ಮಹಾರಾಷ್ಟ್ರದ ನಾಂದೇಡ್‌ನಲ್ಲಿ 20 ವರ್ಷದ ವ್ಯಕ್ತಿಯೊಬ್ಬನನ್ನು ಥಳಿಸಿ, ಗುಂಡು ಹಾರಿಸಿ, ಕಲ್ಲಿನಿಂದ ತಲೆ ಜಜ್ಜಿ ಕೊಲೆ ಮಾಡಲಾಗಿದೆ. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಆತನ ಗೆಳತಿ, ಹಣೆಯ ಮೇಲೆ ಸಿಂಧೂರ ಹಚ್ಚಿಕೊಂಡು, ಆತನ ಮನೆಯಲ್ಲಿ ಸೊಸೆಯಾಗಿ ವಾಸಿಸುವುದಾಗಿ ಪ್ರತಿಜ್ಞೆ ಮಾಡಿದಳು.
ಯುವತಿ ಆಂಚಲ್‌ನ ಪ್ರಿಯಕರ, ಸಕ್ಷಾಮ್ ಟೇಟ್ ಅವರನ್ನು ಗುರುವಾರ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಥಳಿಸಿ, ತಲೆಗೆ ಗುಂಡು ಹಾರಿಸಿ, ನಂತರ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಯಿತು.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಅಂಚಲ್, ಯುವಕನ ಹಣೆಗೆ ಸಿಂಧೂರವನ್ನು ಇಟ್ಟು ಪ್ರತಿಜ್ಞೆ ಮಾಡಿದ್ದಾಳೆ.
ಆಂಚಲ್ ತನ್ನ ಸಹೋದರರ ಮೂಲಕ ಪರಿಚಯವಾದ ಯುವಕನನ್ನು ಪ್ರೀತಿಸುತ್ತಿದ್ದಳು. ನಂತರ ಆಗಾಗ್ಗೆ ಅವನ ಮನೆಗೆ ಭೇಟಿ ನೀಡುತ್ತಿದ್ದಳು. ತಮ್ಮ ಪ್ರೇಮ ಸಂಬಂಧದ ಮೂರು ವರ್ಷಗಳಲ್ಲಿ, ಕಾರಣಕ್ಕೆ ಅವರು ತಮ್ಮ ಕುಟುಂಬದಿಂದ ಒತ್ತಡ ಎದುರಿಸಿದರು. ಆದರೂ ಅವರು ಪರಸ್ಪರ ಸಿಗುತ್ತಿದ್ದರು.
ಆಂಚಲ್‌ನ ಸಹೋದರರು ಮತ್ತು ತಂದೆ, ಸಕ್ಷಾಮ್ ಟೇಟ್ ಅವರನ್ನು ಥಳಿಸಿ ತಲೆಗೆ ಗುಂಡು ಹಾರಿಸಿ, ಕಲ್ಲಿನಿಂದ ತಲೆಗೆ ಹಲ್ಲೆ ಮಾಡಿ ಕೊಂದರು.
ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಆಂಚಲ್, ಯುವಕನ ದೇಹಕ್ಕೆ ಅರಿಶಿನ ಮತ್ತು ಹಣೆಗೆ ಸಿಂಧೂರ ಹಚ್ಚಿ, ಪ್ರೇಮಿಯ ಮೃತದೇಹವನ್ನೇ ಮದುವೆಯಾದರು. ತನ್ನ ಉಳಿದ ಜೀವನವನ್ನು ಪ್ರೇಮಿಯ ಮನೆಯಲ್ಲಿ ಆತನ ಪತ್ನಿಯಾಗಿ ಬದುಕಲು ನಿರ್ಧರಿಸಿದರು.
ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತಾ, ‘”ಸಾಕ್ಷಮ್ ಸಾವಿನಲ್ಲೂ ನಮ್ಮ ಪ್ರೀತಿ ಗೆದ್ದಿತು, ನನ್ನ ತಂದೆ ಮತ್ತು ಸಹೋದರರು ಸೋತರು. ಟೇಟ್ ಸತ್ತಿದ್ದರೂ, ಅವರ ಪ್ರೀತಿ ಇನ್ನೂ ಜೀವಂತವಾಗಿದೆ” ಎಂದು ಅವರು ಹೇಳಿದರು.
ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ಅವರನ್ನು ಬಂಧಿಸಲಾಗಿದೆ.


