ಪಶ್ಚಿಮ ಬಂಗಾಳದಲ್ಲಿ 2021 ರಲ್ಲಿ ನಡೆಯಲಿರುವ ಚುನಾವಣೆಯ ಪ್ರಯುಕ್ತ ರಾಜ್ಯದ ರಾಜಕೀಯ ವಲಯದಲ್ಲಿ ಈಗಿನಿಂದಲೇ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಬಿಜೆಪಿಯ ಮೇಲೆ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ಬಿಜೆಪಿ ಹೊರಗಿನವರ ಪಕ್ಷ. ಹಾಗಾಗಿ ಜಾತ್ಯತೀತತೆಯ ಮೇಲೆ ದ್ವೇಷದ ರಾಜಕಾರಣ ಸವಾರಿ ಮಾಡಲು ರವೀಂದ್ರನಾಥ ಠಾಗೋರ್ ಅವರ ಈ ಭೂಮಿ ಎಂದಿಗೂ ಬಿಡುವುದಿಲ್ಲ” ಎಂದು ಹೇಳಿದ್ದಾರೆ.
ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, “ವಿಶ್ವಭಾರತಿ ಕುಲಪತಿ ಬಿದ್ಯುತ್ ಚಕ್ರವರ್ತಿ ಬಿಜೆಪಿಯ ವ್ಯಕ್ತಿ. ಆವರಣದಲ್ಲಿ ಕೋಮುವಾದಿ ರಾಜಕಾರಣ ಬೆಳೆಸುವ ಮೂಲಕ ಸಂಸ್ಥೆಯ ಶ್ರೀಮಂತ ಪರಂಪರೆಗೆ ಅಪಚಾರ ಮಾಡುತ್ತಿದ್ದಾರೆ” ಎಂದು ಟೀಕಿಸಿದರು.
ಇದನ್ನೂ ಓದಿ: ಗುಜರಾತ್‌ನ ಭರೂಚ್ ಕ್ಷೇತ್ರದ ಬಿಜೆಪಿ ಸಂಸದ ರಾಜೀನಾಮೆ – ಕಾರಣವೇನು ಗೊತ್ತೇ?
“ಮಹಾತ್ಮಗಾಂಧಿ ಮತ್ತು ದೇಶದ ಇತರ ಮಹನೀಯರನ್ನು ಗೌರವಿಸದವರು ಈಗ ಚಿನ್ನದ ಬಂಗಾಳವನ್ನು ಸೃಷ್ಟಿಸುವ ಮಾತು ಆಡುತ್ತಿದ್ದಾರೆ. ರವೀಂದ್ರನಾಥ ಠ್ಯಾಗೋರ್ ಅವರು ಹಲವು ದಶಕಗಳ ಹಿಂದೆಯೇ ಚಿನ್ನದ ಬಂಗಾಳವನ್ನು ಸೃಷ್ಟಿಸಿದ್ದಾರೆ. ಸದ್ಯ, ಕೋಮುವಾದಿ ಪಡೆಗಳಿಂದ ಅದನ್ನು ರಕ್ಷಿಸಿಕೊಳ್ಳಬೇಕಾಗಿದೆ” ಎಂದು ಹೇಳಿದರು.
“ಬಿಜೆಪಿ ಕೆಲ ಶಾಸಕರನ್ನು ಖರೀದಿ ಮಾಡಿರಬಹುದು. ಎಂದಿಗೂ ಪಕ್ಷವನ್ನು ಖರೀದಿ ಮಾಡಲಾಗದು” ಎಂದು ಹೇಳಿದರು.
ಇದನ್ನೂ ಓದಿ: ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ: ಉಲ್ಟಾ ಹೊಡೆದ ರಜನಿಕಾಂತ್


