Homeಮುಖಪುಟಗೃಹಸಚಿವರ ಮನೆ, ಬಿಜೆಪಿ ಕಚೇರಿ ಮೇಲೆ ಬುಲ್ಡೋಜರ್‌ ಹತ್ತಿಸಿದರೆ ಗಲಭೆಗಳು ನಿಲ್ಲುತ್ತವೆ: ಎಎಪಿ ನಾಯಕ ರಾಘವ್...

ಗೃಹಸಚಿವರ ಮನೆ, ಬಿಜೆಪಿ ಕಚೇರಿ ಮೇಲೆ ಬುಲ್ಡೋಜರ್‌ ಹತ್ತಿಸಿದರೆ ಗಲಭೆಗಳು ನಿಲ್ಲುತ್ತವೆ: ಎಎಪಿ ನಾಯಕ ರಾಘವ್ ಚಡ್ಡಾ

- Advertisement -
- Advertisement -

“ದೇಶಾದ್ಯಂತ ಕೋಮು ಹಿಂಸಾಚಾರವನ್ನು ನಿಲ್ಲಿಸಬೇಕಾದರೆ ಗೃಹ ಸಚಿವ ಅಮಿತ್ ಶಾ ಅವರ ಮನೆ, ಬಿಜೆಪಿ ಕೇಂದ್ರ ಕಚೇರಿಯ ಮೇಲೆ ಬುಲ್ಡೋಜರ್ ಹತ್ತಿಸಬೇಕು” ಎಂದು ಎಎಪಿ ನಾಯಕ ರಾಘವ್‌ ಚಡ್ಡಾ ಹೇಳಿದ್ದಾರೆ.

ದೆಹಲಿಯ ಜಹಾಂಗೀರ್‌ಪುರಿ ಕೋಮುಗಲಭೆಯ ನಂತರ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ಅಧಿಕಾರದಲ್ಲಿರುವ ದೆಹಲಿ ಮುನ್ಸಿಪಾಲ್‌ ತೆರವು ಕಾರ್ಯಾಚರಣೆ ಆರಂಭಿಸಿದೆ. ಅತಿಕ್ರಮಣ ತೆರವು ಕಾರ್ಯಾಚರಣೆ ಹೆಸರಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

“2020ರಲ್ಲಿ ಈಶಾನ್ಯ ದೆಹಲಿಯಲ್ಲಿ ಘರ್ಷಣೆಗಳು ನಡೆದಿವೆ. ಇಂದು, ಜಹಾಂಗೀರ್ಪುರಿಯಲ್ಲಿ ಘರ್ಷಣೆಗಳು ನಡೆಯುತ್ತಿವೆ. ಬಿಜೆಪಿ ಈ ಗಲಭೆಗಳನ್ನು ಸೃಷ್ಟಿಸುತ್ತದೆ. ಗೃಹ ಸಚಿವರು ಈ ಗಲಭೆಗಳನ್ನು ನಡೆಸುತ್ತಿದ್ದಾರೆ. ಅವರ ಮನೆಯ ಮೇಲೆ ಬುಲ್ಡೋಜರ್ ಚಲಾಯಿಸಿದರೆ, ಗಲಭೆಗಳು ನಿಲ್ಲುತ್ತವೆ” ಎಂದು ಚಡ್ಡಾ ಅಭಿಪ್ರಾಯಪಟ್ಟಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಭಾರತೀಯ ಜನತಾ ಪಕ್ಷ ದೇಶಾದ್ಯಂತ ಗಲಭೆ, ಗೂಂಡಾಗಿರಿ ನಡೆಸುತ್ತಿದೆ. ಇದನ್ನೆಲ್ಲ ತಡೆಯಬೇಕಾದರೆ ಬಿಜೆಪಿಯ ಕೇಂದ್ರ ಕಚೇರಿಯ ಮೇಲೆ ಬುಲ್ಡೋಜರ್ ಓಡಿಸಬೇಕು. ಬಿಜೆಪಿ ಕೇಂದ್ರ ಕಚೇರಿ ಮೇಲೆ ಬುಲ್ಡೋಜರ್ ಬಳಸಿದರೆ ನಾನು ಗ್ಯಾರಂಟಿ ನೀಡುತ್ತೇನೆ. ಈ ಗಲಭೆಗಳು ನಿಲ್ಲುತ್ತವೆ” ಎಂದಿದ್ದಾರೆ.

ಶನಿವಾರ ಹನುಮ ಜಯಂತಿ ಮೆರವಣಿಗೆ ವೇಳೆ ಜಹಾಂಗೀರ್‌ಪುರಿಯಲ್ಲಿ ನಡೆದ ಘರ್ಷಣೆಯನ್ನು ಪ್ರಸ್ತಾಪಿಸಿ, “ಬಿಜೆಪಿಯವರು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳನ್ನು ತಮ್ಮ ಜೇಬಿನಲ್ಲಿಟ್ಟುಕೊಂಡಿದ್ದು, ಅವರನ್ನು ಅಶಾಂತಿ ಸೃಷ್ಟಿಸಲು ಬಳಸಬಹುದು. ಬಾಂಗ್ಲಾದೇಶಿಯರು ಎಲ್ಲಿ ನೆಲೆಸಿದ್ದಾರೆಂದು ಕೇಳಿ ಮುಂದಿನ ಗಲಭೆಗಳ ನಿಮಗೆ ತಿಳಿಯುತ್ತವೆ. ಇದಲ್ಲದೆ, ದೆಹಲಿಯಲ್ಲಿ ಅಕ್ರಮ ವಸಾಹತುಗಳ ನಿರ್ಮಾಣಕ್ಕೆ ಬಿಜೆಪಿ ಅನುಕೂಲ ಮಾಡಿಕೊಟ್ಟಿದೆ” ಎಂದು ಆರೋಪಿಸಿದ್ದಾರೆ.

“ಬಿಜೆಪಿ ಕಳೆದ 15 ವರ್ಷಗಳಿಂದ ಎಂಸಿಡಿಯಲ್ಲಿ ಅಧಿಕಾರದಲ್ಲಿದೆ. ಅವರು ಲಂಚ ಸ್ವೀಕರಿಸಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದೆ. ಇಂದು ಉರುಳಿಸಲಾಗುತ್ತಿರುವ ಅಕ್ರಮ ಕಟ್ಟಡಗಳ ಜೊತೆಗೆ ಆ ಕಟ್ಟಡಗಳನ್ನು ನಿರ್ಮಿಸಿದ ಬಿಜೆಪಿ ಸಚಿವರ ಮನೆಗಳನ್ನು ನೆಲಸಮ ಮಾಡಬೇಕು” ಎಂದು ಅವರು ತಿಳಿಸಿದ್ದಾರೆ.

ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನ ನಡೆಯುತ್ತಿರುವುದನ್ನು ವಿರೋಧ ಪಕ್ಷದ ನಾಯಕರು ಖಂಡಿಸಿದ್ದಾರೆ. ಕಾರ್ಯಾಚರಣೆ ನಿಲ್ಲುಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಇದನ್ನೂ ಓದಿರಿ: ದೆಹಲಿ: ಸುಪ್ರೀಂ ಕೋರ್ಟ್ ತಡೆಯಾಜ್ಞೆ ನಡುವೆಯೂ ತೆರವು ಕಾರ್ಯಾಚರಣೆ!

ಘಟನೆಯ ಸಂಬಂಧ ಕಾಂಗ್ರೆಸ್ ವಕ್ತಾರ ಜೈವೀರ್ ಶೆರ್ಗಿಲ್ ಟ್ವೀಟ್ ಮಾಡಿದ್ದು, “ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಚೀನಾದ ಅತಿಕ್ರಮಣವಾಗುತ್ತಿದ್ದು, ಅದರ ಮೇಲೆ ಕೇಂದ್ರ ಸರ್ಕಾರ ಬುಲ್ಡೋಜರ್‌ಗಳನ್ನು ಏಕೆ ಓಡಿಸುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ.

“ತೈಲ ಬೆಲೆ ಏರಿಕೆ, ಸಿಲಿಂಡರ್‌ ಬೆಲೆ ಏರಿಕೆ, ಹಣದುಬ್ಬರ ಹಾಗೂ ನಿರುದ್ಯೋಗದ ಮೇಲೆ ಯಾವಾಗ ಬುಲ್ಡೋಜರ್‌ ಓಡುಸುತ್ತೀರಿ?” ಎಂದು ಅವರು ಪ್ರಶ್ನಿಸಿದ್ದಾರೆ.

ಇದರ ನಡುವೆ ಸಿಪಿಐ (ಎಂ) ನಾಯಕಿ ಬೃಂದಾ ಕಾರಟ್ ಅವರು ಬುಧವಾರ ಮಧ್ಯಾಹ್ನ ಜಹಾಂಗೀರ್‌ಪುರಿಯಲ್ಲಿ ಧ್ವಂಸಗೊಳಿಸುವ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಬುಲ್ಡೋಜರ್ ಎದುರು ನಿಂತು ಪ್ರತಿಭಟಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...