದರು. ಕೊರೊನಾ ಮಹಾಮಾರಿ ಹಾಕಿರುವ ಅಲ್ಪವಿರಾಮ ತೆರವಾದ ನಂತರ ಈ ಕಿಚ್ಚು ಹೊಸ ಎಣ್ಣೆ ಎರೆಸಿಕೊಂಡು ಭುಗಿಲೇಳುವಲ್ಲಿ ಯಾವ ಅನುಮಾನವೂ ಇಲ್ಲ.

ಶ್ರೇಷ್ಠ ಆರ್ಯ ರಕ್ತ ಮತ್ತು ಕನಿಷ್ಠ ಅನಾರ್ಯ ರಕ್ತ ಅಥವಾ ಶ್ರೇಷ್ಠ ಆರ್ಯ ತಳಿ ಮತ್ತು ಕನಿಷ್ಠ ಅನಾರ್ಯ ತಳಿ ಎಂಬ ಹುಸಿ ಭೇದಭಾವವು ಹಿಟ್ಲರನ ಜರ್ಮನಿ ಮತ್ತು ಜರ್ಮನಿ ಆಕ್ರಮಿತ ಪ್ರದೇಶಗಳಲ್ಲಿ 60 ಲಕ್ಷ ಯಹೂದಿಗಳ ಮಾರಣಹೋಮಕ್ಕೆ ಕಾರಣವಾಯಿತು. ಹಲವು ಹತ್ತು ಲಕ್ಷಗಳಷ್ಟು ಇತರರೂ ಬಲಿಯಾದರು.

ನಾಜಿ ಜರ್ಮನಿಯ ಇತಿಹಾಸ ಭಾರತದಲ್ಲಿ ಸುರುಳಿ ಬಿಚ್ಚತೊಡಗಿದೆ. ಅನುಮಾನವೇ ಇಲ್ಲ.

“ಹಿಂದೂ ಜನಾಂಗ ಮತ್ತು ಹಿಂದೂ ರಾಷ್ಟ್ರವನ್ನು ತಮ್ಮ ಹೃದಯಕ್ಕೆ ಹತ್ತಿರ ಇರಿಸಿಕೊಂಡು ವೈಭವೀಕರಿಸಿ ಆ ಧ್ಯೇಯದೆಡೆಗೆ ಸಾಗುವ ಆಶೋತ್ತರ ಉಳ್ಳವರು ಮಾತ್ರವೇ ರಾಷ್ಟ್ರವಾದೀ ದೇಶಭಕ್ತರು. ಉಳಿದವರೆಲ್ಲ ದೇಶದ್ರೋಹಿಗಳು ಮತ್ತು ರಾಷ್ಟ್ರೀಯತೆಯ ವೈರಿಗಳು” ಎಂದು ಮೂರು ದಶಕಗಳ ಕಾಲ ಆರ್‌ಎಸ್‍ಎಸ್ ಮುಖ್ಯಸ್ಥರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಲ್ಕರ್ ಹೇಳಿದ್ದರು. We or Our Nationhood Defined (1939) ಕೃತಿಯಲ್ಲಿ ರಾಷ್ಟ್ರೀಯತೆ ಕುರಿತ ಅವರ ವಿಚಾರದ ಸವಿವರ ಪ್ರಸ್ತಾಪವಿದೆ.

“ಹಿಂದುಸ್ತಾನದ ಪರಕೀಯ ಜನಾಂಗಗಳು ಹಿಂದು ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಹಿಂದು ಧರ್ಮವನ್ನು ಭಕ್ತಿ ಗೌರವದಿಂದ ಕಾಣಬೇಕು, ಹಿಂದೂ ಜನಾಂಗ ಮತ್ತು ಸಂಸ್ಕೃತಿಯನ್ನು ವೈಭವೀಕರಿಸುವುದರ ವಿನಾ ಬೇರೆ ಯಾವ ವಿಚಾರವನ್ನೂ ನೆಚ್ಚಕೂಡದು. ಪ್ರತ್ಯೇಕ ಅಸ್ತಿತ್ವವನ್ನು ಬಿಟ್ಟುಕೊಟ್ಟು ಹಿಂದು ಜನಾಂಗದೊಳಕ್ಕೆ ವಿಲೀನಗೊಳ್ಳಬೇಕು, ಇಲ್ಲವಾದರೆ ಹಿಂದು ರಾಷ್ಟ್ರಕ್ಕೆ ಸಂಪೂರ್ಣ ಅಧೀನವಾಗಿ ನಾಗರಿಕ ಹಕ್ಕುಗಳನ್ನು ಕೂಡ ಕೇಳದಂತೆ ಈ ದೇಶದಲ್ಲಿ ಜೀವಿಸಬೇಕು. ನಮ್ಮದು ಪ್ರಾಚೀನ ರಾಷ್ಟ್ರ. ತಮ್ಮ ದೇಶದಲ್ಲಿ ನೆಲೆಸಲು ಬಂದ ಪರಕೀಯ ಜನಾಂಗಗಳನ್ನು ಪ್ರಾಚೀನ ದೇಶಗಳು ಹೇಗೆ ನಡೆಸಿಕೊಳ್ಳುತ್ತವೆಯೋ ಅದೇ ರೀತಿ ನಡೆಸಿಕೊಳ್ಳೋಣ” ಎಂಬುದು ಗೋಲ್ವಲ್ಕರ್ ಅವರ ಪ್ರತಿಪಾದನೆಯಾಗಿತ್ತು.

ಆದರೆ ಸಂವಿಧಾನ ರಚನಾ ಸಭೆಯು ಗೋಲ್ವಲ್ಕರ್ ಅವರ ಈ ಪ್ರತಿಪಾದನೆಗಳನ್ನು ತಿರಸ್ಕರಿಸಿತು. ಪೌರತ್ವದ ತಳಹದಿ ಧರ್ಮ ಅಲ್ಲ ಎಂದು ಸಾರಿತು. ಭಾರತವನ್ನು ಹಿಂದೂ ಬಹುಸಂಖ್ಯಾತ ದೇಶ ಎಂದು ಘೋಷಿಸದೆ ಜಾತ್ಯತೀತ ಮೌಲ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.

ಮನುಷ್ಯ ಮನುಷ್ಯನನ್ನು ಜಾತಿಯ ಕಾರಣಕ್ಕೆ, ಧರ್ಮದ ಕಾರಣಕ್ಕೆ, ತೊಗಲಿನ ಬಣ್ಣದ ಕಾರಣಕ್ಕೆ ದ್ವೇಷಿಸಿ ಹಿಂಸಿಸತೊಡಗಿದ್ದಾನೆ. ಮಾನವೀಯತೆಯನ್ನು ಮರೆತಿದ್ದಾನೆ. ಆಳದಲ್ಲಿ ಮಲಗಿರುವ ಪಾಶವಿಕ ಹಿಂಸಾ ಪ್ರವೃತ್ತಿ ಮೇಲೆದ್ದು ಹೆಡೆಯೆತ್ತಿ ಭುಸುಗುಡುತ್ತಿದೆ. ಸಾವಿರ ಸಾವಿರ ವರ್ಷಗಳಿಂದ ನಾಗರಿಕತೆಯ ವಿಕಾಸದ ಹಾದಿಯಲ್ಲಿ ಮಾನವೀಯ ಸಾಮಾಜಿಕ ನಡವಳಿಕೆಗಳು ಕೆಳಕ್ಕೆ ತುಳಿದಿಟ್ಟ ಈ ಪ್ರವೃತ್ತಿಗಳನ್ನು ಕೆದರಿ ಕೆಣಕಿ ಕೆರಳಿಸಿ ಭುಗಿಲೆಬ್ಬಿಸಿದವರು ಯಾರು? ಈ ಉರಿವ ಬೆಂಕಿಗೆ ಎಣ್ಣೆ ಎರಚುತ್ತ ಬಂದಿರುವವರು ಯಾರು ಎಂಬ ಪ್ರಶ್ನೆಗಳಿಗೆ ಉತ್ತರಗಳು ದೇಶ ವಿದೇಶಗಳಲ್ಲಿ ಒಡಮೂಡಿವೆ. ಒಂದೊಂದು ದೇಶದಲ್ಲಿ ಒಂದೊಂದು ಹೆಸರು ಧರಿಸಿವೆ. ಹೊಸ ಭಯೋತ್ಪಾದಕರನ್ನು ಕಟೆದು ನಿಲ್ಲಿಸಿವೆ. ಈ ಭಯೋತ್ಪಾದಕರು ಮುಖ ಕೈಕಾಲು ದೇಹಧಾರಿ ಮನುಷ್ಯರಲ್ಲ. ಬದಲಾಗಿ ಅವರದೆಯಲ್ಲಿ ಭುಗಿಲೆದ್ದು ಪ್ರಚಂಡ ನಾಯಕರು ಯಾರತ್ತ ಇಷಾರೆ ಮಾಡಿದರೆ ಅವರನ್ನು ಸುಡಬಹುದಾದ ಕಡುದ್ವೇಷದ ಕಿಚ್ಚು. ಅದುವೇ ನವ ಭಯೋತ್ಪಾದಕ. ಈ ಭಯೋತ್ಪಾದಕ ಈವರೆಗೆ ಕಂಡು ಕೇಳಿರುವ ಎಲ್ಲ ಭಯೋತ್ಪಾದಕರಿಗಿಂತ ಅಧಿಕ ಘಾತಕ. ಈ ಕಿಚ್ಚಿಗೆ ವರ್ಣಭೇದ, ಧರ್ಮ, ಜಾತಿ, ಮೇಲು ಕೀಳಿನ ಮುಖವಾಡ ತೊಡಿಸಿ ಅಮಾಯಕರನ್ನು ಹರಿದು ತಿನ್ನಲು ಛೂ ಬಿಡಲಾಗಿದೆ.

ಭರತವರ್ಷದಲ್ಲಿನ ನಿಜ ನಾಮಧೇಯಗಳು ಚಿರಪರಿಚಿತ. ಇವುಗಳು ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು. ನಂತರದ್ದು ಕ್ರೈಸ್ತರದು ಇದ್ದೀತು.


ಇದನ್ನು ಓದಿ: ಕರ್ನಾಟಕದ ಒಕ್ಕೂಟ ರಾಜಕೀಯ ವ್ಯವಸ್ಥೆಯ ಚರಿತ್ರೆ: ಟಿ.ಆರ್ ಚಂದ್ರಶೇಖರ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....