Homeಮುಖಪುಟಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು...

ಆಸ್ಪತ್ರೆಗಳು ಕಡ್ಡಾಯವಾಗಿ ದರಪಟ್ಟಿ ಪ್ರದರ್ಶಿಸಬೇಕು, ಹಣ ಪಾವತಿಸದ ಕಾರಣ ತುರ್ತು ಆರೈಕೆ ನಿರಾಕರಿಸುವಂತಿಲ್ಲ : ಕಾನೂನು ಎತ್ತಿ ಹಿಡಿದ ಹೈಕೋರ್ಟ್

- Advertisement -
- Advertisement -

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಮತ್ತು ನಿಬಂಧನೆಗಳನ್ನು ಎತ್ತಿಹಿಡಿದ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶದ ವಿರುದ್ಧ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಕೇರಳ ಖಾಸಗಿ ಆಸ್ಪತ್ರೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಿಭಾಗೀಯ ಪೀಠ ಬುಧವಾರ (ನವೆಂಬರ್ 26) ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಸುಶ್ರುತ್ ಅರವಿಂದ್ ಧರ್ಮಾಧಿಕಾರಿ ಮತ್ತು ಶ್ಯಾಮ್ ಕುಮಾರ್ ವಿ.ಎಂ ಅವರನ್ನೊಳಗೊಂಡ ವಿಭಾಗೀಯ ಪೀಠವು, 2019ರಿಂದ ಹಂತ ಹಂತವಾಗಿ ಜಾರಿಗೆ ತರಲಾದ ಕಾನೂನನ್ನು ಎತ್ತಿಹಿಡಿದಿದೆ. ಕಾಯ್ದೆಯ ನಿಬಂಧನೆಗಳು ಅಸ್ಪಷ್ಟ, ಅನಿಯಂತ್ರಿತ, ಅಪ್ರಾಯೋಗಿಕ ಮತ್ತು ಅಸಮಾನವಾಗಿವೆ ಎಂಬ ಮೇಲ್ಮನವಿಯ ವಾದಗಳನ್ನು ತಿರಸ್ಕರಿಸಿದೆ.

"ಈ ತೀರ್ಪು ಕೇವಲ ಕಾನೂನಿನ ಘೋಷಣೆಯಾಗಿ ಕಾರ್ಯನಿರ್ವಹಿಸದೆ, ಘನತೆ, ನೈತಿಕ ಮತ್ತು ಸಮಾನ ವೈದ್ಯಕೀಯ ಆರೈಕೆಯ ಹಕ್ಕಿನ ಮರುದೃಢೀಕರಣವಾಗಿರಲಿ" ಎಂದು ಪೀಠ ಹೇಳಿದೆ.

ಕಾಯ್ದೆಯ ನಿಬಂಧನೆಗಳು ಯುನೈಟೆಡ್ ಸ್ಟೇಟ್ಸ್ (ಯುಎಸ್‌) ಮತ್ತು ಯುರೋಪಿಯನ್ ಒಕ್ಕೂಟದಂತೆಯೇ ( (ಇಯು) ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.

ಆಸ್ಪತ್ರೆ ನೌಕರರ ವಿವರಗಳನ್ನು ಬಹಿರಂಗಪಡಿಸುವುದು ಕಡ್ಡಾಯ, ಪ್ರತಿ ಚಿಕಿತ್ಸಾ ವಸ್ತು ಮತ್ತು ಪ್ಯಾಕೇಜ್‌ಗಳಿಗೆ ವಿಧಿಸುವ ಶುಲ್ಕಗಳ ಪಟ್ಟಿಯನ್ನು ಪ್ರಕಟಿಸುವುದು ಕಡ್ಡಾಯ ಎಂಬ ಕಾಯ್ದೆಯ ನಿಬಂಧನೆಗಳನ್ನು ಮೇಲ್ಮನವಿದಾರರು ಪ್ರಾಥಮಿಕವಾಗಿ ಪ್ರಶ್ನಿಸಿದ್ದರು. ರೋಗಿಗಳಿಗೆ ಜೀವರಕ್ಷಕ ಚಿಕಿತ್ಸೆಗಳು ಮತ್ತು ಸುರಕ್ಷಿತ ಸಾರಿಗೆಯನ್ನು ಕಡ್ಡಾಯವಾಗಿ ಒದಗಿಸುವ ಕಾನೂನಿನ ಆದೇಶವನ್ನೂ ಪ್ರಶ್ನಿಸಿದ್ದರು.

ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದು, ರೋಗಿಗಳ ಹಕ್ಕುಗಳು ಮತ್ತು ಸುರಕ್ಷತೆಯನ್ನು ಎತ್ತಿಹಿಡಿಯುವುದು, ಕ್ಲಿನಿಕಲ್ ಅಭ್ಯಾಸದಲ್ಲಿ ಪಾರದರ್ಶಕತೆ ಮತ್ತು ನೈತಿಕ ಮಾನದಂಡಗಳನ್ನು ಉತ್ತೇಜಿಸುವುದು, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳಿಗೆ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳನ್ನು ಉತ್ತಮವಾಗಿ ಸಜ್ಜುಗೊಳಿಸುವುದು, ಸ್ಥಿರ ಮತ್ತು ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ಆರೋಗ್ಯ ವಲಯದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಕಾನೂನು ಹೊಂದಿದೆ ಎಂದು ರಾಜ್ಯ ಸರ್ಕಾರ ಸಮರ್ಥಿಸಿಕೊಂಡಿತ್ತು.

ಪ್ರಶ್ನಿಸಲಾಗಿರುವ ನಿಬಂಧನೆಗಳನ್ನು ಮತ್ತು ಕಾಯ್ದೆಯ ರಚನಾತ್ಮಕ ಚೌಕಟ್ಟನ್ನು ಪರಿಶೀಲಿಸಿದ ನ್ಯಾಯಾಲಯ, ಈ ಕಾಯ್ದೆಯು ಈಗಾಗಲೇ ಅಸ್ತಿತ್ವದಲ್ಲಿರುವ ಸಾಂವಿಧಾನಿಕ ಕರ್ತವ್ಯಗಳನ್ನು ಜಾರಿಗೊಳಿಸುವ ವಿಧಾನವನ್ನು ಮಾತ್ರ ಹೊಂದಿದೆ ಎಂದು ಅಭಿಪ್ರಾಯಪಟ್ಟಿದೆ.

ಕಾಯ್ದೆಯು ಹೊಸ ನಿರ್ಬಂಧಗಳನ್ನು ಸೃಷ್ಟಿಸುವುದಿಲ್ಲ. ಬದಲಾಗಿ, ನೋಂದಣಿ ಮತ್ತು ಗುಣಮಟ್ಟದ ಮಾನದಂಡಗಳ ವ್ಯವಸ್ಥೆ, ಪಾರದರ್ಶಕತೆಯ ಕಡ್ಡಾಯ ಆದೇಶ, ತುರ್ತು ಚಿಕಿತ್ಸೆ ಮತ್ತು ರೋಗಿಯ ಸ್ಥಿರೀಕರಣಕ್ಕೆ ಜಾರಿಗೊಳಿಸಬಹುದಾದ ಕನಿಷ್ಠ ಅಗತ್ಯತೆಗಳು- ಈ ಎಲ್ಲವನ್ನೂ ಜಾರಿಗೆ ತಂದು ಸಾಂವಿಧಾನಿಕ ಜವಾಬ್ದಾರಿಗಳನ್ನು ಪ್ರಾಯೋಗಿಕವಾಗಿ ಕಾರ್ಯಗತಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ದರ ಪಟ್ಟಿ ಪ್ರದರ್ಶನ ಕಡ್ಡಾಯ

ಕಾಯ್ದೆಯ ಸೆಕ್ಷನ್ 39ರ ಅಡಿಯಲ್ಲಿ ಬರುವ ‘ಸೇವೆಯ ಪ್ರಕಾರಗಳು’ ಮತ್ತು ‘ಪ್ಯಾಕೇಜ್ ದರಗಳು’ ಎಂಬ ಪದಗಳು ಅಸ್ಪಷ್ಟವಾಗಿವೆ ಎಂಬ ವಾದವನ್ನು ತಿರಸ್ಕರಿಸಿದ ಪೀಠವು, ಕಾಯ್ದೆಯು ಪ್ರತಿಯೊಂದು ವೈದ್ಯಕೀಯ ಪರಿಸ್ಥಿತಿಯನ್ನು ಮೊದಲೇ ಊಹಿಸಿ ಬೆಲೆ ನಿಗದಿಪಡಿಸಬೇಕೆಂದು ಆದೇಶಿಸುವುದಿಲ್ಲ. ಗುರುತಿಸಬಹುದಾದ ಸೇವೆಗಳು ಮತ್ತು ಪ್ಯಾಕೇಜ್‌ಗಳ ಪ್ರಾಮಾಣಿಕ ಮೂಲ ಬೆಲೆ, ಹೆಚ್ಚುವರಿ ಸೇವೆಗಳು, ತೊಡಕುಗಳು ಮತ್ತು ಹೆಚ್ಚಿನ ದಿನಗಳ ವಾಸ್ತವ್ಯಕ್ಕೆ ಪ್ರತ್ಯೇಕವಾಗಿ ಐಟಂ-ವೈಸ್ ಬಿಲ್ಲಿಂಗ್ (ವಿವರವಾದ ಬಿಲ್) ನೀಡಬೇಕು ಎಂಬುವುದನ್ನು ಮಾತ್ರ ಕಡ್ಡಾಯಗೊಳಿಸುತ್ತದೆ ಎಂದಿದೆ.

ಸೇವೆಗಳ ಬೆಲೆಯನ್ನು ಸರ್ಕಾರವೇ ನಿಗದಿಪಡಿಸುವುದಕ್ಕಿಂತ, ಈ ಬೆಲೆ ಬಹಿರಂಗಪಡಿಸುವ ನಿಯಮವು ಬಹಳ ಕಡಿಮೆ ಒತ್ತಡ ಹೇರುವಂಥದ್ದು. ಜೊತೆಗೆ, ಇದು ಜನಸಾಮಾನ್ಯರ ಹಿತವನ್ನು ಕಾಪಾಡುತ್ತದೆ ಮತ್ತು ಆಸ್ಪತ್ರೆಗಳು ಅತಿಯಾದ ಶುಲ್ಕ ವಿಧಿಸುವುದರಿಂದ ರೋಗಿಗಳಿಗೆ ರಕ್ಷಣೆ ನೀಡುತ್ತದೆ. ಆದ್ದರಿಂದ ಬೆಲೆ ಬಹಿರಂಗಪಡಿಸುವುದು ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದೆ ಎಂದು ನ್ಯಾಯಾಲಯ ಹೇಳಿದೆ.

ಕೇರಳ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ ‘ಪ್ಯಾಕೇಜ್ ದರಗಳು’ ಎಂದರೇನು? ಎಂಬುದನ್ನು ನ್ಯಾಯಾಲಯ ಸ್ಪಷ್ಟವಾಗಿ ವಿವರಿಸಿದೆ.

ಪ್ಯಾಕೇಜ್ ದರಗಳು ಎಂದರೆ ಸಾಮಾನ್ಯವಾಗಿ ನಡೆಸಲಾಗುವ ಶಸ್ತ್ರಚಿಕಿತ್ಸೆಗಳು ಅಥವಾ ಚಿಕಿತ್ಸಾ ಕ್ರಮಗಳಿಗೆ ನಿಗದಿಪಡಿಸಿರುವ ಮೂಲ ದರಗಳು ಮಾತ್ರ. ಇದರಲ್ಲಿ ಆ ಚಿಕಿತ್ಸೆಗೆ ಸಾಮಾನ್ಯವಾಗಿ ಬೇಕಾದ ಸೇವೆಗಳು ಸೇರಿಕೊಂಡಿರುತ್ತವೆ. ಆದರೆ ಊಹಿಸಿರದ ತೊಡಕುಗಳು, ರೋಗಿಯಲ್ಲಿ ಇರುವ ಇತರ ರೋಗಗಳ ನಿರ್ವಹಣೆ, ಐಸಿಯುವಿನಲ್ಲಿ ಹೆಚ್ಚು ದಿನಗಳ ಕಾಲ ಇರಬೇಕಾದ ಸ್ಥಿತಿ ಅಥವಾ ದುಬಾರಿ ಉಪಕರಣಗಳು/ಸಾಮಗ್ರಿಗಳ ಬಳಕೆ ಇತ್ಯಾದಿಗಳು ಪ್ಯಾಕೇಜ್‌ನಲ್ಲಿ ಸೇರಿಕೊಂಡಿರುವುದಿಲ್ಲ. ಇಂತಹ ಹೆಚ್ಚುವರಿ ವೆಚ್ಚಗಳನ್ನು ಪ್ರತ್ಯೇಕವಾಗಿ ಬಿಲ್ ಮಾಡಬಹುದು, ಆದರೆ ಎರಡು ಷರತ್ತುಗಳನ್ನು ಪೂರೈಸಲೇ ಬೇಕು: ಒಂದು, ರೋಗಿಗೆ ಅಥವಾ ಕುಟುಂಬಕ್ಕೆ ಈ ಹೆಚ್ಚುವರಿ ಶುಲ್ಕದ ಬಗ್ಗೆ ಮೊದಲೇ ಸ್ಪಷ್ಟವಾಗಿ ತಿಳಿಸಬೇಕು; ಎರಡು, ಆ ಖರ್ಚು ವೈದ್ಯಕೀಯವಾಗಿ ಅಗತ್ಯ ಎಂಬುದಕ್ಕೆ ಸಾಕ್ಷ್ಯ ಅಥವಾ ಕಾರಣ ತೋರಿಸಬೇಕು. ಈ ರೀತಿ ಪಾರದರ್ಶಕತೆ ಮತ್ತು ವೈದ್ಯಕೀಯ ಸಾಕ್ಷ್ಯ ಇದ್ದರೆ ಮಾತ್ರ ಪ್ಯಾಕೇಜ್ ಹೊರಗಿನ ಶುಲ್ಕ ವಿಧಿಸಲು ಅನುಮತಿ ಇದೆ ಎಂದು ನ್ಯಾಯಾಲಯ ಹೇಳಿದೆ.

ವೈದ್ಯರು ಮತ್ತು ಇತರ ಉದ್ಯೋಗಿಗಳ ವಿವರಗಳನ್ನು ಬಹಿರಂಗಪಡಿಸುವುದು

ವೈದ್ಯರು ಮತ್ತು ಇತರ ಸಿಬ್ಬಂದಿಯ ವೈಯಕ್ತಿಕ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವ ಅಗತ್ಯತೆ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆಸ್ಪತ್ರೆಯಲ್ಲಿ ಸಾಕಷ್ಟು ಸಂಖ್ಯೆಯ ಸಿಬ್ಬಂದಿ ಇದ್ದಾರೆ ಮತ್ತು ಅವರು ಸಮರ್ಥರಿದ್ದಾರೆ ಎಂಬುದನ್ನು ಜನರಿಗೆ ತೋರಿಸಲು ಸಿಬ್ಬಂದಿಯ ಪ್ರಾಥಮಿಕ ಮಾಹಿತಿ ನೀಡಬಹುದು ಎಂದಿದೆ.

ಅಂದರೆ, ವೈದ್ಯರ ಹೆಸರು, ಶೈಕ್ಷಣಿಕ ಅರ್ಹತೆ, ಅನುಭವ ಇತ್ಯಾದಿಯನ್ನು ಸರ್ಕಾರಿ ಅಧಿಕಾರಿಗಳಿಗೆ ತೋರಿಸಿ ದೃಢೀಕರಣ ಪಡೆಯಬೇಕು. ಇದನ್ನು ಜನಸಾಮಾನ್ಯರಿಗೆ ಅಥವಾ ಆನ್‌ಲೈನ್‌ನಲ್ಲಿ ಪ್ರಕಟಿಸಬೇಕೆಂಬ ಯಾವ ನಿಯಮವೂ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಪೀಠವು ಸಿಬ್ಬಂದಿಯ ಮಾಹಿತಿ ಸಂಗ್ರಹಿಸುವ ನಿಯಮವು ಸಂಪೂರ್ಣ ಸಾಂವಿಧಾನಿಕವಾಗಿ ಸಿಂಧು ಎಂದು ಸ್ಪಷ್ಟಪಡಿಸಿದೆ. ಗೌಪ್ಯತೆಯ ಹಕ್ಕಿಗೆ ಸಂಬಂಧಿಸಿದ ಐತಿಹಾಸಿಕ ಪುಟ್ಟಸ್ವಾಮಿ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯ, ಈ ಕ್ರಮವು (1) ಕಾಯ್ದೆಯಲ್ಲಿ ಸ್ಪಷ್ಟ ಆಧಾರ ಹೊಂದಿರುವ ಕಾನೂನುಬದ್ಧ ಕ್ರಮ, (2) ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಚಿಕಿತ್ಸೆ ಎಂಬ ಸಮಂಜಸ ಉದ್ದೇಶವನ್ನು ಹೊಂದಿದೆ, (3) ಅತಿಯಾಗಿ ಒತ್ತಡ ಹೇರುವುದಿಲ್ಲ, ಕೇವಲ ಕೆಲಸಕ್ಕೆ ಬೇಕಾದ ಅಗತ್ಯ ಮಾಹಿತಿ ಮಾತ್ರ ಕೇಳುತ್ತದೆ ಮತ್ತು ತಪಾಸಣೆಗೆ ಮಾತ್ರ ಬಳಸುತ್ತದೆ, (4) ಮಾಹಿತಿಯ ದುರುಪಯೋಗ ತಡೆಯಲು ಮಿತಿಗಳಿವೆ ಮತ್ತು ಯಾವುದೇ ಪ್ರತಿಕೂಲ ನಿರ್ಧಾರದ ವಿರುದ್ಧ ಮೇಲ್ಮನವಿ ಅಥವಾ ಪುನರ್ವಿಚಾರಣೆ ಮಾಡುವ ಹಕ್ಕು ಇದೆ. ಈ ನಾಲ್ಕೂ ಷರತ್ತುಗಳನ್ನು ಪೂರೈಸುವ ಕಾರಣ ಈ ನಿಯಮವು ವೈಯಕ್ತಿಕ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಈಗಿರುವ ನಿಯಮಗಳು ಈಗಾಗಲೇ ಸಾಂವಿಧಾನಿಕವಾಗಿ ಸರಿಯಿದ್ದರೂ, ಇನ್ನಷ್ಟು ರಕ್ಷಣೆ ಮತ್ತು ಪಾರದರ್ಶಕತೆ ತರಲು ಸರ್ಕಾರ ಹೆಚ್ಚುವರಿ ನಿಯಮಗಳು ಅಥವಾ ಮಾರ್ಗದರ್ಶನಗಳನ್ನು ರೂಪಿಸಬಹುದು ಎಂದು ನ್ಯಾಯಾಲಯ ಸಲಹೆ ನೀಡಿದೆ.

ಸಿಬ್ಬಂದಿಯ ವೈಯಕ್ತಿಕ ವಿವರಗಳನ್ನು ಆನ್‌ಲೈನ್‌ನಲ್ಲಿ ಅಥವಾ ಬೋರ್ಡ್‌ನಲ್ಲಿ ಹಾಕುವ ಅವಶ್ಯಕತೆ ಇಲ್ಲ. ಅದನ್ನು ಕೇವಲ ಸರ್ಕಾರಿ ದಾಖಲೆಯಲ್ಲಿ ಸುರಕ್ಷಿತವಾಗಿ ಇಟ್ಟುಕೊಂಡರೆ ಸಾಕು ಎಂದು ನ್ಯಾಯಾಲಯ ಆದೇಶಿಸಿದೆ.

ಇನ್ನುಳಿದಂತೆ, ತುರ್ತು ಆರೈಕೆ ಮತ್ತು ಸುರಕ್ಷಿತ ವರ್ಗಾವಣೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಪ್ರದರ್ಶನ, ನವೀಕರಿಸಿದ ರೋಗಿಯ ಮಾಹಿತಿ ದಾಖಲೆ, ಕುಂದುಕೊರತೆ ನಿವಾರಣಾ ಕಾರ್ಯವಿಧಾನ, ಅನುಸರಣೆ ದಾಖಲಾತಿಗಳು, ರೋಗಿಗೆ ಪರಿಹಾರ ಸೇರಿದಂತೆ ಕಾಯ್ದೆಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳನ್ನು ನ್ಯಾಯಾಲಯ ತನ್ನ ಆದೇಶದಲ್ಲಿ ವಿವರವಾಗಿ ವಿಶ್ಲೇಷಿಸಿದೆ. ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ ಮತ್ತು ಕೆಲ ಸಲಹೆಗಳನ್ನು ನೀಡಿದೆ.

ಇನ್ನಷ್ಟು ಸಂಪೂರ್ಣ ಮಾಹಿತಿಗಾಗಿ ನ್ಯಾಯಾಲಯದ ತೀರ್ಪಿನ ಪ್ರತಿಯನ್ನು ಕೆಳಗಡೆ ಕೊಡಲಾಗಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...